Home
ಸುದ್ದಿಜಾಲ

ಈ ಸ್ಟೈಲಿಶ್‌ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ; ಉಚಿತ ಸ್ಮಾರ್ಟ್‌ವಾಚ್‌ ಸಹ ಲಭ್ಯ!

ಐಟೆಲ್‌ ಸಂಸ್ಥೆಯು ಎಂಟ್ರಿ ಲೆವೆಲ್‌ ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಭಿನ್ನ ಬೆಲೆಯಲ್ಲಿ ಸಂಸ್ಥೆಯು ಪರಿಚಯಿಸಿರುವ ಕೆಲವು ಫೋನ್‌ಗಳು ಗ್ರಾಹಕರನ್ನು ಸೆಳೆದಿವೆ. ಸಂಸ್ಥೆಯ ಅಂತಹ ಕೆಲವು ಫೋನ್‌ಗಳ ಪೈಕಿ ಐಟೆಲ್‌ S24 ಸ್ಮಾರ್ಟ್‌ಫೋನ್‌ ಕೂಡಾ ಒಂದಾಗಿದ್ದು, ಈ ಫೋನ್‌ ಸ್ಟೈಲಿಶ್‌ ಲುಕ್‌ ಜೊತೆಗೆ ಕೆಲವು ಆಕರ್ಷಕ ಫೀಚರ್ಸ್‌ ಪಡೆದಿದೆ. ಸದ್ಯ ಅಮೆಜಾನ್‌ ಇ ಕಾಮರ್ಸ್‌ ತಾಣದಲ್ಲಿ ಐಟೆಲ್‌ S24 ಫೋನ್‌ ಸಖತ್ ಡಿಸ್ಕೌಂಟ್‌ ಪಡೆದಿದ್ದು, ಮೊಬೈಲ್‌ ಪ್ರಿಯರು ವಾವ್‌ ಎನ್ನುವಂತೆ ಆಗಿದೆ.

ಹೌದು, ಲೀಡಿಂಗ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌ನಲ್ಲಿ ಇದೀಗ ಐಟೆಲ್‌ ಡೇಸ್‌ ಸೇಲ್‌ ಲೈವ್‌ ಇದ್ದು, ಈ ಮಾರಾಟದಲ್ಲಿ ಐಟೆಲ್‌ S24 ಫೋನ್‌ ಶೇ. 23% ರಷ್ಟು ರಿಯಾಯಿತಿ ಪಡೆದುಕೊಂಡಿದೆ. ಈ ಮೊಬೈಲ್‌ನ 8GB RAM + 128GB ಸ್ಟೋರೇಜ್‌ ವೇರಿಯಂಟ್‌ 9,999ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಲು ಅವಕಾಶ ಇದೆ. ಇದಲ್ಲದೇ ಇತರೆ ಆಯ್ದ ಆಫರ್‌ ಪಡೆದರೆ, ಈ ಫೋನ್‌ ಅನ್ನು 8,999ರೂ. ಗಳಲ್ಲಿ ಲಭ್ಯ.

ಈ ಸ್ಟೈಲಿಶ್‌ ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ; ಉಚಿತ ಸ್ಮಾರ್ಟ್‌ವಾಚ್‌ ಸಹ ಲಭ್ಯ!

ಈ ಮೊಬೈಲ್ ಮೀಡಿಯಾಟೆಕ್‌ ಹಿಲಿಯೋ G91 ಆಕ್ಟಾ-ಕೋರ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದು ಡಾನ್ ವೈಟ್ ಮತ್ತು ಸ್ಟಾರ್ರಿ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಹಾಗಾದರೇ ಐಟೆಲ್‌ S24 ಮೊಬೈಲ್‌ ಇತರೆ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಟೆಲ್ S24 ಸ್ಮಾರ್ಟ್‌ಫೋನ್‌ ಫೀಚರ್ಸ್‌

ಐಟೆಲ್ S24 ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಇದು ಪಂಚ್-ಹೋಲ್ ಶೈಲಿ ಪಡೆದಿದೆ. ಇದರ ಜೊತೆಗೆ ಈ ಸ್ಮಾರ್ಟ್‌ಫೋನ್‌ನಲ್ಲಿ 'ಡೈನಾಮಿಕ್ ಬಾರ್' ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಇದು ಸೆಲ್ಫಿ ಕ್ಯಾಮರಾ ಕಟೌಟ್ ಸುತ್ತಲೂ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ಮತ್ತು ಬ್ಯಾಟರಿ ಚಾರ್ಜಿಂಗ್ ವಿವರಗಳು, ಒಳಬರುವ ಕರೆ ನೋಟಿಫಿಕೇಶನ್‌ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಕಾಣಿಸುತ್ತದೆ.

