ಹೆಡ್‌ಫೋನ್ ಖರೀದಿಸುವ ಮುನ್ನ ಈ ಅಂಶಗಳನ್ನು ಮರೆಯದೆ ಗಮನಿಸಿ!

|

ಪ್ರಸ್ತುತ ಗ್ಯಾಡ್ಜೆಟ್ಸ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಮಿಂಚಿನ ಓಟದಲ್ಲಿ ಕಾಣಿಸಿಕೊಂಡಿರುವ ಡಿವೈಸ್‌ ಎಂದರೇ ಹೆಡ್‌ಫೋನ್‌ಗಳು. ಬಳಕೆದಾರರು ಫೋನ್‌ ಜೊತೆಗೆ ಒಂದು ಹೆಡ್‌ಫೋನ್‌ ಇರಲಿ ಎಂದು ಬಯಸುತ್ತಾರೆ. ಅದರಲ್ಲಿಯೂ ಮ್ಯೂಸಿಕ್ ಪ್ರಿಯ ಸ್ಮಾರ್ಟ್‌ಫೋನ್‌ ಬಳಕೆದಾರರು ಅತ್ಯುತ್ತಮ ಗುಣಮಟ್ಟದ ಹೆಡ್‌ಫೋನ್‌ಗೆ ಆದ್ಯತೆ ನೀಡುತ್ತಾರೆ. ಬ್ಲೂಟೂತ್‌ ಆಧಾರಿತ, ವಾಯರ್‌ಲೆಸ್‌ ಮಾದರಿಯ ಹೆಡ್‌ಫೋನ್‌ಗಳು ಈಗ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸದ್ದು ಮಾಡಿತ್ತಿವೆ.

ಡಿವೈಸ್‌

ಹೌದು, ಹೆಡ್‌ಫೋನ್‌ಗಳು ಒಂದು ರೀತಿ ಫೋನ್‌ ಜೊತೆಗೆ ಅಗತ್ಯ ಡಿವೈಸ್‌ ಎನಿಸಿಕೊಂಡಿವೆ. ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯಲ್ಲಿ ಹೆಡ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದರೊಂದಿಗೆ ಹಲವು ಡಿವೈಸ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಹೀಗಾಗಿ ಗ್ರಾಹಕರು ಹೆಡ್‌ಫೋನ್‌ ಖರೀದಿಸುವಾಗ ಅವರ ಅನುಕೂಲಕ್ಕೆ ಅನುಗುಣವಾಗಿ ಮತ್ತು ಉತ್ತಮ ಗುಣಮಟ್ಟದ ಡಿವೈಸ್‌ಗಳನ್ನು ಆಯ್ದುಕೊಳ್ಳಲು ಬಯಸುತ್ತಾರೆ. ಹಾಗಾದರೇ ಹೆಡ್‌ಫೋನ್‌ಗಳು ಖರೀದಿಸುವಾಗ ಬಳಕೆದಾರರು ಗಮನಿಸಬೇಕಾದ ಕೆಲವು ಪ್ರಮುಖ ಅಂಶಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಹೆಡ್‌ಫೋನ್ ಮಾದರಿಯ ಬಗ್ಗೆ ತಿಳಿಯಿರಿ

ಹೆಡ್‌ಫೋನ್ ಮಾದರಿಯ ಬಗ್ಗೆ ತಿಳಿಯಿರಿ

ಹೆಡ್‌ಫೋನಿನಲ್ಲಿ ಹಲವು ಮಾಡೆಲ್‌ಗಳ ಆಯ್ಕೆಗಳು ಲಭ್ಯ ಇವೆ. ಅವುಗಳಲ್ಲಿ ಕೆಲವು ಇನ್‌-ಇಯರ್‌ ಮಾದರಿ ಆಗಿದ್ದರೇ, ಮತ್ತೆ ಕೆಲವು ಆನ್‌-ಇಯರ್‌ ರಚನೆ ಪಡೆದಿರುತ್ತವೆ. ಇದಲ್ಲದೇ ಇನ್ನೂ ಕೆಲವು ಡಿವೈಸ್‌ಗಳು ಓವರ್-ಇಯರ್‌ ಮಾದರಿಯ ವಿನ್ಯಾಸ ಪಡೆದಿರುತ್ತವೆ. ನಿಮಗೆ ಸರಿ ಹೊಂದುವ ಹೆಡ್‌ಫೋನ್ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಿರಿ.

