Just In
Don't Miss
- Automobiles
2021ರ ಅವಧಿಯಲ್ಲಿ ಒಟ್ಟು 25 ಹೊಸ ಕಾರುಗಳನ್ನು ಬಿಡುಗಡೆ ಮಾಡಲಿದೆ ಬಿಎಂಡಬ್ಲ್ಯು ಇಂಡಿಯಾ
- Movies
ಸಲಾರ್ ಚಿತ್ರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ನಟ: ವಿಲನ್ ಪಾತ್ರದಲ್ಲಿ ಖ್ಯಾತ ಹೀರೋ?
- Finance
ಭಾರತದಲ್ಲಿ ಮತ್ತೊಂದು ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್; ಎಷ್ಟು ದರ?
- News
ಬೆಂಗಳೂರಿಗಾಗಿ ಹೊಸ ಮಾಸ್ಟರ್ಪ್ಲ್ಯಾನ್ ಸಿದ್ಧಪಡಿಸುತ್ತಿರುವ ಬಿಡಿಎ
- Sports
ಸ್ಟೀವ್ ಸ್ಮಿತ್ ಮತ್ತೆ ನಾಯಕನಾಗುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಇಯಾನ್ ಚಾಪೆಲ್
- Lifestyle
ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ಈ ಆಹಾರಗಳನ್ನು ಸೇವಿಸುವುದನ್ನು ಮರೆಯಬೇಡಿ..
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
CES-2021: TCLನಿಂದ ಹೊಸದಾಗಿ ಎರಡು ಸ್ಮಾರ್ಟ್‌ಫೋನ್‌ಗಳ ಅನಾವರಣ!
ಪ್ರಸ್ತುತ ಮಾರುಕಟ್ಟೆಗೆ ಹಲವು ನೂತನ ಗ್ಯಾಡ್ಜೆಟ್ಸ್‌ಗಳು, ಭಿನ್ನ ಸ್ಮಾರ್ಟ್ ಪರಿಕರಗಳು, ಸ್ಮಾರ್ಟ್ ಡಿವೈಸ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಹೊಸ ಮಾದರಿಯ ಗ್ಯಾಡ್ಜೆಟ್ಸ್‌ಗಳ ಅನಾವರಣಕ್ಕೆ ಒಂದು ವೇದಿಕೆ ಅಗತ್ಯವಾಗಿರುತ್ತದೆ. ಆ ಪೈಕಿ ಈ ವರ್ಷದ 'ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ-2021' (Consumer Electronics Show (CES-2021) ಕಾರ್ಯಕ್ರಮದಲ್ಲಿ ಆಕರ್ಷಕ ಡಿವೈಸ್‌ಗಳು ಅನಾವರಣ ಆಗಿವೆ. ಇದೇ ಕಾರ್ಯಕ್ರಮದಲ್ಲಿ TCL ಸಂಸ್ಥೆಯು ಹೊಸ ಡಿವೈಸ್‌ಗಳನ್ನು ಪರಿಚಯಿಸಿದೆ.

ಹೌದು, TCL ಸಂಸ್ಥೆಯು CES-2021 ಕಾರ್ಯಕ್ರಮದಲ್ಲಿ ಹೊಸದಾಗಿ TCL 20 5G, TCL 20 SE ಫೋನ್‌ಗಳು, TCL ಮ್ಯೂವ್‌ಆಡಿಯೊ S600 TWS ಇಯರ್‌ಬಡ್ಸ್ ಡಿವೈಸ್‌ಗಳನ್ನು ಅನಾವರಣ ಮಾಡಿದೆ. ಅವುಗಳಲ್ಲಿ TCL 20 5G ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಈ ಫೋನ್ ಸ್ನಾಪ್ಡ್ರಾಗನ್ 690 SoC ನಿಂದ ನಿಯಂತ್ರಿಸಲ್ಪಡುತ್ತದೆ. TCL ಮ್ಯೂವ್‌ಆಡಿಯೊ S600 TWS ಇಯರ್‌ಬಡ್ಸ್ ಟ್ರೂಲೀ ಸ್ಟೀರಿಯೋ ಹೊಂದಿವೆ ಹಾಗೂ TCL 20 SE ಫೋನ್‌ಗಳು ಕ್ವಾಡ್ ಕ್ಯಾಮೆರಾ ಪಡೆದಿವೆ. ಉಳಿದಂತೆ TCL ಈ ಡಿವೈಸ್‌ಗಳು ಯಾವೆಲ್ಲಾ ಫೀಚರ್ಸ್ ಪಡೆದಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

