CES 2021 ಕಾರ್ಯಕ್ರಮದಲ್ಲಿ ಅನಾವರಣಗೊಂಡ ಅಚ್ಚರಿಯ AI ಸ್ಮಾರ್ಟ್‌ ಡಿವೈಸ್‌ಗಳ!

|

ಪ್ರಸ್ತುತ ಮಾರುಕಟ್ಟೆಗೆ ಹಲವು ವಿನೂತನ ಮಾದರಿಯ ಟೆಕ್‌ ಉತ್ಪನ್ನಗಳು ಲಗ್ಗೆ ಇಡುತ್ತಿದ್ದು, ಅವುಗಳಲ್ಲಿ ಬಹುತೇಕ ಡಿವೈಸ್‌ಗಳು AI ಹಾಗೂ ಬ್ಲೂಟೂತ್ ಆಧಾರಿತವಾಗಿವೆ. ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌ ಶೋ ಕಾರ್ಯಕ್ರಮವು ಹೊಸ ಸ್ಮಾರ್ಟ್‌ ಗ್ಯಾಡ್ಜೆಟ್ಸ್‌ಗಳಿಗೆ ವೇದಿಕೆಯಾಗಿದ್ದು, ಪ್ರತಿ ವರ್ಷವು ಅಚ್ಚರಿಯ ಡಿವೈಸ್‌ಗಳು ಅನಾವರಣ ಆಗುತ್ತವೆ. ಪ್ರಸಕ್ತ ಸಾಲಿನ ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌ ಶೋ-2021 ನೆನ್ನೆ(ಜ.14) ಮುಕ್ತಾಯವಾಗಿದ್ದು, ಈ ಕಾರ್ಯಕ್ರಮದಲ್ಲಿ ಗ್ರಾಹಕರು ಹುಬ್ಬೇರಿಸುವಂತಹ ಹಲವು ಉತ್ಪನ್ನಗಳು ಪರಿಚಿತವಾಗಿವೆ.

ಎಲೆಕ್ಟ್ರಾನಿಕ್ಸ್‍

ಈ ವರ್ಷದ ಕನ್ಸೂಮರ್ ಎಲೆಕ್ಟ್ರಾನಿಕ್ಸ್‍ ಕಾರ್ಯಕ್ರಮದಲ್ಲಿ AI ಆಧಾರಿತ ಗ್ಯಾಡ್ಜೆಟ್ಸ್‌ಗಳು ಹೆಚ್ಚು ಗಮನ ಸೆಳೆದಿದ್ದು, ಇವುಗಳೊಂದಿಗೆ ಹಲವು ಸ್ಮಾರ್ಟ್‌ಫೋನ್‌ ಹಾಗೂ ಲ್ಯಾಪ್‌ಟಾಪ್‌ಗಳು ಸಹ ಅನಾವರಣಗೊಂಡಿವೆ. ಆದ್ರೆ ಮುಖ್ಯವಾಗಿ ರೋಟೋಟ್ಸ್‌ ಹಾಗೂ ಕೃತಕ ಬುದ್ಧಿಮತ್ತೆ ಸಾಮರ್ಥ್ಯವುಳ್ಳ ಗೃಹ ಉಪಯೋಗಿ ಉತ್ಪನ್ನಗಳು ಅಚ್ಚರಿ ಅನಿಸಿವೆ. ಗ್ರಾಹಕರ ಕಲ್ಪನೆಗೂ ಮೀರಿದ ಟೆಕ್‌ ಆವಿಸ್ಕಾರಗಳು ಸೇರಿವೆ. ಹಾಗಾದರೇ ಪ್ರಸಕ್ತ ವರ್ಷದ ಕನ್ಸೂಮರ್ ಎಲೆಕ್ಟ್ರಾನಿಕ್ಸ್‍ ಕಾರ್ಯಕ್ರಮದಲ್ಲಿ ಹಮನ ಸೆಳೆದ ಕೆಲವು ಟೆಕ್‌ ಉತ್ಪನ್ನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಎಲ್‌ಜಿ ರೋಲೆಬಲ್ ಫೋನ್

ಎಲ್‌ಜಿ ರೋಲೆಬಲ್ ಫೋನ್

ಎಲ್‌ಜಿ ಕಂಪನಿಯು ಮಡಿಸಬಹುದಾದ ಸ್ಮಾರ್ಟ್‌ಫೋನ್‌ ಅನಾವರಣ ಮಾಡುವ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಸಂಸ್ಥೆಯು ಈ ಫೋನ್‌ ಅನ್ನು ರೋಲೆಬಲ್‌ ಎಂದು ಹೆಸರಿಸಿದೆ. ಇನ್ನು ಈ ಫೋನಿನ ಸ್ಕ್ರೀನ್‌ ರೀಸೈಜೇಬಲ್‌ ಆಗಿದ್ದು, ಸ್ಕ್ರೀನ್‌ ಗಾತ್ರ ಬದಲಿಸಬಹುದಾದ ಆಯ್ಕೆ ಪಡೆದಿದೆ.

