CES 2024: ಎಐ ಚಿಪ್‌ನಿಂದ ಟ್ರಾನ್ಫರೆಂಟ್ ಡಿಸ್‌ಪ್ಲೇವರೆಗೆ; ಅಚ್ಚರಿಯ ಟಾಪ್ 5 ಗ್ಯಾಜೆಟ್‌ಗಳಿವು!
CES 2024 ಆರಂಭ ಆಗಿದ್ದು, ವರ್ಷದ ಅತಿ ದೊಡ್ಡ ಇನ್ ಪರ್ಸನ್ ಟೆಕ್ ಈವೆಂಟ್ ಇದಾಗಿದೆ. ಇಂದಿನಿಂದ ಲಾಸ್ ವೇಗಾಸ್‌ನಲ್ಲಿ ಈ ಕಾರ್ಯಕ್ರಮ ಆರಂಭ ಆಗಿದ್ದು, ಇದೇ ತಿಂಗಳ 12 ರವರೆಗೆ ಮುಂದುವರಿಯುತ್ತದೆ. ಈ ವೇಳೆ ವಿವಿಧ ರೀತಿಯ ಸ್ಮಾರ್ಟ್ ಗ್ಯಾಜೆಟ್‌ಗಳು ಅನಾವರಣ ಆಗಲಿವೆ.
ಹೌದು, CES 2024 ನಲ್ಲಿ ಸ್ಯಾಮ್‌ಸಂಗ್, ಎಲ್‌ಜಿ, ಹೆಚ್‌ಪಿ (Samsung, LG, HP) ಸೇರಿದಂತೆ ಅನೇಕ ಟೆಕ್ ದೈತ್ಯರು ವಿಶೇಷವಾದ ಹೊಸ ಹೊಸ ಸ್ಮಾರ್ಟ್‌ಗ್ಯಾಜೆಟ್‌ಗಳನ್ನು ಅನಾವರಣ ಮಾಡುತ್ತಿದ್ದಾರೆ. ಈ ನಡುವೆ ವಿಶೇಷದಲ್ಲಿ ವಿಶೇಷ ಎನಿಸಿಕೊಂಡ ಪ್ರಮುಖ ಐದು ಸ್ಮಾರ್ಟ್ ಅನ್ವೇಷಣೆಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಾಗಿದೆ. ಇವು ಮುಂದಿನ ತಲೆಮಾರಿಗೆ ತಕ್ಕ ಫೀಚರ್ ಆಯ್ಕೆ ಪಡೆದಿದ್ದು, ಬಳಕೆದಾರರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಸಾಮರ್ಥ್ಯ ಪಡೆದಿವೆ. ಹಾಗಿದ್ರೆ, ತಡಯಾಕೆ ಬನ್ನಿ ಇವುಗಳ ಬಗ್ಗೆ ತಿಳಿಯೋಣ.

ಎಲ್‌ಜಿಯಿಂದ ಅದೃಶ್ಯ ಟಿವಿ: ಈ ವಿಷಯ ಕೇಳಿ ನಿಮಗೆ ಅಚ್ಚರಿ ಎನಿಸಬಹುದು. ಆದರೆ ಇದು ಸತ್ಯ. ಗ್ರಾಹಕ ಎಲೆಕ್ಟ್ರಾನಿಕ್ಸ್ ದೈತ್ಯ ಎಲ್‌ಜಿ ವಿಶ್ವದ ಮೊದಲ ವೈರ್‌ಲೆಸ್ ಟ್ರಾನ್ಫರೆಂಟ್ OLED ಟಿವಿಯನ್ನು (LG Wireless transfer OLED TV) ಘೋಷಣೆ ಮಾಡಿದೆ. 77 ಇಂಚಿನ ಡಿಸ್‌ಪ್ಲೇ ಆಯ್ಕೆ ಇದ್ದು, ಟಿವಿಯನ್ನು ಆಫ್ ಮಾಡಿದಾಗ ಅಗೋಚರವಾಗಿರುತ್ತದೆ. ಅದಾಗ್ಯೂ ಈ ಡಿವೈಸ್ ಅನ್ನು ಸಾಂಪ್ರದಾಯಿಕ ಕಪ್ಪು ಬಣ್ಣಕ್ಕೂ ಬದಲಾಯಿಸುವ ಆಯ್ಕೆ ಸಹ ಇದೆಯಂತೆ.
ಹ್ಯುಂಡೈ ಕಾರುಗಳಿಗೆ ಸ್ಯಾಮ್‌ಸಂಗ್‌ನಿಂದ ಎಐ ಸೌಲಭ್ಯ: ಎಲ್ಲಾ ಕಿಯಾ ಮತ್ತು ಹ್ಯುಂಡೈ ವಾಹನಗಳಿಗೆ ಹೋಮ್-ಟು-ಕಾರ್ ಮತ್ತು ಕಾರ್-ಟು-ಹೋಮ್ (Home-to-car and car-to-home) ಸೇವೆಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಸ್ಯಾಮ್‌ಸಂಗ್ ಮತ್ತು ಹ್ಯುಂಡೈ (Samsung and Hyundai) ಕೈ ಜೋಡಿಸಿವೆ. ಬೆಂಬಲಿತ ಕಾರುಗಳಿಗೆ ಸ್ಮಾರ್ಟ್ ಥಿಂಗ್ಸ್ ಪ್ಲಾಟ್‌ಫಾರ್ಮ್ ಅನ್ನು ತರಲು ಕಂಪನಿಗಳು ಮುಂದಾಗಿದ್ದು, ಇದು ಬಳಕೆದಾರರಿಗೆ ತಮ್ಮ ಕಾರಿನ ತಾಪಮಾನವನ್ನು ಹೊಂದಿಸಲು, ಕಿಟಕಿಗಳನ್ನು ತೆರೆಯಲು ಮತ್ತು ಮುಚ್ಚಲು ಹಾಗೂ ಚಾರ್ಜಿಂಗ್ ಸ್ಟೇಟಸ್ ಅನ್ನು ಪರಿಶೀಲನೆ ಮಾಡಲು ಇದನ್ನು ಬಳಕೆ ಮಾಡಲಾಗುತ್ತದೆ.

ಆಸುಸ್ ROG ಫೋನ್ 8 ಸರಣಿ: ಈ ಕಾರ್ಯಕ್ರಮದಲ್ಲಿ ಆಸುಸ್ ತನ್ನ ಗೇಮಿಂಗ್ ಆಧಾರಿತ ROG ಫೋನ್ 8 ಸರಣಿಯನ್ನು (Asus ROG Phone 8 Series) ಅನಾವರಣ ಮಾಡಿದೆ. ಈ ಫೋನ್‌ಗಳು ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್ ಬಲ ಪಡೆದುಕೊಂಡಿದ್ದು, ನೀರು ಮತ್ತು ಧೂಳಿನ ರಕ್ಷಣೆ ಹಿನ್ನೆಲೆ IP68 ರೇಟಿಂಗ್ ಪಡೆದಿವೆ. ಅಷ್ಟೇ ಅಲ್ಲದೆ ಈ ಫೋನ್‌ಗಳು ಹಗುರವಾಗಿದ್ದು, ಕಳೆದ ಜನ್ ಫೋನ್‌ಗಳಿಗೆ ಹೋಲಿಸಿದರೆ ಬ್ಯಾಟರಿ ಸಾಮರ್ಥ್ಯ 500 mAh ರಷ್ಟು ಕಡಿಮೆ ಆಗಿದೆ.
ಎನ್ವಿಡಿಯಾ ಜಿಫೋರ್ಸ್ RTX 40 ಸೂಪರ್ ಸರಣಿ GPU: ಎನ್ವಿಡಿಯಾ ತನ್ನ ಹೊಸ ಜಿಫೋರ್ಸ್ RTX 4080 ಸೂಪರ್ ಚಿಪ್ ಅನ್ನು ಈ ವೇಳೆ ಘೋಷಣೆ ಮಾಡಿದೆ. ಇದು ಹೆಚ್ಚು ಗೇಮಿಂಗ್ ಮತ್ತು ಉತ್ಪಾದಕ ಎಐ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ತಿಳಿದುಬಂದಿದ್ದು, ಸ್ಥಿರವಾದ ವಿಡಿಯೋ ಪ್ರಸರಣದೊಂದಿಗೆ ವಿಡಿಯೋಗಳನ್ನು ಕ್ರಿಯೇಟ್ ಮಾಡುವಲ್ಲಿ ಹಿಂದಿನ ಜನ್‌ಗಿಂತ 1.5x ವೇಗವನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಇದು ಜನವರಿ 31 ರಿಂದ ಲಭ್ಯವಿರುತ್ತದೆ.

ವೋಕ್ಸ್‌ವ್ಯಾಗನ್ ಕಾರುಗಳಿಗೆ ಚಾಟ್‌ಜಿಪಿಟಿ: ಜರ್ಮನ್ ವಾಹನ ತಯಾರಕ ವೋಕ್ಸ್‌ವ್ಯಾಗನ್ (Volkswagen) CES 2024 ರಲ್ಲಿ IDA ವಾಯ್ಸ್ ಅಸಿಸ್ಟೆಂಟ್ ಆಯ್ಕೆಯ ಜೊತೆಗೆ ತನ್ನ ವಾಹನಗಳಿಗೆ ಚಾಟ್‌ಜಿಪಿಟಿ (chatGPT) ಸೌಲಭ್ಯ ನೀಡುವುದಾಗಿ ತಿಳಿಸಿದೆ. ವೋಕ್ಸ್‌ವ್ಯಾಗನ್ ಹಾಗೂ ಚಾಟ್‌ಜಿಪಿಟಿಯ ಕಾರ್ಯತಂತ್ರವು 2024 ರ ಎರಡನೇ ತ್ರೈಮಾಸಿಕದಲ್ಲಿ ಲೈವ್ ಆಗಲಿದೆ. ಈ ಸೌಲಭ್ಯ ID.7, ID.4, ID.5, ID.3 ಜೊತೆಗೆ ಹೊಸ ಟಿಗುವಾನ್, ಪಾಸಾಟ್ ಸೇರಿದಂತೆ ಕಂಪನಿಯ ಇವಿ ಶ್ರೇಣಿಗೆ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ಆದರೆ ಈ ಸೇವೆ ಮೊದಲು ಯುರೋಪ್ ಬಳಕೆದಾರರಿಗೆ ಮಾತ್ರ ಲಭ್ಯ ಇರಲಿದೆಯಂತೆ.


Click it and Unblock the Notifications








