ಮಂಗಳೂರು ಜಿಲ್ಲೆಗೆ ಸಿಹಿಸುದ್ದಿ ನೀಡಿದ BSNL!
ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಟೆಲಿಕಾಂ 4G ನೆಟವರ್ಕ ಸೇವೆಯನ್ನು ಅಧಿಕೃತವಾಗಿ ಘೋಷಿಸಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಾಗಲೇ ಬಿಎಸ್‌ಎನ್ಎಲ್ 4G ಸೇವೆಯು ಲಭ್ಯವಿದ್ದು, ಬಿಎಸ್ಎನ್ಎಲ್ ತನ್ನ 4G ಸೇವೆಯನ್ನು ಕರ್ನಾಟಕದಲ್ಲಿ ವಿಸ್ತರಿಸುತ್ತಿದೆ. ಅದರ ಫಲವಾಗಿ ಬಿಎಸ್‌ಎನ್‌ಎಲ್ ಇಂದು (ಜ.23) ಅಧಿಕೃತವಾಗಿ ಮಂಗಳೂರಿನಲ್ಲಿ 4G ನೆಟವರ್ಕಗೆ ಚಾಲನೆ ನೀಡಲಿದೆ.

ಹೌದು, ಬಿಎಸ್‌ಎನ್ಎಲ್ ಮಂಗಳೂರಿನಲ್ಲಿ 4G ಸೇವೆಯನ್ನು ಆರಂಭಿಸಲಿದೆ. ಕಲ್ಬುರ್ಗಿ, ಬೀದರ್, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈಗಾಗಾಲೇ ಬಿಎಸ್‌ಎನ್ಎಲ್ 4G ನೆಟವರ್ಕ ಸೇವೆ ಜಾರಿಯಲ್ಲಿದೆ. ಇದೀಗ ಮಂಗಳೂರು 4G ಸಂಪರ್ಕ ಪಡೆಯಲಿದ್ದು, ಬಿಎಸ್ಎನ್ಎಲ್ 4G ಸೇವೆ ಪಡೆದ ಐದನೇ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ. ಇದೇ ಮಾರ್ಚ್ ತಿಂಗಳ ಅಂತ್ಯದೊಳಗೆ ದೇಶದ ಎಲ್ಲ ಟೆಲಿಕಾಂ ವಲಯಗಳಲ್ಲಿ 4G ಸೇವೆ ಆರಂಭ ಮಾಡುವುದಾಗಿ ಬಿಎಸ್ಎನ್ಎಲ್ ಹೇಳಿದೆ.

ಮಂಗಳೂರಿನಲ್ಲಿ 4G
ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆಯು ಮಂಗಳೂರಿನಲ್ಲಿ ಇಂದಿನಿಂದ ಅಧಿಕೃತವಾಗಿ 4G ಸೇವೆಯನ್ನು ಜಾರಿ ಮಾಡಲಿದೆ. 4G ಸಂಪರ್ಕಕ್ಕಾಗಿ ಈಗಾಗಲೇ ಬಿಎಸ್ಎನ್ಎಲ್ ಸುಮಾರು 151 ಟವರ್‌ಗಳನ್ನು ಉನ್ನತ ದರ್ಜೆಗೆ ಏರಿಸಿದೆ ಎಂದು ಹೇಳಿದೆ. 4G ಸೇವೆವು ಸಂಪರ್ಕವು 2100 MHz ಸ್ಪೆಕ್ಟ್ರಮ್ ಬ್ಯಾಂಡ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಬೆಂಗಳೂರಿನಲ್ಲಿ ಬಿಎಸ್ಎನ್ಎಲ್ 4G
ಬಿಎಸ್‌ಎನ್ಎಲ್ ಟೆಲಿಕಾಂ ಈಗಾಗಲೇ ಕರ್ನಾಟಕದಲ್ಲಿ 4G ಸೇವೆಯನ್ನು ವಿಸ್ತರಿಸುತ್ತಿದೆ. ಆದರೆ ರಾಜ್ಯದ ರಾಜಧಾನಿಯಲ್ಲಿಯೇ ಇನ್ನು 4G ಸೇವೆ ಯಾಕೆ ಜಾರಿ ಮಾಡಿಲ್ಲ ಎನ್ನುವ ಪ್ರಶ್ನೆ ಮೂಡುತ್ತದೆ. ಬೆಂಗಳೂರು ಹೆಚ್ಚು ಜನಸಂಖ್ಯೆ ಪಡೆದಿದ್ದು, ಬಹುಬೇಗನೆ 4G ಸೇವೆಯನ್ನು ಜನಪ್ರಿಯತೆ ಪಡೆದುಕೊಳ್ಳುತ್ತದೆ. ಹೀಗಾಗಿ ಮೊದಲು ಇತರೆ ಜಿಲ್ಲೆಗಳಲ್ಲಿ 4G ಸೇವೆಯನ್ನು ಜಾರಿಮಾಡಿ ಇಲ್ಲಿಯ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆ ಎನ್ನಲಾಗಿದೆ.

