Home
ಸುದ್ದಿಜಾಲ

ಅಂತಿಮ ಸಿದ್ಧತೆಯಲ್ಲಿ 'ಚಂದ್ರಯಾನ-3' ಗಗನನೌಕೆ!..ಜುಲೈ 14 ರಂದು ಉಡಾವಣೆ!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೇ ಜುಲೈ 14 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಿದೆ ಎಂದು ತಿಳಿಸಿದೆ. ಉಡಾವಣೆ ಆಗಲಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಮೂರು ಭಾಗಗಳನ್ನು ಒಳಗೊಂಡಿದೆ.

ಇಸ್ರೋ ಸಂಸ್ಥೆಯು ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14 ರಂದು ಮಧ್ಯಾಹ್ನ 2:35 ಕ್ಕೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಉಡಾವಣೆ ಮಾಡಲಿದೆ. ಈ ನೌಕೆ ಲ್ಯಾಂಡರ್ ಮಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್ ಮತ್ತು ರೋವರ್ ಭಾಗಗಳನ್ನು ಒಳಗೊಂಡಿದ್ದು, ಉಡಾವಣೆಗೆ LVM-3 ಅಥವಾ ಲಾಂಚ್ ವೆಹಿಕಲ್ ಮಾರ್ಕ್-III ಅನ್ನು ಬಳಕೆ ಮಾಡಲಾಗುತ್ತದೆ.

ಅಂತಿಮ ಸಿದ್ಧತೆಯಲ್ಲಿ 'ಚಂದ್ರಯಾನ-3' ಗಗನನೌಕೆ!..ಜುಲೈ 14 ರಂದು ಉಡಾವಣೆ!

ಲ್ಯಾಂಡರ್ ಅನ್ನು ಚಂದ್ರನ ಮೇಲೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಮೃದುವಾಗಿ ಲ್ಯಾಂಡಿಂಗ್ ಮಾಡಲು ಸಾಮರ್ಥ್ಯ ಹೊಂದಿದ್ದು, ರೋವರ್ ಅನ್ನು ನಿಯೋಜಿಸಲು ಸಾಮರ್ಥ್ಯವನ್ನು ಪಡೆದಿದೆ. ರೋವರ್ ಚಂದ್ರನ ಮೇಲ್ಮೈಯ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸಲಿದೆ. ಹಾಗೆಯೇ ಲ್ಯಾಂಡರ್ ಮತ್ತು ರೋವರ್ ಎರಡೂ ಚಂದ್ರನ ಮೇಲ್ಮೈಯಲ್ಲಿ ಪ್ರಯೋಗಗಳಿಗಾಗಿ ಅನೇಕ ವೈಜ್ಞಾನಿಕ ಪೇಲೋಡ್‌ಗಳನ್ನು ಸಹ ಹೊತ್ತೊಯ್ಯುತ್ತವೆ. ಲ್ಯಾಂಡರ್ ಮತ್ತು ರೋವರ್‌ನೊಂದಿಗೆ ಸಜ್ಜುಗೊಂಡಿರುವ ಈ ಬಾಹ್ಯಾಕಾಶ ನೌಕೆಯು ಚಂದ್ರನತ್ತ ಸುಮಾರು ಎರಡು ತಿಂಗಳ ದೀರ್ಘ ಕಾಲ ಪ್ರಯಾಣವನ್ನು ಮಾಡಲಿದೆ.

ಉಡಾವಣೆಗೆ LVM-3 ವಾಹನ ಬಳಕೆ:
LVM-3 ವಾಹನವು 43.5 ಮೀಟರ್ ಎತ್ತರ ಮತ್ತು 4 ಮೀಟರ್ ವ್ಯಾಸವನ್ನು ಹೊಂದಿದೆ. ಇದು 640 ಟನ್‌ಗಳಷ್ಟು ಬಾರ ಎತ್ತುವ ಸಾಮರ್ಥ್ಯವನ್ನು ಹೊಂದಿದೆ. ಇದು ಕಡಿಮೆ-ಭೂಮಿಯ ಕಕ್ಷೆಗೆ 8,000 ಕಿಲೋಗ್ರಾಂ ಗಳಷ್ಟು ಪೇಲೋಡ್ ಅನ್ನು ಸಾಗಿಸುವ ಸಾಮರ್ಥ್ಯ ಪಡೆದಿದೆ. ಅಲ್ಲದೇ ಸುಮಾರು 4,000 ಕಿಲೋಗ್ರಾಂ ಗಳಷ್ಟು ಪೇಲೋಡ್ ಅನ್ನು ಭೂಸ್ಥಿರ ವರ್ಗಾವಣೆ ಕಕ್ಷೆಗೆ ಸಾಗಿಸುವ ಶಕ್ತಿ ಪಡೆದುಕೊಂಡಿದೆ.

ಇದರ ಕ್ರಯೋಜೆನಿಕ್ ಮೇಲಿನ ಹಂತವು CE-20 ನಿಂದ ಚಾಲಿತವಾಗಿದೆ. ಇಸ್ರೋ ಪ್ರಕಾರ ಇದು ಭಾರತದ ಅತಿದೊಡ್ಡ ಕ್ರಯೋಜೆನಿಕ್ಸ್ ಎಂಜಿನ್ ಎನ್ನಲಾಗಿದೆ. ಇನ್ನು ಇದು ಟೇಕ್‌ಆಫ್‌ಗೆ ಪೂರಕವಾಗದ ಒತ್ತಡವನ್ನು ನೀಡಲು ಎರಡು S200 ಘನ ರಾಕೆಟ್ ಬೂಸ್ಟರ್‌ಗಳ ಅನ್ನು ಸಹ ಬಳಕೆ ಮಾಡುತ್ತದೆ. ಇದರ ಕೋರ್ ಹಂತವು ಎರಡು L110 ದ್ರವ-ಹಂತದ ವಿಕಾಸ್ ರಾಕೆಟ್‌ಗಳಿಂದ ಚಾಲಿತ ಆಗಿದೆ.

ಚಂದ್ರಯಾನ-2 ಮಿಷನ್ :
ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಮಾಡುವ ಮೂರನೇ ಪ್ರಯತ್ನವಾಗಿದೆ. ಕಳೆದ ಚಂದ್ರಯಾನ-2 ಮಿಷನ್ ಜುಲೈ 22, 2019 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಯಿತು. ಆದರೆ ವಿಕ್ರಮ್ ಲೂನಾರ್ ಲ್ಯಾಂಡರ್ ಅಪ್ಪಳಿಸಿ ಅದು ಸೆ 6, 2019 ರಂದು ಕೊನೆಗೊಂಡಿತು.

ಚಂದ್ರಯಾನ-2 ನೌಕೆಯ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಲು ವಿಫಲವಾಯಿತು. ಅಂದಹಾಗೆ ಚಂದ್ರಯಾನ-1 ಅನ್ನು 2008 ರಲ್ಲಿ ಉಡಾವಣೆ ಮಾಡಲಾಯಿತು. ಅದನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಗೆ ಸೇರಿಸಲಾಯಿತು. ಇನ್ನು ಇಲ್ಲಿಯವರೆಗೆ, ಯುನೈಟೆಡ್ ಸ್ಟೇಟ್ಸ್, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾ ಕೇವಲ ಈ ಮೂರು ರಾ‍ಷ್ಟ್ರಗಳು ಮಾತ್ರ ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿವೆ.

ಚಂದ್ರಯಾನ-3 ಮಿಷನ್ :
ಉಡಾವಣೆಗೆ ಸಜ್ಜಾಗಿರುವ ಚಂದ್ರಯಾನ-3 ಮಿಷನ್ ಭಾರತದ ಬಾಹ್ಯಾಕಾಶ ಪರಿಶೋಧನಾ ಪ್ರಯತ್ನಗಳಿಗೆ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಮಾಡುವುದು ಹಾಗೂ ರೋವರ್ ಅನ್ನು ನಿಯೋಜಿಸುತ್ತದೆ. ರೋವರ್ ನಂತರ ವಿಶ್ಲೇಷಣೆಯನ್ನು ನಡೆಸಲಿದೆ.

Best Mobiles in India

English summary
Chandrayaan-3 launching on July 14: Date, time, launch vehicle and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+