ಅಸಭ್ಯ ಕಂಟೆಂಟ್ ಪ್ರಸಾರ ಮಾಡುತ್ತಿದ್ದ, 18 ಓಟಿಟಿ ಆಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ!
ಕೇಂದ್ರ ಸರ್ಕಾರದ ಅಡಿಯಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 18 ಓಟಿಟಿ ಪ್ಲಾಟ್‌ಫಾರ್ಮ್‌ಗಳನ್ನು ಬ್ಯಾನ್ ಮಾಡಿದೆ. ಬ್ಯಾನ್ ಮಾಡಲಾದ ಓಟಿಟಿ ತಾಣಗಳು ಅಶ್ಲೀಲ ಮತ್ತು ಅಸಭ್ಯ ಕಂಟೆಂಟ್ ಅನ್ನು ಪ್ರಸಾರ ಮಾಡುತ್ತಿದ್ದವು. ಹಾಗೆಯೇ ಈ ಓಟಿಟಿಗಳಿಗೆ ಇವುಗಳ ಸಂಬಂಧಿಸಿದ 19 ವೆಬ್‌ಸೈಟ್‌ಗಳು, 10 ಅಪ್ಲಿಕೇಶನ್‌ಗಳು ಮತ್ತು 57 ಸೋಶಿಯಲ್ ಮೀಡಿಯಾ ಖಾತೆಗಳನ್ನು ಸಹ ನಿರ್ಬಂಧಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 ಮತ್ತು 67ಎ, ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 292 ಹಾಗೂ ಮಹಿಳೆಯರ ಅಸಭ್ಯ ಪ್ರಾತಿನಿಧ್ಯ (ನಿಷೇಧ) ಕಾಯಿದೆ, 1986 ರ ಸೆಕ್ಷನ್ 4 ರ ಪ್ರಾಥಮಿಕ ಉಲ್ಲಂಘನೆ ಕಾರಣಕ್ಕಾಗಿ 18 ಓಟಿಟಿ ಆಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿ ಮಾಡಿದೆ.

ಬ್ಯಾನ್ ಮಾಡಲಾದ ಈ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ವಿಡಿಯೋ ಕಂಟೆಂಟ್‌ಗಳಲ್ಲಿ ಅಶ್ಲೀಲ, ಅಸಭ್ಯ ಮತ್ತು ಮಹಿಳೆಯರನ್ನು ಅವಮಾನಕರ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಕಂಡುಬಂದಿದೆ. ಅಲ್ಲದೇ ನಗ್ನತೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧಗಳು, ಕುಟುಂಬ ಸಂಬಂಧಗಳ ಸೇರಿದಂತೆ ಇತರೆ ಕೆಲವು ಅನುಚಿತ ಸಂದರ್ಭಗಳಲ್ಲಿ ಲೈಂಗಿಕ ಕ್ರಿಯೆಗಳ ಕಂಟೆಂಟ್ ಪ್ರಸಾರ ಮಾಡುತ್ತಿದ್ದ ಕಾರಣಕ್ಕಾಗಿ 18 ಓಟಿಟಿಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಷೇಧ ಹೇರಿದೆ.

ಬ್ಯಾನ್ ಮಾಡಲಾದ ಓಟಿಟಿ ಪ್ಲಾಟ್‌ಫಾರ್ಮ್‌ಗಳು
1. ಡ್ರೀಮ್ ಫಿಲ್ಮ್ಸ್ - Dreams Films
2. ವೂವಿ - Voovi
3. ಯಸ್ಮಾ - Yessma
4. ಅನ್‌ಕಟ್ ಅಡ್ಡಾ - Uncut Adda
5. ಟ್ರೈ ಫ್ಲಿಕ್ಸ್ - Tri Flicks
6. ಎಕ್ಸ್ ಪ್ರೈಮ್ - X Prime
7. ನಿಯಾನ್ ಎಕ್ಸ್ ವಿಐಪಿ - Neon X VIP
8. ಬೇಷರಮ್ಸ್ - Besharams
9. ಹಂಟರ್ಸ್ - Hunters
10. ರಾಬಿಟ್ - Rabbit
11. ಎಕ್ಸ್‌ಟ್ರಾ ಮೂಡ್ -Xtramood
12. ನ್ಯೂಫ್ಲಿಕ್ಸ್ - Nuefliks
13. ಮೋಡ್ ಎಕ್ಸ್ - MoodX
14. ಎಮ್‌ಓಜೆಫ್ಲಿಪ್ಸ್ - Mojflix
15. ಹಾಟ್ ಶಾಟ್ ವಿಐಪಿ - Hot Shots VIP
16. ಫೂಗಿ - Fugi
17. ಚಿಕ್ಕೂಫ್ಲಿಕ್ಸ್ - Chikooflix
18. ಪ್ರೈಮ್ ಪ್ಲೇ - Prime Play
ಸರ್ಕಾರ ನಿಷೇಧ ಮಾಡಿರುವ ಈ 18 ಓಟಿಟಿ ಆಪ್‌ಗಳ ಬಗ್ಗೆ ಮಾತನಾಡುತ್ತಾ, ಕೇಂದ್ರ ಸರ್ಕಾರವು ಈ ಆಪ್‌ಗಳು ಒಂದು 1 ಕೋಟಿಗೂ ಅಧಿಕ ಡೌನ್‌ಲೋಡ್ ಅನ್ನು ಕಂಡಿವೆ. ಅಲ್ಲದೇ ಇತರ ಎರಡು ಗೂಗಲ್ ಪ್ಲೇ ಸ್ಟೋರ್ ನಲ್ಲಿ 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್‌ಗಳನ್ನು ಹೊಂದಿದೆ ಎಂದು ತಿಳಿಸಿದೆ.
ಅದಾಗ್ಯೂ, 18 ಓಟಿಟಿ ಪ್ಲಾಟ್‌ಫಾರ್ಮ್ ಗಳ ಸೋಶಿಯಲ್ ಮೀಡಿಯಾ ತಾಣಗಳಲ್ಲಿ 32 ಲಕ್ಷಕ್ಕೂ ಅಧಿಕ ಬಳಕೆದಾರರ ಪೇಯ್ಡ್ ಫಾಲೋವರ್ಸ್ ಇರುವ ಬಗ್ಗೆ ತಿಳಿಸಿದೆ.
ಕೇಂದ್ರ ಸರ್ಕಾರದ ಬಿಡುಗಡೆಯ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 12 ಫೇಸ್‌ಬುಕ್ ( Facebook ) ಖಾತೆಗಳು, 17 ಇನ್‌ಸ್ಟಾಗ್ರಾಮ್ ( Instagram ) ಖಾತೆಗಳು, ಹಾಗೆಯೇ 16 ಎಕ್ಸ್ (ಈ ಮೊದಲು ಟ್ವಿಟರ್ - Twitter ) ಖಾತೆಗಳು ಮತ್ತು 12 ( YouTube ) ಯೂಟ್ಯೂಬ್ ಖಾತೆಗಳ ಆಕ್ಸಸ್ ಅನ್ನು ನಿರ್ಬಂಧಿಸಿದೆ.


Click it and Unblock the Notifications








