Home
ಸುದ್ದಿಜಾಲ

ಪಿ.ಯು ಕಾಲೇಜುಗಳಲ್ಲಿ ಮೊಬೈಲ್ ಬಳಕೆ ಬ್ಯಾನ್?

ಕಾಲೇಜು ವಿಧ್ಯಾರ್ಥಿಗಳಿಗೆ ಮೊಬೈಲ್ ನೀಡಬೇಕೊ ಅಥವಾ ಬೇಡವೋ ಎಂಬ ಜಿಜ್ಞಾಸೆಗೆ ಫುಲ್‌ಸ್ಟಾಪ್ ಇಡಲು ಕೆಲವು ಕಾಲೇಜು ಆಡಳಿತ ಮಂಡಳಿಗಳು ಮುಂದಾಗಿವೆ.

By Bhaskar N J

ಕಾಲೇಜು ವಿಧ್ಯಾರ್ಥಿಗಳಿಗೆ ಮೊಬೈಲ್ ನೀಡಬೇಕೊ ಅಥವಾ ಬೇಡವೋ ಎಂಬ ಜಿಜ್ಞಾಸೆಗೆ ಫುಲ್‌ಸ್ಟಾಪ್ ಇಡಲು ಕೆಲವು ಕಾಲೇಜು ಆಡಳಿತ ಮಂಡಳಿಗಳು ಮುಂದಾಗಿವೆ. ಪಿಯು ಕಾಲೇಜುಗಳಲ್ಲಿ ಮೊಬೈಲ್‌ ಫೋನ್‌ ಸಂಪೂರ್ಣ ನಿರ್ಬಂಧಿಸಿ, ನಿಯಮ ಉಲ್ಲಂಘಿಸುವ ಮಕ್ಕಳನ್ನು ದಂಡಿಸಲೂ ಆಡಳಿತ ಮಂಡಳಿ ಸಜ್ಜಾಗಿವೆ.

ಹೊಸ ಶೈಕ್ಷಣಿಕ ವರ್ಷಕ್ಕೆ ಪಿಯುಸಿ ವಿದ್ಯಾರ್ಥಿಗಳಿಗೆ ಇದೊಂದು ಎಚ್ಚರಿಕೆ ಸುದ್ದಿಯಾಗಿದ್ದು, ರಾಷ್ಟ್ರೀಯ ವಿದ್ಯಾಲಯ, ಅಲ್‌-ಅಲೀಮ್, ಸೇಂಟ್‌ ಜೋಸೆಫ್‌ ಮತ್ತು ಸಿಎಂಆರ್ ಕಾಲೇಜುಗಳಲ್ಲಿ ಈಗಾಗಲೇ ಕಾಲೇಜು ಕ್ಯಾಂಪಸ್‌ನಲ್ಲಿ ಮೊಬೈಲ್‌ ನಿಷೇಧಿಸಲಾಗಿದೆ ಎಂದು ಆಡಳಿತ ಮಂಡಳಿಗಳು ವಿಧ್ಯಾರ್ಥಿಗಳು ಮತ್ತು ಪೋಷಕರೀರ್ವರಿಗೂ ಮಾಹಿತಿ ನೀಡಿವೆ.

ಪಿ.ಯು ಕಾಲೇಜುಗಳಲ್ಲಿ ಮೊಬೈಲ್‌ ಬಳಕೆ ಬ್ಯಾನ್?

ವಿಧ್ಯಾರ್ಥಿಗಳಿಗೆ ತುರ್ತು ಸಂದರ್ಭಗಳಲ್ಲಿ ಫೋನ್‌ ಬಳಸಲು ಕಾಲೇಜಿನಲ್ಲಿಯೇ ಉಚಿತ ಲ್ಯಾಂಡ್‌ಲೈನ್‌ ವ್ಯವಸ್ಥೆ ಮಾಡಲು ಕಾಲೇಜು ಮಂಡಳಿಗಳು ನಿರ್ಧರಿಸಿವೆ. ಇನ್ನು ಕೆಲವು ಕಾಲೇಜುಗಳಲ್ಲಿ ಆಡಳಿತ ಮಂಡಳಿಯಿಂದಲೇ ವಿದ್ಯಾರ್ಥಿಗಳ ಮೊಬೈಲ್‌ ಇರಿಸಲು ಪ್ರತ್ಯೇಕ ಲಾಕರ್ ವ್ಯವಸ್ಥೆ ನೀಡಲು ಮುಂದಾಗಿವೆ ಎಂಬ ಮಾಹಿತಿ ಸಿಕ್ಕಿದೆ.

ಮೊಬೈಲ್‌ಗಳಿಂದ ವಿಧ್ಯಾರ್ಥಿಗಳ ಆಟಪಾಟದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಇಷ್ಟೇ ಅಲ್ಲದೇ, ಕಾಲೇಜುಗಳಲ್ಲಿ ಮೊಬೈಲ್ ರಿಂಗಣಿಸುವುದರಿಂದ ವಿಧ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತದೆ. ಹಾಗಾಗಿಯೇ, ಶೈಕ್ಷಣಿಕ ಅಭ್ಯಾಸದ ಮೇಳೆ ಮೊಬೈಲ್ ತರದಂತೆ ವಿಧ್ಯಾರ್ಥಿಗಳ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಕಾಲೇಜಿನ ಆಡಳಿತ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಪಿ.ಯು ಕಾಲೇಜುಗಳಲ್ಲಿ ಮೊಬೈಲ್‌ ಬಳಕೆ ಬ್ಯಾನ್?

ಕಾಲೇಜು ಕ್ಯಾಂಪಸ್ ಮೊಬೈಲ್‌ ಬಳಸಿ ನಿಯಮ ಉಲ್ಲಂಘಿಸಿದಲ್ಲಿ, ಮೊಬೈಲ್‌ನ್ನು ಕಾಲೇಜು ವಶಪಡಿಸಿಕೊಳ್ಳಲಾಗುತ್ತದೆ. ಒಮ್ಮೆ ಪೋಷಕರನ್ನು ಕರೆಸಿ, ಕೊನೆ ಎಚ್ಚರಿಕೆ ನೀಡಿದ ಬಳಿಕ ಹಿಂದುರಿಗಿಸಲಾಗುತ್ತದೆ. ಇದೇ ತಪ್ಪು ಪುನರಾವರ್ತನೆಯಾದಲ್ಲಿ ಮತ್ತೆ ಮೊಬೈಲ್‌ ಅನ್ನು ಕಾಲೇಜು ಹಿಂದಿರುಗಿಸಲಾಗದು ಎಂದು ಅವರು ತಿಳಿಸಿದ್ದಾರೆ.

How to use WhatsApp in Kannada - GIZBOT KANNADA

ಓದಿರಿ: ಪೇಟಿಎಂ ಮಾಲ್‌ನಲ್ಲಿ ''ಪವರ್‌ಬ್ಯಾಂಕ್'' ಖರೀದಿಸಲು ಇದು ಭರ್ಜರಿ ಟೈಮ್!!

Best Mobiles in India

English summary
PU colleges issue rule that students can’t bring mobiles to campus. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+