Home
ಸುದ್ದಿಜಾಲ

Budget 2024: ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

ಬಜೆಟ್ (Budget 2024) ಬಗ್ಗೆ ಈಗಾಗಲೇ ದೇಶದ ಜನರಿಗೆ ದೊಡ್ಡ ಮಟ್ಟದ ಕುತೂಹಲ ಉಂಟಾಗಿದೆ. ಅದರಲ್ಲೂ ಕೆಲವು ತಜ್ಞರು ಯಾವೆಲ್ಲಾ ವಲಯಕ್ಕೆ ಏನೆಲ್ಲಾ ಘೋಷಣೆ ಆಗಲಿದೆ. ಅದರಲ್ಲೂ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಏನೆಲ್ಲಾ ಕೊಡುಗೆ ನೀಡಲಾಗುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ತಾಳೆ ಹಾಕುತ್ತಿದ್ದಾರೆ.

ಹೌದು, 2024-2025 ರ ಮಧ್ಯಂತರ ಬಜೆಟ್‌ಗೆ (Interim Budget 2024-2025) ದಿನಗಣನೆ ಆರಂಭ ಆಗಿದೆ. ಈ ಬಜೆಟ್‌ನಲ್ಲಿ ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟು ಹಣ ನೀಡಲಾಗುತ್ತದೆ ಹಾಗೂ ಏನೆಲ್ಲಾ ಹೊಸ ವಿಷಯಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬ ಚರ್ಚೆಗಳು ಎಲ್ಲಾ ಕಡೆ ಆಗುತ್ತಿವೆ. ಅದರಂತೆ ಈ ಮಧ್ಯಂತರ ಬಜೆಟ್ ಯಾವಾಗ ಘೋಷಣೆ ಆಗಲಿದೆ?, ಮಧ್ಯಂತರ ಬಜೆಟ್ ಎಂದರೇನು ಎಂಬಿತ್ಯಾದಿ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Budget 2024: ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

2024-2025 ರ ಮಧ್ಯಂತರ ಬಜೆಟ್: 2024-2025ರ ಸಾಲಿನ ಮಧ್ಯಂತರ ಬಜೆಟ್ ಘೋಷಣೆ ಸಂಬಂಧ ಜನರು ಕಾದು ಕುಳಿತಿದ್ದಾರೆ. ಇದು ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸರ್ಕಾರವನ್ನು ಚಾಲನೆಯಲ್ಲಿಡಲು ಹಣಕಾಸು ಯೋಜನೆಯಾಗಿದೆ. ಈ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.

ಏನಿದು ಮಧ್ಯಂತರ ಬಜೆಟ್?: ಮೊದಲೇ ತಿಳಿಸಿದಂತೆ ಇದು ಹೊಸ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸರ್ಕಾರವನ್ನು ಚಾಲನೆಯಲ್ಲಿಡಲು ಘೋಷಣೆ ಮಾಡಲಾಗುವ ಯೋಜನೆ ಆಗಿದೆ. ಈ ಮಧ್ಯಂತರ ಬಜೆಟ್ ಅನ್ನು ವೋಟ್ ಆನ್ ಅಕೌಂಟ್ (Vote on account) ಎಂದೂ ಸಹ ಕರೆಯಲಾಗುತ್ತದೆ. ಇದು ಚುನಾವಣೆಯ ನಂತರ ರಚನೆಯಾದ ಹೊಸ ಸರ್ಕಾರವು ಪೂರ್ಣ ಬಜೆಟ್ ಅನ್ನು ಪ್ರಸ್ತುತಪಡಿಸುವವರೆಗೆ ಅಗತ್ಯ ಸೇವೆಗಳನ್ನು ಚಾಲನೆ ಮಾಡಲು ಸರ್ಕಾರಕ್ಕೆ ಇರುವ ತಾತ್ಕಾಲಿಕ ಹಣಕಾಸು ಯೋಜನೆಯಾಗಿದೆ. ಇದು ಹಣಕಾಸಿನ ವರ್ಷದ ಮೊದಲ ಕೆಲವು ತಿಂಗಳುಗಳ ವೆಚ್ಚಗಳನ್ನು ಒಳಗೊಳ್ಳುತ್ತದೆ.

Budget 2024: ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

ಮಧ್ಯಂತರ ಬಜೆಟ್ 2024-2025 ದಿನಾಂಕ ಮತ್ತು ಸಮಯ: ಇತ್ತೀಚಿನ ಅಧಿಕೃತ ಪ್ರಕಟಣೆಯ ಪ್ರಕಾರ 2024-2025 ರ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಫೆಬ್ರವರಿ 1, 2024 ರಂದು ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಲಾಗಿದೆ. ಈ ಬಜೆಟ್ ಮುಂಬರುವ ಹಣಕಾಸು ವರ್ಷದಲ್ಲಿ ಸರ್ಕಾರದ ಆದಾಯ ಮತ್ತು ವೆಚ್ಚದ ಯೋಜನೆಗಳನ್ನು ವಿವರಿಸುತ್ತದೆ.

ಇನ್ನು ಸಂಸತ್ತಿನ 2024 ರ ಬಜೆಟ್ ಅಧಿವೇಶನವು ಜನವರಿ ಕೊನೆಯ ವಾರದಲ್ಲಿ ಪ್ರಾರಂಭವಾಗಿ ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಈ ಸಮಯದಲ್ಲಿ, ಹಿಂದಿನ ವರ್ಷದ ದೇಶದ ಆರ್ಥಿಕ ಸಾಧನೆಯನ್ನು ವಿಶ್ಲೇಷಿಸುವ ಆರ್ಥಿಕ ಸಮೀಕ್ಷೆ ಮತ್ತು ವರ್ಷದ ಅತ್ಯಂತ ಮಹತ್ವದ ಹಣಕಾಸು ಹೇಳಿಕೆಯಾದ ಕೇಂದ್ರ ಬಜೆಟ್ ಸೇರಿದಂತೆ ವಿವಿಧ ವರದಿಗಳನ್ನು ಸರ್ಕಾರ ಈ ವೇಳೆ ಪ್ರಸ್ತುತಪಡಿಸುತ್ತದೆ.

ಈ ದಿನಾಂಕಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ:
ಫೆಬ್ರವರಿ 1, 2024 ರಂದು ಹಣಕಾಸು ಸಚಿವರಿಂದ ಮಧ್ಯಂತರ ಬಜೆಟ್ ಮಂಡನೆ ಆಗಲಿದೆ.
ಏಪ್ರಿಲ್ 1, 2024 ರಂದು ಹೊಸ ಆರ್ಥಿಕ ವರ್ಷದ ಆರಂಭವಾಗಲಿದೆ.
ಮೇ-ಜೂನ್ 2024 ರಲ್ಲಿ ಪೂರ್ಣ ಬಜೆಟ್ ಮಂಡಿಸಲು ಹೊಸ ಸರ್ಕಾರಕ್ಕೆ ನಿರೀಕ್ಷಿತ ಸಮಯ ಇರುತ್ತದೆ.

Budget 2024: ದಿನಾಂಕ ಮತ್ತು ಸಮಯದ ಬಗ್ಗೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

ಮಧ್ಯಂತರ ಬಜೆಟ್‌ನ ರಿಯಲ್‌ ಟೈಮ್‌ ಮಾಹಿತಿಗಾಗಿ ಹಾಗೂ ಯಾವೆಲ್ಲಾ ಕ್ಷೇತ್ರಕ್ಕೆ ಏನೆಲ್ಲಾ ಕೊಡುಗೆ ನೀಡಲಾಗುತ್ತದೆ ಅನ್ನೋ ಮಾಹಿತಿಯನ್ನು ತಿಳಿಯಲು ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿರಿ. ಇದರೊಂದಿಗೆ ದೂರದರ್ಶನ ಮತ್ತು ಸಂಸತ್ ಟಿವಿ ಬಜೆಟ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಹಾಗೆಯೇ ಇದೇ ಚಾನಲ್‌ಗಳ ಅಧಿಕೃತ ಯೂಟ್ಯೂಬ್‌ ಚಾನಲ್‌ ಮೂಲಕವೂ ನೀವು ಮಾಹಿತಿ ಪಡೆಯಬಹುದಾಗಿದೆ. ಇದರೊಂದಿಗೆ ಪ್ರೆಸ್‌ ಇನ್ಫರ್ಮೇಶನ್‌ ಬ್ಯೂರೋ (PIB) ಬಜೆಟ್ ಅನ್ನು ಆನ್‌ಲೈನ್‌ನಲ್ಲಿ ಘೋಷಣೆ ಮಾಡುತ್ತದೆ.

Best Mobiles in India

English summary
countdown to interim budget 2024. According, here are the details of when will this budget be announced?, how to get real time information about it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+