18 ವರ್ಷದಲ್ಲಿ 30 ಜನರನ್ನು ಕೊಂದು-ತಿಂದ ದಂಪತಿ: ಸೆಲ್ಫಿ ತೆಗೆದು ಸಿಕ್ಕಿಕೊಂಡರು
ಚಿತ್ರಗಳಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದ ಮನಷ್ಯರನ್ನು ವಿಚಿತ್ರವಾಗಿ ಸಾಯಿಸಿ ತಿನ್ನುತ್ತಿದ್ದ ನರಭಕ್ಷಕರು ರಷ್ಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲೊಂದು ಕುಟುಂಬವೂ 30ಕ್ಕೂ ಹೆಚ್ಚು ಮಂದಿಯನ್ನು ಕೊಂದು ತಿಂದಿದ್ದಾರೆ ಎನ್ನಲಾಗಿದ್ದು,
ಇಷ್ಟು ದಿನ ಹಾಲಿವುಡ್ ಚಿತ್ರಗಳಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದ ಮನಷ್ಯರನ್ನು ವಿಚಿತ್ರವಾಗಿ ಸಾಯಿಸಿ ತಿನ್ನುತ್ತಿದ್ದ ನರಭಕ್ಷಕರು ರಷ್ಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲೊಂದು ಕುಟುಂಬವೂ 30ಕ್ಕೂ ಹೆಚ್ಚು ಮಂದಿಯನ್ನು ಕೊಂದು ತಿಂದಿದ್ದಾರೆ ಎನ್ನಲಾಗಿದ್ದು, ಈ ಸುದ್ದಿ ಇದು ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಓದಿರಿ: ಜಿಯೋ ಫೋನ್ ಅಸಲಿ ಬೆಲೆ ಬಯಲು: ಅಂಬಾನಿ ಈ ರೀತಿ ಮಾಡಿದ್ದೇಕೆ?
ರಾಂಗ್ ಟರ್ನ್ ನಂತಹ ಸರಣಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಕೆನೆಬಲ್ಸ್ ಮನುಷ್ಯರನ್ನು ಸಾಯಿಸಿ ಅವರ ಮಾಂಸವನ್ನು ಪ್ರಾಣಿಗಳ ಮಾಂಸದಂತೆ ಸೇವಿಸುತ್ತಿದ್ದರು. ಇದೇ ಮಾದರಿಯಲ್ಲಿ ರಷ್ಯಾದಲ್ಲಿ ಕುಟುಂಬವೊಂದು 30 ಮಂದಿಗೆ ಮಾದಕ ದ್ರವ್ಯಗಳನ್ನು ತಿನ್ನಿಸಿ, ಸಾಯಿಸಿ ಅವರನ್ನು ಭಕ್ಷಿಸಿದ್ದಾರೆ ಎನ್ನಲಾಗಿದೆ.

ದಂಪತಿಗಳ ಕೃತ್ಯ:
35 ವರ್ಷದ ಡಿಮಿಟ್ರಿ ಬಕ್ಶೇವ್ ಮತ್ತು ತಾಲಿಯಾ ಬಕ್ಶೇವ್ ನರಭಕ್ಷಕ ದಂಪತಿಗಳಾಗಿದ್ದು, ನತಾಲಿಯಾ ಬಕ್ಶೇವ್ ವಿರುದ್ಧ ಈಗಾಗಲೇ ಹತ್ಯೆ ಪ್ರಕರಣವೊಂದು ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ಈತನೇ ಹತ್ಯೆ ಮಾಡಿ ಭಕ್ಷಿಸರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾಸ್ಕೋದಲ್ಲಿ 30 ಮಂದಿ ನಾಪತ್ತೆ:
ನಗರದಲ್ಲಿ ಈಗಾಗಲೇ ನಾಪತ್ತೆಯಾಗಿರುವ 30 ಮಂದಿಯನ್ನು ಈ ಕುಟುಂಬವೇ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಎರಡು ದಶಕಗಳಿಂದ 30 ಜನರನ್ನು ಕೊಂದು ಅವರ ಮಾಂಸ ಸೇವಿಸಿರುವುದಾಗಿ ದಂಪತಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಜಾಡು ಹಿಡಿದ ಸೆಲ್ಫಿ:
ಕೆಲವು ದಿನಗಳ ಹಿಂದೆ ಮಾಸ್ಕೋದಲ್ಲಿ ಒಂದು ಮೊಬೈಲ್ ಫೋನ್ ಪತ್ತೆಯಾಗಿತ್ತು. ಅದರಲ್ಲಿ ವ್ಯಕ್ತಿಯೊಬ್ಬ ಮನುಷ್ಯನ ಮಾಂಸ ಸೇವಿಸುತ್ತಿದ್ದ ಚಿತ್ರಗಳಿದ್ದವು. ಈ ದಂಪತಿಗಳು ಮನುಷ್ಯರನ್ನು ತಿನ್ನುವುದರ ಸೆಲ್ಫಿ ತೆಗೆದುಕೊಂಡಿದ್ದರು ಎನ್ನಲಾಗಿದೆ. ಇದರ ಆಧಾರದಲ್ಲಿ ಪೊಲೀಸರು ಈ ದಂಪತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು ಎಂದು ಡೈಲಿ ಮೇಲ್ ವರದಿ ಮಾಡಿದೆ.


Click it and Unblock the Notifications