CES 2024: ಹೆಚ್‌ಪಿಯಿಂದ ಹೊಸ ಪಿಸಿ, ಮಾನಿಟರ್... ರೋಮಾಂಚಕ ಫೀಚರ್ಸ್!
CES 2024 ಇಂದಿನಿಂದ ಆರಂಭ ಆಗಿದೆ. ಈ ಕಾರ್ಯಕ್ರಮದಲ್ಲಿ ಟೆಕ್ ದೈತ್ಯರು ತಮ್ಮ ಸಾಮರ್ಥ್ಯ ಏನು ಅನ್ನೋದನ್ನು ಈ ವೇಳೆ ತೋರಿಸುವ ಕೆಲಸ ಮಾಡುತ್ತಿದ್ದು, ಈ ಆರೋಗ್ಯಕರ ಸ್ಪರ್ಧೆಯ ಮೂಲಕ ಜನರಿಗೆ ಭಿನ್ನ ಗ್ಯಾಜೆಟ್‌ಗಳು ಲಭ್ಯವಾಗುವಂತೆ ಮಾಡುತ್ತಿವೆ. ಅದರಂತೆ ಹೆಚ್‌ಪಿ (HP) ವಿಶೇಷ ಫೀಚರ್ಸ್ ಇರುವ ಹೊಸ ಹೊಸ ಡಿವೈಸ್‌ಗಳ ಬಗ್ಗೆ ಘೋಷಣೆ ಮಾಡಿದೆ.
ಹೌದು, ಹೆಚ್‌ಪಿ ಲಾಸ್ ವೇಗಾಸ್‌ನಲ್ಲಿ ಹೊಸ ಪಿಸಿ ಗಳು ಮತ್ತು ಮಾನಿಟರ್‌ಗಳನ್ನು ಪರಿಚಯಿಸಿದೆ. ಇದರೊಂದಿಗೆ OMEN ಮತ್ತು HyperX ಬ್ರ್ಯಾಂಡ್‌ಗಳಾದ್ಯಂತ ತನ್ನ ಅತ್ಯಂತ ವೈಯಕ್ತಿಕಗೊಳಿಸಿದ ಗೇಮಿಂಗ್ ಪೋರ್ಟ್‌ಫೋಲಿಯೊವನ್ನು ಅನಾವರಣಗೊಳಿಸಿದೆ. OMEN ಟ್ರಾನ್ಸ್‌ಸೆಂಡ್ 14 ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಸುಧಾರಿತ OLED ಡಿಸ್ಪ್ಲೇ, ಸ್ಲಿಮ್ ಬಾಡಿ ಮತ್ತು ಉನ್ನತ ದರ್ಜೆಯ ಇಂಟರ್ನಲ್‌ಗಳೊಂದಿಗೆ ಘೋಷಣೆ ಮಾಡಿದೆ. ಹಾಗಿದ್ರೆ, ಹೆಚ್‌ಪಿಯಿಂದ ಅನಾವರಣ ಆದ ಡಿವೈಸ್‌ಗಳು ಯಾವುವು?, ಅವುಗಳ ಫೀರ್ಸ್ ಏನು ಅನ್ನೋದನ್ನು ತಿಳಿಯಿರಿ.

ಹೆಚ್‌ಪಿ ಇದೀಗ ಬಳಕೆದಾರರ ಡಿಜಿಟಲ್ ಅನುಭವವನ್ನು ಹೆಚ್ಚಿಸಲು ವಿನ್ಯಾಸಗೊಳಿಸಿದ ಪಿಸಿಗಳು, ಮಾನಿಟರ್‌ಗಳು ಮತ್ತು ಹೆಚ್ಚುವರಿ ಪೆರಿಫೆರಲ್‌ಗಳ ಇತ್ತೀಚಿನ ಪೋರ್ಟ್‌ಫೋಲಿಯೊವನ್ನು ಪರಿಚಯಿಸಿದೆ ಎಂದು ವರದಿಯಾಗಿದೆ. ಕಂಪನಿಯು ಹೆಚ್‌ಪಿ ಸ್ಪೆಕ್ಟರ್ x360 2-ಇನ್-1 ಲ್ಯಾಪ್‌ಟಾಪ್‌ಗಳನ್ನು (HP Specter x360 2-in-1 Laptop) ಇನ್‌ಬಿಲ್ಟ್ ಎಐ ತಂತ್ರಜ್ಞಾನದೊಂದಿಗೆ (AI technology) ಪರಿಚಯಿಸಿದೆ. ಇದು 14 ಇಂಚಿನ ಮತ್ತು 16 ಇಂಚಿನ ಎರಡು ಗಾತ್ರಗಳಲ್ಲಿ ಲಭ್ಯ ಇದೆ. ಜೊತೆಗೆ ಹೆಚ್‌ಪಿ ಸರಣಿ 5 ಮಾನಿಟರ್‌ಗಳನ್ನು 24, 27 ಮತ್ತು 32 ಇಂಚಿನ ಮೂರು ಗಾತ್ರಗಳಲ್ಲಿ ಅನಾವರಣ ಮಾಡಿದೆ.
ಈ ಸಂಬಂಧ ಪರ್ಸನಲ್ ಸಿಸ್ಟಮ್ಸ್ ಕನ್ಸ್ಯೂಮರ್ ಸೊಲ್ಯೂಷನ್ಸ್‌ನ ಹಿರಿಯ ಉಪಾಧ್ಯಕ್ಷ ಮತ್ತು ವಿಭಾಗದ ಅಧ್ಯಕ್ಷ ಸ್ಯಾಮ್ಯುಯೆಲ್ ಚಾಂಗ್ ಅವರು ಮಾಹಿತಿ ನೀಡಿದ್ದು, ಹೆಚ್‌ಪಿಯ ಹೊಸ ತಂತ್ರಜ್ಞಾನಗಳು ನಮಗೆ ಎಂದಿಗಿಂತಲೂ ಹೆಚ್ಚು ವೈಯಕ್ತೀಕರಿಸಲು ಅನುವು ಮಾಡಿಕೊಡುವ ಪರಿಹಾರಗಳನ್ನು ನೀಡುತ್ತವೆ. ಇವು ಎಐ ನಂತಹ ಗೇಮ್ ಚೇಂಜರ್ ನಾವೀನ್ಯತೆಗಳ ಲಾಭವನ್ನು ಪಡೆದುಕೊಳ್ಳುತ್ತವೆ. ಜೊತೆಗೆ ತಂತ್ರಜ್ಞಾನವು ನಮ್ಮನ್ನು ಮುಂದಕ್ಕೆ ಚಲಿಸುವಂತೆ ಮಾಡುತ್ತಿದೆ ಎಂದಿದ್ದಾರೆ.

ಹೆಚ್‌ಪಿ ಪರಿಚಯಿಸಿದ ಇತರೆ ಗ್ಯಾಜೆಟ್‌ಗಳಿವು: ಈ ಪಿಸಿ ಗಳ ಜೊತೆಗೆ ಹೆಚ್‌ಪಿ 690 ರೀಚಾರ್ಜಬಲ್ ವೈರ್‌ಲೆಸ್ ಮೌಸ್, 430 ಪ್ರೊಗ್ರಾಮೆಬಲ್ ವೈರ್‌ಲೆಸ್ ಕೀಪ್ಯಾಡ್, ಯುಎಸ್‌ಬಿ ಟೈಪ್-ಸಿ ಟ್ರಾವೆಲ್ ಹಬ್ G3, 400 ಬ್ಯಾಕ್‌ಲಿಟ್ ವೈರ್ಡ್ ಕೀಬೋರ್ಡ್, ಪಾಲಿ ವಾಯೇಜರ್ ಫ್ರೀ 20 ವೈರ್‌ಲೆಸ್ ಇಯರ್‌ಬಡ್ಸ್, 960 ಎರ್ಗೊನೊಮಿಕ್ ವೈರ್‌ಲೆಸ್ ಕೀಬೋರ್ಡ್ ಅನ್ನು ಘೋಷಣೆ ಮಾಡಿದೆ.
ಇನ್ನು ಹೆಚ್‌ಪಿ ತನ್ನ OMEN ಟ್ರಾನ್ಸ್‌ಸೆಂಡ್ 16.1 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು 4K 240Hz OLED ಡಿಸ್‌ಪ್ಲೇ ಆಯ್ಕೆಯ ಜೊತೆಗೆ ಅದರ OMEN 16.1 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್ ಮತ್ತು ವಿಕ್ಟಸ್ 16.1 ಇಂಚಿನ ಗೇಮಿಂಗ್ ಲ್ಯಾಪ್‌ಟಾಪ್‌ನ ಜೊತೆಗೆ ನವೀಕರಿಸಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಇಂಟೆಲ್ ಕೋರ್ i7 HX ಪ್ರೊಸೆಸರ್‌ಗಳೊಂದಿಗೆ (Intel Core i7 HX processor) ನವೀಕರಿಸಲಾಗಿದೆ.

ಇದರ ಜೊತೆಗೆ HyperX ಬ್ರ್ಯಾಂಡ್‌ಗಳ ಅಡಿಯಲ್ಲಿ ಹೆಚ್‌ಪಿ ಕ್ಲೌಡ್ ಮಿನಿ ಹೆಡ್‌ಸೆಟ್‌ಗಳು ಮತ್ತು ಕ್ಲಚ್ ಟ್ಯಾಂಟೊ ಮಿನಿ ವೈರ್ಡ್ ಕಂಟ್ರೋಲರ್, ಹೈಪರ್‌ಎಕ್ಸ್ ಅಲಾಯ್ ರೈಸ್ ಕೀಬೋರ್ಡ್, ಹೈಪರ್‌ಎಕ್ಸ್ ಪಲ್ಸ್‌ಫೈರ್ ಹ್ಯಾಸ್ಟ್ 2 ಮಿನಿ ಗೇಮಿಂಗ್ ಮೌಸ್ ಮತ್ತು ಹೈಪರ್‌ಎಕ್ಸ್ ಬ್ಯಾಕ್‌ಪ್ಯಾಕ್ ಫ್ಯಾಮಿಲಿ ಬಗ್ಗೆಯೂ ಘೋಷಣೆ ಮಾಡಲಾಗಿದೆ. ಈ ಮೂಲಕ ಹೆಚ್‌ಪಿ ಬಂಡಲ್ ಗಟ್ಟಲೇ ವಿಶೇಷವಾದ ಹಾಗೂ ಆಕರ್ಷಕವಾಗಿ ಡಿವೈಸ್‌ಗಳನ್ನು ಜನರ ಬಳಕೆಗೆ ನೀಡಲಿದೆ.


Click it and Unblock the Notifications








