ಭಾರತದಲ್ಲಿ Canonನಿಂದ ಎರಡು ಹೊಸ DSLR ಕ್ಯಾಮೆರಾ ಬಿಡುಗಡೆ!

|

ಕ್ಯಾಮೆರಾ ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಲೇ ಇದ್ದು, ಪ್ರಮುಖ ಎಲ್ಲ ಕ್ಯಾಮೆರಾ ತಯಾರಿಕಾ ಸಂಸ್ಥೆಗಳು ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳುತ್ತಲಿವೆ. ಆದರೆ ಅವುಗಳಲ್ಲಿ ವೃತ್ತಿಪರ ಫೋಟೊಗ್ರಾಫರ್‌ಗಳ ನೆಚ್ಚಿನ ಕ್ಯಾಮೆರಾ ಎಂದು ಗುರುತಿಸಿಕೊಂಡಿರುವ ಕೆನಾನ್ ಕ್ಯಾಮೆರಾ ಸಂಸ್ಥೆಯು ಇಂದಿಗೂ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಥಾನದಲ್ಲಿ ಕಾಣಿಸಿಕೊಮಡಿದೆ.

ಭಾರತದಲ್ಲಿ Canonನಿಂದ ಎರಡು ಹೊಸ DSLR ಕ್ಯಾಮೆರಾ ಬಿಡುಗಡೆ!

ಜಪಾನ ಮೂಲದ ಜನಪ್ರಿಯ ಕ್ಯಾನಾನ್ ಕಂಪನಿ ಇದೀಗ ಭಾರತೀಯ ಮಾರುಕಟ್ಟೆಗೆ ಹೊಸ ಕೆನಾನ್ EOS R7 ಮತ್ತು ಕೆನಾನ್ EOS R10 ಮಿರರ್‌ಲೆಸ್‌ ಕ್ಯಾಮೆರಾಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಕ್ಯಾಮೆರಾಗಳು RF-S ಜೊತೆಗೆ ಫುಲ್‌ ಫ್ರೇಮ್‌ ಮಿರರ್ ಲೆಸ್‌ ರಚನೆಯನ್ನು ಹೊಂದಿದೆ. ಕೆನಾನ್ EOS R7 32.5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದ್ದರೇ, ಕೆನಾನ್ EOS R10 ಕ್ಯಾಮೆರಾವು 24.2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸೌಲಭ್ಯವನ್ನು ಪಡೆದಿದೆ.

ಎರಡೂ ಕ್ಯಾಮೆರಾಗಳು DIGIC X ಇಮೇಜ್ ಪ್ರೊಸೆಸಿಂಗ್ ಎಂಜಿನ್ ಮತ್ತು ಪ್ರತಿಸ್ಪಂದಕ ಮತ್ತು ವಿಶ್ವಾಸಾರ್ಹ ಆಟೋ ಫೋಕಸಿಂಗ್‌ಗಾಗಿ ಹೊಸ ಆಟೋ ಫೋಕಸಿಂಗ್ (AF) ತಂತ್ರಜ್ಞಾನವನ್ನು ಹೊಂದಿವೆ. ಎರಡೂ ಕ್ಯಾಮೆರಾಗಳು ಯಾಂತ್ರಿಕ ಮತ್ತು ಎಲೆಕ್ಟ್ರಾನಿಕ್ ಮೊದಲ-ಪರದೆ ಶಟರ್ ಮೋಡ್‌ಗಳಲ್ಲಿ (AF/AE ಟ್ರ್ಯಾಕಿಂಗ್‌ನೊಂದಿಗೆ) ಹೆಚ್ಚಿನ ವೇಗದ ನಿರಂತರ ಶೂಟಿಂಗ್ (15fps ವರೆಗೆ) ಸಾಮರ್ಥ್ಯವನ್ನು ಹೊಂದಿವೆ ಎಂದು ಕ್ಯಾನನ್ ಹೇಳುತ್ತದೆ.

ನೂತನ ಕೆನಾನ್ EOS R7 ಕ್ಯಾಮೆರಾ 32.5 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದ್ದು, ಇದು ಇಮೇಜ್ ಸ್ಟೆಬಿಲೈಸೇಶನ್, ಹವಾಮಾನ ಸೀಲಿಂಗ್ ಮತ್ತು ಡ್ಯುಯಲ್ SD ಕಾರ್ಡ್ ಸ್ಲಾಟ್‌ಗಳ ಸೌಲಬ್ಯವನ್ನು ಹೊಂದಿದೆ. ಅದೇ ರೀತಿ ಕೆನಾನ್ EOS R10 ಕ್ಯಾಮೆರಾ ಚಿಕ್ಕದಾದ ಫಾರ್ಮ್ ಫ್ಯಾಕ್ಟರ್ ಅನ್ನು ಹೊಂದಿದ್ದು, 24.2 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದಿದೆ. ಇದರೊಂದಿಗೆ ಈ ಕ್ಯಾಮೆರಾವು ಅಂತರ್ನಿರ್ಮಿತ ಫ್ಲ್ಯಾಷ್ ಅನ್ನು ಪಡೆಯುತ್ತದೆ.

