Home
ಸುದ್ದಿಜಾಲ

ಚಂದ್ರಯಾನ 3... ಈವರೆಗೆ ಚಂದ್ರನಂಗಳದಲ್ಲಿ ಪ್ರಗ್ಯಾನ್‌ ಪತ್ತೆ ಮಾಡಿದ್ದು ಏನೇನು ಗೊತ್ತಾ!?

ಚಂದ್ರಯಾನ-3 (chandrayaan 3) ಯಶಸ್ವಿಯಾದ ನಂತರ ದೇಶದಲ್ಲಿ ಹಲವಾರು ಬೆಳವಣಿಗೆ ನಡೆಯುತ್ತಿವೆ. ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಸೂರ್ಯನ ಕಡೆ ಭಾರತ ಮುಖ ಮಾಡಲಿದೆ. ಈ ನಡುವೆ ಚಂದ್ರನ ಮೇಲಿನ ಕೆಲವು ಅಗತ್ಯ ಮಾಹಿತಿಯನ್ನು ಭೂಮಿಗೆ ರವಾನಿಸಿದೆ. ಈ ಮೂಲಕ ಸಂಶೋಧಕರು ಚಂದ್ರನ ಬಗ್ಗೆ ಇನ್ನಷ್ಟು ತಿಳಿಯಲು ಕಾತುರರಾಗಿದ್ದಾರೆ.

ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಚಂದ್ರಯಾನ ಯೋಜನೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ. ಅದರಂತೆ ಈಗ ಸಂಶೋಧನೆ ಆರಂಭ ಮಾಡಿದ್ದು, ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಲ್ಫರ್, ಆಮ್ಲಜನಕವನ್ನು ಪ್ರಗ್ಯಾನ್ ಪತ್ತೆ ಮಾಡಿದೆ. ಹಾಗಿದ್ರೆ, ಸಂಶೋಧಕರಿಗೆ ಈ ವಿಷಯ ಯಾಕೆ ಅಷ್ಟೊಂದು ಪ್ರಮುಖವಾಗಿದೆ?, ಇದನ್ನು ಪ್ರಗ್ಯಾನ್ (Pragyan) ಪತ್ತೆ ಮಾಡಿದ್ದು ಹೇಗೆ ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ಚಂದ್ರಯಾನ 3: ಚಂದ್ರನಂಗಳದಲ್ಲಿ ಪ್ರಗ್ಯಾನ್‌ ಪತ್ತೆ ಮಾಡಿದ್ದು ಏನೇನು ಗೊತ್ತಾ!?

ಚಂದ್ರನಲ್ಲಿ ಸಲ್ಫರ್, ಆಮ್ಲಜನಕ ಪತ್ತೆ: ಭಾರತದ ಚಂದ್ರಯಾನ-3 ಚಂದ್ರನ ಮೇ'ಲ್ಮೈಯಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡುತ್ತಿದೆ. ಮಿಷನ್‌ನ ಭಾಗವಾಗಿರುವ ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದ ಬಳಿಯ ಹಲವಾರು ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತಿದೆ. ಅಂದರೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಲ್ಫರ್ ದೊಡ್ಡ ಆವಿಷ್ಕಾರವಾಗಿದ್ದು, ಇದರೊಂದಿಗೆ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ಪತ್ತೆ ಮಾಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಸಂಶೋಧನೆಗಳನ್ನು ದೃಢಪಡಿಸಿದ್ದು, ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಟೂಲ್ಸ್‌ ಈ ಸಂಶೋಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಉಲ್ಲೇಖಿಸಲಾಗಿದೆ. ಈ ವೈಜ್ಞಾನಿಕ ತಂತ್ರವು ವಸ್ತುಗಳ ಸಂಯೋಜನೆಯನ್ನು ಇಂಟೆನ್ಸ್ ಲೇಸರ್ ಪಲ್ಸಸ್‌ಗೆ ಒಡ್ಡಿ, ಸ್ಥಳೀಯ ಪ್ಲಾಸ್ಮಾವನ್ನು ಉತ್ಪಾದಿಸುವ ಮೂಲಕ ವಿಶ್ಲೇಷಿಸುತ್ತದೆ ಎಂದು ಮಾಹಿತಿ ನೀಡಿದೆ.

ಈ ಪ್ಲಾಸ್ಮಾದಿಂದ ಹೊರಸೂಸಲ್ಪಟ್ಟ ಬೆಳಕನ್ನು ನಂತರ ರೋಹಿತವಾಗಿ ಪರಿಹರಿಸಲಾಗುತ್ತದೆ ಜೊತೆಗೆ ಆ ವಸ್ತು ಏನು ಎಂದು ನಿರ್ಧಾರಕ್ಕೆ ಬರುತ್ತದೆ. ಈ ಮೂಲಕ ವಿವಿಧ ಅಂಶಗಳ ಉಪಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ನಡುವೆ ಚಂದ್ರನಲ್ಲಿನ ಗಂಧಕದ ಪತ್ತೆಯು ವಿಶೇಷವಾಗಿ ಗಮನಾರ್ಹವಾಗಿದೆ. ದಕ್ಷಿಣ ಧ್ರುವ ಪ್ರದೇಶದಲ್ಲಿ ಇದರ ಉಪಸ್ಥಿತಿಯು ನೀರಿನ ಮಂಜುಗಡ್ಡೆಯ ಅಸ್ತಿತ್ವವನ್ನು ಸೂಚಿಸುತ್ತದೆ. ಇದು ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗೆ ಮತ್ತು ಸಂಭಾವ್ಯ ಮಾನವ ವಸತಿಗೆ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇನ್ನು ಸಲ್ಫರ್ ಸಾಮಾನ್ಯವಾಗಿ ಜ್ವಾಲಾಮುಖಿ ಚಟುವಟಿಕೆಗಳಿಂದ ಹುಟ್ಟಿಕೊಂಡಿದೆ ಮತ್ತು ಚಂದ್ರನ ಮೇಲೆ ಅದರ ಉಪಸ್ಥಿತಿಯು ಚಂದ್ರನ ಇತಿಹಾಸ ಮತ್ತು ಸಂಯೋಜನೆಯ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ನೀಡುತ್ತದೆ. ಇದರೊಂದಿಗೆ LIBS ಟೂಲ್ಸ್‌ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ ಮತ್ತು ಟೈಟಾನಿಯಂನ ಸಂಕೇತಗಳನ್ನು ಸಹ ಪತ್ತೆ ಮಾಡಿದೆ.

ಪ್ರಸ್ತುತ, ಇಸ್ರೋ ಚಂದ್ರನ ಮೇಲೆ ಹೈಡ್ರೋಜನ್ ಇದೆಯಾ ಎಂಬುದರ ಬಗ್ಗೆ ಕೆಂದ್ರೀಕರಿಸಿದೆ. ಇದು ಏನಾದರೂ ಅಲ್ಲಿ ಕಂಡುಬಂದರೆ ಭಾರತದ ಮತ್ತೊಂದು ಮಹತ್ವದ ಆವಿಷ್ಕಾರವಾಗಲಿದೆ. ಸಂಭಾವ್ಯ ಶುದ್ಧ ಶಕ್ತಿಯ ಮೂಲವಾಗಿ ಹೈಡ್ರೋಜನ್‌ ಅನ್ನು ಬಳಕೆ ಮಾಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇದರ ಬಗೆಗಿನ ಆಸಕ್ತಿ ಜನರಲ್ಲಿ ಹೆಚ್ಚಾಗುತ್ತಿದೆ. ಯಾಕೆಂದರೆ ಈ ಹೈಡ್ರೋಜನ್ ಅನ್ನು ಹೆಚ್ಚಾಗಿ ತೈಲ ಸಂಸ್ಕರಣೆ ಮತ್ತು ರಾಸಾಯನಿಕ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಇನ್ನು ಚಂದ್ರನ ಮೇಲೆ ಇದು ಇದ್ದರೆ ಬಾಹ್ಯಾಕಾಶದಲ್ಲಿ ಶಕ್ತಿ ಉತ್ಪಾದನೆ ಸುಲಭವಾಗುತ್ತದೆ.

ಚಂದ್ರಯಾನ 3: ಚಂದ್ರನಂಗಳದಲ್ಲಿ ಪ್ರಗ್ಯಾನ್‌ ಪತ್ತೆ ಮಾಡಿದ್ದು ಏನೇನು ಗೊತ್ತಾ!?

ಚಂದ್ರನ ಮೇಲಿನ ವಿವಿಧ ಅಂಶಗಳ ಉಪಸ್ಥಿತಿ ಮತ್ತು ಸಮೃದ್ಧಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು, ಚಂದ್ರನ ಪರಿಸರದ ಬಗ್ಗೆ ನಮ್ಮ ತಿಳುವಳಿಕೆಗೆ ಕೊಡುಗೆ ನೀಡುವುದು ಮತ್ತು ಭವಿಷ್ಯದ ಅನ್ವೇಷಣೆಗಳಿಗೆ ದಾರಿ ಮಾಡಿಕೊಡುವುದು ಮಿಷನ್‌ನ ಪ್ರಮುಖ ಉದ್ದೇಶವಾಗಿದೆ. ಅದರಲ್ಲೂ ಬ್ರಹ್ಮಾಂಡದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸುವಲ್ಲಿ ಚಂದ್ರನ ಪರಿಶೋಧನೆಯ ಪ್ರಮುಖವಾಗಿದ್ದು, ಚಂದ್ರನಲ್ಲಿ ಇನ್ನೂ ಏನೇನು ವಿಶೇಷತೆ ಇದೆ ಎಂದು ಸಂಶೋಧಕರು ಕಾತುರದಿಂದ ನೋಡುತ್ತಿದ್ದಾರೆ.

Best Mobiles in India

English summary
Indian Space Research Organization has achieved a major milestone in the Chandrayaan project. Accordingly, the research has now started and Pragyan has discovered sulfur and oxygen in the south polar region of the moon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+