Home
ಸುದ್ದಿಜಾಲ

WhatsApp: ವಾಟ್ಸಾಪ್‌ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?

ವಾಟ್ಸಾಪ್‌ (WhatsApp) ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ. ಅಲ್ಲವೆ ವಾಟ್ಸಾಪ್‌ ಸಹ ಬಳಕೆದಾರರಿಗೆ ಹೆಚ್ಚಿನ ಭದ್ರತಾ ಫೀಚರ್ಸ್‌ ಅನ್ನೂ ಸಹ ನೀಡಿದೆಯಾದರೂ ಕೆಲವು ಜನರು ವಾಟ್ಸಾಪ್‌ ಮೂಲಕ ಜನರನ್ನು ವಂಚನೆ ಮಾಡುತ್ತಿದ್ದಾರೆ.

ಹೌದು, ವಾಟ್ಸಾಪ್‌ ಸ್ಕ್ಯಾಮರ್‌ಗಳಿಗೆ ಮುಖ್ಯ ಮಾರ್ಗವಾಗಿದೆ. ವಾಟ್ಸಾಪ್‌ ಹಾಗೂ ಸಂಬಂಧಿಸಿದ ಇಲಾಖೆಗಳು ಎಚ್ಚರಿಕೆಯಿಂದ ಇರಿ ಎಂದು ಜನರಿಗೆ ತಿಳಿಸಿದ್ರೂ ಸಹ ಜನ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಕಾರಣಕ್ಕೆ ಭಾರೀ ಮೊತ್ತದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೆಲ್ಲದರ ಜನರು ಈಗ ದೂರಸಂಪರ್ಕ ಇಲಾಖೆಯು (DoT) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಹಾಗಿದ್ರೆ ಇಲಾಖೆ ನೀಡಿದ ಎಚ್ಚರಿಕೆ ಏನು?, ವಾಟ್ಸಾಪ್‌ ಮೂಲಕ ಸ್ಕ್ಯಾಮರ್‌ಗಳು ಜನರನ್ನು ಹೇಗೆ ವಂಚಿಸುತ್ತಿದ್ದಾರೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

 ವಾಟ್ಸಾಪ್‌ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ!

ವಾಟ್ಸಾಪ್‌ ಬಳಕೆದಾರರಿಗೆ ಕೇಂದ್ರದಿಂದ ಎಚ್ಚರಿಕೆ: ದೂರಸಂಪರ್ಕ ಇಲಾಖೆಯ (DoT) ಸಾರ್ವಜನಿಕರಿಗೆ ಕರೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಅಂದರೆ ಸರ್ಕಾರದ ಪ್ರತಿನಿಧಿಗಳಂತೆ ಪೋಸ್ ಕೊಡುವ ಮತ್ತು ಜನರನ್ನು ದಾರಿ ತಪ್ಪಿಸುವ ವಿದೇಶಿ ಫೋನ್ ಸಂಖ್ಯೆಗಳಿಂದ (+92) ವಾಟ್ಸಾಪ್‌ ಕರೆ ಬಂದರೆ ಯಾವುದೇ ಕಾರಣಕ್ಕೂ ಸ್ವೀಕರಿಸಬೇಡಿ ಎಂದು ತಿಳಿಸಲಾಗಿದೆ. ಈ ರೀತಿಯ ಕರೆಗಳ ಮೂಲಕ ಸೈಬರ್ ಅಪರಾಧಿಗಳು ಸೈಬರ್ ಅಪರಾಧ/ಹಣಕಾಸಿನ ವಂಚನೆಗಳನ್ನು ನಡೆಸಲು ವೈಯಕ್ತಿಕ ಮಾಹಿತಿಯನ್ನು ಬಳಕೆ ಮಾಡುತ್ತಾರೆ ಎಂದು ಹೇಳಿದೆ.

ತಂತ್ರಜ್ಞಾನ ಇಲಾಖೆ (DoT) ತನ್ನ ಪರವಾಗಿ ಈ ಕರೆಗಳನ್ನು ಮಾಡಲು ಯಾರಿಗೂ ಅನುಮತಿ ನೀಡಿಲ್ಲ ಎಂದು ಇದೇ ವೇಳೆ ಉಲ್ಲೇಖ ಮಾಡಿದ್ದು, ನಿಮ್ಮ ಸಂಖ್ಯೆಯನ್ನು ಕಡಿತ ಮಾಡುತ್ತೇವೆ ಎಂದು ಹೇಳಿ ಕರೆ ಮಾಡುವ ಸ್ಕ್ಯಾಮರ್‌ಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಈ ವೇಳೆ ಅವರು ಕೇಳುವ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸದಿರಲು ಕೇಳಿಕೊಳ್ಳಲಾಗಿದೆ.

 ವಾಟ್ಸಾಪ್‌ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ!