ಫೀಚರ್ಸ್‌ಗಳ ಬಗ್ಗೆ ತಿಳಿಯಿರಿ

ಫೀಚರ್ಸ್‌ಗಳ ಬಗ್ಗೆ ತಿಳಿಯಿರಿ

ಸದ್ಯ ಬಹುತೇಕ ಆಡಿಯೊ ಕಂಪನಿಗಳು ತಮ್ಮ ಹೆಡ್‌ಫೋನ್‌ ಉತ್ಪನ್ನಗಳ ಜಾಹಿರಾತು ನೀಡಿರುತ್ತವೆ. ಅವುಗಳಲ್ಲಿ ಆ ಉತ್ಪನ್ನದ ವಿಶೇಷ ಫೀಚರ್ಸ್‌ಗಳು ಮತ್ತು ಆಯ್ಕೆಗಳ ಕುರಿತು ಮಾಹಿತಿ ನೀಡಿರುತ್ತಾರೆ. ಖರೀದಿಸುವ ಸಮಯದಲ್ಲಿ ಬ್ಲೂಟೂತ್‌ ಸ್ಪೀಕರ್‌ನಲ್ಲಿ ನೀಡುರುವ ಫೀಚರ್ಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ಮತ್ತು ಅದರ ವಿಶೇಷತೆಯೆನು ಎಂಬುದನ್ನು ಅರಿಯಿರಿ.

ಫ್ರಿಕ್ವೆನ್ಸಿ -ತರಂಗಾತರಗಳು ಬಗ್ಗೆ ತಿಳಿಯಿರಿ

ಫ್ರಿಕ್ವೆನ್ಸಿ -ತರಂಗಾತರಗಳು ಬಗ್ಗೆ ತಿಳಿಯಿರಿ

ಹೆಡ್‌ಫೋನ್‌ ಸ್ಪೀಕರ್ಸ್‌ ತರಗಾಂತರಗಳ ಅಳತೆಯನ್ನು ಹರ್ಡ್ಜ್‌ನಲ್ಲಿ ಹೇಳುತ್ತಾರೆ. ಸಾಮಾನ್ಯವಾಗಿ ಬಹುತೇಕ ಹೆಡ್‌ಫೋನ್‌ಗಳು 20 Hz - 20000 Hz ಅಂತರದಲ್ಲಿ ತರಗಾಂತರಗಳನ್ನು ಬೆಂಬಲಿಸುತ್ತವೆ. ನೀವು ಹೆಚ್ಚಿನ ಬಾಸ್‌ ಆಯ್ಕೆ ಬಯಸಿದಿರೇ ಅಧಿಕ ತರಂಗಾಂತರದ ಸೌಲಭ್ಯದ ಡಿವೈಸ್‌ ಖರೀದಿಸುವುದು ಉತ್ತಮ.

ಡಿವೈಸ್‌ ವಿನ್ಯಾಸ ಮತ್ತು ಕಂಫರ್ಟ್‌

ಡಿವೈಸ್‌ ವಿನ್ಯಾಸ ಮತ್ತು ಕಂಫರ್ಟ್‌

ಹೆಡ್‌ಫೋನ್‌ ನಿಮ್ಮ ಕಿವಿಗೆ ಆರಾಮದಾಯಕವಾಗಿದೆಯೇ ಎಂದು ಪ್ರಯತ್ನಿಸಿ ಮತ್ತು ಪರಿಶೀಲಿಸಿ. ಜನರ ಕಿವಿಗಳು ಒಂದೇ ರೀತಿ ಆಗಿರುವುದಿಲ್ಲ ಮತ್ತು ಪ್ರತಿಯೊಂದು ಡಿವೈಸ್‌ ನಿಮಗೆ ಸರಿಹೊಂದುವುದಿಲ್ಲ. ಕಿವಿಗಳಿಗೆ ಹಿತವೆನಿಸುವ ರಚನೆಯನ್ನು ಹೊಂದಿರುವ ಡಿವೈಸ್‌ ಆಯ್ಕೆ ಮಾಡುವುದು ಉತ್ತಮ.

