ಬರೇ ರೂ 1 ಕ್ಕೆ ರೆಡ್ಮೀ 3 ಎಸ್, ರೆಡ್ಮೀ ನೋಟ್ 3 ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಿ!

By Shwetha
|

ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಈ ಸಂಭ್ರಮಕ್ಕೆ ಇನ್ನಷ್ಟು ಮೆರುಗನ್ನು ತರುವುದಕ್ಕಾಗಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಅತ್ಯದ್ಭುತ ಆಫರ್‌ಗಳೊಂದಿಗೆ ಬಂದಿದ್ದು ದಸರಾ ದೀಪಾವಳಿಯ ಈ ಶುಭವಸರದಲ್ಲಿ ಈ ಆಫರ್‌ಗಳು ನಮಗೆ ವರದಾಯಕ ಎಂದೆನಿಸಿದೆ.

ಓದಿರಿ: ಬಿಎಸ್‌ಎನ್‌ಎಲ್‌ ನೀಡಲಿದೆ ರೂ 16 ಕ್ಕೆ ಇಂಟರ್ನೆಟ್ ಪ್ಯಾಕ್

ಇದೀಗ ಶ್ಯೋಮಿ ದೀಪಾವಳಿ ಸೇಲ್ ಅನ್ನು ಘೋಷಿಸಿದೆ. ಅದೂ ರೂ 1 ಕ್ಕೆ ನೀವು ಶ್ಯೋಮಿ ಡಿವೈಸ್‌ಗಳನ್ನು ಖರೀದಿ ಮಾಡಬಹುದಾಗಿದ್ದು ಇದಕ್ಕಾಗಿ ನೀವು Mi.com website ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಅಕ್ಟೋಬರ್ 17 ಮತ್ತು 19 ಮಧ್ಯಾಹ್ನ 2 ಗಂಟೆಗೆ ಈ ಮಾರಾಟ ನಡೆಯಲಿದೆ ಮೂರು ದಿನಗಳ ಶ್ಯೋಮಿ ಮಾರಾಟವು ಕೆಲವೊಂದು ನಿಬಂಧನೆಗಳು ಮತ್ತು ಷರತ್ತುಗಳನ್ನು ಒಳಗೊಂಡಿದ್ದು ಇಂದಿನ ಲೇಖನದಲ್ಲಿ ಅವುಗಳೇನು ಎಂಬುದನ್ನು ನೀಡಿದ್ದೇವೆ.

ಓದಿರಿ: ಎಸ್‎ಎಮ್ಎಸ್ ಮೂಲಕ ಫ್ರೀ ಏರ್‎ಟೆಲ್ ಡೇಟಾ ಪಡೆದುಕೊಳ್ಳುವುದು ಹೇಗೆ?

ಮಾರಾಟಕ್ಕೆ ಮುನ್ನ ರಿಜಿಸ್ಟರ್ ಮಾಡಿಕೊಳ್ಳಿ

ಮಾರಾಟಕ್ಕೆ ಮುನ್ನ ರಿಜಿಸ್ಟರ್ ಮಾಡಿಕೊಳ್ಳಿ

ನೀವು ಇದಕ್ಕಾಗಿ Mi.com website ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳಬೇಕು ತದನಂತರ ರಿಜಿಸ್ಟ್ರೇಶನ್ ಆದ ಬೆನ್ನಲ್ಲೇ ಶ್ಯೋಮಿ ಫೋನ್ ಅನ್ನು ರೂ 1 ಕ್ಕೆ ಪಡೆದುಕೊಳ್ಳುವ ಅರ್ಹತೆಯನ್ನು ನೀವು ಪಡೆದುಕೊಳ್ಳುತ್ತೀರಿ. ಫ್ಲ್ಯಾಶ್ ಸೇಲ್ ಫಲಿತಾಂಶಗಳನ್ನು ಪ್ರತೀ ದಿನ ಎಮ್ಐ ಸಮುದಾಯದಲ್ಲಿ ಬಿತ್ತರಿಸಲಾಗುತ್ತದೆ.

2 ಗಂಟೆಯೊಳಗೆ ಪಾವತಿಸಿ

2 ಗಂಟೆಯೊಳಗೆ ಪಾವತಿಸಿ

ನೀವು ಇದಕ್ಕಾಗಿ 2 ಗಂಟೆಯೊಳಗೆ ಪಾವತಿಯನ್ನು ಮಾಡಬೇಕು. ಸ್ಮಾರ್ಟ್‌ಫೋನ್‌ಗೆ ಪಾವತಿ ಮಾಡಲು 2 ಗಂಟೆಯೊಳಗೆ ನೀವು ವಿಫಲರಾದಿರಿ ಎಂದಾದಲ್ಲಿ ನಿಮ್ಮ ಆರ್ಡರ್ ಸ್ವಯಂಚಾಲಿತವಾಗಿ ಕ್ಯಾನ್ಸಲ್ ಆಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ಯೋಮಿ ರೆಡ್ಮೀ 3ಎಸ್ ಪ್ರೈಮ್ ಅನ್ನು ರೂ 1 ಕ್ಕೆ ಖರೀದಿಸಿ

ಶ್ಯೋಮಿ ರೆಡ್ಮೀ 3ಎಸ್ ಪ್ರೈಮ್ ಅನ್ನು ರೂ 1 ಕ್ಕೆ ಖರೀದಿಸಿ

ರೆಡ್ಮೀ 3 ಎಸ್ ನಿಮಗೆ ರೂ 1 ಕ್ಕೆ ಅಕ್ಟೋಬರ್ 17 ರಂದು ಮಧ್ಯಾಹ್ನ 2 ಕ್ಕೆ ದೊರೆಯಲಿದೆ. ಇದೇ ಸಮಯದಲ್ಲಿ ಎಮ್ಐ ಬ್ಲ್ಯೂಟೂತ್ ಸ್ಪೀಕರ್‌ಗಳನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ರೆಡ್ಮೀ ನೋಟ್ 3 ಯ 16 ಜಿಬಿ ಆವೃತ್ತಿ ರೂ 1 ಕ್ಕೆ ಲಭ್ಯ

ರೆಡ್ಮೀ ನೋಟ್ 3 ಯ 16 ಜಿಬಿ ಆವೃತ್ತಿ ರೂ 1 ಕ್ಕೆ ಲಭ್ಯ

ದೀಪಾವಳಿ ಫ್ಲ್ಯಾಶ್ ಸೇಲ್ ಭಾಗವಾಗಿ ರೆಡ್ಮೀ ನೋಟ್ 3 ಯ 16 ಜಿಬಿ ಆವೃತ್ತಿಯು ರೂ 1 ಕ್ಕೆ ಅಕ್ಟೋಬರ್ 16 ರಂದು ಲಭ್ಯವಾಗಲಿದೆ. ಎಮ್ಐ ಪವರ್ ಬ್ಯಾಂಕ್ 2,000mAh ಆವೃತ್ತಿಯನ್ನು ಇದೇ ಕಡಿಮೆ ಬೆಲೆಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಮ್ಐ 4  ಕೂಡ ಪಟ್ಟಿಯಲ್ಲಿದೆ

ಎಮ್ಐ 4 ಕೂಡ ಪಟ್ಟಿಯಲ್ಲಿದೆ

ಶ್ಯೋಮಿ ಎಮ್ಐ 4 ಕೂಡ ರೂ 1 ಕ್ಕೆ ದೊರೆಯುವ ಪಟ್ಟಿಯಲ್ಲಿದ್ದು ಅಕ್ಟೋಬರ್ 19 ಕ್ಕೆ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಎಮ್ಐ ಬ್ಯಾಂಡ್ 2 ಅನ್ನು ಕೂಡ ರೂ 1 ರ ಬೆಲೆಯಲ್ಲಿ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ರೂ 1 ಕ್ಕೆ ಶ್ಯೋಮಿ ಫೋನ್ ಪಡೆದುಕೊಳ್ಳುವುದು ಹೇಗೆ

ರೂ 1 ಕ್ಕೆ ಶ್ಯೋಮಿ ಫೋನ್ ಪಡೆದುಕೊಳ್ಳುವುದು ಹೇಗೆ

ಎಮ್ಐ.ಕಾಮ್‌ನ ಸೇಲ್ ಪುಟಕ್ಕೆ ನೀವು ಹೋಗಬೇಕು ಮತ್ತು ರೂ 1 ರ ಫ್ಲ್ಯಾಶ್ ಸೇಲ್ ಉತ್ಪನ್ನಗಳಿಗಾಗಿ ಸ್ಕ್ರಾಲ್ ಡೌನ್ ಮಾಡಿ. 'ಶೇರ್ ಟು ರಿಜಿಸ್ಟರ್' ಆಪ್ಶನ್ ನಿಮಗೆ ಲಭ್ಯವಾಗುತ್ತದೆ ಹಾಗೂ ನೀವು ಇದನ್ನು ಕ್ಲಿಕ್ ಮಾಡಬೇಕು. ನಿಮ್ಮ ಫೇಸ್‌ಬುಕ್ ಟೈಮ್‌ಲೈನ್‌ನಲ್ಲಿ ರೂ 1 ರ ಆಫರ್ ಅನ್ನು ನೀವು ಹಂಚಿಕೊಳ್ಳಬೇಕು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉತ್ಪನ್ನಗಳನ್ನು ಖರೀದಿಸಿ ಮತ್ತು ಪಾವತಿ ಮಾಡಿ

ಉತ್ಪನ್ನಗಳನ್ನು ಖರೀದಿಸಿ ಮತ್ತು ಪಾವತಿ ಮಾಡಿ

ರೂ 1 ಕ್ಕಾಗಿ ಉತ್ಪನ್ನವನ್ನು ಖರೀದಿಸುವ ಪುಟಕ್ಕೆ ನೀವು ಭೇಟಿ ನೀಡಿದ ನಂತರ, ಕಮಿಂಗ್ ಸೂನ್ ಬದಲಿಗೆ ಬೈ ನೌ ಆಪ್ಶನ್ ಅನ್ನು ನೀವು ನೋಡಬಹುದು

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
This 3-day Xiaomi Diwali sale comes with a few terms and conditions associated with it. You can take a look at the same from below. Mark the date and don't let go of the chance to buy a Xiaomi smartphone at Re. 1.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X