ಸ್ಯಾಮ್‌ಸಂಗ್ ಗ್ಯಾಲಕ್ಸಿ ಸರಣಿ S23 ಫೋನ್‌ಗಳ ಖರೀದಿ ಮೇಲೆ ಭರ್ಜರಿ ಆಫರ್!
ಸ್ಯಾಮ್‌ಸಂಗ್ ಇತ್ತೀಚೆಗೆ ಗ್ಯಾಲಕ್ಸಿ ಸರಣಿ S23 ಫೋನ್‌ಗಳನ್ನು ಲಾಂಚ್ ಮಾಡಿತ್ತು. ಈ ಫೋನ್‌ಗಳು ಬೆಲೆಗೆ ತಕ್ಕ ಫೀಚರ್ಸ್‌ಗಳನ್ನು ಹೊಂದಿದ್ದು, ಅಧಿಕ ಬೆಲೆ ನೀಡಿ ಈ ಫೋನ್‌ಗಳನ್ನು ಖರೀದಿ ಮಾಡಲು ಸಾಧ್ಯವಾಗದವರಿಗೆ ಇದೀಗ ವಿಶೇಷ ಆಫರ್ ಘೋಷಣೆ ಮಾಡಿದೆ.
ಹೌದು, ಸ್ಯಾಮ್‌ಸಂಗ್ ಕಂಪೆನಿಯು ಗ್ಯಾಲಕ್ಸಿ S23 ಅಲ್ಟ್ರಾ, ಗ್ಯಾಲಕ್ಸಿ S23+ ಮತ್ತು ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ಘೋಷಿಸಿದ್ದು, ಈ ಮೂಲಕ ಕಡಿಮೆ ದರದಲ್ಲಿ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಸ್ಯಾಮ್‌ಸಂಗ್ ಘೋಷಣೆ ಮಾಡಿದ ಆಫರ್ ಏನು?, ಹಾಗೂ ಈ ಫೋನ್‌ಗಳ ಸಾಮಾನ್ಯ ದರ ಮತ್ತು ಫೀಚರ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಗ್ಯಾಲಕ್ಸಿ S23 ಸರಣಿಗಿರುವ ಆಫರ್ ಏನು?
ದುಬಾರಿ ಸ್ಮಾರ್ಟ್ ಫೋನ್ ಎನಿಸಿಕೊಂಡಿರುವ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್‌ನಲ್ಲಿ ಗ್ರಾಹಕರು 18,000 ರೂ. ಮೌಲ್ಯದ ಪ್ರಯೋಜನಗಳ ಜೊತೆಗೆ 12 ತಿಂಗಳ ನೋ ಕಾಸ್ಟ್ ಇಎಮ್‌ಐ ಅನ್ನು ಪಡೆಯಬಹುದಾಗಿದ್ದು, ಈ ಮೂಲಕ ಗ್ರಾಹಕರು ತಿಂಗಳಿಗೆ ಕೇವಲ 5,209ರೂ. ಗಳನ್ನು ಪಾವತಿ ಮಾಡಬಹುದಾಗಿದೆ. ಹಾಗೆಯೇ 10,000 ರೂ. ಗಳ ಹೆಚ್ಚುವರಿ ಅಪ್‌ಗ್ರೇಡ್ ಬೋನಸ್ ಗೆ ಗ್ರಾಹಕರು ಅರ್ಹರಾಗಿರುತ್ತಾರೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.
ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್‌ಫೋನ್ 1,24,999 ರೂ.ಗಳ ಆರಂಭಿಕ ಬೆಲೆ ಹೊಂದಿದ್ದು, ವಿನಿಮಯ ಆಫರ್ ಬಳಕೆ ಮಾಡಿಕೊಂಡು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಸೇಲ್ ಮಾಡುವ ಮೂಲಕ 47,000 ರೂ. ಗಳ ವರೆಗೂ ರಿಯಾಯಿತಿ ಪಡೆಯಬಹುದಾಗಿದೆ. ಜೊತೆಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಹೊಂದಿರುವ ಗ್ರಾಹಕರು S23 ಅಲ್ಟ್ರಾದಲ್ಲಿ 8,000 ಕ್ಯಾಶ್‌ಬ್ಯಾಕ್ ಪಡೆಯಬಹುದು. ಈ ಫೋನ್ 12GB + 512GB ಮತ್ತು 12GB + 1TB ಸ್ಟೋರೇಜ್ ಎರಡು ವೇರಿಯಂಟ್‌ನಲ್ಲಿ ಲಭ್ಯವಿದೆ.