ಬ್ಲೂಟೂತ್‌ ವರ್ಷನ್ ಬಗ್ಗೆ ಪರಿಶೀಲಿಸಿ

ಬ್ಲೂಟೂತ್‌ ವರ್ಷನ್ ಬಗ್ಗೆ ಪರಿಶೀಲಿಸಿ

ಹೊಸ ಮಾದರಿಯ ಹೆಡ್‌ಫೋನ್‌ ಡಿವೈಸ್‌ಗಳು ಬ್ಲೂಟೂತ್‌ ಕನೆಕ್ಟಿವಿಟಿಯಿಂದಲೇ ಕಾರ್ಯನಿರ್ವಹಿಸುತ್ತವೆ. ಆದರೆ ಬ್ಲೂಟೂತ್‌ ಹಲವು ವರ್ಷನ್‌ಗಳನ್ನು ಹೊಂದಿದ್ದು, ಇತ್ತೀಚಿನ್ ವರ್ಷನ ಉತ್ತಮ ಕನೆಕ್ಟಿವಿಟಿ ಸೌಲಭ್ಯವನ್ನು ಮತ್ತು ಹೆಚ್ಚಿನ ವ್ಯಾಪ್ತಿಯಲ್ಲಿ ಸೇವೆ ನೀಡುತ್ತದೆ.

ಆಡಿಯೊ ಡ್ರೈವರ್ ಬಗ್ಗೆ ಮಾಹಿತಿ ತಿಳಿಯಿರಿ

ಆಡಿಯೊ ಡ್ರೈವರ್ ಬಗ್ಗೆ ಮಾಹಿತಿ ತಿಳಿಯಿರಿ

ಸ್ಪೀಕರ್ಸ್‌ಗಳಲ್ಲಿ ಸೌಂಡ್‌ ಹೊರಹಾಕಲು ಆಡಿಯೊ ಡ್ರೈವರ್‌ಗಳು ಕಾರ್ಯನಿರ್ವಹಿಸುತ್ತವೆ. ಬಹುತೇಕ ಪೋರ್ಟೆಬಲ್ ಮಾದರಿಯ ಸ್ಪೀಕರ್ಸ್‌ಗಳ ಡ್ರೈವರ್ಸ್‌ಗಳು 40mm ಸಾಮರ್ಥ್ಯದಲ್ಲಿ ಕಂಡುಬರುತ್ತವೆ. ಹಾಗೆಯೇ ಹೆಡ್‌ಫೋನ್‌ ಖರೀದಿಸುವಾಗ ಆಡಿಯೊ ಡ್ರೈವರ್ಸ್‌ಗಳ ಬಗ್ಗೆ ಗಮನ ನೀಡಿ.

ಕನೆಕ್ಟಿವಿಟಿ ಆಯ್ಕೆಗಳ ಮಾಹಿತಿ

ಕನೆಕ್ಟಿವಿಟಿ ಆಯ್ಕೆಗಳ ಮಾಹಿತಿ

ನೀವು ಖರೀದಿಸುವ ಹೊಸ ಹೆಡ್‌ಫೋನ್‌ ಬ್ಲೂಟೂತ್ ಮಾದರಿಯ ಡಿವೈಸ್‌ ಆಗಿದ್ದರೂ, ಬ್ಲೂಟೂತ್‌ ಕನೆಕ್ಟಿವಿಟಿ ಜೊತೆಗೆ ಇತರೆ ಕನೆಕ್ಟಿವಿಟಿ ಆಯ್ಕೆಗಳಿವೆಯೇ ಎಂಬುದನ್ನು ಗಮನಿಸಿ. ಕೆಲವೊಮ್ಮೆ ಕೇಬಲ್‌ ಮೂಲಕ ಕನೆಕ್ಟ್‌ ಮಾಡುವ ಸಂದರ್ಭಗಳು ಎದುರಾಗಬಹುದ ಹೀಗಾಗಿ auxiliary ಕನೆಕ್ಟರ್‌ ಲಭ್ಯವಿದ್ದರೆ ಉತ್ತಮ.

ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ

ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆ

ಇಂದಿನ ಬಹುತೇಕ ಹೊಸ ಮಾದರಿಯ ಹೆಡ್‌ಫೋನ್‌ಗಳು ನಾಯ್ಸ್‌ ಕ್ಯಾನ್ಸಲೇಶನ್‌ ಆಯ್ಕೆಯನ್ನು ಪಡೆದಿವೆ. ಈ ಆಯ್ಕೆಯು ಬಳಕೆದಾರಿಗೆ ಅತ್ಯುತ್ತಮ ಗುಣಮಟ್ಟದಲ್ಲಿ ಆಡಿಯೋ ಕೇಳುವುದಕ್ಕೆ ಸಹಕಾರಿಯಾಗಲಿದೆ. ಹೊರಗಿನ ಶಬ್ದವನ್ನು ರದ್ದುಗೊಳಿಸಲು ಇದು ಪೂರಕವಾಗಿ ಕೆಲಸ ಮಾಡುತ್ತದೆ.

ಗೇಮಿಂಗ್ ಹೆಡ್‌ಫೋನ್‌

ಗೇಮಿಂಗ್ ಹೆಡ್‌ಫೋನ್‌

ಮಾರುಕಟ್ಟೆಯಲ್ಲಿ ಹಲವು ನಮೂನೆಗಳಲ್ಲಿ ಹೆಡ್‌ಫೋನ್‌ ಡಿವೈಸ್‌ಗಳು ಲಭ್ಯ ಇವೆ. ಮ್ಯೂಸಿಕ್‌ ಕೇಳಲು ಬೇರೆ ಹಾಗೆಯ ಗೇಮ್‌ ಆಡಲು ಬೇರೆ ಮಾದರಿಯ ಹೆಡ್‌ಫೋನ್‌ಗಳು ಇವೆ. ಅವುಗಳಲ್ಲಿ ಗೇಮಿಂಗ್ ಹೆಡ್‌ಫೋನ್‌ಗಳನ್ನು ವಿಡಿಯೋ ಗೇಮ್‌ಗಳ ಕಂಪ್ಯೂಟರ್‌ಗಳು, ಕನ್ಸೋಲ್‌ಗಳು ಅಥವಾ ಪೋರ್ಟಬಲ್ ಸಾಧನಗಳನ್ನು ಪ್ಲೇ ಮಾಡುವಾಗ, ಆಟದಲ್ಲಿನ ಆಡಿಯೊ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.

ವಾಯರ್‌ಲೆಸ್‌ ಮಾಡೆಲ್‌

ವಾಯರ್‌ಲೆಸ್‌ ಮಾಡೆಲ್‌

ಪ್ರಸ್ತುತ ತರಹೇವಾರಿ ಹೆಡ್‌ಫೋನ್‌ಗಳು ಸಿಗುತ್ತವೆ. ಅವುಗಳಲ್ಲಿ ವಾಯರ್‌ಲೆಸ್‌ ಡಿವೈಸ್‌ಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಸಾಮಾನ್ಯವಾಗಿ ಮೂರು ಪ್ರಮುಖ ಪ್ರಸರಣ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುತ್ತವೆ: ರೇಡಿಯೋ ಆವರ್ತನ, ಅತಿಗೆಂಪು ಮತ್ತು ಬ್ಲೂಟೂತ್. ಮೊದಲ ಎರಡಕ್ಕೆ ಮೀಸಲಾದ ಬೇಸ್ ಯುನಿಟ್ ಅಗತ್ಯವಿರುತ್ತದೆ.

ಕ್ಲೋಸ್ಡ್‌ ಬ್ಯಾಕ್‌ ಡಿವೈಸ್‌

ಕ್ಲೋಸ್ಡ್‌ ಬ್ಯಾಕ್‌ ಡಿವೈಸ್‌

ಹೆಡ್‌ಫೋನ್‌ ಡಿವೈಸ್‌ಗಳಲ್ಲಿ ಕ್ಲೋಸ್ಡ್‌ ಬ್ಯಾಕ್‌ ಡಿವೈಸ್‌ ಮಾದರಿಯು ಒಂದಾಗಿದೆ. ಹೆಡ್‌ಫೋನ್‌ಗಳು ಹೊರಗಿನ ಕವಚದೊಂದಿಗೆ ಯಾವುದೇ ರಂಧ್ರಗಳು ಅಥವಾ ದ್ವಾರಗಳಿಲ್ಲ, ಇದು ಕಪ್‌ಗಳ ಒಳಗೆ ಧ್ವನಿಯನ್ನು ಬಲೆಗೆ ಬೀಳಿಸುತ್ತದೆ ಮತ್ತು ಬಾಹ್ಯ ಶಬ್ದಗಳನ್ನು ಹೊರಗಿಡುತ್ತದೆ. ಕಚೇರಿ, ವಿಮಾನಗಳು ಅಥವಾ ಸಾರ್ವಜನಿಕವಾಗಿ ಎಲ್ಲಿಯಾದರೂ ಪ್ರಯಾಣಿಸಲು ಮತ್ತು ಸಂಗೀತವನ್ನು ಕೇಳಲು ಉತ್ತಮ ಆಯ್ಕೆಯಾಗಿದೆ.