ಭಾರತದಲ್ಲಿ Canonನಿಂದ ಎರಡು ಹೊಸ DSLR ಕ್ಯಾಮೆರಾ ಬಿಡುಗಡೆ!

ಕೆನಾನ್ EOS R7 ಮತ್ತು ಕೆನಾನ್ EOS R10 ಈ ಎರಡು ಕ್ಯಾಮೆರಾಗಳು 30fps ವರೆಗೆ ಪೂರ್ಣ ರೆಸಲ್ಯೂಶನ್ RAW ಚಿತ್ರಗಳನ್ನು ಸೆರೆಹಿಡಿಯುವ RAW ಬರ್ಸ್ಟ್ ಮೋಡ್ ಅನ್ನು ಒಳಗೊಂಡಿವೆ. ಮೋಡ್ ಪ್ರಿ-ಶೂಟಿಂಗ್ ಅನ್ನು ಬೆಂಬಲಿಸುತ್ತದೆ, ಇದು ಶಟರ್ ಬಿಡುಗಡೆಯಾಗುವ ಮೊದಲು 0.5 ಸೆಕೆಂಡುಗಳವರೆಗೆ ದೃಶ್ಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸುತ್ತದೆ ಎಂದು ಸಂಸ್ಥೆಯು ಹೇಳುತ್ತದೆ. ಹೆಚ್ಚುವರಿಯಾಗಿ, ಎರಡೂ ಕ್ಯಾಮೆರಾಗಳು ಮೂವಿ ಡಿಜಿಟಲ್ ಐಎಸ್ ಅನ್ನು ಒಳಗೊಂಡಿರುತ್ತವೆ, ಇದು ಕಂಪನ-ಮುಕ್ತ ವೀಡಿಯೊಗಳಿಗಾಗಿ 5-ಆಕ್ಸಿಸ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ನಡೆಸುತ್ತದೆ.

ಇನ್ನು ವೀಡಿಯೊ ರೆಕಾರ್ಡಿಂಗ್‌ಗೆ ಬಂದಾಗ, ಕೆನಾನ್ EOS R7 ಹೊಸ 4K UHD ಫೈನ್ ಮೋಡ್‌ನಲ್ಲಿ 30p ವರೆಗೆ ಉತ್ತಮ ಗುಣಮಟ್ಟದ 4K UHD ವೀಡಿಯೊವನ್ನು ರೆಕಾರ್ಡ್ ಮಾಡಲು 7K ಓವರ್‌ಸ್ಯಾಂಪ್ಲಿಂಗ್ ಅನ್ನು ಬಳಸಬಹುದು. ಇದು 4K UHD ಸ್ಟ್ಯಾಂಡರ್ಡ್ ಮೋಡ್‌ನಲ್ಲಿ ಕತ್ತರಿಸದ 4K 60p ರೆಕಾರ್ಡಿಂಗ್ ಅನ್ನು ಶೂಟ್ ಮಾಡುತ್ತದೆ. Canon EOS R10 ಉತ್ತಮ ಗುಣಮಟ್ಟದ 4K UHD ಫೈನ್ 30p ವೀಡಿಯೋವನ್ನು 6K ಓವರ್‌ಸ್ಯಾಂಪ್ಲಿಂಗ್‌ನಿಂದ ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ. ಎರಡೂ ಕ್ಯಾಮೆರಾಗಳು ಅಂತರ್ನಿರ್ಮಿತ ಟೆಲಿಫೋಟೋ ಪರಿಣಾಮವನ್ನು ಸಹ ಹೊಂದಿವೆ.

ಬೆಲೆ ಮತ್ತು ಲಭ್ಯತೆ?
ಕೆನಾನ್ EOS R7 ಡಿವೈಸ್‌ (ಲೆನ್ಸ್ ಇಲ್ಲದೆ) ಬೆಲೆ 1,27,995ರೂ, ಆಗಿದೆ. ಅದನ್ನು RF-S18-150mm F3.5-6.3 IS STM ಲೆನ್ಸ್‌ನೊಂದಿಗೆ ಜೋಡಿಸಿದರೆ, ಅದನ್ನು 1,64,995.ರೂ.ಗೆ ಖರೀದಿಸಬಹುದು. ಕೆನಾನ್ EOS R10 (ಲೆನ್ಸ್ ಇಲ್ಲದೆ) ಕ್ಯಾಮೆರಾ ಬೆಲೆಯು 80,995ರೂ. ಆಗಿದೆ. ಇನ್ನು RF-S18-45mm F4.5-6.3 IS STM ಲೆನ್ಸ್‌ನೊಂದಿಗೆ, ಇದರ ಬೆಲೆ 90,995ರೂ. ಆಗಿದೆ.

Best Mobiles in India

English summary
Canon EOS R7, EOS R10 Mirrorless Cameras Launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X