Home
ಸುದ್ದಿಜಾಲ

BSNL ಹೊಸ ಲೋಗೋ ಬಿಡುಗಡೆ!..ಮತ್ತೆ ಮರಳಲಿದೆಯಾ ಸಂಸ್ಥೆಯ ಗತವೈಭವ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ (BSNL) ತನ್ನ ಹಿಂದಿನ ತನ್ನ ವೈಭವವನ್ನು ಮರಳಿ ಪಡೆಯುತ್ತಿದ್ದಂತೆ, ಇದೀಗ ಹೊಸ ಲೋಗೋವನ್ನು (Logo) ಪರಿಚಯ ಮಾಡಿದೆ. ಬಿಎಸ್‌ಎನ್‌ಎಲ್‌ನ ನೂತನ ಲೋಗೋವನ್ನು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಡುಗಡೆ ಮಾಡಿದರು. ಅಂದಹಾಗೆ ಬಿಎಸ್‌ಎನ್‌ಎಲ್‌ ಟೆಲಿಕಾಂನ 4G ಸೇವೆಗಳು ಸದ್ಯ ದೇಶದ ಕೆಲವು ಆಯ್ದ ವಲಯಗಳಲ್ಲಿ ಲಭ್ಯವಿದ್ದು, ಇದನ್ನು ದೇಶಾದ್ಯಂತ ರೋಲ್‌ಔಟ್ ಅನ್ನು ಪೂರ್ಣಗೊಳಿಸುವ ಹಾದಿಯಲ್ಲಿ ಸಾಗಿದೆ.

ಹೌದು, ಬಿಎಸ್‌ಎನ್‌ಎಲ್‌ (BSNL) ಟೆಲಿಕಾಂ ಸಂಸ್ಥೆಯು ಈಗ ಹೊಸ ಲೋಗೋ ಲಾಂಚ್ ಮಾಡಿದೆ. ಹಾಗೆಯೇ ಇದರೊಂದಿಗೆ ನೂತನವಾಗಿ ಏಳು ಸೇವೆಗಳನ್ನು ಸಹ ಪರಿಚಯಿಸಿದೆ. ಅವುಗಳ ಪೈಕಿ ಒಂದು ಸ್ಪ್ಯಾಮ್-ಮುಕ್ತ ನೆಟ್‌ವರ್ಕ್ ಅನ್ನು ಆಟೋಮ್ಯಾಟಿಕ್‌ ಆಗಿ ಅನಗತ್ಯ ಮೆಸಜ್‌ಗಳು ಮತ್ತು ಸ್ಕ್ಯಾಮ್‌ ಫಿಲ್ಟರ್ ಮಾಡಲು ವಿನ್ಯಾಸ ಮಾಡಲಾಗಿದೆ. ಹಾಗೆಯೇ ಸಂಸ್ಥೆಯು ತನ್ನ 5G ಸೇವೆಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ ಸಂಸ್ಥೆಯ ನೂತನ ಸೇವೆಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

BSNL ಹೊಸ ಲೋಗೋ ಬಿಡುಗಡೆ!..ಮತ್ತೆ ಮರಳಲಿದೆಯಾ ಸಂಸ್ಥೆಯ ಗತವೈಭವ!

ಬಿಎಸ್‌ಎನ್‌ಎಲ್‌ ಟೆಲಿಕಾಂನ ನೂತನ ಸೇವೆಗಳು

ಬಿಎಸ್‌ಎನ್‌ಎಲ್‌ (BSNL) ಟೆಲಿಕಾಂ ತನ್ನ ಫೈಬರ್ ಇಂಟರ್ನೆಟ್ ಗ್ರಾಹಕರಿಗಾಗಿ ರಾಷ್ಟ್ರೀಯ ವೈ ಫೈ ರೋಮಿಂಗ್ ಸೇವೆಯನ್ನು ಸಹ ಶುರು ಮಾಡಿದೆ. ಹೀಗಾಗಿ ಬಳಕೆದಾರರು ಹೆಚ್ಚುವರಿ ಶುಲ್ಕಗಳಿಲ್ಲದೆ ಬಿಎಸ್‌ಎನ್‌ಎಲ್‌ ಹಾಟ್‌ಸ್ಪಾಟ್‌ಗಳಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾಗಿದೆ. ಈ ಸೇವೆಯು ಗ್ರಾಹಕರ ಡೇಟಾ ಖರ್ಚನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಹಾಗೆಯೇ ಬಿಎಸ್‌ಎನ್‌ಎಲ್‌ ಟೆಲಿಕಾಂ 500 ಕ್ಕೂ ಅಧಿಕ LIVE ಚಾನೆಲ್‌ಗಳು ಮತ್ತು ಪೇ ಟಿವಿ ಆಯ್ಕೆಗಳನ್ನು ಹೊಂದಿರುವ ನೂತನ ಫೈಬರ್ ಬೆಂಬಲಿತ ಟಿವಿ ಸೇವೆ ಅನ್ನು ಘೋಷಿಸಿದೆ. ಎಲ್ಲಾ ಫೈಬರ್ ಇಂಟರ್ನೆಟ್ ಚಂದಾದಾರರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಈ ಸೇವೆ ಸಿಗಲಿದೆ. ಇನ್ನು ಗ್ರಾಹಕರು ಟಿವಿಯನ್ನು ಸ್ಟ್ರೀಮಿಂಗ್ ಮಾಡಲು ಬಳಸಲಾಗುವ ಡೇಟಾವು ಅವರ ಮಾಸಿಕ ಇಂಟರ್ನೆಟ್ ಭತ್ಯೆಯ (FTTH data allowance) ವಿರುದ್ಧ ಎಣಿಕೆಯಾಗುವುದಿಲ್ಲ.

