ಸಿಇಎಸ್ 2015 ರ ತಂತ್ರಜ್ಞಾನ ಮೇಳದಲ್ಲಿ ಮನಕದಿಯುವ ವಿಶೇಷತೆಗಳು

By Shwetha

ಜಗತ್ತಿನ ಅತಿ ದೊಡ್ಡ ಟೆಕ್ ಶೋನಲ್ಲಿ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳು ಜನ್ಮತಾಳಿವೆ. ಲಾಸ್ ವೇಗಸ್‌ನಲ್ಲಿ ನಡೆಯುತ್ತಿರುವ ಸಿಇಎಸ್ 2015 ತಂತ್ರಜ್ಞಾನ ಮಹಾಸಮ್ಮೇಳನ ಟೆಕ್ ಲೋಕಕ್ಕೆ ಮೈಲಿಗಲ್ಲು ಎಂದೆನಿಸಿದೆ.

ಇದನ್ನೂ ಓದಿ: ಸುದೀರ್ಘ ಬ್ಯಾಟರಿಯ ಟಾಪ್ ಫೋನ್‌ಗಳು ಕಡಿಮೆ ಬೆಲೆಯಲ್ಲಿ!!!

ಈ ಟೆಕ್ ಸಮಾರಂಭದಲ್ಲಿ ಪ್ರಖ್ಯಾತ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದ್ದು ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳು ಅದ್ಭುತ ಕಮಾಲನ್ನು ಸೃಷ್ಟಿಸುತ್ತಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಆ ಉತ್ಪನ್ನಗಳು ಯಾವುವು ಅವು ಮಾಡಿರುವ ಮೋಡಿ ಏನು ಎಂಬುದನ್ನು ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿ
  

ಓಲೆಡ್ 4ಕೆ ಟಿವಿಯನ್ನು ಎಲ್‌ಜಿ ಘೋಷಿಸಿದ್ದು ಇದರೊಂದಿಗೆ ಎರಡು ಡ್ರಮ್‌ಗಳ ವಾಶಿಂಗ್ ಮೆಶೀನ್ ಅನ್ನು ಪ್ರಸ್ತುತಪಡಿಸಿದೆ.

ಸ್ಯಾಮ್‌ಸಂಗ್
  

ಈ ಬಾರಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬದಲಿಗೆ SUHD ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಉತ್ತಮ ಬಣ್ಣ ಮತ್ತು ರೀಪ್ರೊಡಕ್ಷನ್ ಅನ್ನು ಒದಗಿಸುತ್ತದೆ.

ಸೋನಿ
  

ಜಪಾನಿನ ಈ ಟೆಕ್ ದೈತ್ಯ ತುಂಬಾ ಸಣ್ಣನೆಯ 4ಕೆ ಟಿವಿ, 4ಕೆ ಹ್ಯಾಂಡಿಕಾಮ್ ಮತ್ತು ಆಕ್ಷನ್ ಕ್ಯಾಮ್, ಹೊಸ ವಾಕ್‌ಮನ್ ಅನ್ನು ಪ್ರಸ್ತುತಪಡಿಸಿದೆ.

ZTE
  

ಪ್ರೊ - 2 ಸ್ಮಾರ್ಟ್ ಎಚ್‌ಡಿ ಪ್ರೊಜೆಕ್ಟರ್ ಆಗಿದ್ದು ವೈಫೈ ಸಾಮರ್ಥ್ಯದೊಂದಿಗೆ ಇದು ಬಂದಿದೆ. 200 ಲ್ಯೂಮನ್ಸ್, ಆಟೊ ಫೋಕಸ್, ಆಂಟಿ ಗ್ಲೇರ್, ಟಚ್ ಸ್ಕ್ರೀನ್ ಅನ್ನು ಇದು ಒಳಗೊಂಡಿದೆ.

ಮೋನ್ಸಟರ್
  
 

ಮೋನ್ಸಟರ್ ಬೂತ್‌ನಲ್ಲಿ ವೈರ್‌ಲೆಸ್, ವಾಟರ್ ಪ್ರೂಫ್ ಬ್ಲ್ಯೂಟೂತ್ ಸ್ಪೀಕರ್ ಅನ್ನು ಇದು ಹೊಂದಿದೆ.

ಪ್ಯಾನಸೋನಿಕ್
  

ತನ್ನ ಪ್ರಥಮ ಸ್ಥಳೀಯ 4ಕೆ ಬ್ಲ್ಯೂ ರೇ ಪ್ಲೇಯರ್ ಅನ್ನು ಪ್ಯಾನಸೋನಿಕ್ ತನ್ನ ಪ್ಯಾನಸೋನಿಕ್ ಹೋಮ್ ಮಾನಿಟರಿಂಗ್ ಸಿಸ್ಟಮ್ ಜೊತೆಗೆ ಘೋಷಿಸಿದ್ದು, ಇದು ಸ್ಮಾರ್ಟ್ ಪ್ಲಗ್, ವಿಂಡೋ/ಡೋರ್ ಸೆನ್ಸಾರ್, ಒಳಾಂಗಣ ಹೊರಾಂಗಣ ಕ್ಯಾಮೆರಾಗಳೊಂದಿಗೆ ಬಂದಿದೆ.

ಕ್ವಾಲ್‌ಕಾಮ್
  

ವೈಫೈ ಆಧಾರಿತ ಲೈಟಿಂಗ್ ಕಾರ್ಯಕ್ಷಮತೆಯನ್ನು ಒದಗಿಸುವ ಕ್ವಾಲ್‌ಕಾಮ್ LIFX ನ ಸಮ್ಮಿಶ್ರವಾಗಿದೆ. ಇದು ಯಾವುದೇ ಲೈಟ್ ಬಲ್ಬ್ ಅನ್ನು ಸ್ಮಾರ್ಟ್ ಬಲ್ಬ್‌ ಮಾಡುತ್ತದೆ.

ಶಾರ್ಪ್
  

ಅಕ್ವಾಸ್ ಕ್ರಿಸ್ಟಲ್ ಫ್ರೇಮ್‌ಲೆಸ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದ್ದು ಇದು ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿ ಮನಸ್ಸಿಗೆ ಮುದ ನೀಡುವಂತಿದೆ.

ಮಕ್ಕಳಿಗಾಗಿ ವೇರಿಯೇಬಲ್
  

ಮಕ್ಕಳು ಜನನಿಬಿಡ ಪ್ರದೇಶಗಳಲ್ಲಿ ತಪ್ಪಿ ಹೋಗುವುದನ್ನು ನಿಯಂತ್ರಿಸಲು ಮಕ್ಕಳ ಚಲನವಲನಗಳನ್ನು ಪೋಷಕರಿಗೆ ನಿಗಾಇಡಲು ಸಹಾಯಕವಾಗುವಂತೆ ಮಕ್ಕಳಿಗೆ ಈ ವೇರಿಯೇಬಲ್ ಅನ್ನು ಪ್ರಸ್ತುತಪಡಿಸಿದೆ.

ಡಿಶ್
  

4ಕೆ ಜೋಯ್, ಮೊದಲ 4ಕೆ ಸೆಟಪ್ ಬಾಕ್ಸ್ ಆಗಿದ್ದು ಎಚ್‌ಡಿನಲ್ಲಿ ಬದಿಭಾಗದ ವೀಕ್ಷಣೆಯನ್ನು ಇದು ಒದಗಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

English summary
This article tells about With each day passing, smartphone's camera is getting bigger and better. As the smartphone camera is found everywhere these days, it is almost in a place of replacing the basic cameras, which is the point and shoot camera.
Please Wait while comments are loading...

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more