TCL 20 5G - ಫೀಚರ್ಸ್‌ಗಳು
TCL 20 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧಾರಿತ ಟಿಸಿಎಲ್ ಯುಐನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಪೋನ್ 6.7-ಇಂಚಿನ ಪೂರ್ಣ-ಹೆಚ್‌ಡಿ + (1,080x2,400 ಪಿಕ್ಸೆಲ್‌ಗಳು) ಪಂಚ್ ಹೋಲ್ ವಿನ್ಯಾಸ ಪಡೆದಿದ್ದು, 20: 9 ಆಕಾರ ಅನುಪಾತ ಹೊಂದಿದೆ. ಹಾಗೆಯೇ 395 ಪಿಪಿ ಪಿಕ್ಸೆಲ್ ಸಾಂದ್ರತೆ ಇದ್ದು, 450 ನಿಟ್‌ಗಳ ಬ್ರೈಟ್ನೆಸ್ ಪಡೆದಿದೆ. ಇನ್ನು ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 690 SoC ನಿಂದ ಆಡ್ರಿನೊ 619L ಜಿಪಿಯು ಮತ್ತು 6 ಜಿಬಿ RAM ನೊಂದಿಗೆ ಜೋಡಿಯಾಗಿದೆ. ಮೈಕ್ರೊ ಎಸ್ಡಿ ಕಾರ್ಡ್ (256 ಜಿಬಿ ವರೆಗೆ) ಬಳಸಿ ಮತ್ತಷ್ಟು ವಿಸ್ತರಿಸುವ ಆಯ್ಕೆಯೊಂದಿಗೆ 256 ಜಿಬಿ ವರೆಗೆ ಶೇಖರಣಾ ಆಯ್ಕೆಗಳಿವೆ.

TCL 20 SE - ಫೀಚರ್ಸ್‌ಗಳು
TCL 20 SE ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ಆಧಾರಿತ ಟಿಸಿಎಲ್ ಯುಐನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ 6.82-ಇಂಚಿನ ಎಚ್‌ಡಿ + (720x1,640 ಪಿಕ್ಸೆಲ್‌ಗಳು) ಎಲ್‌ಸಿಡಿ ಡಿಸ್ಪ್ಲೇಯನ್ನು ವಾಟರ್‌ಡ್ರಾಪ್-ಶೈಲಿಯ ದರ್ಜೆಯೊಂದಿಗೆ ಮತ್ತು 263 ಪಿಪಿ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಹಾಗೆಯೇ ಅಡ್ರಿನೊ 610 ಜಿಪಿಯು ಮತ್ತು 4 ಜಿಬಿ RAM ನೊಂದಿಗೆ ಜೋಡಿಯಾಗಿರುವ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 460 SoC ನಿಂದ ನಿಯಂತ್ರಿಸಲ್ಪಡುತ್ತದೆ. ಮೈಕ್ರೊ ಎಸ್ಡಿ ಕಾರ್ಡ್ (256 ಜಿಬಿ ವರೆಗೆ) ಬಳಸಿ ಮತ್ತಷ್ಟು ವಿಸ್ತರಿಸುವ ಆಯ್ಕೆಯೊಂದಿಗೆ 128 ಜಿಬಿ ವರೆಗೆ ಶೇಖರಣಾ ಆಯ್ಕೆಗಳಿವೆ.

TCL 20 5G ಮತ್ತು TCL 20 SE ಗಳ ಬೆಲೆ ಎಷ್ಟು?
ಪ್ರೀಮಿಯಂ TCL 20 5G ಫೋನ್ ಬೆಲೆಯು ಯೂರೋ 299 (ಭಾರತದಲ್ಲಿ ಸರಿಸುಮಾರು 26,600ರೂ.). ಈ ಫೋನ್ ಮಿಸ್ಟ್ ಗ್ರೇ ಮತ್ತು ಪ್ಲ್ಯಾಸಿಡ್ ಬ್ಲೂ ಕಲರ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಹಾಗೆಯೇ TCL 20 SE ಬೆಲೆಯು ಯುರೋ 149 (ಭಾರತದಲ್ಲಿ ಸರಿಸುಮಾರು 13,200ರೂ.) ಈ ಫೋನ್ ಬ್ಲ್ಯಾಕ್ ಮತ್ತು ಅರೋರಾ ಗ್ರೀನ್ ಬಣ್ಣ ಆಯ್ಕೆಗಳಲ್ಲಿ ಸಿಗಲಿದೆ. ಸದ್ಯದಲ್ಲೇ ದೇಶಿಯ ಮಾರುಕಟ್ಟೆಗೆ ಎಂಟ್ರಿ ಆಗಲಿವೆ ಎನ್ನಲಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190