ಆಂಡ್ರಾಯ್ಡ್ ಬಳಕೆದಾರರು ಪರಮ ಸುಖಿಗಳು

Written By:

ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಈ ಓಎಸ್‌ಗಳಲ್ಲಿ ಹೊಸ ಹೊಸ ನವೀಕರಣ ಆಗುತ್ತಿರುವಂತೆಯೇ ಬಳಕೆದಾರರು ತಾವು ಬಳಸುತ್ತಿರುವ ಪ್ಲಾಟ್‌ಫಾರ್ಮ್ ಅತ್ಯುತ್ತಮ ಎಂಬ ತೀರ್ಮಾನಕ್ಕೆ ಬರುತ್ತಾರೆ. ಒಮ್ಮೊಮ್ಮೆ ಆಂಡ್ರಾಯ್ಡ್ ಉತ್ತಮ ಎಂಬ ತೀರ್ಮಾನಕ್ಕೆ ಬಂದರೆ ಇನ್ನು ಕೆಲವೊಮ್ಮೆ ಐಓಎಸ್ ಓಕೆ ಎಂಬುದೇ ಅಂತಿಮವಾಗಿರುತ್ತದೆ.

ಓದಿರಿ: ಎಚ್ಚರ! ನಿಮ್ಮ ಫೋನೇ ನಿಮ್ಮ ಶತ್ರು

ಇಂದಿನ ಲೇಖನದಲ್ಲಿ ಆಂಡ್ರಾಯ್ಡ್ ಬಳಕೆದಾರರು ತಮ್ಮ ಫೋನ್ ಏಕೆ ಉತ್ತಮ ಎಂದು ಐಓಎಸ್ ಅನ್ನು ಹೇಗೆ ಹಿಯಾಳಿಸುತ್ತಿದ್ದಾರೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗಾತ್ರ ಕಿರಿದು

ಗಾತ್ರ ಕಿರಿದು

ಐಫೋನ್ ಗಾತ್ರ ಕಿರಿದಾಗಿದ್ದು ಇದರಲ್ಲಿ ವೀಡಿಯೊ ನೋಡಲು ಕಷ್ಟ ಎಂದು ಆಂಡ್ರಾಯ್ಡ್ ಬಳಕೆದಾರರು ಹೇಳುತ್ತಾರೆ. ಆಂಡ್ರಾಯ್ಡ್ ಫೋನ್‌ಗಳು ಇದೀಗ ಗರಿಷ್ಟ ಸ್ಕ್ರೀನ್ ಪರದೆಯೊಂದಿಗೆ ಬಂದಿದ್ದು ಬಳಕೆದಾರರಿಗೆ ಅನುಕೂಲಕರವಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಐಫೋನ್‌ಗಳು ಇದೀಗ ಹಚ್ಚು ರೆಸಲ್ಯೂಶನ್ ಎಮ್‌ಪಿ ಕ್ಯಾಮೆರಾಗಳೊಂದಿಗೆ ಬಂದಿವೆ. ಆದರೆ ಆಂಡ್ರಾಯ್ಡ್ ಫೋನ್‌ಗಳು ಮೊದಲೇ ಹೆಚ್ಚು ರೆಸಲ್ಯೂಶನ್ ಕ್ಯಾಮೆರಾಗಳನ್ನು ಹೊಂದಿವೆ.

ಗೇಮ್ಸ್ ಮತ್ತು ಅಪ್ಲಿಕೇಶನ್‌ಗಳಿಗೆ ಪಾವತಿ

ಗೇಮ್ಸ್ ಮತ್ತು ಅಪ್ಲಿಕೇಶನ್‌ಗಳಿಗೆ ಪಾವತಿ

ಐಫೋನ್ ಬಳಕೆದಾರರು ಗೇಮ್ಸ್ ಮತ್ತು ಹೊಸ ಅಪ್ಲಿಕೇಶನ್‌ಗಳಿಗೆ ಪಾವತಿಸುವುದು ಅತ್ಯವಶ್ಯಕವಾಗಿದೆ. ಆದರೆ ಆಂಡ್ರಾಯ್ಡ್ ಬಳಕೆದಾರರಿಗೆ ಈ ಸಂಕಷ್ಟವಿಲ್ಲ.

ಚಾರ್ಜರ್ ಸಮಸ್ಯೆ ಇಲ್ಲ

ಚಾರ್ಜರ್ ಸಮಸ್ಯೆ ಇಲ್ಲ

ಆಂಡ್ರಾಯ್ಡ್ ಬಳಕೆದಾರರಿಗೆ ಅವರದ್ದೇ ಚಾರ್ಜರ್ ಬಳಸಬೇಕೆಂದೇನಿಲ್ಲ. ಯಾವ ಚಾರ್ಜರ್ ಕೂಡ ನಡೆಯುತ್ತದೆ. ಆದರೆ ಐಫೋನ್ ಬಳಕೆದಾರರ ನಿರ್ದಿಷ್ಟ ಚಾರ್ಜರ್ ಅನ್ನೇ ಬಳಸಬೇಕಾಗುತ್ತದೆ.