ಓಪನ್-ಬ್ಯಾಕ್ ಹೆಡ್‌ಫೋನ್‌ಗಳು

ಓಪನ್-ಬ್ಯಾಕ್ ಹೆಡ್‌ಫೋನ್‌ಗಳು

ಕ್ಲೋಸ್ಡ್‌ ಬ್ಯಾಕ್‌ ಹೆಡ್‌ಫೋನ್‌ನಂತೆ ಓಪನ್-ಬ್ಯಾಕ್ ಮಾದರಿ ಸಹ ಇದೆ. ಇದು ಅಕೌಸ್ಟಿಕ್ ಪಾರದರ್ಶಕವಾಗಿರುತ್ತವೆ ಮತ್ತು ಹೆಡ್‌ಫೋನ್ ಬಳಕೆದಾರರಿಂದ ಹೊರಗಿನ ಧ್ವನಿಯನ್ನು ಕೇಳಲು ಅನುವು ಮಾಡಿಕೊಡುತ್ತದೆ. ಅವರು ಕಿವಿ ಕಪ್‌ಗಳ ಮೂಲಕ ಗಾಳಿಯನ್ನು ಹಾದುಹೋಗಲು ಅನುವು ಮಾಡಿಕೊಡುತ್ತಾರೆ ಮತ್ತು ಒತ್ತಡವನ್ನು ಹೆಚ್ಚಿಸುವುದನ್ನು ತಪ್ಪಿಸುತ್ತಾರೆ. ಅನೇಕ ಪ್ರೀಮಿಯಂ, ಹೈ-ಎಂಡ್ ಹೆಡ್‌ಫೋನ್‌ಗಳು ಹೆಚ್ಚು ಸಹಜವಾಗಿ ಧ್ವನಿಸಲು ಓಪನ್-ಬ್ಯಾಕ್‌ಗಳೊಂದಿಗೆ ಬರುತ್ತವೆ.

ಹೆಡ್‌ಫೋನ್ ಸೂಕ್ಷ್ಮತೆ/SENSITIVITY

ಹೆಡ್‌ಫೋನ್ ಸೂಕ್ಷ್ಮತೆ/SENSITIVITY

ಹೆಡ್‌ಫೋನ್ ಸೌಂಡ್‌ ಮಟ್ಟಗಳ ಬಗ್ಗೆ ನೀವು ಹೆಚ್ಚು ಗಮನಹರಿಸದಿದ್ದರೆ, ನೀವು ಹೆಡ್‌ಫೋನ್‌ಗಳ ಸೂಕ್ಷ್ಮತೆಯನ್ನು/SENSITIVITY ಗಮನಿಸಬೇಕು. ಒಂದು ಜತೆ ಹೆಡ್‌ಫೋನ್‌ಗಳನ್ನು ಎಷ್ಟು ಜೋರಾಗಿ ಆಡಿಯೊ ಪಡೆಯಬಹುದು ಎಂಬುದನ್ನು ಸೂಕ್ಷ್ಮತೆಯು ಸೂಚಿಸುತ್ತದೆ. ಹೆಚ್ಚಿನ ಹೆಡ್‌ಫೋನ್‌ಗಳು ಸರಿಸುಮಾರು 96-110 dB ಸಂವೇದನೆಯೊಂದಿಗೆ ಬರುತ್ತವೆ. 85 dB ಗಿಂತ ಕಡಿಮೆ ಇರುವ ಹೆಡ್‌ಫೋನ್‌ಗಳು ತುಂಬಾ ಮೃದುವಾಗಿರುತ್ತದೆ ಮತ್ತು 110 dB ಗಿಂತ ಹೆಚ್ಚಿನವು ನಿಮ್ಮ ಶ್ರವಣ ಸಾಮರ್ಥ್ಯವನ್ನು ಹಾನಿಗೊಳಿಸಬಹುದು.

Best Mobiles in India

English summary
Don't forget these things before buying headphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X