ರೇಜರ್ ಸ್ಮಾರ್ಟ್ ಮಾಸ್ಕ್

ರೇಜರ್ ಸ್ಮಾರ್ಟ್ ಮಾಸ್ಕ್

ಕೊರೊನಾ ವೈರಸ್‌ ತಡೆಗೆ ಮಾಸ್ಕ್‌ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಷ್ಠಿತ ಟೆಕ್‌ ಕಂಪಿನಿಗಳು ಮಾಸ್ಕ್ ತಯಾರಿಸಿರುವುದು ನಿಮಗೆ ಗೊತ್ತೆ ಇದೆ. ಆ ಪೈಕಿ ಕನ್ಸೂಮರ್ ಎಲೆಕ್ಟ್ರಾನಿಕ್ಸ್‍ ಕಾರ್ಯಕ್ರಮದಲ್ಲಿ ರೇಜರ್ ಸ್ಮಾರ್ಟ್ ಮಾಸ್ಕ್ ಆಕರ್ಷಕ ಅನಿಸಿದ್ದು, ಇದು N95 ಮಾದರಿಯ ಮಾಸ್ಕ್‌ನಂತೆ ಕಾಣುವುದು. ಈ ಮಾಸ್ಕ್‌ ಧ್ವನಿ ಆಲಿಸುತ್ತದೆ. AI ಮೂಲಕ ಪ್ರತಿಕ್ರಿಯಿಸಬಲ್ಲದು ಎನ್ನಲಾಗಿದೆ.

ಆಂಪಿಯರ್ ಶವರ್ ಪವರ್

ಆಂಪಿಯರ್ ಶವರ್ ಪವರ್

ಸ್ನಾನ ಮಾಡುವಾಗ ಸಂಗೀತ ಆಲಿಸಬೇಕು ಎನ್ನುವ ಗ್ರಾಹಕರಿಗಾಗಿ ಆಂಪಿಯರ್ ಶವರ್ ಪವರ್ ಡಿವೈಸ್‌ ಹೆಚ್ಚು ಆಕರ್ಷಕ ಅನಿಸುತ್ತದೆ. ಈ ಡಿವೈಸ್‌ ಬ್ಲೂಟೂತ್ ಕನೆಕ್ಟಿವಿಟಿ ಪಡೆದಿದ್ದು, ಶವರ್‌ನಲ್ಲಿ ಮ್ಯೂಸಿಕ್ ಪ್ಲೇ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ AI-ಚಾಲಿತ ರೋಬೋಟ್

ಸ್ಯಾಮ್‌ಸಂಗ್ AI-ಚಾಲಿತ ರೋಬೋಟ್

ವರ್ಷದಿಂದ ವರ್ಷಕ್ಕೆ ಟೆಕ್‌ ವಲಯದಲ್ಲಿ ನೂತನ ಅಪ್‌ಡೇಟ್‌ನೊಂದಿಗೆ AI-ಆಧಾರಿತ ರೋಬೋಟ್‌ಗಳು ಲಗ್ಗೆ ಇಡುತ್ತಲೇ ಸಾಗಿವೆ. ಈ ನಿಟ್ಟಿನಲ್ಲಿ ಸ್ಯಾಮ್‌ಸಂಗ್ ಸಹ ಹೊಸ AI-ಚಾಲಿತ ರೋಬೋಟ್ JetBot 90 ರೋಬೋಟ್‌ ಅನ್ನು ಅನಾವರಣ ಮಾಡಿ ಗ್ರಾಹಕರ ಗಮನ ಸೆಳೆದೆ.

ಸ್ಮಾರ್ಟ್‌ ರೆಫ್ರಿಜರೇಟರ್‌ಗಳು

ಸ್ಮಾರ್ಟ್‌ ರೆಫ್ರಿಜರೇಟರ್‌ಗಳು

ಮನೆಯಲ್ಲಿ ಸಾಮಾನ್ಯ ರಚನೆಯ ಫ್ರಿಜ್ ವಿನ್ಯಾಸದಿಂದ ಬೇಸರಗೊಂಡಿದ್ದೀರಾ?..ಹಾಗಾದ್ರೇ ಸ್ಯಾಮ್‌ಸಂಗ್‌ನ ಹೊಸ ಬೆಸ್‌ಪೋಕ್ ನಾಲ್ಕು ಡೋರ್‌ಗಳ ಫ್ರಿಜ್‌ ನಿಮ್ಮನ್ನು ಆಕರ್ಷಿಸಲಿದೆ. CES 2021 ಕಾರ್ಯಕ್ರಮದಲ್ಲಿ ಅನಾವರಣಗೊಂಡ ಈ ನಾಲ್ಕು ಡೋರ್ ಫ್ರಿಜ್, ಭಿನ್ನ ಬಣ್ಣಗಳ ಆಯ್ಕೆಯನ್ನು ಪಡೆದಿದೆ.

ಲೆನೊವೊ ಎಆರ್ ಕನ್ನಡಕ

ಲೆನೊವೊ ಎಆರ್ ಕನ್ನಡಕ

ಥಿಂಕ್ ರಿಯಾಲಿಟಿ ಎ 3 ಎಆರ್-ಚಾಲಿತವಾಗಿದ್ದು 1080p ರೆಸಲ್ಯೂಶನ್ ಹೊಂದಿದೆ. ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ ಎಕ್ಸ್‌ಆರ್ 1 ಚಿಪ್‌ನಿಂದ ನಡೆಸಲ್ಪಡುವ ಈ ಕನ್ನಡಕವು ಒಂದು ಜೋಡಿ ಮೀನು-ಕಣ್ಣಿನ ಕ್ಯಾಮೆರಾಗಳನ್ನು ಸಹ ಹೊಂದಿದೆ. ಕನ್ನಡಕವನ್ನು ಪಿಸಿ ಅಥವಾ ಆಯ್ದ ಕೆಲವು ಮೊಟೊರೊಲಾ ಫೋನ್‌ಗಳಿಗೆ ಕೂಡಿಸಬಹುದು.

Best Mobiles in India

English summary
CES 2021: These Few Cool AI-Powered Devices That May Come in 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X