ಸಾಕಷ್ಟು ಅಪ್‌ಡೇಟೇ ಇಲ್ಲ

ಸಾಕಷ್ಟು ಅಪ್‌ಡೇಟೇ ಇಲ್ಲ

ಆಂಡ್ರಾಯ್ಡ್ ಬಳಕೆದಾರರು ಕಿಟ್‌ಕ್ಯಾಟ್, ಐಸ್‌ಕ್ರೀಮ್ ಸ್ಯಾಂಡ್‌ವಿಚ್, ಜೆಲ್ಲಿಬೀನ್ ಹೀಗೆ ಹೊಸ ಹೊಸ ಅಪ್‌ಡೇಡ್ ಸ್ವಾದವನ್ನು ಅನುಭವಿಸುತ್ತಾರೆ. ಆದರೆ ಐಓಎಸ್‌ಗೆ ಈ ತರಹದ ನವೀಕರಣ ಅಪರೂಪಕ್ಕೆ ಉಂಟಾಗುತ್ತದೆ.

ಸ್ಟೀವ್ ಜಾಬ್ ಮರಣದಿಂದ ಐಫೋನ್ ಕಳೆಗುಂದಿದೆ

ಸ್ಟೀವ್ ಜಾಬ್ ಮರಣದಿಂದ ಐಫೋನ್ ಕಳೆಗುಂದಿದೆ

ಇನ್ನು ಹೆಚ್ಚು ಐಫೋನ್ ಬಳಕೆದಾರರಿಗೆ ಸ್ಟೀವ್ ಜಾಬ್ ಮರಣ ತುಂಬಲಾರದ ನಷ್ಟವಾಗಿ ಪರಿಣಮಿಸಿದೆ.

ಆಂಡ್ರಾಯ್ಡ್‌ನಿಂದಲೇ ಭವಿಷ್ಯ

ಆಂಡ್ರಾಯ್ಡ್‌ನಿಂದಲೇ ಭವಿಷ್ಯ

ಗೂಗಲ್ ತಂತ್ರಜ್ಞಾನದ ಬೆಂಬಲ ನಮಗೆ ದೊರೆತಿರುವುದರಿಂದ ಆಂಡ್ರಾಯ್ಡ್‌ನಿಂದ ಭವಿಷ್ಯವಿದೆ.

ಗೂಗಲ್ ನಕ್ಷೆ

ಗೂಗಲ್ ನಕ್ಷೆ

ಐಫೋನ್ ನಕ್ಷೆಗಿಂತಲೂ ಗೂಗಲ್ ನಕ್ಷೆಗಳು ಹೆಚ್ಚು ಪರಿಪೂರ್ಣ ಮತ್ತು ಮಾಹಿತಿಯುಕ್ತವಾಗಿದೆ.

ಐಫೋನ್‌ನಲ್ಲಿ ರಿಂಗ್‌ಟೋನ್ ಹೊಂದಿಸುವುದು ಕಷ್ಟ

ಐಫೋನ್‌ನಲ್ಲಿ ರಿಂಗ್‌ಟೋನ್ ಹೊಂದಿಸುವುದು ಕಷ್ಟ

ಐಫೋನ್‌ನಲ್ಲಿ ರಿಂಗ್‌ಟೋನ್ ಡೌನ್‌ಲೋಡ್ ಮಾಡಬೇಕು ಎಂದಾದಲ್ಲಿ ಐ ಟ್ಯೂನ್ಸ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು, ನಂತರ ಅದನ್ನು ಫೋನ್‌ಗೆ ವರ್ಗಾಯಿಸಿಕೊಳ್ಳಬೇಕು, ಆದರೆ ಆಂಡ್ರಾಯ್ಡ್ ಫೋನ್‌ನಲ್ಲಿ ಇದು 5 ಸೆಕುಂಡುಗಳ ಕೆಲಸವಾಗಿದೆ.

ಐಫೋನ್‌ನಲ್ಲಿ ನೇರವಾಗಿ ವೀಡಿಯೊ ಡೌನ್‌ಲೋಡ್ ಮಾಡಲಾಗುವುದಿಲ್ಲ

ಐಫೋನ್‌ನಲ್ಲಿ ನೇರವಾಗಿ ವೀಡಿಯೊ ಡೌನ್‌ಲೋಡ್ ಮಾಡಲಾಗುವುದಿಲ್ಲ

ಸಾಕಷ್ಟು ದುಡ್ಡು ತೆತ್ತು ಐಫೋನ್ ಖರೀದಿಯನ್ನು ಮಾಡಿದ್ದರೂ ನೇರವಾಗಿ ಇದರಲ್ಲಿ ವೀಡಿಯೊ ಡೌನ್‌ಲೋಡ್ ಮಾಡುವುದು ಕಷ್ಟದ ಮಾತಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It’s a battle that’ll rage on for decades to come.The Android phones vs iPhone rivalry is one which you just can’t escape. Some switch sides in the middle of the war.Here are 10 things Android users say to iPhone users.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot