Subscribe to Gizbot

ಜಿಯೋ ಗ್ರಾಹಕರಿಗೆ ಬಂಪರ್!..ಮತ್ತೆ ಒಂದು ವರ್ಷ ಉಚಿತ ಪ್ರೈಮ್ ಸೇವೆ!!

Written By:

ಮಾರ್ಚ್ 31 ಕ್ಕೆ ಜಿಯೋ ಪ್ರೈಮ್ ಸೇವೆ ಕೊನೆಗೊಳ್ಳಿದ್ದು, ನಂತರ ರಿಲಾಯನ್ಸ್ ಜಿಯೋ ಏನು ಮಾಡಲಿದೆ ಎನ್ನುವ ಕುತೋಹಲಕ್ಕೆ ಇದೀಗ ತೆರೆಬಿದ್ದಿದೆ.! ಗ್ರಾಹಕರ ಪ್ರೈಮ್ ಮೆಂಬರ್‌ಶಿಪ್‌ ಸೇವೆ ಮುಕ್ತಾಯವಾಗುವುದಕ್ಕೆ ಒಂದು ದಿನ ಮುನ್ನವೇ ನಿನ್ನೆ ಸಂಜೆ ರಿಲಯನ್ಸ್ ತನ್ನ ಪ್ರೈಮ್ ಸೇವೆಯಯನ್ನು ಮುಂದುವರೆಸುವ ಬಗ್ಗೆ ಘೋಷಣೆ ಮಾಡಿದೆ.!!

ಟೆಲಿಕಾಂ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿರುವ ಜಿಯೋ ತನ್ನ 99 ರೂಪಾಯಿಗಳ ಪ್ರೈಮ್ ಸೇವೆಯನ್ನು ಮತ್ತೆ ಒಂದು ವರ್ಷಗಳ ಕಾಲ ಉಚಿತವಾಗಿ ನೀಡುವುದಾಗಿ ಘೋಷಿಸಿದೆ.! ಯಾವುದೇ ಹೆಚ್ಚುವರಿ ಶುಲ್ಕದ ಪಾವತಿ ಇಲ್ಲದೆ ಜಿಯೋ ಪ್ರೈಮ್ ಸೇವೆಯನ್ನು ಮತ್ತೆ ಒಂದು ವರ್ಷಗಳಕಾಲ ಮುಂದುವರೆಸಲಾಗುವುದು ಎಂದು ಜಿಯೋ ಸ್ಪಷ್ಟಪಡಿಸಿದೆ.!!

ಜಿಯೋ ಗ್ರಾಹಕರಿಗೆ ಬಂಪರ್!..ಮತ್ತೆ ಒಂದು ವರ್ಷ ಉಚಿತ ಪ್ರೈಮ್ ಸೇವೆ!!

ಜಿಯೋ ಪ್ರೈಮ್ ಸೇವೆಯನ್ನು ಮತ್ತೆ ಒಂದು ವರ್ಷ ಉಚಿತವಾಗಿ ನೀಡುತ್ತಿರುವುದರಿಂದ ಪ್ರೈಮ್ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ಈ ನಂತರವೂ ನೀಡಲಾಗುತ್ತದೆ. ಗ್ರಾಹಕರು ಜಿಯೋ ನೀಡುತ್ತಿರುವ ಡೇಟಾ ಫ್ಲಾನ್‌ಗಳನ್ನು ಹಾಗೂ ಜಿಯೋ ಸೇವೆಗಳನ್ನು ಪ್ರಸ್ತುತ ಇರವಂತೆಯೇ ಬಳಕೆ ಮಾಡಿಕೊಳ್ಳಬಹುದು ಎಂದು ಜಿಯೋ ಹೇಳಿದೆ.!!

ಪ್ರಸ್ತುತ 19 ರೂ.ಗಳಿಂದ ಹಿಡಿದು 9,999 ರೂ.ಗಳ ವರೆಗೆ ಜಿಯೋ ರೀಚಾರ್ಜ್ ಪ್ಲ್ಯಾನ್‌ಗಳು ಲಭ್ಯವಿವೆ. . ಈ ಪೈಕಿ 19 ಹಾಗೂ 52 ರೂ.ಗಳ ಪ್ಲ್ಯಾನ್ ಮೂಲಕ 150ಎಂಬಿ ಡೇಟಾ ಹಾಗೂ ಅನ್‌ಲಿಮಿಟೆಡ್ ಕರೆಗಳನ್ನು ಗ್ರಾಹಕರು ಪ್ರತಿ ದಿನ ಬಳಸಬಹುದಾಗಿದೆ. ಇವುಗಳು ಕ್ರಮವಾಗಿ ಒಂದು ಹಾಗೂ ಏಳು ದಿನಗಳ ವ್ಯಾಲಿಡಿಟಿ ಹೊಂದಿವೆ.!

ಜಿಯೋ ಗ್ರಾಹಕರಿಗೆ ಬಂಪರ್!..ಮತ್ತೆ ಒಂದು ವರ್ಷ ಉಚಿತ ಪ್ರೈಮ್ ಸೇವೆ!!

ಇನ್ನು ದೈನಿಕ 1.5 ಜಿಬಿ ಡೇಟಾ ನೀಡುವ ನಾಲ್ಕು ಪ್ಲ್ಯಾನ್‌ಗಳು ಚಾಲ್ತಿಯಲ್ಲಿವೆ. 149 ರೂ., 349 ರೂ., 399 ರೂ. ಹಾಗೂ 499 ರೂ.ಗಳ ಪ್ಲ್ಯಾನ್‌ಗಳು ಅನುಕ್ರಮವಾಗಿ 28 ದಿವಸ, 70 ದಿವಸ 84 ದಿವಸ ಹಾಗೂ 91 ದಿವಸಗಳ ವ್ಯಾಲಿಡಿಟಿ ಲಭ್ಯವಿವೆ. ನಿಮಗೆಲ್ಲಾ ತಿಳಿದಿರುವಂತೆ ಈ ಎಲ್ಲಾ ಸೇವೆಗಳು ಕೂಡ ಅನ್‌ಲಿಮಿಟೆಡ್ ಕರೆ ಮತ್ತು ಎಸ್‌ಎಮ್‌ಎಸ್‌ ಸೇವೆಗಳನ್ನು ಹೊಂದಿವೆ.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಓದಿರಿ: ದೇಶದಲ್ಲಿ ಗೂಗಲ್ 'ಸ್ಟ್ರೀಟ್ ವ್ಯೂ' ಸೇವೆಯನ್ನು ತಿರಸ್ಕರಿತು ಭಾರತ ಸರ್ಕಾರ!!..ಏಕೆ ಗೊತ್ತಾ?

English summary
The offer is available for all the existing JioPrime members and new customers can continue paying Rs 99 for the same service. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot