Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ ಬಳಕೆದಾರರೇ ಇಲ್ಲಿ ಗಮನಿಸಿ: ಈ ವೈರಸ್‌ ಸ್ಕ್ಯಾನರ್‌ ಆಪ್‌ ಡಿಲೀಟ್‌ ಮಾಡಿ!

ಸ್ಮಾರ್ಟ್‌ಫೋನ್ ಬಳಕೆದಾರರು ಉತ್ತಮ ಸ್ಮಾರ್ಟ್‌ಫೋನ್‌ ಅನುಭವಕ್ಕೆ ವೈರಸ್‌ ವಿರದ್ಧ ಹೋರಾಡುವ ಹಲವಾರು ವೈರಸ್‌ ಸ್ಕ್ಯಾನರ್‌ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವುದು ಸಹಜ. ಇದರಲ್ಲಿ ಕೆಲವು ಆಪ್‌ಗಳು ಮಾತ್ರ ಉತ್ತಮವಾಗಿ ಬಳಕೆದಾರರಿಗೆ ಸೇವೆ ನೀಡುತ್ತಿದ್ದು, ಇನ್ನೂ ಕೆಲವು ಆಪ್‌ಗಳು ಮೊಬೈಲ್‌ ಅನ್ನು ಸೇಫ್‌‌ ಮಾಡುತ್ತೇವೆ ಎಂದು ಹೇಳಿ ತಾವೇ ಆ ಮೊಬೈಲ್‌ನಲ್ಲಿ ಕುತಂತ್ರ ಕೆಲಸ ಮಾಡುತ್ತಿರುತ್ತವೆ.

ಹೌದು, ಇಂದಿನ ದಿನಗಳಲ್ಲಿ ಹಲವಾರು ನಕಲಿ ಆಪ್‌ಗಳು ತಲೆ ಎತ್ತಿದ್ದು, ಅವುಗಳನ್ನು ಗುರುತಿಸಿ ಆಪ್‌ ಸ್ಟೋರ್‌ ಕ್ರಮ ತೆಗೆದುಕೊಳ್ಳುತ್ತಿದೆಯಾದರೂ ಕೆಲವು ಆಪ್‌ಗಳ ಉದ್ದೇಶಗಳನ್ನು ಕಂಡುಕೊಳ್ಳುವುದು ಆಪ್‌ಸ್ಟೋರ್‌ಗೂ ಸಹ ಕಷ್ಟವಾದ ಕೆಲಸವಾಗುತ್ತದೆ. ಈ ನಡುವೆ ಇಂತಹುದೇ ಆಪ್‌ ಬಗ್ಗೆ ಆಂಡ್ರಾಯ್ಡ್‌ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಆಪ್‌ ಇದ್ದರೆ ಈಗಲೇ ಹೊರಹಾಕಿ. ಹಾಗಿದ್ರೆ, ಯಾವುದು ಆ ಆಪ್‌?, ಇದು ಮಾಡುತ್ತಿರುವ ಕಿತಾಪತಿ ಕೆಲಸ ಏನು ಎಂದು ತಿಳಿಯೋಣ ಬನ್ನಿ.

ಸ್ಮಾರ್ಟ್‌ಫೋನ್‌ ಬಳಕೆದಾರರೇ ಇಲ್ಲಿ ಗಮನಿಸಿ...

ದಾಮ್ ವೈರಸ್: ದಾಮ್ (Daam) ಎಂಬ ವೈರಸ್ ಆಪ್‌ ಬಗ್ಗೆ CERT-In ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಈ ಆಪ್ ಬಳಕೆದಾರರ ಎಲ್ಲಾ ಕರೆ ಮಾಹಿತಿಯನ್ನು ಕದಿಯುತ್ತಿದೆಯಂತೆ. ಹಾಗೆಯೇ ಯಾವುದೇ ಡಿವೈಸ್‌ಗೆ ಎಂಟ್ರಿಯಾದ ನಂತರ ಅದರಲ್ಲಿನ ಮಾಲ್‌ವೇರ್ ಡಿವೈಸ್‌ನ ಭದ್ರತಾ ತಪಾಸಣೆಗಳನ್ನು ಬೈಪಾಸ್ ಮಾಡಲು ಪ್ರಯತ್ನಿಸುತ್ತದೆ ಮತ್ತು ಯಶಸ್ವಿ ಪ್ರಯತ್ನದ ನಂತರ, ಅದು ಸೂಕ್ಷ್ಮ ಡೇಟಾವನ್ನು ಕದಿಯಲು ಪ್ರಾರಂಭಿಸುತ್ತದೆ ಎಂದು ತಿಳಿದುಬಂದಿದೆ.

ಇನ್ನು ನ್ಯಾಷನಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಪ್ರಕಾರ, ದಾಮ್ ಎಂಬ ಹೊಸ ಆಂಡ್ರಾಯ್ಡ್ ಮಾಲ್‌ವೇರ್ ಆಂಡ್ರಾಯ್ಡ್ ಮೊಬೈಲ್‌ಗಳನ್ನು ಗುರಿಯಾಗಿಸಿಕೊಂಡಿದ್ದು, ಇದು ಕರೆ ದಾಖಲೆಗಳು, ಸಂಪರ್ಕಗಳು, ಇತಿಹಾಸ ಮತ್ತು ಕ್ಯಾಮೆರಾದಂತಹ ಸೂಕ್ಷ್ಮ ಡೇಟಾವನ್ನು ಹ್ಯಾಕ್ ಮಾಡುತ್ತಿದೆ. ಅದರಲ್ಲೂ ಮಾಲ್‌ವೇರ್ ವಿರೋಧಿ ವೈರಸ್ ಪ್ರೋಗ್ರಾಂಗಳನ್ನು ಬೈಪಾಸ್ ಮಾಡುವ ಸಾಮರ್ಥ್ಯವನ್ನು ಈ ಆಪ್‌ ಹೊಂದಿದೆ ಮತ್ತು ಉದ್ದೇಶಿತ ಸಾಧನಗಳಲ್ಲಿ ರಾನ್ಸಮ್‌ವೇರ್ ಅನ್ನು ಇನ್‌ಸ್ಟಾಲ್ ಮಾಡುತ್ತಿದೆ ಎಂದು ಕಂಡುಕೊಳ್ಳಲಾಗಿದೆ.

ಸ್ಮಾರ್ಟ್‌ಫೋನ್‌ ಬಳಕೆದಾರರೇ ಇಲ್ಲಿ ಗಮನಿಸಿ...

ಹಾಗೆಯೇ ಈ ಮಾಲ್‌ವೇರ್ ಥರ್ಡ್ ಪಾರ್ಟಿ ಆಪ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಬಳಕೆದಾರರ ಸ್ಮಾರ್ಟ್‌ಫೋನ್‌ಗಳ ಮೇಲೆ ಸದಾ ದಾಳಿ ಮಾಡುತ್ತಿದ್ದು, ಇತರ ಡಿವೈಸ್‌ಗಳಿಗೂ ಇದನ್ನು ಹರಡುತ್ತಿದೆ ಎಂದು CERT-In ಉಲ್ಲೇಖಿಸಿದೆ. ಈ ಮೂಲಕ ಅತ್ಯಂತ ದೊಡ್ಡ ಆಪಾಯಕಾರಿ ಆಪ್‌ ಆಗಿ ತಿಳಿದುಬಂದಿದ್ದು, ಇದರಿಂದಾಗಿ ತಕ್ಷಣವೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಆಪ್‌ ಇದ್ದರೆ ತಕ್ಷಣವೇ ಅನ್‌ಇನ್‌ಸ್ಟಾಲ್ ಮಾಡುವ ಅಗತ್ಯ ಇದೆ.

ಈ ದಾಮ್‌ ನಿಮ್ಮ ಮೊಬೈಲ್‌ನಲ್ಲಿ ಏನೆಲ್ಲಾ ಮಾಡಲಿದೆ ಗೊತ್ತಾ?: ಈ ಆಪ್‌ ಫೋನ್ ಕರೆ ರೆಕಾರ್ಡಿಂಗ್, ಸಂಪರ್ಕಗಳನ್ನು ಹ್ಯಾಕಿಂಗ್ ಮಾಡುವುದು, ಕ್ಯಾಮೆರಾಗೆ ಪ್ರವೇಶ ಪಡೆಯುವುದು, ಡಿವೈಸ್‌ನ ಪಾಸ್‌ವರ್ಡ್ ಬದಲಾಯಿಸುವುದು, ಸ್ಕ್ರೀನ್‌ಶಾಟ್‌ಗಳನ್ನು ಸೆರೆಹಿಡಿಯುವುದು, ಎಸ್‌ಎಮ್ಎಸ್‌ ಅನ್ನು ಕದಿಯುವುದು, ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು ಅಥವಾ ಅಪ್‌ಲೋಡ್ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ನಿಮಗೆ ತಿಳಿಯದಂತೆ ಮಾಡುತ್ತದೆ.

ಅಷ್ಟೇ ಅಲ್ಲದೆ C2 (ಕಮಾಂಡ್-ಮತ್ತು-ನಿಯಂತ್ರಣ) ಸರ್ವರ್‌ಗಳನ್ನು ಹ್ಯಾಕ್ ಮಾಡುವುದು ಸೋಂಕಿತ ಡಿವೈಸ್‌ಗಳಲ್ಲಿ ಫೈಲ್‌ಗಳನ್ನು ಎನ್‌ಕೋಡ್ ಮಾಡಲು ಮಾಲ್‌ವೇರ್ ಎಇಎಸ್ (ಅಡ್ವಾನ್ಸ್‌ಡ್ ಎನ್‌ಕ್ರಿಪ್ಶನ್ ಸ್ಟ್ಯಾಂಡರ್ಡ್) ಎನ್‌ಕ್ರಿಪ್ಶನ್ ಅಲ್ಗಾರಿದಮ್ ಅನ್ನು ಬಳಕೆ ಮಾಡುತ್ತದೆ ಎಂದು ಕಂಡುಕೊಳ್ಳಲಾಗಿದೆ. ಹಾಗೆಯೇ ಈ ಮಾಲ್‌ವೇರ್‌ನಿಂದ ಸ್ಥಳೀಯ ಸಂಗ್ರಹಣೆಯಿಂದ ಇತರ ಫೈಲ್‌ಗಳನ್ನು ಅಳಿಸಲಾಗುದ್ದು, ಈ ಆಪ್‌ ಇರುವ ಡಿವೈಸ್‌ಗಳಲ್ಲಿ ಎನ್‌ಕ್ರಿಪ್ಟ್ ಮಾಡಲಾದ ಫೈಲ್‌ಗಳು ಮತ್ತು readme_now.txt ಎಂದು ಉಲ್ಲೇಖ ಇರುವ ರಾನ್ಸಮ್ ಟಿಪ್ಪಣಿ ಮಾತ್ರ ಉಳಿದಿದೆ ಎಂದು CERT-In ಹೇಳಿದೆ.

ಸ್ಮಾರ್ಟ್‌ಫೋನ್‌ ಬಳಕೆದಾರರೇ ಇಲ್ಲಿ ಗಮನಿಸಿ...

ಹಾಗಿದ್ರೆ ನೀವು ಈಗ ಏನು ಮಾಡಬೇಕು?: ಸಾಮಾನ್ಯವಾಗಿ ನೀವು ಯಾವಾಗಲೂ ಚಿಕ್ಕ ಯುಆರ್‌ಎಲ್‌ ಗಳನ್ನು ಹೊಂದಿರುವ ವೆಬ್‌ಸೈಟ್‌ಗಳಿಂದ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಅಂದರೆ http://bit.ly/,\nbit.ly ಹಾಗೂ tinyurl.com/ ನಂತಹ ಬೀಟ್ಲ್ಯ್ ಮತ್ತು ತಿನುರ್ಲ ಹೈಪರ್‌ಲಿಂಕ್‌ಗನ್ನು ಬಳಕೆ ಮಾಡಬೇಡಿ. ಇದರೊಂದಿಗೆ ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡುವುದನ್ನು ಮಾಡಬೇಡಿ. ಇದರಿಂದ ನಿಮ್ಮ ಸ್ಮಾರ್ಟ್‌ಡಿವೈಸ್‌ ಸೇಫ್‌ ಆಗಿರುತ್ತದೆ.

Best Mobiles in India

English summary
CERT-In has warned Android users about a virus app called Daam. This app seems to be stealing all the call information of the user.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+