ಇನ್ನು ಸಂಚಾರ ಸಾಥಿ ಪೋರ್ಟಲ್‌ನಲ್ಲಿ (Sanchar Sathi Portal) ಇತ್ತೀಚೆಗಷ್ಟೇ ಲಾಂಚ್‌ ಆಗಿರುವ ಚಕ್ಷು ನಲ್ಲಿ ನೀವು ವರದಿ ಮಾಡಬಹುದಾಗಿದೆ. ಇದರಿಂದ ಸರ್ಕಾರ ಆ ನಂಬರ್‌ಗಳನ್ನು ಟ್ರ್ಯಾಕ್‌ ಮಾಡಿ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಲಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸ್ಕ್ಯಾಮರ್‌ಗಳು ಈ ನಂಬರ್‌ ಮೂಲಕ ಕರೆ ಮಾಡುವುದು ತಪ್ಪುತ್ತದೆ ಹಾಗೆಯೇ ಇತರೆ ಜನರನ್ನು ಮೋಸ ಹೋಗುವುದರಿಂದ ತಡೆಯಬಹುದಾಗಿದೆ.

ಈ ಸಂಬಂಧ ಸಂಪರ್ಕ ಸಚಿವಾಲಯ ಹೇಳಿಕೆ ನೀಡಿದ್ದು, ಇಂತಹ ಸಂಭಾಷಣೆಗಳ ಮೂಲಕ, ಸೈಬರ್ ಕಳ್ಳರು ಸೈಬರ್ ಅಪರಾಧ ಅಥವಾ ಹಣಕಾಸಿನ ವಂಚನೆ ಮಾಡುವ ಸಲುವಾಗಿ ವೈಯಕ್ತಿಕ ಮಾಹಿತಿಯನ್ನು ಕೇಳುತ್ತಾರೆ ಅಥವಾ ಕದಿಯಲು ಪ್ರಯತ್ನಿಸುತ್ತಾರೆ. DoT ತನ್ನ ಪರವಾಗಿ ಅಂತಹ ಕರೆ ಮಾಡಲು ಯಾರಿಗೂ ಅಧಿಕಾರ ನೀಡುವುದಿಲ್ಲ. ಹೀಗಾಗಿ ಜಾಗರೂಕರಾಗಿರಿ ಮತ್ತು ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಹೇಳಿದೆ.

ನಿಮ್ಮ ಹೆಸರಲ್ಲಿರುವ ಫೋನ್‌ ಸಂಖ್ಯೆಗಳ ವಿವರವನ್ನು ಈ ಮೂಲಕ ತಿಳಿಯಿರಿ: ಸಾಕಷ್ಟು ಜನರು ಒಂದು ಅಥವಾ ಎರಡು ಸಿಮ್‌ಗಳನ್ನು ಬಳಕೆ ಮಾಡುತ್ತಾರೆ. ಇದು ಸಾಮಾನ್ಯ ಆದರೆ ಕೆಲವರು ಸಾಮಾನ್ಯರ ಐಡಿ ಬಳಕೆ ಮಾಡಿಕೊಂಡು ಸಿಮ್‌ ಖರೀದಿ ಮಾಡಿರುವ ಅದೆಷ್ಟೋ ಘಟನೆಗಳು ವರದಿಯಾಗಿವೆ. ಈ ಕಾರಣಕ್ಕೆ ನಿಮ್ಮ ಹೆಸರಲ್ಲಿ ಅಥವಾ ನಿಮ್ಮ ಐಡಿ ಮೂಲಕ ಎಷ್ಟು ಸಿಮ್‌ಗಳನ್ನು ಖರೀದಿ ಮಾಡಲಾಗಿದೆ ಅಲ್ಲದೆ ಸಕ್ರಿಯವಾಗಿವೆ ಅನ್ನೋ ಮಾಹಿತಿಯನ್ನು ಪ್ರತಿಯೊಬ್ಬರು ತಿಳಿಯುವುದು ಅಗತ್ಯ.

 ವಾಟ್ಸಾಪ್‌ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ!

ಇದಕ್ಕಾಗಿ ಸರ್ಕಾರ ಸುಲಭ ಪರಿಹಾರ ನೀಡಿದೆ. ಬಳಕೆದಾರರು ತಮ್ಮ ಹೆಸರಿನೊಂದಿಗೆ ಸಂಯೋಜಿತವಾಗಿರುವ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸಲು ಸಂಚಾರ ಸಾಥಿ ಪೋರ್ಟಲ್‌ಗೆ ಭೇಟಿ ನೀಡಬಹುದಾಗಿದೆ. ಅಲ್ಲಿ ನಿಮ್ಮ ಮೊಬೈಲ್ ಸಂಪರ್ಕಗಳನ್ನು ತಿಳಿಯಿರಿ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ ನಿಮ್ಮ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳಿಗೆ ಎಂದು ತಿಳಿಯಬಹುದು. ಆ ವೇಳೆ ನೀವು ಬಳಕೆ ಮಾಡದ ಯಾವುದಾದರೂ ನಂಬರ್ ಕಂಡರೆ ತಕ್ಷಣವೇ ಅಲ್ಲೇ ಇರುವ ವರದಿ ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಆ ನಂಬರ್ ಬ್ಲಾಕ್‌ ಮಾಡಬಹುದು.

Best Mobiles in India

English summary
Department of Telecommunications (DoT) has warned WhatsApp users about foreign calls. if you get a WhatsApp call from foreign phone numbers (+92) posing as government representatives and misleading people, do not accept them for any reason.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+