ಮೊಬೈಲ್, ಟಿವಿ ಖರೀದಿಸುವವರಿಗೆ ಇಂದು ಲಾಸ್ಟ್ ಚಾನ್ಸ್!..ನಾಳೆಯಿಂದ ಬೆಲೆಗಳು ಹೆಚ್ಚು!!

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ನಾಳೆಯಿಂದ ತುಟ್ಟಿಯಾಗಲಿದೆ.

|

ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದ್ದು, ಈಗಾಗಲೇ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಆಮದು ಮಾಡಿಕೊಳ್ಳಲಾಗುವ ಮೊಬೈಲ್ ಫೋನ್, ಟಿ.ವಿ ಸೆಟ್, ಡಿಜಿಟಲ್ ಕ್ಯಾಮೆರಾಗಳು, ಮೈಕ್ರೋವೇವ್ ಓವೆನ್, ಎಲ್‍ಇಡಿ ಬಲ್ಬ್ ಗಳು ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ನಾಳೆಯಿಂದ ತುಟ್ಟಿಯಾಗಲಿದೆ.

ಮೊಬೈಲ್ ಫೋನ್ ಮೇಲಿನ ಕಸ್ಟಮ್ ಡ್ಯುಟಿಯನ್ನು ಶೇ.15 ನಿಂದ ಶೇ.20ಕ್ಕೆ ಏರಿಸಲಾಗಿದ್ದು, ಇನ್ನು ಮೊಬೈಲ್ ಚಾರ್ಜರ್‌ಗಳ ಮೇಲೆ ಶೇ.10, ಸ್ಮಾರ್ಟ್ ವಾಚ್‍ಗಳ ಮೇಲೆ ಶೇ.20, ಎಲ್‌ಸಿಡಿ/ಎಲ್‍ಇಡಿ/ಒಎಲ್‍ಇಡಿ ಟಿವಿಗಳು ಶೇ.15, ಗೃಹ ಅಲಂಕಾರಿಕ ವಿದ್ಯುದ್ದೀಪಗಳು ಶೇ.20 ರಷ್ಟು, ಡಿಜಿಟಲ್ ಕ್ಯಾಮೆರಾಗಳು ಬೆಲೆ ಶೇ.14 ರಷ್ಟು ಏರಿಕೆಯಾಗಲಿವೆ.

ಮೊಬೈಲ್, ಟಿವಿ ಖರೀದಿಸುವವರಿಗೆ ಇಂದು ಲಾಸ್ಟ್ ಚಾನ್ಸ್!!

ಹೀಗಾಗಿ, ಆಮದು ಮಾಡಿಕೊಳ್ಳುವ ಸ್ಮಾರ್ಟ್‌ಫೋನ್ ಸೇರಿ ಎಲ್ಲಾ ಎಲೆಕ್ಟ್ರಾನಿಕ್ಸ್‌ಗಳ ಬೆಲೆ ಭಾರೀ ಹೆಚ್ಚಳವಾಗಲಿವೆ. ತಜ್ಞರ ಪ್ರಕಾರ ಐಫೋನ್ ದರದ ಮೇಲೆ 2ರಿಂದ 4 ಸಾವಿರ ರೂ.ವರೆಗೂ ಹೆಚ್ಚಾಗಲಿದ್ದರೆ, 10 ಸಾವಿರ ರೂಪಾಯಿಗಳ ಬಜೆಟ್ ಸ್ಮಾರ್ಟ್‌ಫೋನ್‌ಗಳ ಬೆಲೆ 1 ಸಾವಿರದಷ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗಿದೆ.!

ಇನ್ನು ಟಿ.ವಿ ಸೆಟ್ ಬೆಲೆಗಳೂ ಕೂಡ ಭಾರೀ ಏರಿಕೆಯಾಗಲಿದ್ದು, ಎಲ್‌ಸಿಡಿ/ಎಲ್‍ಇಡಿ/ಒಎಲ್‍ಇಡಿ ಮಾದರಿಗಳ ಟಿವಿಗಳ ಸ್ಕ್ರೀನ್ ಗಾತ್ರಕ್ಕೆ ಅನುಗುಣವಾಗಿ ಈಗಿರುವ ಬೆಲೆಗಿಂತ ಟಿವಿಗಳ ಬೆಲೆ ಹೆಚ್ಚಾಗಲಿದೆ. 10 ಸಾವಿರ ರೂ. ಬೆಲೆಯ 20 ಲೀಟರ್ ಮೈಕ್ರೋವೇವ್ ಓವೆನ್‌ಗಳ ಬೆಲೆ 500 ರೂ.ವರೆಗೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮೊಬೈಲ್, ಟಿವಿ ಖರೀದಿಸುವವರಿಗೆ ಇಂದು ಲಾಸ್ಟ್ ಚಾನ್ಸ್!!

ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಎಲೆಕ್ಟ್ರಾನಿಕ್ಸ್ ಉತ್ತನ್ನಗಳ ಮೇಲಿನ ಕಸ್ಟಮ್ ಡ್ಯೂಟಿಯನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರಸರ್ಕಾರ ಹೇಳಿಕೊಂಡಿದೆ. 2017ರ ಹಣಕಾಸು ವರ್ಷದಲ್ಲಿ ಭಾರತ ಸರಿಸುಮಾರು 42 ಬಿಲಿಯನ್ ಡಾಲರ್(ಅಂದಾಜು 2 ಲಕ್ಷ ಕೋಟಿ ರೂ.) ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಂಡಿದೆ.!!

ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ Truvision TX4075 40' Smart LED TV ಹೇಗಿದೆ..?

ಓದಿರಿ: ಜಿಯೋ ಗ್ರಾಹಕರಿಗೆ ಬಂಪರ್!..ಮತ್ತೆ ಒಂದು ವರ್ಷ ಉಚಿತ ಪ್ರೈಮ್ ಸೇವೆ!!

Best Mobiles in India

English summary
The following is a list of imported items that will become costlier. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X