ಏಕಾಂಗಿ ಬದುಕಿಗೆ ರೊಬೋಟ್‌ಗಳಿಂದ ವಿದಾಯ

By Shwetha
|

ಮಾನಾವಾಕೃತಿಯ ರೊಬೋಟ್‌ಗಳನ್ನು ಇಂದಿನ ಆಧುನಿಕ ಕಂಪ್ಯೂಟರ್ ಜಗತ್ತು ನಮಗೆ ಅರ್ಪಿಸಿದೆ. ಮೆಟಲ್ ಮತ್ತು ಪ್ಲಾಸ್ಟಿಕ್‌ನಿಂದ ನಿರ್ಮಿತವಾದ ಈ ಮಾನಾವಾಕೃತಿಯ ರೊಬೋಟ್‌ಗಳು ಆಧುನಿಕ ಜಗತ್ತಿಗೆ ಅತ್ಯಪೂರ್ಣ ಕೊಡುಗೆ ಎಂದೆನಿಸಿದೆ. ಇನ್ನು ದಿನಗಳೆಂದಂತೆಲ್ಲಾ ರೊಬೋಟ್‌ಗಳು ನಮ್ಮ ಜೀವನವನ್ನು ಇನ್ನಷ್ಟು ಆಧುನಿಕಗೊಳಿಸುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಓದಿರಿ:ಆಂಡ್ರಾಯ್ಡ್ ಬಳಕೆದಾರರು ಪರಮ ಸುಖಿಗಳು

ಇಂದಿನ ಲೇಖನದಲ್ಲಿ ನಿಮ್ಮ ದೈನಂದಿನ ಜೀವನದಲ್ಲಿ ಅತ್ಯಗತ್ಯ ಎಂದೆನಿಸಿರುವ ಹಲವಾರು ಪ್ರಕಾರದ ರೊಬೋಟ್‌ಗಳ ವಿವರಗಳನ್ನು ಅರಿತುಕೊಳ್ಳೋಣ.

ಹೌಸ್‌ಕೀಪಿಂಗ್ ರೊಬೋಟ್

ಹೌಸ್‌ಕೀಪಿಂಗ್ ರೊಬೋಟ್

ಮನೆಗೆಲಸದಲ್ಲಿ ಸಹಾಯವನ್ನು ಮಾಡುವ ರೊಬೋಟ್ ಇದಾಗಿದೆ. ನೆಲ ಒರೆಸುವುದು, ಗುಡಿಸುವುದು, ಸ್ವಚ್ಛ ಮಾಡುವುದು ಇವೇ ಮುಂತಾದ ಕೆಲಸಗಳನ್ನು ಈ ರೊಬೋಟ್‌ಗಳು ಮಾಡುತ್ತವೆ.

 ಬುದ್ಧಿವಂತ ರೊಬೋಟ್

ಬುದ್ಧಿವಂತ ರೊಬೋಟ್

ನಿಮ್ಮ ಧ್ವನಿ ಆಲಿಸುವ, ನಿಮ್ಮ ಭಾವನೆಯನ್ನು ಅರ್ಥಮಾಡಿಕೊಳ್ಳುವ ಮತ್ತು ನಿಮ್ಮಂತೆಯೇ ಮಾತನಾಡುವ ರೊಬೋಟ್‌ಗಳು ಉಗಮಗೊಂಡಿವೆ. ಸುಂದರ ಮುಖವನ್ನು ಹೊಂದಿರುವ ಪೆಪ್ಪರ್ ಎಂಬ ಹೆಸರಿನ ರೊಬೋಟ್‌ಗಳು ಇವುಗಳಾಗಿವೆ.

ಮನರಂಜಕ

ಮನರಂಜಕ

ಪೆಪ್ಪರ್‌ನ ನಂತರದ ಉಗಮಕ್ಕೆ ಕಾರಣವಾಗಿರುವುದು ಚಿಹಾರಿಕೊ ಆಗಿದೆ. ಇದು ಮಹಿಳೆಯನ್ನು ಹೋಲುತ್ತಿದೆ. ಮತ್ತು ಮನೆಯ ಎಲ್ಲಾ ಕೆಲಸಗನ್ನು ಮಾಡುವ ನಿಪುಣತೆಯನ್ನು ಈ ರೊಬೋಟ್ ಹೊಂದಿದೆ. ಇದು ಸಂಭಾಷಣೆಯನ್ನು ಮಾಡಬಲ್ಲುದು.

ಫೋರ್ಚ್ಯೂನ್ ಟೆಲ್ಲರ್ ರೊಬೋಟ್ಟ್

ಫೋರ್ಚ್ಯೂನ್ ಟೆಲ್ಲರ್ ರೊಬೋಟ್ಟ್

ನಿಮ್ಮ ಭವಿಷ್ಯವನ್ನು ಹೇಳಬಲ್ಲ ರೊಬೋಟ್‌ಗಳು ಇವುಗಳಾಗಿದ್ದು, ನಿಮ್ಮ ಪ್ರೀತಿ, ಉದ್ಯೋಗ ಇವುಗಳ ಮಾಹಿತಿಯನ್ನು ಇದು ನೀಡಬಲ್ಲುದು.

