Home
ಸುದ್ದಿಜಾಲ

ಬಿಎಸ್‌ಎನ್‌ಎಲ್‌ನಿಂದ ಮತ್ತೆ ಹೊಸ ಪ್ಲ್ಯಾನ್‌ : ಪ್ರತಿದಿನ 2GB ಡೇಟಾ ಉಚಿತ!

ಪ್ರಸ್ತುತ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹಲವು ಗಮನಾರ್ಹ ಏರಿಳಿತಗಳ ಕಂಡುಬಂದಿದ್ದು, ಖಾಸಗಿ ಟೆಲಿಕಾಂ ಸಂಸ್ಥೆಗಳ ದರ ಸಮರದ ಪೈಪೋಟಿ ಜೋರಾಗಿಯೇ ಮುನ್ನಡೆದಿದೆ. ಈ ನಿಟ್ಟಿನಲ್ಲಿ ಕೆಲವು ನ್ಯೂನ್ಯತೆಗಳ ನಡುವೆಯೂ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಪ್ರಬಲ ಪ್ರತಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದೆ. ಇದೀಗ ಬಿಎಸ್‌ಎನ್‌ಎಲ್‌ ಹೊಸದೊಂದು ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಅಚ್ಚರಿ ತಂದಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಇತ್ತೀಚಿಗೆ ಹಲವು ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದ್ದು, ಅಧಿಕ ಡೇಟಾ ಮತ್ತು ವ್ಯಾಲಿಡಿಟಿ ನೀಡಿದೆ. ಆ ಲಿಸ್ಟಿಗೆ ಈಗ ಬಿಎಸ್‌ಎನ್ಎಲ್ 365ರೂ.ಗಳ ಹೊಸದೊಂದು ಪ್ಲ್ಯಾನ್‌ ಸೇರಿಸಿದೆ. ಈ ಪ್ಲ್ಯಾನ್‌ ಒಟ್ಟು ಎರಡು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಒಳಗೊಂಡಿದ್ದು, ಉಚಿತ ಡೇಟಾ ಹಾಗೂ ಕರೆಗಳ ಸೌಲಭ್ಯವನ್ನು ಒದಗಿಸಲಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ 365ರೂ. ಪ್ಲ್ಯಾನ್‌ ಪ್ರಯೋಜನಗಳೆನು ಮತ್ತು ಇತ್ತೀಚಿನ ಹೊಸ ಪ್ಲ್ಯಾನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

365ರೂ. ಪ್ಲ್ಯಾನ್‌

365ರೂ. ಪ್ಲ್ಯಾನ್‌

ಬಿಎಸ್‌ಎನ್ಎಲ್ ಸಂಸ್ಥೆಯ ನೂತನ 365ರೂ. ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಒಟ್ಟು 60 ದಿನಗಳ ವ್ಯಾಲಿಡಿಟಿ ಸಿಗಲಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನವು ದೊರೆಯಲಿದ್ದು, ಇದರೊಂದಿಗೆ ಪ್ರತಿದಿನ 250 ನಿಮಿಷ ಕರೆಗಳ ಸೌಲಭ್ಯವು ಲಭ್ಯ ಇರಲಿದೆ. ತಮಿಳನಾಡು, ಕೇರಳ ಮತ್ತು ಚೆನ್ನೈ ಟೆಲಿಕಾಂ ಸರ್ಕಲ್ ಸೇರಿದಂತೆ ಇತರೆ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿಯೂ ಈ ಪ್ಲ್ಯಾನ್‌ ಲಭ್ಯವಾಗಲಿದೆ.

997ರೂ. ಪ್ಲ್ಯಾನ್‌

997ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್ ಇತ್ತೀಚಿಗೆ ಹೊಸದಾಗಿ 997ರೂ. ಪ್ರೀಪೇಡ್‌ ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ ಒಟ್ಟು 180 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಅನಿಯಮಿತ ಲೋಕಲ್ ಮತ್ತಯ ನ್ಯಾಶನಲ್ ಕರೆಗಳು ಉಚಿತವಾಗಿ ಲಭ್ಯವಾಗಲಿದ್ದು, ಇದರೊಂದಿಗೆ ಪ್ರತಿದಿನ 3GB ಡೇಟಾ ಸೌಲಭ್ಯವು ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳ ಪ್ರಯೋಜನವು ಲಭ್ಯವಾಗಲಿದೆ.

97ರೂ (STV) ಪ್ಲ್ಯಾನ್‌

97ರೂ (STV) ಪ್ಲ್ಯಾನ್‌

ಬಿಎಸ್‌ಎನ್ಎಲ್ ವಿಶೇಷ ಟಾರೀಫ್ ವೋಚರ್‌ (STV)ಯಲ್ಲಿ ಹೊಸದಾಗಿ 97ರೂ. ಪ್ಲ್ಯಾನ್‌ ಬಿಡುಗಡೆ ಮಾಡಿದ್ದು, ಈ ಪ್ಲ್ಯಾನ್‌ 18 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಪ್ರಯೋಜನವು ದೊರೆಯಲಿದ್ದು, ಹಾಗೂ ಪ್ರತಿದಿನ 250 ನಿಮಿಷ ಕರೆಗಳ ಸೌಲಭ್ಯವು ಸಹ ಲಭ್ಯ ಇರಲಿದೆ. ತಮಿಳನಾಡು, ಕೇರಳ ಮತ್ತು ಚೆನ್ನೈ ಟೆಲಿಕಾಂ ಸರ್ಕಲ್ ಸೇರಿದಂತೆ ಇತರೆ ಟೆಲಿಕಾಂ ಸರ್ಕಲ್ ವ್ಯಾಪ್ತಿಯಲ್ಲಿಯೂ ಈ ಪ್ಲ್ಯಾನ್‌ ಲಭ್ಯವಾಗಲಿದೆ.

1699ರೂ. ಪ್ಲ್ಯಾನ್‌

1699ರೂ. ಪ್ಲ್ಯಾನ್‌

ಬಿಎಸ್‌ಎನ್‌ಎಲ್ ಸಂಸ್ಥೆಯ 1699ರೂ.ಗಳ ವಾರ್ಷಿಕ ಪ್ರೀಪೇಡ್ ರೀಚಾರ್ಜ್ ಪ್ಲ್ಯಾನ್ ಹೊಂದಿದ್ದು, ಈ ಪ್ಲ್ಯಾನ್‌ ಒಟ್ಟು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಸ್ಥಳಿಯ ಮತ್ತು ರಾಷ್ಟ್ರಿಯ ವಾಯಿಸ್‌ ಕರೆಗಳು, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 2GB ಉಚಿತ ಡೇಟಾ ಪ್ರಯೋಜನಗಳು ಗ್ರಾಹಕರಿಗೆ ದೊರೆಯಲಿವೆ. ಡೇಟಾ ಮತ್ತು ವ್ಯಾಲಿಡಿಟಿ ಪ್ರಿಯ ಗ್ರಾಹಕರಿಗೆ ಬೆಸ್ಟ್‌ ಎನಿಸಲಿದೆ.

Best Mobiles in India

English summary
BSNL has announced two new prepaid plans for its customers. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+