ಇತರೆ ರಾಜ್ಯಗಳಲ್ಲಿ ಬಿಎಸ್ಎನ್ಎಲ್ 4G
ಪ್ರಸ್ತುತ ಕರ್ನಾಟಕ ಸೇರಿದಂತೆ, ಕೇರಳ, ಚೆನೈ, ಮಧ್ಯಪ್ರದೇಶ, ಗುಜರಾತ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಸಹ ಬಿಎಸ್‌ಎನ್ಎಲ್ 4G ನೆಟವರ್ಕ ಪ್ರಾಯೋಗಿಕ ಸೇವೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಯೊಳಗೆ ಬಿಎಸ್‌ಎನ್‌ಎಲ್ 4G ಸೇವೆ ಲಭ್ಯವಾಗಲಿದ್ದು, ಚಂದಾದಾರರಿಗೆ ವೇಗದ ನೆಟವರ್ಕ ಪ್ರಯೋಜನ ದೊರೆಯಲಿದೆ.

ಬಿಎಸ್ಎನ್ಎಲ್ 4G ಪ್ಲ್ಯಾನ್
ಇತ್ತೀಚಿಗೆ ಬಿಎಸ್‌ಎನ್ಎಲ್ ಎರಡು ಹೊಸ 4G ಪ್ರೀಪೇಡ್ ಪ್ಲ್ಯಾನ್‌ಗಳನ್ನು ಸಹ ಬಿಡುಗಡೆ ಮಾಡಿದೆ. ಅವುಗಳಲ್ಲಿ ಆರಂಭಿಕ 4G ಪ್ಲ್ಯಾನ್ ಬೆಲೆಯು 96ರೂ.ಗಳಾಗಿದ್ದು, ಇನ್ನೊಂದು ಪ್ಲ್ಯಾನ್ 236ರೂ. ಬೆಲೆಯನ್ನು ಹೊಂದಿದೆ. ಇನ್ನು 96ರೂ. ಪ್ಲ್ಯಾನ್ 28 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದ್ದು, 236ರೂ. ಪ್ಲ್ಯಾನ್ 84 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿದೆ. ಈ ಎರಡು ಪ್ಲ್ಯಾನ್‌ಗಳು ಪೂರ್ಣ ವ್ಯಾಲಿಡಿಟಿ ಅವಧಿಗೆ 10GB ಡಾಟಾ ಸೌಲಭ್ಯವನ್ನು ನೀಡುತ್ತವೆ. ಮುಂದೆ ಇನ್ನಷ್ಟು ಆಕರ್ಷಕ ಪ್ಲ್ಯಾನ್ ಪರಿಚಯಿಸಲಿದೆ.


Click it and Unblock the Notifications








