CES 2024: ಸ್ಯಾಮ್‌ಸಂಗ್‌ನಿಂದ ಡ್ಯುಯಲ್ ಫೋಲ್ಡಿಂಗ್ ಸಾಮರ್ಥ್ಯದ ಫೋಲ್ಡಬಲ್ ಡಿಸ್‌ಪ್ಲೇ ಅನಾವರಣ!
CES 2024 ನಲ್ಲಿ ನಿತ್ಯವೂ ವಿವಿಧ ರೀತಿಯ ಹೊಸ ಹೊಸ ಸ್ಮಾರ್ಟ್ ಡಿವೈಸ್‌ಗಳು ಅನಾವರಣ ಆಗುತ್ತಿವೆ. ಅವುಗಳ ಸಾಲಿನಲ್ಲಿ ಸ್ಯಾಮ್‌ಸಂಗ್ ಡಿವೈಸ್‌ಗಳು ಸಹ ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ. ಅಂದರೆ ಸ್ಯಾಮ್‌ಸಂಗ್ (Samsung) ಭಿನ್ನ ರೀತಿಯ ಗ್ಯಾಜೆಟ್‌ಗಳನ್ನು ಈ ವೇಳೆ ಘೋಷಣೆ ಮಾಡಿದೆ.
ಹೌದು, ಸ್ಯಾಮ್‌ಸಂಗ್ ಲಾಸ್ ವೇಗಾಸ್‌ನಲ್ಲಿ ನಡೆಯುತ್ತಿರುವ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ ಪ್ರದರ್ಶನದಲ್ಲಿ ರೋಲಬಲ್ ಫ್ಲೆಕ್ಸ್ ಡಿಸ್ಪ್ಲೇಯನ್ನು (Rollable flex display) ಅನಾವರಣ ಮಾಡಿದೆ. ಈ ಡಿಸ್‌ಪ್ಲೇ ಅದರ ಗಾತ್ರಕ್ಕಿಂತ ಐದು ಪಟ್ಟು ವಿಸ್ತರಿಸುವ ಸಾಮರ್ಥ್ಯದೊಂದಿಗೆ ಬರುತ್ತದೆ ಅನ್ನೋದೆ ವಿಶೇಷ. ಜೊತೆಗೆ ವಿಶೇಷ ತಂತ್ರಜ್ಞಾನಗಳನ್ನು ಇದು ಹೊಂದಿದೆ. ಹಾಗಿದ್ರೆ, ಇದನ್ನು ಎಲ್ಲಿ ಬಳಕೆ ಮಾಡಲಾಗುತ್ತದೆ?, ಇದರ ವಿಶೇಷತೆ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಸ್ಯಾಮ್‌ಸಂಗ್ ರೋಲಬಲ್ ಫ್ಲೆಕ್ಸ್ ಡಿಸ್‌ಪ್ಲೇ: ಸ್ಯಾಮ್‌ಸಂಗ್ CES 2024 ರಲ್ಲಿ ಕ್ರಾಂತಿಕಾರಿ ಫ್ಲೆಕ್ಸ್ ಇನ್ ಆಂಡ್ ಔಟ್ ಪರಿಕಲ್ಪನೆಯನ್ನು (Flex in and out concept) ಅನಾವರಣಗೊಳಿಸುವ ಮೂಲಕ ಫೋಲ್ಡ್ ಮಾಡಬಹುದಾದ ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಿದೆ. ಈ ಫೋನ್ ಎರಡೂ ಬದಿಗಳಿಂದಲೂ ಸಹ ಬಾಗಬಹುದಾದ ಸೌಲಭ್ಯ ಪಡೆದಿದೆ. ಇದಕ್ಕೆ ಕಾರಣವಾಗಿರುವುದು ಈ ವಿಶೇಷ ಡಿಸ್‌ಪ್ಲೇ.
ಈ ಫ್ಯೂಚರಿಸ್ಟಿಕ್ ಡಿಸ್ಪ್ಲೇಯ ಬಾಳಿಕೆಯನ್ನು ಖಚಿತಪಡಿಸಿಕೊಳ್ಳಲು ವಿಭಿನ್ನ ಪರಿಸರದಲ್ಲಿ ಸ್ಯಾಮ್‌ಸಂಗ್ ಕಠಿಣ ಪರೀಕ್ಷೆಯನ್ನು ಮಾಡುತ್ತಿದೆ. ಈ ವಿಶೇಷ ಡಿಸ್‌ಪ್ಲೇ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಗ್ಯಾಲಕ್ಸಿ Z ಫೋಲ್ಡ್ 5 (Galaxy Z Flip 5 and Galaxy Z Fold 5) ಗಿಂತ ಭಿನ್ನವಾಗಿದೆ.
360 ಡಿಗ್ರಿ ವರೆಗೂ ಫೋಲ್ಡ್ ಮಾಡಬಹುದು: ಈ ಫ್ಲೆಕ್ಸ್ ಇನ್ ಆಂಡ್ ಔಟ್ ಡಿವೈಸ್ 360 ಡಿಗ್ರಿ ಫೋಲ್ಡಿಂಗ್ ಫ್ಲೆಕ್ಸಿಬಲ್ ಡಿಸ್‌ಪ್ಲೇಯನ್ನು ಬೆಂಬಲಿಸಲಿದ್ದು, ನವೀನ ಹಿಂಜ್ ತಂತ್ರಜ್ಞಾನದೊಂದಿಗೆ ಬಳಕೆದಾರರ ಅನುಭವವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಈ ಮೂಲಕ ಜಾಗತಿಕ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಅತ್ಯಧಿಕ ಮಾರುಕಟ್ಟೆ ಪಾಲನ್ನು ಹೊಂದುವ ಕೆಲಸ ಮಾಡುತ್ತಿದೆ.

ಯಾಕೆಂದರೆ 2018 ರಲ್ಲಿ ಮೊದಲ ಫೋಲ್ಡಬಲ್ ಡಿಸ್‌ಪ್ಲೇ ಫೋನ್ ಅನ್ನು ಬಿಡುಗಡೆ ಮಾಡಿದ ನಂತರ, ಕಂಪನಿಯು ಫ್ಲೆಕ್ಸ್ ಇನ್ ಮತ್ತು ಔಟ್‌ನ ವಿಶಿಷ್ಟ ವಿನ್ಯಾಸ ಮತ್ತು ಸಾಮರ್ಥ್ಯಗಳನ್ನು ಆವಿಷ್ಕರಿಸುವ ತನ್ನ ಬದ್ಧತೆಯನ್ನು ಹೆಚ್ಚಿಗೆ ಮಾಡಿಕೊಂಡಿದೆ. ಹಾಗೆಯೇ ಇದು 20 ಡಿಗ್ರಿ ಸೆಲ್ಸಿಯಸ್‌ನಿಂದ 60 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನವನ್ನು ತಡೆಯುತ್ತದೆ ಎನ್ನಲಾಗಿದ್ದು, ಈ ದೃಢವಾದ ಪರೀಕ್ಷೆಯು ವಿವಿಧ ಪರಿಸರಗಳಿಗೆ ಡಿವೈಸ್ ಹೇಗೆ ಹೊಂದಿಕೊಳ್ಳುತ್ತದೆ ಅನ್ನೋದನ್ನು ಖಾತ್ರಿಗೊಳಿಸುತ್ತದೆ.
ಗ್ರಾಹಕ ಎಲೆಕ್ಟ್ರಾನಿಕ್ ಪ್ರದರ್ಶನದಲ್ಲಿ ಪ್ರದರ್ಶನ ಮಾಡಲಾದ ರೋಲಬಲ್ ಫ್ಲೆಕ್ಸ್ ಡಿಸ್ಪ್ಲೇ ಅದರ ಗಾತ್ರಕ್ಕಿಂತ ಐದು ಪಟ್ಟು ವಿಸ್ತರಿಸುವ ಸಾಮರ್ಥ್ಯದೊಂದಿಗೆ ಬರುತ್ತದೆ. ಈ ನಡುವೆ ಸ್ಯಾಮ್‌ಸಂಗ್ ವೈರ್‌ಲೆಸ್ ಇಯರ್‌ಫೋನ್ ಬಗ್ಗೆಯೂ ಲೇವಡಿ ಮಾಡಿದೆ. ಇದು ಮುಂಬರುವ ಫೋಲ್ಡ್ ಮಾಡಬಹುದಾದ ಡಿವೈಸ್‌ಗಳೊಂದಿಗೆ ಸಂಯೋಜಿಸಲು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಸ್ಯಾಮ್‌ಸಂಗ್ ಟೆಕ್ ವಿಭಾಗದಲ್ಲಿ ದೈತ್ಯ ಕಂಪೆನಿ ಅನ್ನೋ ಹೆಸರನ್ನು ಉಳಿಸಿಕೊಂಡಿದೆ.

ಈ ನಡುವೆ ಎಐ ಸ್ಯಾಮ್‌ಸಂಗ್ ಎಐ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. NQ8 ಎಐ ಜನ್3 ಪ್ರೊಸೆಸರ್ ಅನ್ನು ಹೊಂದಿರುವ ನಿಯೋ QLED 8K QN900D ಆಟೋಮ್ಯಾಟಿಕ್ ಆಗಿ ಕಂಟೆಂಟ್ ಅನ್ನು 8K ಗುಣಮಟ್ಟಕ್ಕೆ ಹೆಚ್ಚಿಸುತ್ತದೆ. ಈ ಎಐ ಮೋಷನ್ ಎನ್ಹಾನ್ಸರ್ ಪ್ರೊ ಮೂಲಕ ಚಿತ್ರಗಳನ್ನು ಇನ್ನಷ್ಟು ವರ್ಣರಂಜಿತವನ್ನಾಗಿ ಮಾಡುತ್ತದೆ. ಹಾಗೆಯೇ ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ ಪ್ರೊನೊಂದಿಗೆ ಆಲಿಸುವ ಅನುಭವವನ್ನು ಹೆಚ್ಚಿಗೆ ಮಾಡುವ ಕೆಲಸ ಮಾಡುತ್ತಂತೆ.

ಇದರೊಂದಿಗೆ ಸ್ಯಾಮ್‌ಸಂಗ್ 150 ಇಂಚಿನ ಡಿಸ್ಪ್ಲೇ ಹೊಂದಿರುವ ವೈರ್‌ಲೆಸ್ ಪ್ರೊಜೆಕ್ಟರ್ ಪ್ರೀಮಿಯರ್ 8K ಅನ್ನು ಅನಾವರಣಗೊಳಿಸಿದೆ. ಇದು ಮನೆಯ ಸೌಕರ್ಯದಲ್ಲೇ ಸಿನಿಮೀಯ ಅನುಭವವನ್ನು ನೀಡುತ್ತದೆ. ಜೊತೆಗೆ ಮ್ಯೂಸಿಕ್ ಫ್ರೇಮ್ ಸ್ಪೀಕರ್ ಕ್ಯೂ ಸಿಂಫನಿ ತಂತ್ರಜ್ಞಾನವನ್ನು ಬಳಸಿಕೊಂಡು ಸೌಂಡ್‌ಬಾರ್ ಅನ್ನು ಸಹ ಘೋಷಣೆ ಮಾಡಿದೆ. ಈ ಮೂಲಕ ತಲ್ಲೀನಗೊಳಿಸುವ ಆಡಿಯೊ ಅನುಭವಕ್ಕಾಗಿ ಪುಷ್ಟೀಕರಿಸಿದ ಬೇಸ್‌ಮತ್ತು ಸರೌಂಡ್ ಸೌಂಡ್ ಅನ್ನು ಪಡೆಯಬಹುದಾಗಿದೆ.


Click it and Unblock the Notifications








