Subscribe to Gizbot

ಸೆಲ್ಕೋನ್‌ನಿಂದ ಬಜೆಟ್ ಫೋನ್ ರೂ 5,222 ಕ್ಕೆ

Written By:

ಸೆಲ್ಕೋನ್ ಭಾರತದಲ್ಲಿ ರೂ 5,222 ಕ್ಕೆ ಹೊಸ ಬಜೆಟ್ ಫೋನ್ ಅನ್ನು ಲಾಂಚ್ ಮಾಡಿದೆ. ಫೋನ್ ಹೆಸರು ಮಿಲೇನಿಯಾ ಕ್ಯು5 ಕೆ ಎಂದಾಗಿದೆ. ಮಿಲೇನಿಯಾ ಕ್ಯು5 ಕೆ ಭಾರತದ ಎಲ್ಲಾ ರೀಟೈಲ್ ಮಳಿಗೆಗಳಲ್ಲಿ ದೊರೆಯಲಿದ್ದು ಕಪ್ಪು, ಬಿಳಿ, ನೀಲಿ ಬಣ್ಣಗಳಲ್ಲಿ ಡಿವೈಸ್ ಲಭ್ಯವಾಗಲಿದೆ.

ಸೆಲ್ಕೋನ್‌ನಿಂದ ಬಜೆಟ್ ಫೋನ್ ರೂ 5,222 ಕ್ಕೆ

ಇನ್ನು ಫೋನ್‌ನ ವಿಶೇಷತೆಗಳತ್ತ ನೋಡುವುದಾದರೆ ಇದು 5000mAh ಬ್ಯಾಟರಿಯನ್ನು ಒಳಗೊಂಡಿದೆ. ಇದೇ ರೀತಿಯ ಬ್ಯಾಟರಿ ಇರುವ ಇತರ ಡಿವೈಸ್‌ಗಳೊಂದಿಗೆ ಇದು ಸ್ಪರ್ಧೆಯನ್ನು ನಡೆಸಲಿದೆ ಎಂಬುದಂತೂ ಖಾತ್ರಿಯಾಗಿದೆ. ಜಿಯೋನಿಯ ಮ್ಯಾರಥಾನ್ ಎಮ್3 ಗೆ ಹೋಲಿಸಿದಾಗ ಇದು ಕೂಡ 5000mAh ಬ್ಯಾಟರಿಯೊಂದಿಗೆ ಬಂದಿದ್ದು ಬೆಲೆ ರೂ 12,999 ಆಗಿದೆ. ಲಾವಾ ಐರಿಸ್ ಫ್ಯುಯೆಲ್ 20, 4400mAh ಬ್ಯಾಟರಿಯನ್ನೊಳಗೊಂಡಿದ್ದು ಬೆಲೆ ರೂ 5,399 ಆಗಿದೆ.

ಓದಿರಿ: ಇನ್ನಷ್ಟು ಸುಂದರವಾಗಿಸುವ ಉಚಿತ ಬ್ಯೂಟಿ ಅಪ್ಲಿಕೇಶನ್‌ಗಳು

ಇನ್ನು ಮಿಲೇನಿಯಾ ಕ್ಯು5ಕೆ ಡ್ಯುಯಲ್ ಸಿಮ್ ಡಿವೈಸ್ ಆಗಿದ್ದು ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ. ಫೋನ್ 5 ಇಂಚಿನ 480x854 ಪಿಕ್ಸೆಲ್ ಡೆನ್ಸಿಟಿಯೊಂದಿಗೆ ಬಂದಿದ್ದು 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಇನ್ನು ಫೋನ್ RAM ಸಾಮರ್ಥ್ಯ 512 ಎಮ್‌ಬಿಯಾಗಿದೆ. ಇನ್ನು ಸಂಗ್ರಹಣಾ ಸಾಮರ್ಥ್ಯ 4 ಜಿಬಿಯಾಗಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದಾಗಿದೆ. ರಿಯರ್ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗ ಕ್ಯಾಮೆರಾ 3.2 ಮೆಗಾಪಿಕ್ಸೆಲ್ ಆಗಿದೆ.

English summary
Celkon on Friday launched a new budget smartphone in India, the Millennia Q5K Power, priced at Rs. 5,222.The company confirmed that the Millennia Q5K Power will be available in India across retail stores and will come in Black, White, and Blue colours.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot