ಹೊಸ ಮೊಬೈಲ್ ಖರೀದಿಸುವಾಗ ಈ ಎಡವಟ್ಟು ಮಾಡಿಕೊಳ್ಳಬೇಡಿ!..ಆಯ್ಕೆ ನಿಮ್ಮದು!
ಆನ್‌ಲೈನ್ ಮೂಲಕವೇ ಆಗಲಿ ಅಥವಾ ಆಫ್‌ಲೈನ್ ಮೂಲಕವೇ ಆಗಲಿ ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರು ಅವಸರದಲ್ಲಿ ಎಡವಟ್ಟು ಮಾಡಿಕೊಳ್ಳಲೇಬಾರದು. ನೀವು ಬಜೆಟ್ ಫೋನ್ ಖರೀದಿಸಿ ಅಥವಾ ದುಬಾರಿ ಬೆಲೆಯ ಫೋನೇ ಖರೀದಿಸಿ, ಖರೀದಿಸುವಾಗ ಕೆಲವು ಅಂಶಗಳನ್ನು ಮರೆಯದೇ ಗಮನಿಸುವುದು ಉತ್ತಮ.
ಹೌದು, ಫೋನ್ ಖರೀದಿ ಮಾಡುವಾಗ ಕೇಲವ ಒಂದು ಫೀಚರ್ ಬಗ್ಗೆ ಹೆಚ್ಚು ಗಮನ ನೀಡುವುದು ಸರಿಯಲ್ಲ. ನೀವು ಖರೀದಿಸುವ ವರ್ಗದಲ್ಲೇ ಅತ್ಯುತ್ತಮ ಫೋನ್ ಅನ್ನು ಆಯ್ಕೆ ಮಾಡುವುದು ಸೂಕ್ತ. ಹೀಗಾಗಿ ಫೋನ್ ಖರೀದಿಸುವಾಗ ಕ್ಯಾಮೆರಾ, ಪ್ರೊಸೆಸರ್, ಬ್ಯಾಟರಿ ಸೇರಿದಂತೆ ಇತರೆ ಕೆಲವು ಆಯ್ಕೆಗಳನ್ನು ಪರಿಗಣಿಸಿ. ಹಾಗಾದರೆ ಯಾವೆಲ್ಲಾ ಅಂಶಗಳನ್ನು ಪರಿಗಣಿಸುವುದು ಉತ್ತಮ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬಿಗ್ ಬ್ಯಾಟರಿ ಸಾಮರ್ಥ್ಯ ಇರಲಿ :
ಮೊಬೈಲ್ ದೀರ್ಘ ಬಾಳಿಕೆಗೆ ಅದರ ಬ್ಯಾಟರಿಯೇ ನೆರವಾಗುತ್ತೆ. ಈ ನಿಟ್ಟಿನಲ್ಲಿ ಅಧಿಕ ಬ್ಯಾಟರಿ ಸಾಮರ್ಥ್ಯದ ಫೋನ್ ಆಯ್ಕೆ ಮಾಡಿರಿ. ಇತ್ತೀಚಿನ ಹೊಸ ಫೋನ್‌ಗಳಲ್ಲಿ ಸಾಮಾನ್ಯವಾಗಿ 5,000mAh ಅಥವಾ 6000mAh ಬ್ಯಾಟರಿ ಆಯ್ಕೆ ಇದ್ದೆ ಇರುತ್ತದೆ. ಫಾಸ್ಟ್ ಚಾರ್ಜಿಂಗ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್‌ಗಳು ಇರಲಿ.
ಅತ್ಯುತ್ತಮ ಡಿಸ್‌ಪ್ಲೇ ಆಯ್ಕೆ ಮಾಡಿ :
ಮೊಬೈಲ್‌ನಲ್ಲಿ ಸ್ಕ್ರೀನ್ ಆಯ್ಕೆಯು ತುಂಬಾ ಮುಖ್ಯ ಎನಿಸುತ್ತದೆ. ಅಮೋಲೆಡ್ ಅಥವಾ ಎಲ್‌ಸಿಡಿ ಜೊತೆಗೆ ಪೂರ್ಣ ಹೆಚ್‌ಡಿ+ ಪ್ಯಾನೆಲ್ ಅಥವಾ ಹೆಚ್‌ಡಿ+ ಮಾದರಿಯಲ್ಲಿ ಇರಲಿ. ಇದರ ಜೊತೆಗೆ ಸ್ಕ್ರೀನ್ ರೀಫ್ರೇಶ್ ರೇಟ್, ಡಿಸ್‌ಪ್ಲೇ ಗುಣಮಟ್ಟವನ್ನು ಕೂಡಾ ಗಮನಿಸಿ.
ಹೊಸ ಆಪರೇಟಿಂಗ್ ಸಿಸ್ಟಮ್ ಇರಲಿ :
ಮೊಬೈಲ್‌ಗೆ ಆಪರೇಟಿಂಗ್ ಸಿಸ್ಟಮ್ ಬಲ ನೀಡುತ್ತದೆ. ಇತ್ತೀಚಿನ ಚಾಲ್ತಿ ಓಎಸ್ ಇರಲಿ ಜೊತೆಗೆ ಅದು ಅಪ್‌ಡೇಟ್ ಸೌಲಭ್ಯ ಪಡೆದಿದ್ದರೆ ಉತ್ತಮ. ಸದ್ಯ ಆಂಡ್ರಾಯ್ಡ್ 13 ಓಎಸ್ ಬಳಕೆಯಲ್ಲಿದ್ದು, ಅದಾಗ್ಯೂ ನೀವು ಆಂಡ್ರಾಯ್ಡ್ 13 ಓಎಸ್ ಇರುವ ಫೋನ್ ಖರೀದಿಸುವುದಾದರೇ, ಆ ಬಳಿಕ ಆ ಓಎಸ್ ಅಪ್‌ಡೇಟ್ ಸೌಲಭ್ಯ ಪಡೆದಿರುವ ಬಗ್ಗೆ ಗಮನ ನೀಡಿ.
ವೇಗದ ಪ್ರೊಸೆಸರ್ ಆಯ್ಕೆ ಮಾಡಿ :
ಫಾಸ್ಟ್ ಪ್ರೊಸೆಸರ್ ಮಲ್ಟಿಟಾಸ್ಕ್ ಕೆಲಸಗಳು ಸುಲಲಿತವಾಗಿ ನಡೆಯಲು ಪೂರಕವಾಗಿದೆ. ಹೀಗಾಗಿ ಫೋನ್ ಖರೀದಿಸುವಾಗ ಹೆಚ್ಚಿನ ವೇಗದ ಹಾಗೂ ಇತ್ತೀಚಿಗಿನ ಹೊಸ ಪ್ರೊಸೆಸರ್ ಇರುವ ಮೊಬೈಲ್ ಖರೀದಿಸಿ. ಮೀಡ್‌ರೇಂಜ್ ಬೆಲೆ ಸ್ನ್ಯಾಪ್‌ಡ್ರಾಗನ್ 700 ಪ್ರೊಸೆಸರ್ ಸರಣಿ ಹಾಗೂ ಮೀಡಿಯಾ ಟೆಕ್ ಡೈಮೆನ್ಸಿಟಿ 700/ 800 ಚಿಪ್‌ಸೆಟ್ ಆಯ್ಕೆಗಳು ಲಭ್ಯ.
ಕ್ಯಾಮೆರಾ ಆಯ್ಕೆ ಬಗ್ಗೆ ಗಮನಿಸಿ :
ಸಾಮಾನ್ಯವಾಗಿ ಫೋನ್ ಖರೀದಿ ಮಾಡುವಾಗ ಗ್ರಾಹಕರು ಕ್ಯಾಮೆರಾ ಬಗ್ಗೆ ಗಮನಿಸುತ್ತಾರೆ. ಆದ್ರೆ, ಕೇವಲ ಕ್ವಾಡ್ ಕ್ಯಾಮೆರಾ ಇದೆ ಎಂದು ಖರೀದಿಸುವುದು ಉತ್ತಮ ನಿರ್ಧಾರವಲ್ಲ. ಇಂಥಹ ತಪ್ಪು ಮಾಡಬೇಡಿ. ಬದಲಿಗೆ ಆ ಫೋನ್ ಕ್ಯಾಮೆರಾ ಎಷ್ಟು ಮೆಗಾ ಪಿಕ್ಸಲ್ ಸೆನ್ಸಾರ್ ಆಯ್ಕೆ ಒಳಗೊಂಡಿದೆ.
ಸೆನ್ಸಾರ್ ಎಷ್ಟು, ಕ್ಯಾಮೆರಾದಲ್ಲಿ ಯಾವೆಲ್ಲಾ ಸೌಲಭ್ಯಗಳು ಇವೆ ಎನ್ನುವುದನ್ನು ಗಮನಿಸುವುದು ಮುಖ್ಯ. ಬಹುತೇಕ ಫೋನ್‌ಗಳು ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, ಟೆಲಿಫೋಟೋ ಲೆನ್ಸ್ ಅಥವಾ ಮ್ಯಾಕ್ರೋ ಲೆನ್ಸ್ ಜೊತೆಗೆ ಪ್ರಾಥಮಿಕ ಲೆನ್ಸ್ ಇರುತ್ತದೆ. ಇದರ ಜತೆ ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಆಯ್ಕೆಯನ್ನು ಪಡೆದಿವೆ.
ಸೆನ್ಸಾರ್ ಹಾಗೂ ಇತರೆ ಸೌಲಭ್ಯ ಗಮನಿಸಿ :
ನೀವು ಖರೀದಿಸುವ ಹೊಸ ಮೊಬೈಲ್‌ನಲ್ಲಿ ಗೊರಿಲ್ಲಾ ಗ್ಲಾಸ್ ಇದೆಯಾ, ಯಾವ ಸೆನ್ಸಾರ್ ಸೌಲಭ್ಯಗಳು ಇವೆ, ಸ್ಟೀರಿಯೋ ಸ್ಪೀಕರ್, ವಾಯರ್‌ಲೆಸ್ ಚಾರ್ಜಿಂಗ್ ಲಭ್ಯವೇ ಹಾಗೂ IP67 ವಾಟರ್ ರೆಸಿಸ್ಟೆನ್ಸ್ ಸೌಲಭ್ಯಗಳಂತಹ ಆಯ್ಕೆಗಳು ಇದ್ದರೆ ಉತ್ತಮ.


Click it and Unblock the Notifications








