Subscribe to Gizbot

ಬಿಟ್ ಕಾಯಿನ್‌ ಬಗ್ಗೆ ಬಜೆಟ್‌ನಲ್ಲಿ ಹೇಳಿದ್ದೇನು..? ಹೂಡಿಕೆ ಮಾಡಬಹುದಾ..?

Written By:

ಕೇಂದ್ರ ಸರ್ಕಾರವೂ ಈ ಬಾರಿಯ ಬಜೆಟ್‌ ನಲ್ಲಿ ತಂತ್ರಜ್ಞಾನ ಕ್ಷೇತ್ರದ ಕುರಿತು ಹೆಚ್ಚಾಗಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಆದರೂ ಕೆಲವು ಪ್ರಮುಖ ವಿಷಯಗಳ ಮೇಲೆ ಗಮನ ಹರಿಸಿದ್ದು, ಇದೇ ಮಾದರಿಯಲ್ಲಿ ಜಾಗತಿಕವಾಗಿ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಳ್ಳುತ್ತಿರುವ ಕ್ರಿಪ್ಟೊಕರೆನ್ಸಿಯ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಿದೆ. ದಿನ ಕಳೆದಂತೆ ಭಾರತದಲ್ಲಿ ಬಿಟ್ ಕಾಯಿನ್ ಕುರಿತು ಆಸಕ್ತಿ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.

ಬಿಟ್ ಕಾಯಿನ್‌ ಬಗ್ಗೆ ಬಜೆಟ್‌ನಲ್ಲಿ ಹೇಳಿದ್ದೇನು..? ಹೂಡಿಕೆ ಮಾಡಬಹುದಾ..?

ದೇಶದಲ್ಲಿ ಡಿಜಿಟಲ್ ವ್ಯವಹಾರವು ಅಧಿಕವಾದ ರೀತಿಯಲ್ಲಿಯೇ ತಂತ್ರಜ್ಞಾನದ ಪ್ರಗತಿಯೊಂದಿಗೆ ಮಾರುಕಟ್ಟೆಯಲ್ಲಿ ಮಾನ್ಯತೆಯನ್ನು ಪಡೆಯದ ಕ್ರಿಪ್ಟೊಕರೆನ್ಸಿ ಬಳಕೆ ಹಾಗೂ ಅವುಗಳಲ್ಲಿ ಹಣ ಹೂಡುವವರ ಸಂಖ್ಯೆಯು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದನ್ನ ಗಮನಿಸಿರುವ ಕೇಂದ್ರ ಸರಕಾರವು ಭಾರತೀಯ ಮಾರುಕಟ್ಟೆಯಲ್ಲಿ ಕ್ರಿಪ್ಟೊಕರೆನ್ಸಿಗೆ ಮಾನ್ಯತೆ ನೀಡುವುದಿಲ್ಲ ಎಂಬ ಖಡಕ್ ಸಂದೇಶವನ್ನು ರವಾನೆ ಮಾಡಿದೆ ಎನ್ನಲಾಗಿದೆ.

ಓದಿರಿ: ನೀವು ಬುದ್ದಿವಂತರಾಗಿದ್ದರೇ ಅಮೆಜಾನ್‌ನಲ್ಲಿ ಎಲ್ಲವು ಉಚಿತ: ಪಡೆಯುವುದು ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಜೆಟ್ ನಲ್ಲಿ ಬಿಸಿ:

ಬಜೆಟ್ ನಲ್ಲಿ ಬಿಸಿ:

ಬಿಟ್ ಕಾಯಿನ್ ಸೇರಿಂದತೆ ವಿವಿಧ ಕ್ರಿಪ್ಟೊಕರೆನ್ಸಿ ಬಳಕೆದಾರರಿಗೆ ಬಜೆಟ್ ನಲ್ಲಿ ಕೇಂದ್ರ ಸರಕಾರವು ಬಿಸಿ ಮುಟ್ಟಿಸಿದೆ. ಕ್ರಿಪ್ಟೊಕರೆನ್ಸಿಗಳ ಬಗ್ಗೆ ಹಣಕಾಸು ಸಚಿವರ ಖಡತ್ ನಿರ್ಧಾರವನ್ನು ತೆಗೆದುಕೊಂಡಿದ್ದು, ದೇಶಿಯ ಆರ್ಥಿಕ ವ್ಯವಸ್ಥೆಯಲ್ಲಿ ಕ್ರಿಪ್ಟೊಕರೆನ್ಸಿಗೆ ಯಾವುದೇ ಸ್ಥಾನಮಾನವಿಲ್ಲ ಎಂದಿದ್ದಾರೆ.

ಕ್ರಿಪ್ಟೊಕರೆನ್ಸಿ ನಿರ್ಮೂಲನೆಗೆ ಕ್ರಮ:

ಕ್ರಿಪ್ಟೊಕರೆನ್ಸಿ ನಿರ್ಮೂಲನೆಗೆ ಕ್ರಮ:

ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಕ್ರಿಪ್ಟೊಕರೆನ್ಸಿ ಮೇಲೆ ಹೂಡಿಕೆ ಮತ್ತು ಬಳಕೆಯ ಪ್ರಮಾಣವು ಹೆಚ್ಚಾಗಿದ್ದು, ಇದನ್ನು ನಿರ್ಮೂಲನ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ವಿತ್ತ ಸಚಿವರು ತಿಳಿಸಿದ್ದಾರೆ.

ಕಾನೂನಾತ್ಮಕ ಮಾನ್ಯತೆಯಿಲ್ಲ:

ಕಾನೂನಾತ್ಮಕ ಮಾನ್ಯತೆಯಿಲ್ಲ:

ದೇಶದಲ್ಲಿ ಕ್ರಿಪ್ಟೊಕರೆನ್ಸಿ ಕಾನೂನಾತ್ಮಕ ಮಾನ್ಯತೆಯನ್ನು ನೀಡುವುದಿಲ್ಲ. ಅದನ್ನು ಬಳಕೆ ಮಾಡಿಕೊಳ್ಳುವುದು ಅಕ್ರಮವಾಗಲಿದೆ. ಅಲ್ಲದೇ ಅದು ಹೆಚ್ಚಾಗಿ ಅಕ್ರಮ ವ್ಯವಹಾರಗಳಿಗೆ ಮಾತ್ರವೇ ಬಳಕೆಯಾಗುತ್ತಿದ್ದು, ಅದನ್ನು ಬಳಕೆ ಮಾಡಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.

ವಂಚನೆಯ ಜಾಲ:

ವಂಚನೆಯ ಜಾಲ:

ಕ್ರಿಪ್ಟೊಕರೆನ್ಸಿ ಎಂಬುದು ವಂಚಕ ಜಾಲದಂತೆ ಒಮ್ಮೆ ಅದರ ಒಳಗೆ ಇಳಿದರೆ ಹೊರಬರುವುದು ಕಷ್ಟ. ಈ ಹಿನ್ನಲೆಯಲ್ಲಿ ಕ್ರಿಪ್ಟೊಕರೆನ್ಸಿಗಳ ಮೇಲೆ ಹಣ ಹೂಡುವವರು ಅದರ ಬಗ್ಗೆ ಎಚ್ಚರವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Budget 2018: Jaitley says cryptocurrency is not legal tender. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot