Home
ಸುದ್ದಿಜಾಲ

ಚಂದ್ರಯಾನ-3: ಮುಂದಿನ 14 ದಿನಗಳ ಕಾಲ ಚಂದ್ರನ ಅಂಗಳದಲ್ಲಿ 'ರೋವರ್‌' ಏನು ಮಾಡುತ್ತೆ?

ಚಂದ್ರಯಾನ-3 ನೌಕೆಯು ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್‌ ಲ್ಯಾಂಡ್‌ ಆಗಿ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ.

ಹೌದು, ಭಾರತೀಯರ ಮಹತ್ತರ ಕನಸಾಗಿರುವ ಚಂದ್ರಯಾನ-3 ನಿರೀಕ್ಷೆಯಂತೆ ಭಯಾನಕ 15 ನಿಮಿಷಗಳನ್ನು ಯಶಸ್ವಿಯಾಗಿ ಪೂರೈಸಿ ಸಾಫ್ಟ್‌ ಲ್ಯಾಂಡ್‌ ಆಗಿದೆ. ಇಸ್ರೊ ಈ ಸಾಧನೆ ದೇಶದ ಕೀರ್ತಿಪತಾಕೆಯನ್ನು ಮುಗಿಲೆತ್ತರದಾಚೆಗೂ ಹಾರಿಸಿದೆ. ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ಅಂಗಳ ಸೇರಿತು. ಇನ್ನು ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಏನು ಮಾಡುತ್ತವೆ? ಅವುಗಳ ಮುಂದಿನ ಹೆಜ್ಜೆಗಳೆನು? ಈ ಬಗ್ಗೆ ಇನ್ನಷ್ಟು ರೋಚಕ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಚಂದ್ರಯಾನ-3: 14 ದಿನಗಳ ಕಾಲ ಚಂದ್ರನ ಅಂಗಳದಲ್ಲಿ 'ರೋವರ್‌' ಏನು ಮಾಡುತ್ತೆ?

ರೋವರ್ ಪ್ರಗ್ಯಾನ್ ಮೂನ್‌ವಾಕ್‌
ಇನ್ನು ಲ್ಯಾಂಡರ್‌ನಿಂದ ಹೊರಬರುವ ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಮುಂದಿನ 14 ದಿನಗಳ ಕಾಲ ಕಾರ್ಯನಿರತವಾಗಿರುತ್ತದೆ. ಲ್ಯಾಂಡಿಂಗ್ ನಂತರ, ರೋವರ್ ಪ್ರಗ್ಯಾನ್ ವಿಕ್ರಮ್‌ನಿಂದ ಹೊರಬರಲಿದ್ದು, ಬಳಿಕ ರೋವರ್ ಪ್ರಗ್ಯಾನ್ ಮೂನ್‌ವಾಕ್‌ ಅನ್ನು ಪ್ರಾರಂಭಿಸುತ್ತದೆ.

14 ದಿನಗಳ ಅವಧಿ ಏಕೆ?
ಲ್ಯಾಂಡರ್ 'ವಿಕ್ರಮ್' ಮತ್ತು ರೋವರ್ 'ಪ್ರಜ್ಞಾನ್' ಮುಂದಿನ 14 ದಿನಗಳ ಕಾಲ ಕಾರ್ಯನಿರತವಾಗಿರುತ್ತದೆ. 14 ದಿನಗಳ ಅವಧಿಯನ್ನು ಆಯ್ಕೆ ಮಾಡಲು ಯಾವುದೇ ಕಾರಣವಿದೆಯೇ ಎಂದು ನೋಡುವುದಾದರೆ, ಈ ನಿರ್ಧಾರದ ಹಿಂದಿನ ಏಕೈಕ ಕಾರಣವೆಂದರೆ ಚಂದ್ರನ ಮೇಲೆ ಒಂದು ದಿನದ ಅವಧಿಯು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ.

ಚಂದ್ರನ ಮೇಲೆ ಇಳಿದ ನಂತರ 'ವಿಕ್ರಮ್' ಸ್ವಲ್ಪ ಹೊತ್ತು ಕಾದು, ಬಳಿಕ ಅದು ತೆರೆಯುತ್ತದೆ. ಆ ನಂತರ ವಿಕ್ರಮ್‌ ತನ್ನಿಂದ ಚಂದ್ರನ ನೆಲೆಕ್ಕೆ ತಾಗುವಂತೆ ರಾಂಪ್ ಅನ್ನು ಹಾಕಲಾಗುತ್ತದೆ. ಆರು ಚಕ್ರಗಳ ವಾಹನ 'ಪ್ರಜ್ಞಾನ್' ಚಂದ್ರನ ಮೇಲ್ಮೈ ಮೇಲೆ ಬರಲು ಈ ರಾಂಪ್ ಅನ್ನು ಬಳಸುತ್ತದೆ. ರೋವರ್ ಲ್ಯಾಂಡಿಂಗ್ ಆದ ಸುಮಾರು ನಾಲ್ಕು ಗಂಟೆಗಳ ನಂತರ ಲ್ಯಾಂಡರ್‌ನಿಂದ ಹೊರಬರುತ್ತದೆ.

ಲ್ಯಾಂಡರ್ ಮತ್ತು ರೋವರ್ ಎರಡೂ ಸೌರಶಕ್ತಿ ಚಾಲಿತವಾಗಿವೆ. ಹೀಗಾಗಿ ಲ್ಯಾಂಡರ್ ಮತ್ತು ರೋವರ್ ದಿನದ ಬೆಳಕಿನಲ್ಲಿ ಎಲ್ಲಾ ಡೇಟಾವನ್ನು ಸಂಗ್ರಹಿಸಬೇಕಾಗುತ್ತದೆ. ರೋವರ್ 'ಪ್ರಗ್ಯಾನ್' ಚಂದ್ರನ ಮೇಲ್ಮೈಯಲ್ಲಿ ಚಲನೆಯನ್ನು ಮಾಡುತ್ತದೆ. ಅದು ಹಾದುಹೋಗುವ ಸ್ಥಳದಿಂದ ಡೇಟಾವನ್ನು ಸಂಗ್ರಹಿಸುತ್ತದೆ. ರೋವರ್ ಸಂಗ್ರಹಿಸಿದ ಡೇಟಾವನ್ನು ಲ್ಯಾಂಡರ್‌ಗೆ ತಲುಪಿಸುತ್ತದೆ. ಬಳಿಕ ಲ್ಯಾಂಡರ್‌ ಅದನ್ನು ಭೂಮಿಗೆ ರವಾನಿಸುತ್ತದೆ.

ರೋವರ್‌ನ ಪೇಲೋಡ್‌ಗಳಲ್ಲಿ ಮೂರು ಪೇಲೋಡ್‌ಗಳು ಇವೆ. ಈ ಪೇಲೋಡ್‌ಗಳು ಚಂದ್ರನ ಹೊರಪದರ ಮತ್ತು ನಿಲುವಂಗಿಯ ರಚನೆಗಳನ್ನು ಪತ್ತೆ ಮಾಡಲು ನೆರವಾಗುತ್ತವೆ. ಹಾಗೆಯೇ ಸಾಂದ್ರತೆ ಮತ್ತು ತಾಪಮಾನ, ಇದಲ್ಲದೇ ಚಂದ್ರನ ಮೇಲೆ ಭೂಕಂಪಗಳು ಅಪ್ಪಳಿಸುತ್ತವೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಸಹ ಸಂಗ್ರಹಿಸುತ್ತದೆ.

ರೋವರ್ ಪ್ರಗ್ಯಾನ್ ಪ್ರತಿ ಸೆಕೆಂಡಿಗೆ 1 ಸೆಂಟಿ ಮೀಟರ್ ವೇಗದಲ್ಲಿ ಇಳಿಯುತ್ತದೆ. ಅಲ್ಲದೇ ಇದು ನ್ಯಾವಿಗೇಷನ್ ಕ್ಯಾಮೆರಾದ ನೆರವಿನಿಂದ ಮುಂದಿನ ಪ್ರಯಾಣಕ್ಕೆ ಸ್ಥಳವನ್ನು ಕಂಡುಕೊಳ್ಳುತ್ತದೆ. ಇನ್ನು ರೋವರ್ ಪ್ರಗ್ಯಾನ್ ಚಂದ್ರನ ಅಂಗಳದಲ್ಲಿ ಎಷ್ಟು ದೂರ ಕ್ರಮಿಸುತ್ತದೆ ಎಂದು ಹೇಳುವುದು ಅಕಾಲಿಕವಾಗಿದೆ. ಇದು ರೋವರ್ ಕ್ರಮಿಸುವ ಹಾದಿಯಲ್ಲಿನ ಅಡೆತಡೆಗಳನ್ನು ಅವಲಂಬಿಸಿರುತ್ತದೆ.

ಚಂದ್ರಯಾನ - 3 ರ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್‌ಗೆ 15 ರಿಂದ 17 ನಿಮಿಷಗಳನ್ನು ತೆಗೆದುಕೊಡಿತು. ಅಂದಹಾಗೆ ಚಂದ್ರಯಾನ - 3 ಅನ್ನು 14 ಜುಲೈ 2023 ರಂದು ಉಡಾವಣೆ ಮಾಡಲಾಗಿತ್ತು.

Best Mobiles in India

English summary
Chandrayaan-3: Here's what rover will do on Moon for the next 14 days. complete details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+