ಎಚ್ಚರ: ಫೇಸ್‌ಬುಕ್‌ನಲ್ಲೂ ಡ್ರಗ್ಸ್ ಮಾರಾಟ
ಟೆಕ್ನಾಲಜಿಯನ್ನು ದೇಶದ ಅಭಿವೃದ್ದಿಗೆ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಹ ದೇಶದ ಅಭಿವೃದ್ದಿಗಾಗಿ ಹೊಸ ಹೊಸ ತಂತ್ರಜ್ಞಾನಗಳನ್ನು ಆವಿಷ್ಕಾರ ಮಾಡಬೇಕು ಎಂದು ಗಂಟೆಗಟ್ಟಲೇ ತಂತ್ರಜ್ಞಾನ ಉಪನ್ಯಾಸಕರು ಪಾಠ ಮಾಡಿದರು ಇಲ್ಲೊಬ್ಬ ಇಂಜಿನಿಯರಿಂಗ್ ಪದವಿಧರನಿಗೆ ಇಷ್ಟವಾಗಿಲ್ಲ ಅನಿಸುತ್ತೇ. ಅದಕ್ಕಾಗಿ ಇಂದು ಡ್ರಗ್ಸ್ ಮಾರಾಟಕ್ಕಾಗಿ ಫೇಸ್‌ಬುಕ್ ಪೇಜ್ ಬಳಸಿಕೊಂಡು ಪೊಲೀಸರ ಬಂಧನಕ್ಕೆ ಒಳಗಾಗಿದ್ದಾನೆ. ಈ ಘಟನೆಯ ಮಾಹಿತಿ ನಮ್ಮ ಬೆಂಗಳೂರಿನದೆ. ಹಾಗಾದರೆ ಅವನು ಯಾರು, ಹೇಗೆ ಸಿಕ್ಕಿಬಿದ್ದ, ಫೇಸ್‌ಬುಕ್ ಪೇಜ್ ಹೆಸರು ಏನೆಂದು ನೀಡಿದ್ದ ಎಂಬ ಮಾಹಿತಿಯನ್ನು ಈ ಲೇಖನದ ಸ್ಲೈಡರ್‌ಗಳಿಂದ ತಿಳಿಯಿರಿ.
ಓದಿರಿ: ಫೇಸ್‌ಬುಕ್, ವಾಟ್ಸಾಪ್ ನಮ್ಮವರಿಗೆ ಅಚ್ಚುಮೆಚ್ಚು ಏಕೆ ?

ಫೇಸ್‌ಬುಕ್ ಪೇಜ್‌ನಲ್ಲಿ ಡ್ರಗ್ಸ್ ಮಾರಾಟ
23 ವರ್ಷದ ಇಂಜಿನಿಯರಿಂಗ್ ಪದವಿಧರನೊಬ್ಬ ಫೇಸ್‌ಬುಕ್ ಪೇಜ್‌ನಲ್ಲಿ ಡ್ರಗ್ಸ್ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಡುಗೋಡಿ ಪೊಲೀಸರು ಅವನನ್ನು ಬಂಧಿಸಿದ್ದಾರೆ.

5 ಕೆಜಿ ಗಾಂಜಾ ಮತ್ತು 23 ಎಲ್‌ಎಸ್‌ಡಿ ಬ್ಲಾಟ್ಸ್ ವಶ
ಪೊಲೀಸರು ಆತನ ವಸತಿ ನಿಲಯದಿಂದ 5 ಕೆಜಿ ಗಾಂಜಾ ಮತ್ತು 23 ಎಲ್‌ಎಸ್‌ಡಿ ಬ್ಲಾಟ್ಸ್ ವಶಪಡಿಸಿಕೊಂಡಿದ್ದು, ಆತನ ಸಹಾಯಕರನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ 2ನೇ ಭಾರಿ
ಬೆಂಗಳೂರಿನಲ್ಲಿ ಫೇಸ್‌ಬುಕ್ ಪೇಜ್ ಮುಖಾಂತರ ಇತ್ತೀಚಿನ ಕಳೆದ ಕೆಲವು ದಿನಗಳಲ್ಲಿ ಇಂತಹ ಘಟನೆ ನೆಡೆದಿದ್ದು, ಇದು 2ನೇ ಘಟನೆಯಾಗಿದೆ ಎನ್ನಲಾಗಿದೆ.

ಶ್ರೀಹರಿ ಎಸ್
"ಹೈದರಾಬಾದ್‌ನ ಇಂಜಿನಿಯರಿಂಗ್ ಪದವಿಧರ 'ಶ್ರೀಹರಿ .ಎಸ್' ಎಂಬಾತ ಫೇಸ್‌ಬುಕ್ ಪೇಜ್‌ನಲ್ಲಿ ತನ್ನ ಫೋನ್ ನಂಬರ್ ತೆಗೆದಿದ್ದಾನೆ. 'ಬೆಂಗಳೂರಿನ ವೀಡ್ ಸ್ಮೋಕಿಗಳು' ಈತನ ನಿರೀಕ್ಷಿತ ಖರೀದಿದಾರರು'' ಎಂದು ಪೊಲೀಸರು ಹೇಳಿದ್ದಾರೆ.

ಕಾಡುಗೋಡಿ ಪೊಲೀಸರಿಂದ ಶ್ರೀಹರಿ ಸೆರೆಗೆ ಪೂರ್ವ ತಯಾರಿ
ಕಾಡುಗೋಡಿ ಪೋಲಿಸರು ಕಳೆದ ಕೆಲ ವಾರಗಳ ಹಿಂದೆ ಈತನ ಬಗ್ಗೆ ಸಲಹೆ ಪಡೆದು ಫೇಸ್‌ಬುಕ್ ಪೇಜ್‌ನಲ್ಲಿ ಗಾಂಜಾ ಖರೀದಿಗಾಗಿ ಹಾಕಿದ ಕಮೆಂಟ್ಸ್‌ಗೆ ಶ್ರೀಹರಿ ಇಂದ ಪ್ರತಿಕ್ರಿಯೆ ಪಡೆದಿದ್ದರು. ನಂತರದಲ್ಲಿ ಶ್ರೀಹರಿ ತನ್ನನ್ನು ಸಂಪರ್ಕಿಸಲು ಕಾಡುಗೋಡಿಯಲ್ಲಿ ಸ್ಥಳವೊಂದಕ್ಕೆ ಕರೆದಾಗ ಪೊಲೀಸರು ಅಲ್ಲಿ ಆತನನ್ನು ಬಂಧಿಸಿದ್ದಾರೆ.

ಶ್ರೀಹರಿ ಸಹಚರರು
ಶ್ರೀಹರಿಯು, ಚಲಘಟ್ಟದಲ್ಲಿ ಅತಿಥಿ ವಸತಿ ನಿಲಯದಲ್ಲಿ ಸೌಕರ್ಯ ಪಡೆದಿದ್ದನು. ಅಲ್ಲಿ 5 ಕೆಜಿ ಗಾಂಜಾವನ್ನ ವಶಪಡಿಸಿಕೊಂಡಿದ್ದು, ಶ್ರೀಹರಿಯ ಸಹಾಯಕ ಅರ್ಜುನ್ (25) ಎಂಬಾತನನ್ನು ಬಂಧಿಸಲಾಗಿದೆ. ಈತನು ಅವನಿಗೆ ಡ್ರಗ್ಸ್ ಸಪ್ಲೇ ಮಾಡುತ್ತಿರುವ ಬಗ್ಗೆ ಊಹಿಸಲಾಗಿದೆ ಎಂದು ದಕ್ಷಿಣ ವಲಯ ಡಿಸಿಪಿಯವರಾದ ರೋಹಿಣಿ ಕಟೋಚ್‌ರವರು ಹೇಳಿದ್ದಾರೆ.

ಫೇಸ್‌ಬುಕ್ ಪೇಜ್
ಫೇಸ್‌ಬುಕ್ ಪೇಜ್ ಅನ್ನು ವಶಕ್ಕೆ ತೆಗೆದುಕೊಂಡಿದ್ದು, ಶ್ರೀಹರಿಗೆ ಗಾಂಜಾ ಎಲ್ಲಿಂದ ಸಿಗುತ್ತಿತ್ತು ಎಂಬುದನ್ನು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಗೂ ಈ ಡೀಲ್‌ನಲ್ಲಿ ಇತರರು ಯಾರು ಭಾಗಿಯಾಗಿದ್ದಾರೆ ಎಂಬುದನ್ನು ತನಿಖೆ ನೆಡೆಸುತ್ತಿದ್ದಾರೆ.

ಫೇಸ್‌ಬುಕ್ ಪೇಜ್ "Bangalore Cannabis"
ಶ್ರೀಹರಿಯು ಪ್ರಚಾರಕ್ಕಾಗಿ ಫೇಸ್‌ಬುಕ್ ಪೇಜ್ ಅನ್ನು ""Bangalore Cannabis" ಎಂದು ಕ್ರಿಯೇಟ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.


Click it and Unblock the Notifications