ಬಿಎಸ್‌ಎನ್‌ಎಲ್‌ ಟೆಲಿಕಾಂ (BSNL) ಆಟೋಮ್ಯಾಟಿಕ್ ಕಿಯೋಸ್ಕ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರು ತಮ್ಮ ಸಿಮ್ ಕಾರ್ಡ್‌ಗಳನ್ನು ನಿರ್ವಹಿಸುವುದನ್ನು ಸರಳ ಮಾಡಲು ಸಂಸ್ಥೆಯು ಯೋಜಿಸಿದೆ. ಈ ಕಿಯೋಸ್ಕ್‌ಗಳು ಜನರು ತಮ್ಮ ಸಿಮ್ ಕಾರ್ಡ್‌ಗಳನ್ನು ಸುಲಭವಾಗಿ ಖರೀದಿಸಲು ಹಾಗೂ ಅಪ್‌ಗ್ರೇಡ್ ಮಾಡಲು ಇಲ್ಲವೇ ಬದಲಾಯಿಸಲು ಅನುಮತಿಸುತ್ತದೆ.

ಅದೇ ರೀತಿ ಗಣಿಗಾರಿಕೆ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ವಿಶೇಷ ಖಾಸಗಿ 5G ನೆಟ್‌ವರ್ಕ್ ಅನ್ನು ಒದಗಿಸಲು ಬಿಎಸ್‌ಎನ್‌ಎಲ್‌ ಟೆಲಿಕಾಂ ಸಹ C-DAC ನೊಂದಿಗೆ ಕೈಜೋಡಿಸಿದೆ. ಈ ನೂತನ ನೆಟ್‌ವರ್ಕ್ ಸ್ವದೇಶಿ ತಂತ್ರಜ್ಞಾನವನ್ನು ಬಳಕೆ ಮಾಡುತ್ತದೆ. ಹಾಗೆಯೇ ಸುಧಾರಿತ ಉಪಕರಣಗಳು ಮತ್ತು ವಾಹನಗಳ ರಿಯಲ್‌ ಟೈಮ್‌ ಮೇಲ್ವಿಚಾರಣೆಯನ್ನು (AGVs) ಸಕ್ರಿಯಗೊಳಿಸುವ ಮೂಲಕ ಗಣಿಗಳಲ್ಲಿ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಅಲ್ಲದೇ, ಬಿಎಸ್‌ಎನ್‌ಎಲ್‌ (BSNL) ಸಂಸ್ಥೆಯು ದೇಶದ ಮೊದಲ ಡೈರೆಕ್ಟ್-ಟು-ಡಿವೈಸ್ (D2D) ಕನೆಕ್ಷನ್ ಸಲ್ಯೂಶನ್‌ ಅನ್ನು ಶುರು ಮಾಡಿದೆ. ಈ ಸೇವೆಯು ಉಪಗ್ರಹ ಮತ್ತು ಮೊಬೈಲ್ ನೆಟ್‌ವರ್ಕ್‌ಗಳನ್ನು ಸಂಯೋಜಿಸುತ್ತದೆ. ಈ ಹೊಸದಾದ ತಂತ್ರಜ್ಞಾನ ಸೇವೆಯು ತುರ್ತು ಸಂದರ್ಭಗಳಲ್ಲಿ ಮತ್ತು ದೂರದ ಪ್ರದೇಶಗಳಿಗೆ ನಿರ್ಣಾಯಕವಾಗಿದೆ. ಸರಿಯಾದ ನೆಟ್‌ವರ್ಕ್ ಕನೆಕ್ಷನ್‌ ಇರದ ಸ್ಥಳಗಳಲ್ಲಿಯೂ ಸಹ ಡಿಜಿಟಲ್ ಪೇಮೆಂಟ್‌ಗಳಂತಹ ಸೇವೆಗಳನ್ನು ಅನುಮತಿಸುತ್ತದೆ. ಬಿಎಸ್‌ಎನ್‌ಎಲ್‌ನ ಚಂದಾದಾರರಿಗೆ ಯೂನಿಕ್‌ ಮೊಬೈಲ್ ನಂಬರ್‌ ಅನ್ನು ಪಡೆದುಕೊಳ್ಳುವ ಅವಕಾಶ ಸಹ ನೀಡಿದೆ.

Best Mobiles in India

English summary
BSNL unveils new Logo and 7 new services. Check out other details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+