Home
ಸುದ್ದಿಜಾಲ

BSNLನ 251ರೂ. ಪ್ಲ್ಯಾನ್‌ ರೀಚಾರ್ಜ್‌ ಮಾಡಿದ್ರೆ, 28 ದಿನ ಡೇಟಾ ಟೆನ್ಷನ್ ಇರಲ್ಲ!

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಟೆಲಿಕಾಂ ಖಾಸಗಿ ಟೆಲಿಕಾಂಗಳ ಅಬ್ಬರದ ಓಟಕ್ಕೆ, ಆಕರ್ಷಕ ಯೋಜನೆಗಳ ಮೂಲಕ ಪ್ರಬಲ ಸ್ಪರ್ಧೆ ಒಡ್ಡುತ್ತಾ ಸಾಗಿದೆ. ಬಿಎಸ್‌ಎನ್‌ಎಲ್‌ ಈಗಾಗಲೇ ಹಲವು ಅತ್ಯುತ್ತಮ ಡೇಟಾ ಹಾಗೂ ವ್ಯಾಲಿಡಿಟಿ ಸೌಲಭ್ಯದ ಯೋಜನೆಗಳನ್ನು ಪರಿಚಯಿಸಿ ಸೈ ಅನಿಸಿಕೊಂಡಿದೆ. ಅವುಗಳಲ್ಲಿ ಇತ್ತೀಚಿಗಿನ ವರ್ಕ್‌ ಫ್ರಮ್‌ ಹೋಮ್‌ ಯೋಜನೆ ಇತರೆ ಖಾಸಗಿ ಟೆಲಿಕಾಂಗಳಿಗಿಂತ ಆಕರ್ಷಕ ಪ್ರಯೋಜನ ಪಡೆದಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ಸಂಸ್ಥೆಯು 251ರೂ.ಗಳ ವರ್ಕ್‌ ಫ್ರಮ್‌ ಯೋಜನೆ ಹೊಂದಿದೆ. ಇದೇ ಪ್ರೈಸ್‌ಟ್ಯಾಗ್‌ನಲ್ಲಿ ಖಾಸಗಿ ಟೆಲಿಕಾಂಗಳು ಸಹ ವರ್ಕ್‌ ಫ್ರಮ್‌ ಯೋಜನೆಯನ್ನು ಹೊಂದಿವೆ. ಆದರೆ ಬಿಎಸ್‌ಎನ್‌ಎಲ್‌ ಖಾಸಗಿ ಟೆಲಿಕಾಂಗಳು ನೀಡುವ ಸೌಲಭ್ಯಕ್ಕಿಂತ ಅಧಿಕ ಪ್ರಯೋಜನಗಳನ್ನು ಚಂದಾದಾರರಿಗೆ ಒದಗಿಸಿದೆ. ಬಿಎಸ್‌ಎನ್‌ಎಲ್‌ಈ ಈ ಯೋಜನೆ ರೀಚಾರ್ಜ್‌ ಮಾಡಿಸಿದರೇ 28 ದಿನಗಳ ಕಾಲ ಡೇಟಾ ಟೆನ್ಷನ್ ಇರುವುದಿಲ್ಲ. ಹಾಗಾದರೇ ಬಿಎಸ್‌ಎನ್‌ಎಲ್‌ ಕಂಪನಿಯು ವರ್ಕ್‌ ಫ್ರಮ್‌ ಯೋಜನೆಯ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಬಿಎಸ್‌ಎನ್‌ಎಲ್‌ 251ರೂ. ಡೇಟಾ ವೋಚರ್‌

ಬಿಎಸ್‌ಎನ್‌ಎಲ್‌ 251ರೂ. ಡೇಟಾ ವೋಚರ್‌

ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ ಸಹ (STV DATA251) ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಆದರೆ ಈ ಅವಧಿಯಲ್ಲಿ ಒಟ್ಟು 70GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌ 151ರೂ. ಡೇಟಾ ವೋಚರ್‌

ಬಿಎಸ್‌ಎನ್‌ಎಲ್‌ 151ರೂ. ಡೇಟಾ ವೋಚರ್‌

ಬಿಎಸ್‌ಎನ್‌ಎಲ್‌ನ ಈ ಹೊಸ ಡೇಟಾ ವೋಚರ್‌ (STV DATA151) ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಈ ಅವಧಿಯಲ್ಲಿ ಒಟ್ಟು 40GB ಡೇಟಾ ಸೌಲಭ್ಯವನ್ನು ಒದಗಿಸಲಿದೆ.

ಬಿಎಸ್‌ಎನ್‌ಎಲ್‌ 365ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ 365ರೂ.ಪ್ಲ್ಯಾನ್

ಬಿಎಸ್‌ಎನ್‌ಎಲ್‌ ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ, ಪ್ರತಿದಿನ 100 ಎಸ್‌ಎಮ್‌ಎಸ್‌ ಹಾಗೂ ಪ್ರತಿದಿನ 250 ನಿಮಿಷಗಳ ಕರೆಯ ಸೌಲಭ್ಯಗಳು ಲಭ್ಯವಾಗುತ್ತವೆ. ಇನ್ನು ಈ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೆ ಡೇಟಾ, ಎಸ್‌ಎಮ್‌ಎಸ್‌ ಹಾಗೂ ವಾಯಿಸ್‌ ಕರೆಗಳ ಪ್ರಯೋಜನಗಳು ಮೊದಲ 60 ದಿನಗಳ ವರೆಗೆ ಲಭ್ಯವಾಗಲಿವೆ.

ಬಿಎಸ್‌ಎನ್‌ಎಲ್‌ 693ರೂ.

ಬಿಎಸ್‌ಎನ್‌ಎಲ್‌ 693ರೂ.

ಬಿಎಸ್‌ಎನ್‌ಎಲ್‌ 693ರೂ. ಡೇಟಾ ಎಸ್‌ಟಿವಿ ಯೋಜನೆಯು ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಇದು ಡೇಟಾ ಪ್ರೀಪೇಯ್ಡ್ ಯೋಜನೆ ಆಗಿರುವುದರಿಂದ ಯಾವುದೇ ವಾಯಿಸ್‌ ಕರೆ ಹಾಗೂ ಎಸ್‌ಎಮ್‌ಎಸ್‌ ಸೌಲಭ್ಯಗಳು ದೊರೆಯುವುದಿಲ್ಲ.

Best Mobiles in India

English summary
BSNL Rs 251 Work from Home voucher from BSNL offers 70GB data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+