ಐಟೆಲ್ S24 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G91 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕೆಲಸ ನಿರ್ವಹಿಸಲಿದ್ದು, 16GB RAM (ವರ್ಚುವಲ್ RAM ವಿಸ್ತರಣೆಯ ಮೂಲಕ) ಮತ್ತು 128GB ಆಂತರೀಕ ಸ್ಟೋರೇಜ್‌ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ಈ ಫೋನ್ ಮಾಲಿ G52 ಜಿಪಿಯು ಬಲ ಪಡೆದಿದೆ.

ಐಟೆಲ್ S24 ಸ್ಮಾರ್ಟ್‌ಫೋನ್‌ 108 ಮೆಗಾಪಿಕ್ಸೆಲ್‌ ಸ್ಯಾಮ್‌ಸಂಗ್‌ ISOCELL HM6 ಪ್ರಾಥಮಿಕ ಕ್ಯಾಮೆರಾ ಸೆನ್ಸರ್‌ ಹೊಂದಿದ್ದು, ಇದು 3x ಜೂಮ್ ಮತ್ತು f/1.6 ಅಪರ್ಚರ್ ಹೊಂದಿದೆ. ಮುಖ್ಯ ಕ್ಯಾಮೆರಾವನ್ನು ಸೆಕೆಂಡರಿ ಕ್ಯೂವಿಜಿಎ ಡೆಪ್ತ್ ಸೆನ್ಸರ್ ಮತ್ತು ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ ಜೋಡಿಸಲಾಗಿದೆ. ಹಾಗೆಯೇ ಸೆಲ್ಪಿ ಹಾಗೂ ವಿಡಿಯೋ ಕರೆಗಳಿಗಾಗಿ ಇದರಲ್ಲಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆ ಒದಗಿಸಲಾಗಿದೆ.

ಐಟೆಲ್ S24 ಸ್ಮಾರ್ಟ್‌ಫೋನ್‌ 18W ವೇಗದ ಚಾರ್ಜಿಂಗ್‌ ಸಪೋರ್ಟ್‌ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಎಐ ಸ್ಮಾರ್ಟ್ ಚಾರ್ಜ ಆಯ್ಕೆ ಪಡೆದಿದೆ. ಹಾಗೆಯೇ ಬ್ಯಾಟರಿ ವಯಸ್ಸನ್ನು ಜಾಸ್ತಿ ಮಾಡಲು ಮತ್ತು ಸುರಕ್ಷಿತ ಚಾರ್ಜಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಚಾರ್ಜಿಂಗ್ ವೇಗವನ್ನು ಇದು ಸರಿಹೊಂದಿಸುವ ಕೆಲಸ ಮಾಡುತ್ತದೆ.

ಹಾಗೆಯೇ ಈ ಸ್ಮಾರ್ಟ್‌ಫೋನ್ ಫೇಸ್ ಅನ್‌ಲಾಕ್ ಅನ್ನು ಬೆಂಬಲಿಸುತ್ತದೆ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಆಯ್ಕೆ ಪಡೆದುಕೊಂಡಿದೆ. ಇದರ ಜೊತೆಗೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಸಿಮ್, 4G, ವೈ-ಫೈ, ಜಿಪಿಎಸ್‌, ಬ್ಲೂಟೂತ್ ಆವೃತ್ತಿ 5.0, ಯುಎಸ್‌ಬಿ ಟೈಪ್-ಸಿ 2.0 ಪೋರ್ಟ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್‌ ಅನ್ನು ಈ ಫೋನ್‌ನಲ್ಲಿ ಕಾಣಬಹುದಾಗಿದೆ.

Best Mobiles in India

English summary
Bumper discount on itel S24 Phone on amazon. Check Price, offer and Specifications details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+