ಪರ್ಸನಲ್ ಹೆಲ್ಪರ್

ಪರ್ಸನಲ್ ಹೆಲ್ಪರ್

ಮಾನಾವಾಕೃತಿಯ ರೊಬೋಟ್‌ಗಳು ಎರಡು ಚಕ್ರಗಳನ್ನು ಹೊಂದಿವೆ ಮತ್ತು ಬಹುಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಅಪ್ಲಿಕೇಶನ್ ಮುಖಾಂತರ ಐಓಎಸ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಚಾಲಿತ ಈ ರೊಬೋಟ್‌ಗಳು ನೃತ್ಯ ಮಾಡಬಲ್ಲವು, ಕೋಣೆಯ ಸುತ್ತ ಸುತ್ತಾಡಬಲ್ಲವು, ಡ್ರೈವಿಂಗ್ ಮಾಡಬಲ್ಲವು,ವಸ್ತುಗಳನ್ನು ನಿಯಂತ್ರಿಸಬಲ್ಲವು.

ಮಿನಿ ರೊಬೋಟ್

ಮಿನಿ ರೊಬೋಟ್

ಈ ಸಣ್ಣ ರೊಬೋಟ್‌ಗಳು ಕೇವಲ 17.5 ಸೆಂ.ಮೀ ಉದ್ದದ್ದಾಗಿದೆ ಅಂತೆಯೇ ಅತ್ತಿತ್ತ ಚಲಿಸುವುದು, ಕೈಗಳನ್ನು ತಿರುಗಿಸುವುದು, ಕುತ್ತಿಗೆ ಸರಿಸುವುದು ಮೊದಲಾದ ಕೆಲಸಗಳನ್ನು ಮಾಡಬಲ್ಲವು.

ಎಡ್ಯುಕೇಶನಲ್ ರೊಬೋಟ್

ಎಡ್ಯುಕೇಶನಲ್ ರೊಬೋಟ್

ಈ ರೊಬೋಟ್‌ಗಳಿಗೆ ಕೋಡಿಂಗ್ ಮತ್ತು ಪ್ರೊಗ್ರಾಮಿಂಗ್ ಭಾಷೆ ಬರುತ್ತವೆ. ಬಣ್ಣ ಆಧಾರಿತ ಪ್ರೊಗ್ರಾಮಿಂಗ್ ಭಾಷೆಯನ್ನು ಇವುಗಳು ಬಳಸುತ್ತವೆ.

3 ಡಿ ಪ್ರಿಂಟರ್

3 ಡಿ ಪ್ರಿಂಟರ್

3 ಡಿ ಪ್ರಿಂಟರ್ ರೊಬೋಟ್‌ಗಳು ಕೂಡ ಡೆಸ್ಕ್‌ಟಾಪ್‌ನಲ್ಲಿ 3 ಡಿ ಪ್ರಿಂಟಿಂಗ್ ಅನ್ನು ಮಾಡುತ್ತವೆ.

ವರ್ಸಟೈಲ್ ರೊಬೋಟ್

ವರ್ಸಟೈಲ್ ರೊಬೋಟ್

ಯಾವುದೇ ಆಕಾರ ಮತ್ತು ಗಾತ್ರದ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸುವಲ್ಲಿ ಈ ರೊಬೋಟ್‌ಗಳು ನಿಷ್ಣಾತವಾಗಿವೆ. ವಸ್ತುಗಳನ್ನು ಕೆಳಗೆ ಬೀಳಿಸದೆಯೇ ಇವುಗಳು ಅವುಗಳನ್ನು ನಿಯಂತ್ರಿಸಬಲ್ಲವು.

ಕಾರ್ ಡ್ರೈವರ್

ಕಾರ್ ಡ್ರೈವರ್

ಚಾಲಕರಹಿತ ಕಾರುಗಳು ರಸ್ತೆಗೆ ಶೀಘ್ರದಲ್ಲೇ ಬರುವಂತೆಯೇ ಇನ್ನು ರೊಬೋಟ್ ಕಾರು ಡ್ರೈವರ್‌ಗಳು ಕಾರನ್ನು ಚಾಲನೆ ಮಾಡಬಲ್ಲವು. ಮರ್ಸಿಡಿಸ್ ಬೆಂಜ್ ಈಗಾಗಲೇ ಸೆಲ್ಫ್-ಡ್ರೈವೀಂಗ್ ಕಾರ್ ಅನ್ನು ವಿನ್ಯಾಸಗೊಳಿಸಿವೆ.

Most Read Articles
Best Mobiles in India

English summary
The most advanced computer systems we have so far, so called 'humanoid robots', are a metal and plastic facsimile of ourselves. Ray Kurzweil, Google's director of engineering, believes some robotic technology may even have exceeded human intelligence by the 2030s.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more