ಕ್ಯಾನನ್ ಹೊಸ ಕ್ಯಾಮೆರಾ ಮಾಡಲಿದೆ ಮೋಡಿ

Written By:

ಜಪಾನ್‌ನ ಕ್ಯಾಮೆರಾ ಕಂಪೆನಿ ಕ್ಯಾನನ್ ತಾನು ಹೊಸ ಸೆನ್ಸಾರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಹೊಸ ಸೆನ್ಸಾರ್ 250 ಮೆಗಾಪಿಕ್ಸೆಲ್ 19,580 x 12,600 APS-H CMOS ಸೆನ್ಸಾರ್ ಅನ್ನು ಒಳಗೊಂಡಿದ್ದು ತನ್ನ ಈ ಗಾತ್ರದ ರೆಸಲ್ಯೂಶನ್‌ ಸೆನ್ಸಾರ್‌ಗಾಗಿ ಕ್ಯಾನನ್ ವಿಶ್ವ ದಾಖಲೆಯನ್ನು ಮಾಡಿದೆ.

ಕ್ಯಾನನ್ ಹೊಸ ಕ್ಯಾಮೆರಾ ಮಾಡಲಿದೆ ಮೋಡಿ

18 ಕಿಮೀ ದೂರದಿಂದ ಬರುತ್ತಿರುವ ವಿಮಾನದ ಬಲಭಾಗದಲ್ಲಿ ಬರೆದಿರುವ ಅಕ್ಷರಗಳನ್ನು ಓದುವ ತಾಕತ್ತನ್ನು ಈ ಸೆನ್ಸಾರ್ ಹೊಂದಿದೆ. ಹೆಚ್ಚು ರೆಸಲ್ಯೂಶನ್ ವೀಡಿಯೊವನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಇದು ಹೊಂದಿದ್ದು, 4ಕೆ ಗಿಂತಲೂ 30 ಪಟ್ಟು ಅಧಿಕವಾಗಿರುವ ಫ್ರೇಮ್‌ಗಳನ್ನು ಇದು ತೆಗೆಯಬಲ್ಲುದು. ಇನ್ನು ಪಿಕ್ಸೆಲ್ ಎಣಿಕೆಯಿಲ್ಲದೆ ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದೇ ಕ್ಯಾನನ್ ಹೇಳಿದೆ. ಹೆಚ್ಚು ರೆಸಲ್ಯೂಶನ್ ವೀಡಿಯೊವನ್ನು ಕ್ಯಾಪ್ಚರ್ ಮಾಡುವ ಸೆನ್ಸಾರ್ ಬಳಸಲಾಗುತ್ತಿದೆ.

ಓದಿರಿ: ಬೆಂಗಳೂರಿನ ಸ್ಮಾರ್ಟ್‌ ಜನರಿಗೆ ಆನ್‌ಲೈನ್ ಬಟ್ಟೆ ಒಗೆಯುವ ಆಪ್

ಹೊಸ ಸೆನ್ಸಾರ್ ತಂತ್ರಜ್ಞಾನವನ್ನು ವಿಶೇಷವಾಗಿ ಕಣ್ಗಾವಲಿಗಾಗಿ ಬಳಸಲಾಗುತ್ತಿದ್ದು ಕ್ರಿಮಿನಲ್ ಪ್ರಕರಣಗಳನ್ನು ಮಟ್ಟ ಹಾಕಲು ಇದು ಹೆಚ್ಚು ಸಹಾಯವನ್ನು ಒದಗಿಸಲಿದೆ.

English summary
Japanese camera company Canon has announced that it has developed a new sensor. The company says its new sensor is capable of distinguishing the lettering on the side of an airplane from 18 km away.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot