Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಮೂಲಕವೂ ನಿಮ್ಮ ಅತ್ಮೀಯರೊಂದಿಗೆ ಈ ರೀತಿ ಹೋಳಿ ಆಚರಿಸಿ!

ಭಾರತೀಯರಿಗೆ ಈ ಹೋಳಿ ಹಬ್ಬ ವಿಶೇಷವಾಗಿದೆ. ಇಂದು ಹಾಗೂ ನಾಳೆ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುತ್ತಿದ್ದು, ಈ ವೇಳೆ ಕುಟುಂಬ ಹಾಗೂ ಸ್ನೇಹಿತರು ಒಂದೆಡೆ ಸೇರಿ ಸಂಭ್ರಮಪಡುತ್ತಾರೆ. ಅದಾಗ್ಯೂ ನಿಮ್ಮ ಆತ್ಮೀಯರು ದೂರದೂರಿನಲ್ಲಿದ್ದರೂ ಸ್ಮಾರ್ಟ್‌ಫೋನ್‌ ಮೂಲಕ ಈ ರೀತಿಯಲ್ಲೂ ಹೋಳಿ ಆಚರಿಸಬಹುದಾಗಿದೆ.

ಹೌದು, ಈಗಂತೂ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌, ಟೆಲಿಗ್ರಾಮ್‌ ಹಾಗೂ ಇನ್‌ಸ್ಟಾಗ್ರಾಮ್‌ಸೇರಿದಂತೆ ಇನ್ನಿತರೆ ಅನೇಕ ಮೆಸೆಜಿಂಗ್‌ ಆಪ್‌ಗಳು ಇದ್ದೇ ಇರುತ್ತವೆ. ಇವುಗಳನ್ನು ಬಳಕೆ ಮಾಡಿಕೊಂಡು ನೀವು ನಿಮ್ಮ ಆತ್ಮೀಯರೊಂದಿಗೆ ಇನ್ನಷ್ಟು ಆತ್ಮೀಯವಾಗಿ ಹೋಳಿ ಹಬ್ಬವನ್ನು ಆಚರಿಸಬಹುದು. ಹಾಗಿದ್ರೆ, ಈ ಮೆಸೆಜಿಂಗ್‌ ಆಪ್‌ಗಳ ಮೂಲಕ ಹೇಗೆ ಆಚರಣೆ ಮಾಡುವುದು? ಎಂಬ ಗೊಂದಲ ನಿಮ್ಮಲ್ಲಿದ್ದರೆ ಈ ಲೇಖನದ ಓದಿ.

ಸ್ಮಾರ್ಟ್‌ಫೋನ್‌ ಮೂಲಕವೂ ನಿಮ್ಮ ಅತ್ಮೀಯರೊಂದಿಗೆ ಈ ರೀತಿ ಹೋಳಿ ಆಚರಿಸಿ!

ವಿಡಿಯೋ ಕರೆ ಸೌಲಭ್ಯ ಪಡೆದುಕೊಳ್ಳಿ

ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಈ ಹೋಳಿ ಶುಭಾಶಯಗಳನ್ನು ವಿಡಿಯೋ ಕರೆ ಮಾಡಿ ಹೇಳುವುದು ಉತ್ತಮ ಮಾರ್ಗವಾಗಿದೆ. ಕೇವಲ ಟೆಕ್ಟ್‌ ಮೆಸೆಜ್‌ ಹಾಗೂ ಇನ್ನಿತರೆ ಸಂದೇಶಗಳನ್ನು ಇದಕ್ಕೆ ಹೋಲಿಕೆ ಮಾಡಿದರೆ ವಿಡಿಯೋ ಕರೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇದಕ್ಕಾಗಿ ನಿವು ವಾಟ್ಸಾಪ್‌, ಟೆಲಿಗ್ರಾಮ್‌, ಸಿಗ್ನಲ್‌, ಇನ್‌ಸ್ಟಾಗ್ರಾಮ್‌, ಸ್ನ್ಯಾಪ್‌ಚಾಟ್‌, ಸ್ಕೈಪ್‌ ಸೇರಿದಂತೆ ಇತರೆ ಆಪ್‌ ಬಳಕೆ ಮಾಡಬಹುದು.

ಮೆಸಜಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಸ್ಟಿಕ್ಕರ್‌

ಯಾವುದೇ ಮೆಸೆಜಿಂಗ್‌ ಆಪ್‌ ಆದರೂ ಸಹ ಭಾರತೀಯ ಹಬ್ಬಗಳಿಗೆ ಜೊತೆಯಾಗುತ್ತವೆ. ಇದಕ್ಕಾಗಿ ಅವರು ವಿಶೇಷ ಸ್ಟಿಕ್ಕರ್‌ಗಳನ್ನು ಪರಿಚಯಿಸುವುದರ ಜೊತೆಗೆ ಬಳಕೆದಾರರು ತಮ್ಮ ಪ್ರೀತಿ ಪಾತ್ರರ ಜೊತೆ ಸಮಯ ಕಳೆಯಲು ಅನುವು ಮಾಡಿಕೊಡುತ್ತವೆ. ಅದರಂತೆ ನೀವು ವಾಟ್ಸಾಪ್‌, ಇನ್‌ಸ್ಟಾಗ್ರಾಮ್ ಹಾಗೂ ಟೆಲಿಗ್ರಾಮ್‌ ನಂತಹ ಮೆಸೆಜಿಂಗ್‌ ಆಪ್‌ಗಳನ್ನು ಬಳಕೆ ಮಾಡಿಕೊಂಡು ಹೋಳಿ ಸ್ಟಿಕ್ಕರ್‌ಗಳನ್ನು ಕಳುಹಿಸಬಹುದಾಗಿದೆ.

ಸ್ಮಾರ್ಟ್‌ಫೋನ್‌ ಮೂಲಕವೂ ನಿಮ್ಮ ಅತ್ಮೀಯರೊಂದಿಗೆ ಈ ರೀತಿ ಹೋಳಿ ಆಚರಿಸಿ!

ವೈಯಕ್ತೀಕರಿಸಿದ ಸ್ಟಿಕ್ಕರ್‌ ಬಳಕೆ ಇನ್ನಷ್ಟು ಆಕರ್ಷಕ

ಇತ್ತೀಚೆಗೆ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿ ವೈಯಕ್ತೀಕರಿಸಿದ ಸ್ಟಿಕ್ಕರ್‌ ಬಳಕೆಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಇದರಿಂದ ನಿಮ್ಮದೇ ಶೈಲಿಯ ಸ್ಟಿಕ್ಕರ್‌ಗಳನ್ನು ರಚಿಸಿ ಹೋಳಿ ಹಬ್ಬಕ್ಕೆ ಇನ್ನಷ್ಟು ರಂಗು ನೀಡಬಹುದು. ಈ ವಿಶೇಷ ಆಯ್ಕೆ ವಾಟ್ಸಾಪ್‌, ಟೆಲಿಗ್ರಾಮ್‌, ಸಿಗ್ನಲ್‌ ಹಾಗೂ ಐಮೆಸೆಜ್‌ ಸೇರಿದಂತೆ ಇನ್ನಿತರೆ ಆಪ್‌ಗಳಲ್ಲಿ ಲಭ್ಯವಿದೆ.

GIF, ಇಮೋಜಿಗಳು ಇನ್ನಷ್ಟು ರಂಗು ನೀಡಲಿವೆ

ವಿಡಿಯೋ ಕಾಲ್‌ ಅಥವಾ ಸ್ಟಿಕ್ಕರ್‌ ಹೊರತಾಗಿಯೂ GIF ಹಾಗೂ ಇಮೋಜಿ ಬಳಕೆ ಮಾಡಿಕೊಂಡು ಹೋಳಿ ಹಬ್ಬ ಆಚರಣೆ ಮಾಡಬಹುದಾಗಿದೆ. ಅದರಲ್ಲೂ ನಿಮ್ಮದೇ ಫೋಟೋ ಅಥವಾ ವಿಡಿಯೋಗಳನ್ನು GIF ಫೈಲ್ ಆಗಿ ಪರಿವರ್ತಿಸುವ ಅವಕಾಶ ಸಹ ಇದ್ದು, ಇವುಗಳನ್ನು ಬಳಕೆ ಮಾಡಿಕೊಂಡು ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಿದರೆ ಖಂಡಿತಾ ಸಂತಸ ಪಡುತ್ತಾರೆ.

