Home
ಸುದ್ದಿಜಾಲ

iPhone: ಆಪಲ್‌ ಐಫೋನ್‌ 12 ಅನ್ನು ಕೇವಲ 4,999ರೂ.ಗಳಲ್ಲಿ ಖರೀದಿಸಿ, ಇದು ದೀಪಾವಳಿ ಅಫರ್!

ಅಪಲ್‌ನ ಐಫೋನ್‌ಗಳಿಗೆ (Apple iPhone) ಯಾವ ಕಾಲಕ್ಕೂ ಸಹ ಬೇಡಿಕೆ ಇದ್ದೇ ಇರುತ್ತದೆ. ಅದರಲ್ಲೂ ಐಫೋನ್‌ನ 15 ಸರಣಿ (iPhone 15 series) ಫೋನ್‌ಗಳನ್ನು ಅನಾವರಣ ಮಾಡಿದ ಬಳಿಕ ಹಳೆಯ ಸರಣಿ ಫೋನ್‌ಗಳಿಗೆ ಬಹಳಷ್ಟು ಆಫರ್‌ ಅನ್ನು ಘೋಷಣೆ ಮಾಡಲಾಗಿದೆ. ಈ ನಡುವೆ ಆಪಲ್‌ ಐಫೋನ್‌12 (iPhone 12) ಅನ್ನು ಕೇವಲ 4,999ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಹೌದು, ಆಪಲ್‌ ಐಫೋನ್‌ 12 ಸ್ಮಾರ್ಟ್‌ಫೋನ್‌ (iPhone 12 smartphone) ಮಾರುಕಟ್ಟೆಯಲ್ಲಿ ಇಂದಿಗೂ ಬೇಡಿಕೆ ಇರುವ ಫೋನ್ ಆಗಿದೆ. ಈ ಫೋನ್‌ಗೆ ಫ್ಲಿಪ್‌ಕಾರ್ಟ್‌ ತನ್ನ ದೀಪಾವಳಿ ವಿಶೇಷ ಸೇಲ್‌ನಲ್ಲಿ (Flipkart Diwali Special Sale) ಬಂಫರ್ ಆಫರ್ ಘೋಷಣೆ ಮಾಡಿದೆ. ಈ ಮೂಲಕ ಗ್ರಾಹಕರು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಹಾಗಿದ್ರೆ, ಈ ಫೋನ್‌ ಅನ್ನು ಕೇವಲ 4,999 ರೂ.ಗಳಲ್ಲಿ ಖರೀದಿ ಮಾಡುವುದು ಹೇಗೆ?, ಈ ಫೋನ್‌ನ ಪ್ರಮುಖ ಫೀಚರ್ಸ್‌ ಏನು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಪಲ್‌ ಐಫೋನ್‌ 12 ಅನ್ನು ಕೇವಲ 4,999ರೂ.ಗಳಲ್ಲಿ ಖರೀದಿಸಿ,ಇದು ದೀಪಾವಳಿ ಅಫರ್!

4,999ರೂ.ಗಳಿಗೆ ಐಫೋನ್ 12: ಈ ವಿಷಯ ಕೇಳಿ ನೀವು ಅರೇ ಅದೇಗೆ ಸಾಧ್ಯ ಇದು ಸುಳ್ಳು ಅಂತ ತಕ್ಷಣದ ನಿರ್ಧಾರಕ್ಕೆ ಬರಬಹುದು. ಆದರೆ 79,900ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಕಂಡು ಈ ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ 35,000 ರೂಪಾಯಿಗಳ ಭಾರೀ ರಿಯಾಯಿತಿಯನ್ನು ಪಡೆದುಕೊಂಡಿದೆ. ಅಂದರೆ 39,999 ರೂಗಳಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡಬಹುದು.

ನೀವು ಈ ಫೋನ್‌ ಅನ್ನು ಆಫರ್ ಬೆಲೆಗೆ ಖರೀದಿ ಮಾಡುವುದಷ್ಟೇ ಅಲ್ಲದೆ ವಿನಿಮಯ ಆಫರ್ ಅನ್ನೂ ಸಹ ಪಡೆದುಕೊಳ್ಳಬಹುದಾಗಿದೆ. ಅಂದರೆ ನಿಮ್ಮ ಹಳೆಯ ಫೋನ್‌ ಉತ್ತಮ ಸ್ಥಿತಿಯಲ್ಲಿ ಇದ್ದರೆ ಆ ಫೋನ್‌ಗೆ 35,000 ರೂ.ವರೆಗೆ ರಿಯಾಯಿತಿಯನ್ನು ನೀಡಲಾಗುತ್ತದೆ. ಹಾಗೆಯೇ ಎಲ್ಲಾ ಬ್ಯಾಂಕ್ ಕೊಡುಗೆಗಳು ಮತ್ತು ರಿಯಾಯಿತಿಗಳ ನಂತರ ನೀವು ಆಪಲ್‌ ಐಫೋನ್ 12 ಅನ್ನು 4,999ರೂ.ಗಳಲ್ಲಿ ನಿಮ್ಮದಾಗಿಸಿಕೊಳ್ಳಬಹು.

