ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಕೊಡುಗೆ; ನಾಲ್ಕು ತಿಂಗಳ ಉಚಿತ ಸೇವೆ!
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮನೆಯಲ್ಲಿಯೇ ಇರುವುದು ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಎಲ್ಲರು ಮನೆಯಲ್ಲಿರುವುದರಿಂದ ಇಂಟರ್ನೆಟ್ ಬಳಕೆ ಹೆಚ್ಚಾಗಿದೆ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ರೀಚಾರ್ಜ್‌ನಲ್ಲಿ, ಇಂಟರ್ನೆಟ್ ಬಳಕೆಯಲ್ಲಿ ಹಾಗೂ ವ್ಯಾಲಿಡಿಟಿಯಲ್ಲಿ ಗ್ರಾಹಕರಿಗೆ ಅನಾನುಕೂಲ ಆಗಬಾರದೆಂದು ಬಿಎಸ್ಎನ್ಎಲ್ ಇದೀಗ ಭರ್ಜರಿ ಕೊಡುಗೆಯನ್ನು ಘೋಷಿಸಿದೆ.

ಹೌದು, ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಈಗಾಗಲೆ ಹಲವು ಆಕರ್ಷಕ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಪರಿಚಯಿಸಿದೆ. ಹಾಗೆಯೇ ಈ ಲಾಕ್‌ಡೌನ್ ಅವಧಿಯಲ್ಲಿ ತನ್ನ ಚಂದಾದಾರರಿಗೆ ಅನುಕೂಲವಾಗಲೆಂದು ಇದೀಗ ದೀರ್ಘಾವಧಿಯ ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳೊಂದಿಗೆ ಸುಮಾರು ನಾಲ್ಕು ತಿಂಗಳು ಹೆಚ್ಚುವರಿ ಉಚಿತ ಇಂಟರ್ನೆಟ್ ಸೇವೆ ಒದಗಿಸಲು ಬಿಎಸ್‌ಎನ್‌ಎಲ್ ಮುಂದಾಗಿದೆ. ಅದುವೇ ಬಿಎಸ್‌ಎನ್‌ಎಲ್ ಬೋನಾಂಜಾ ಆಫರ್. ಮುಂದೆ ಓದಿರಿ.

ವಾರ್ಷಿಕ ಪ್ಲ್ಯಾನ್‌ಗಳಿಗೆ ಕೊಡುಗೆ
ಬಿಎಸ್‌ಎನ್‌ಎಲ್ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯ ಹಲವು ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಒಳಗೊಂಡಿದೆ. ಸದ್ಯ ವಾರ್ಷಿಕ ಅವಧಿಯ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗಳಿಗೆ ಬಿಎಸ್‌ಎನ್‌ಎಲ್ ಬೋನಾಂಜಾ ಕೊಡುಗೆ ನೀಡುವುದಾಗಿ ಹೇಳಿದೆ. ಈ ಕೊಡುಗೆಯಲ್ಲಿ ವಾರ್ಷಿಕ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳುವ ಚಂದಾದಾರರಿಗೆ ಹೆಚ್ಚುವರಿಯಾಗಿ ಉಚಿತ ಸೇವೆ ದೊರೆಯುತ್ತದೆ.

ಕೊಡುಗೆಯ ಮಾಹಿತಿ
ಚಂದಾದಾರರು ಬಿಎಸ್‌ಎನ್‌ಎಲ್ನ ಒಂದು ವರ್ಷದ/12 ತಿಂಗಳ ಅವಧಿಯ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ರೀಚಾರ್ಜ್ ಮಾಡಿದರೆ ಒಂದು ತಿಂಗಳ ಹೆಚ್ಚುವರಿ ಉಚಿತ ಸೇವೆ ಲಭ್ಯವಾಗಲಿದೆ. ಅದೇ ಚಂದಾದಾರರು ಎರಡು ವರ್ಷದ/24 ತಿಂಗಳ ಬ್ರಾಡ್‌ಬ್ಯಾಂಡ್ ಯೋಜನೆ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ ಮೂರು ತಿಂಗಳ ಉಚಿತ ಸೇವೆ ಸಿಗಲಿದೆ. ಅಂದರೇ ಒಟ್ಟು 27 ತಿಂಗಳ ಸೇವೆ ಲಭ್ಯ. ಇನ್ನು ಚಂದಾದಾರರು ಮೂರು ವರ್ಷದ/36 ತಿಂಗಳ ಯೋಜನೆ ರೀಚಾರ್ಜ್ ಮಾಡಿದರೆ ನಾಲ್ಕು ತಿಂಗಳ ಹೆಚ್ಚುವರಿ ಸೇವೆ ಉಚಿತವಾಗಿ ಸಿಗಲಿದೆ. ಈ ಉಚಿತ ಸೌಲಭ್ಯದಲ್ಲಿ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ.

ಕೊಡುಗೆ ಪಡೆಯುವುದು ಹೇಗೆ?
ಬಿಎಸ್‌ಎನ್‌ಎಲ್ ಬೋನಾಂಜಾ ಕೊಡುಗೆಯ ಸಂಪರ್ಕಗಳ ಪಡೆಯಲು ಬಯಸುವ ಹೊಸ ಬಳಕೆದಾರರು ಸಂಸ್ಥೆಯ ಟೋಲ್-ಫ್ರೀ ಸಂಖ್ಯೆ 18003451500 ಗೆ ಕರೆ ಮಾಡಿ ಸೇವೆ ಪಡೆಯಬಹುದು. ಹಾಗೂ ಹೊಸ ಸಂಪರ್ಕ ಪಡೆಯಬೇಕೆದಿದ್ದರೇ ಅಧಿಕೃತ ಬಿಎಸ್‌ಎನ್‌ಎಲ್ ಪೋರ್ಟಲ್‌ಗೆ ಭೇಟಿ ನೀಡಿ ವಿನಂತಿ ನೊಂದಾಯಿಸಬಹುದಾಗಿದೆ.

ಬಿಎಸ್‌ಎನ್‌ಎಲ್-777ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್ ಸಂಸ್ಥೆಯ ಈ 777ರೂ.ಪ್ಲ್ಯಾನ್ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ. ಈ ಪ್ಲ್ಯಾನಿನಲ್ಲಿಯೂ ಸಹ ಹೆಚ್ಚುವರಿಯಾಗಿ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.

ಬಿಎಸ್‌ಎನ್‌ಎಲ್-849ರೂ.ಪ್ಲ್ಯಾನ್
ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿರಲಿದ್ದು, ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಬ್ಯವನ್ನು ಪಡೆದಿದೆ. ಇದರೊಂದಿಗೆ ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯಲಿದೆ.


Click it and Unblock the Notifications