ಐಮೆಸೆಜ್‌ ಆಪ್‌ನಲ್ಲಿ ಸ್ಕ್ರೀನ್ ಎಫೆಕ್ಸ್‌

ಪ್ರಮುಖ ಮೆಸೆಜಿಂಗ್‌ ಆಪ್‌ಗಳಲ್ಲಿ ವಿಶೇಷ ಎನಿಸಿಕೊಂಡಿರುವ ಐಮೆಸೆಜ್ ಆಪ್‌ ಮೂಲಕ ಬಳಕೆದಾರರು ಸ್ಕ್ರೀನ್‌ ಎಪೆಕ್ಟ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಸ್ವೀಕರಿಸುವವರು ಒಮ್ಮೆಲೆ ಅಚ್ಚರಿಗೆ ಒಳಗಾಗಿ ನಿಮ್ಮ ಶುಭಾಶಯದ ಸಂದೇಶವನ್ನು ಸಂತಸದಿಂದ ಸ್ವೀಕಾರ ಮಾಡುತ್ತಾರೆ.

ಸ್ಮಾರ್ಟ್‌ಫೋನ್‌ ಮೂಲಕವೂ ನಿಮ್ಮ ಅತ್ಮೀಯರೊಂದಿಗೆ ಈ ರೀತಿ ಹೋಳಿ ಆಚರಿಸಿ!

ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್‌ನಲ್ಲಿ ಎಆರ್‌ ಲೆನ್ಸ್ ಬಳಕೆ

ಸ್ನ್ಯಾಪ್‌ಚಾಟ್, ಇನ್‌ಸ್ಟಾಗ್ರಾಮ್‌ನಲ್ಲಿ ಸೇರಿದಂತೆ ಹೆಚ್ಚು ಬಳಕೆಯಲ್ಲಿರುವ ಮೆಸೆಜಿಂಗ್‌ ಆಪ್‌ಗಳಲ್ಲಿ ಎಆರ್‌ ಲೆನ್ಸ್ ಫೀಚರ್ಸ್‌ ಇದ್ದು, ಇದನ್ನು ಈ ರೀತಿಯ ಸಂದರ್ಭಗಳಿಗೆ ಬಳಕೆ ಮಾಡಿಕೊಳ್ಳುವುದರ ಮೂಲಕ ಸಂಭ್ರಮದ ಕಳೆಯನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು. ಅದರಂತೆ ಸ್ನ್ಯಾಪ್‌ಚಾಟ್ ಹೋಳಿ ಎಆರ್ ಲೆನ್ಸ್ ಅನ್ನು ಬಳಕೆದಾರರಿಗೆ ಲಭ್ಯವಾಗಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲೂ ಸಹ ಈ ಹೋಳಿ ಲೆನ್ಸ್ ಫಿಲ್ಟರ್‌ಗಳನ್ನು ಬಳಕೆ ಮಾಡಿಕೊಂಡು ಹೋಳಿ ಆಚರಿಸಬಹುದಾಗಿದೆ.

ಬ್ರಾಡ್‌ಕಾಸ್ಟ್‌ ಲಿಸ್ಟ್‌ ಸೇವೆ ಪಡೆದುಕೊಳ್ಳಿ

ಮೇಲೆ ತಿಳಿಸಿದ ಇಷ್ಟೆಲ್ಲಾ ಆಯ್ಕೆಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ನೀವು ಹಲವಾರು ಮಂದಿಗೆ ಒಂದೇ ಸಮಯದಲ್ಲಿ ಶುಭಾಶಯ ಕೋರಲು ಇಚ್ಚೆಪಟ್ಟರೆ ವಾಟ್ಸಾಪ್‌ ಇತ್ತೀಚೆಗೆ ಘೋಷಣೆ ಮಾಡಲಾದ ಬ್ರಾಡ್‌ಕಾಸ್ಟ್‌ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು. ಇದರಿಂದ ಅರೆ ಕ್ಷಣದಲ್ಲಿ ಎಲ್ಲರಿಗೂ ನಿಮ್ಮ ಶುಭಾಶಯ ಸಂದೇಶಗಳು ತಲುಪುತ್ತವೆ. ಜೊತೆಗೆ ಎಲ್ಲರೂ ಒಮ್ಮೆಲೆ ನಿಮಗೂ ತಿಳಿಸಲು ಸಹಾಯಕ.

Best Mobiles in India

English summary
Holi festival can be celebrated using many other messaging apps like WhatsApp, Telegram and Instagram on the smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+