Home
ಸುದ್ದಿಜಾಲ

ಚಂದ್ರಯಾನ 3:ಲ್ಯಾಂಡರ್, ರೋವರ್ ಬಗ್ಗೆ ಗುಡ್‌ ನ್ಯೂಸ್‌ ನೀಡಿದ ಇಸ್ರೋ, ಈ ರೀತಿ ಆದ್ರೆ ಮತ್ತಷ್ಟು ಸಂತೋಷ!

ಚಂದ್ರಯಾನ-3 (Chandrayaan-3)ಯಶಸ್ವಿಯಾಗಿದ್ದು, ಇಸ್ರೋ(ISRO) ಸಾಧನೆಗೆ ಇಡೀ ರಾಷ್ಟ್ರವೇ ನಿಬ್ಬೆರರಾಗಿದೆ. ಈ ನಡುವೆ ರಾಷ್ಟ್ರದ ಹಾಗೂ ರಾಜ್ಯದ ಅನೇಕ ಗಣ್ಯರು ಇಸ್ರೋಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಇಸ್ರೋ, ಚಂದ್ರನ ಮೇಲಿರುವ ರೋವರ್ (Rover) ಒಂದಕ್ಕಿಂತ ಹೆಚ್ಚು ದಿನ ಕೆಲಸ ಮಾಡುತ್ತವೆ ಎಂದು ಆಶಿಸಿದೆ.

ಹೌದು, ಆಗಸ್ಟ್. 23, 2023 ರಂದು ಇಸ್ರೋದ ಚಂದ್ರಯಾನ-3 ರ ರೋವರ್ ಅನ್ನು ಲ್ಯಾಂಡರ್‌ನಿಂದ (lander) ಚಂದ್ರನ ಮೇಲ್ಮೈಗೆ ರೋಲ್‌ಔಟ್ ಮಾಡಲಾಗಿದ್ದು, ಈಗಾಗಲೇ ಅದು ತನ್ನ ಕೆಲಸವನ್ನು ಆರಂಭಿಸಿದೆ. ಈ ನಡುವೆ ಭಾರತದ ಸಾಹಸಕ್ಕೆ ಹಲವು ರಾಷ್ಟ್ರಗಳು ಅಚ್ಚರಿ ವ್ಯಕ್ತಡಿಸಿದ್ದು, ಭಾರತದ ಹಿರಿಮೆ ಇನ್ನಷ್ಟು ಹೆಚ್ಚಾಗಿದೆ. ಅದರಂತೆ ಈಗ ಇಸ್ರೋ ವಿಜ್ಞಾನಿಗಳು ವಿಶೇಷವಾದ ಆಶಯವೊಂದನ್ನು ಇಟ್ಟುಕೊಂಡಿದ್ದಾರೆ. ಹಾಗಿದ್ರೆ, ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಚಂದ್ರಯಾನ 3:ಲ್ಯಾಂಡರ್, ರೋವರ್ ಬಗ್ಗೆ ಗುಡ್‌ ನ್ಯೂಸ್‌ ನೀಡಿದ ಇಸ್ರೋ...

ಕೆಲಸ ಆರಂಭಿಸಿದ ರೋವರ್‌: ಚಂದ್ರಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಚಂದ್ರನ ಮೇಲೆ ಕಾರ್ಯನಿರ್ವಹಿಸುತ್ತಿವೆ. ಎರಡೂ ಯಂತ್ರಗಳನ್ನು ಸೌರ ಫಲಕಗಳೊಂದಿಗೆ ಜೋಡಿಸಲಾಗಿದ್ದು, ಸೂರ್ಯನು ಅವುಗಳನ್ನು ಚಾಲನೆಯಲ್ಲಿಡುವ ಕೆಲಸ ಮಾಡಿದ್ದಾನೆ. ಇವುಗಳನ್ನು ಒಂದು ಚಂದ್ರನ ದಿನಕ್ಕೆ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆಯಾದರೂ ಸಹ ಈ ದಿನ ಹೆಚ್ಚಾಗಬಹುದು ಎನ್ನಲಾಗಿದೆ.

ಇನ್ನು ಒಂದು ಚಂದ್ರನ ದಿನ ಭೂಮಿಯ 14 ಭೂಮಿಯ ದಿನಗಳಿಗೆ ಸಮಯವಾಗಿದೆ. ಈ ನಡುವೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಅದನ್ನು ಮೀರಿ ಹೆಚ್ಚಿನ ದಿನಗಳು ಚಂದ್ರನಂಗಳದಲ್ಲಿ ರೋವರ್‌ ಕೆಲಸ ಮಾಡುತ್ತದೆ ಎಂದು ಆಶಿಸುತ್ತಿದೆ. ಈ ಸಂಬಂಧ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್ ಸೋಮನಾಥ್ ಮಾಹಿತಿ ನೀಡಿದ್ದು, ರೋವರ್ ಅನೇಕ ಪ್ರಯೋಗಗಳನ್ನು ಕೈಗೊಳ್ಳುತ್ತದೆ ಮತ್ತು ಲಭ್ಯವಿರುವ ಸಮಯ ಮತ್ತು ಶಕ್ತಿಯನ್ನು ಹೆಚ್ಚು ಬಳಸಿಕೊಳ್ಳುತ್ತದೆ ಎಂದಿದ್ದಾರೆ.

ಅಂದರೆ ಪ್ರಗ್ಯಾನ್‌ನ ಮಿಷನ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಒಂದು ಚಂದ್ರನ ದಿನದಂದು ಸೂರ್ಯನು ಚಂದ್ರನ ಮೇಲೆ ಬೆಳಗುವವರೆಗೆ ಲ್ಯಾಂಡರ್ ಮತ್ತು ರೋವರ್ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ. ಅಂದರೆ ಇವೆಲ್ಲವೂ ಚಂದ್ರನ ಮೇಲೆ ಕೇವಲ ಒಂದು ದಿನದಲ್ಲಿ ಪೂರ್ಣಗೊಳ್ಳಬೇಕು. ಅಂದರೆ ಇದು ಭೂಮಿಯ 14 ಭೂಮಿಯ ಸಮವಾಗಿರುತ್ತದೆ ಎಂದು ಸೋಮನಾಥ್ ಹೇಳಿದ್ದಾರೆ.

ಸಾಮಾನ್ಯವಾಗಿ ಭೂಮಿಯು ತನ್ನ ಅಕ್ಷದ ಮೇಲೆ ತಿರುಗಲು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ವೇಳೆ ನಮಗೆ ಹಗಲು ರಾತ್ರಿಯ ಅನುಭವ ಸಿಗಲಿದೆ. ಅದರಂತೆ ಭೂಮಿಗಿಂತ ಭಿನ್ನವಾಗಿರುವ ಚಂದ್ರನು ತನ್ನ ಅಕ್ಷದ ಮೇಲೆ ತಿರುಗಲು ಸುಮಾರು 28 ಭೂಮಿಯ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಇದರರ್ಥ ಚಂದ್ರನ ಮೇಲೆ ಹಗಲು 14 ಮತ್ತು ರಾತ್ರಿ 14 ದಿನಗಳಿರುತ್ತವೆ.

14 ದಿನಗಳು ಬೆಳಗ್ಗೆ ಆಗಿರುವುದರಿಂದ ಸೂರ್ಯನ ಬೆಳಕು ಈ ರೋವರ್‌ ಗೆ ಶಕ್ತಿ ನೀಡುವ ಮೂಲಕ ಅದು ಕೆಲಸ ಮಾಡುವಂತೆ ಸಹಾಯ ಮಾಡುತ್ತದೆ. ಆದರೆ ಸೂರ್ಯ ಅಸ್ತಮಿಸಿದಾಗ ಗಾಢ ಕತ್ತಲೆ ಅಲ್ಲಿ ಆವರಿಸಲಿದ್ದು, ತಾಪಮಾನವು ಬರೋಬ್ಬರಿ ಮೈನಸ್ 180 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುತ್ತದೆ ಎಂದು ಸೋಮನಾಥ್ ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಈ 180 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಅಲ್ಲಿನ ರೋವರ್‌ ಕೆಲಸ ಮಾಡದಂತೆ ಮಾಡುತ್ತದೆ. ಈ ಮೂಲಕ ಅದು ನಾಶವಾಗುತ್ತದೆ ಎಂದು ಹೇಳಿದ್ದಾರೆ. ಅದಾಗ್ಯೂ ವಿಶ್ವಾಸ ಹೊರಹಾಕಿರುವ ಅವರು ಅದು ಏನಾದರೂ 14 ದಿನಗಳ ನಂತರವೂ ಜೀವಂತಗಾಗಿದ್ದರೆ ನಾವು ಮತ್ತೊಮ್ಮೆ ಆ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದು, ಈ ರೀತಿ ಆಗಲೂ ಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ 3:ಲ್ಯಾಂಡರ್, ರೋವರ್ ಬಗ್ಗೆ ಗುಡ್‌ ನ್ಯೂಸ್‌ ನೀಡಿದ ಇಸ್ರೋ...

ಈ ನಡುವೆ ಇಸ್ರೋ ಸಿಬ್ಬಂದಿಯನ್ನು ಮೋದಿ ಭೇಟಿಯಾಗಿದ್ದಾರೆ. ಅಧ್ಯಕ್ಷ ಎಸ್ ಸೋಮನಾಥ್ ಖುದ್ದಾಗಿ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡರು. ಈ ವೇಳೆ ಮೋದಿ ವಿಶ್ವನಾಥ್‌ ಅವರನ್ನು ಬೆನ್ನು ತಟ್ಟಿ ಅಪ್ಪಿಕೊಂಡರು. ಇನ್ನು ಇಸ್ರೋ ವಿಜ್ಞಾನಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಭಾವುಕರಾದರು, ಅವರು ಚಂದ್ರಯಾನ-3 ತಂಡದ ಸಮರ್ಪಣೆ ಮತ್ತು ಪ್ರಯತ್ನಗಳಿಗಾಗಿ ಶ್ಲಾಘಿಸಿದರು.

Best Mobiles in India

English summary
ISRO's Chandrayaan-3 rover was rolled out from the lander to the lunar surface on 23, 2023 and has already started its mission.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+