ಇನ್ನುಳಿದ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಹಾಗೂ ಗ್ಯಾಲಕ್ಸಿ S23+ ಸ್ಮಾರ್ಟ್‌ಫೋನ್ ಮೇಲೆ ಗ್ರಾಹಕರು 13,000ರೂ. ಗಳ ಮೌಲ್ಯದ ಪ್ರಯೋಜನ ಪಡೆಯಬಹುದಾಗಿದ್ದು, ತಿಂಗಳಿಗೆ 3,125 ರೂ. ಗಳ ನೋ ಕಾಸ್ಟ್ ಇಎಮ್‌ಐ ನಲ್ಲಿ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಫೋನ್ ಖರೀದಿಯ ಮೇಲೆ 8,000 ರೂ. ಗಳ ಹೆಚ್ಚುವರಿ ಅಪ್‌ಗ್ರೇಡ್ ಬೋನಸ್ ಸಹ ಪಡೆದುಕೊಳ್ಳಬಹುದಾಗಿದೆ.
ಗ್ಯಾಲಕ್ಸಿ S23 ಫೋನ್ ಭಾರತದಲ್ಲಿ 74,999 ರೂ. ಗಳ ಬೆಲೆಗೆ ಲಾಂಚ್ ಆಗಿದೆ. ಹಾಗೆಯೇ ಇದು 8GB RAM ಮತ್ತು 128GB ಹಾಗೂ 8GB + 256GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದ್ದು, ಫ್ಯಾಂಟಮ್ ಬ್ಲಾಕ್, ಲ್ಯಾವೆಂಡರ್, ಗ್ರೀನ್ ಮತ್ತು ಕ್ರೀಮ್ ನ ಮೂರು ಬಣ್ಣದ ಆಯ್ಕೆಯಲ್ಲಿ ಇದು ಲಭ್ಯ ಇದೆ.
ಹಾಗೆಯೇ ಗ್ಯಾಲಕ್ಸಿ S23 + ಸ್ಮಾರ್ಟ್‌ಫೋನ್ ಅನ್ನು 94,999 ರೂ. ಗಳಿಗೆ ಲಾಂಚ್ ಮಾಡಲಾಗಿದ್ದು, ಈ ಫೋನ್ 8GB RAM ಮತ್ತು 256GB ಹಾಗೂ 8GB RAM ಮತ್ತು512GB ಇಂಟರ್ ಸ್ಟೋರೇಜ್‌ನ ಎರಡು ಆಯ್ಕೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಫ್ಯಾಂಟಮ್ ಬ್ಲಾಕ್ ಮತ್ತು ಕ್ರೀಮ್ ನ ಎರಡು ಬಣ್ಣದ ಆಯ್ಕೆಗಳಲ್ಲಿ ಕಂಡುಬಂದಿದೆ.

ಈ ಎಲ್ಲಾ ಮೂರು ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 ಜನ್ 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ಪ್ರಮುಖವಾಗಿರುವ ಅಲ್ಟ್ರಾ ಫೋನ್ 6.8 ಇಂಚಿನ QHD+ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 120Hz ರಿಫ್ರೆಶ್ ರೇಟ್ ನೀಡಲಿವೆ. ಜೊತೆಗೆ ಫೋನ್‌ನ ಕೆಳಭಾಗದಲ್ಲಿ ಮೀಸಲಾದ ಎಸ್ ಪೆನ್ ಸ್ಲಾಟ್ ಕೂಡ ಇದೆ. ಇದು 200MP ಕ್ಯಾಮೆರಾ ಒಳಗೊಂಡಂತೆ ಕ್ವಾಡ್ ಕ್ಯಾಮೆರಾ ರಚನೆ ಅತ್ಯಂತ ಆಕರ್ಷಕವಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿದೆ.


Click it and Unblock the Notifications