ಆಪಲ್‌ ಐಫೋನ್‌ 12 ಅನ್ನು ಕೇವಲ 4,999ರೂ.ಗಳಲ್ಲಿ ಖರೀದಿಸಿ,ಇದು ದೀಪಾವಳಿ ಅಫರ್!

ಇನ್ನು ಐಫೋನ್ 12 ಹೊಸ ಐಫೋನ್‌ 15 ಸರಣಿಯ ಬಿಡುಗಡೆಯ ನಂತರ ಸ್ಥಗಿತಗೊಂಡಿದ್ದರೂ ಸಹ ಖರೀದಿದಾರರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಫೋನ್‌ ಅನ್ನು ಸುಮಾರು 3 ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿದ್ದು, ಇಲ್ಲಿಯವರೆಗೆ ಹೆಚ್ಚು ಮಾರಾಟವಾದ ಐಫೋನ್ ಮಾದರಿಗಳಲ್ಲಿ ಇದೂ ಸಹ ಒಂದಾಗಿದೆ. ಹಳೆಯ-ಜನ್ ಹಾರ್ಡ್‌ವೇರ್‌ನಿಂದ ಚಾಲಿತವಾಗಿದ್ದರೂ ಸಹ ಮಧ್ಯಮ-ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಐಫೋನ್ 6.1 ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ ಹೊಂದಿದ್ದು, ಇದು 1170 x 2532 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಜೊತೆಗೆ HDR10, ಡಾಲ್ಬಿ ವಿಷನ್, 1200 ನಿಟ್ಸ್‌ ಬ್ರೈಟ್‌ನೆಸ್‌ ಆಯ್ಕೆ, 19.5:9 ಅನುಪಾತದೊಂದಿಗೆ ಅತ್ಯುತ್ತಮವಾದ ವೀಕ್ಷಣೆಯ ಅನುಭವವನ್ನು ನೀಡಲಿದೆ. ಮತ್ತು ಈ ಡಿಸ್‌ಪ್ಲೆ ಸೆರಾಮಿಕ್ ಶೀಲ್ಡ್ ಗ್ಲಾಸ್ ರಕ್ಷಣೆ ಪಡೆದಿದೆ.

ಆಪಲ್‌ ಐಫೋನ್‌ 12 ಅನ್ನು ಕೇವಲ 4,999ರೂ.ಗಳಲ್ಲಿ ಖರೀದಿಸಿ,ಇದು ದೀಪಾವಳಿ ಅಫರ್!

ಇದರೊಂದಿಗೆ A14 ಬಯೋನಿಕ್ ಚಿಪ್‌ನಿಂದ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್‌ ಆಪಲ್‌ GPU (4-ಕೋರ್ ಗ್ರಾಫಿಕ್ಸ್) ಬಲದೊಂದಿಗೆ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಮತ್ತು ಆಫರ್ ಬೆಲೆಗೆ ಲಭ್ಯ ಇರುವ ಫೋನ್‌ 64GB+4GB RAM ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆದರೆ ಸಾಮಾನ್ಯವಾಗಿ ಈ ಫೋನ್‌ ಈ ವೇರಿಯಂಟ್‌ನೊಂದಿಗೆ 128GB + 4GB RAM, 256GB + 4GB RAM ಆಯ್ಕೆ ಪಡೆದಿದೆ. ಉಳಿದಂತೆ ಇದು iOS 14.1 ನಲ್ಲಿ ರನ್‌ ಆಗಲಿದ್ದು, iOS 17.1 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

ಕ್ಯಾಮೆರಾ ವಿಷಯಕ್ಕೆ ಬಂದರೆ ಈ ಫೋನ್ ಹಿಂಭಾಗದಲ್ಲಿ 12 ಮೆಗಾಪಿಕ್ಸೆಲ್‌ನ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ನೈಟ್ ಮೋಡ್, 4K ಡಾಲ್ಬಿ ವಿಷನ್ ಹೆಚ್‌ಡಿಆರ್‌ ರೆಕಾರ್ಡಿಂಗ್ ಜೊತೆಗೆ 12 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ 2815 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್‌ ಆಗಿದ್ದು, 15W ವೈರ್‌ ಚಾರ್ಜಿಂಗ್‌ ಹಾಗೂ 7.5W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.

Best Mobiles in India

English summary
Apple iPhone 12 is still the most demanded phone in the smartphone market. Flipkart has announced a bumper offer for this phone in its Diwali Special Sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+