Home
ಸುದ್ದಿಜಾಲ

ಸ್ಮೈಲ್ ಪ್ಲೀಸ್‌.... ವಿಕ್ರಮ್‌ ಲ್ಯಾಂಡರ್‌ನ ಈ ಸುಂದರ ಚಿತ್ರವನ್ನು ಸೆರೆಹಿಡಿದೋರು ಯಾರು ಗೊತ್ತಾ!?

ಚಂದ್ರಯಾನ-3 (Chandrayaan- 3) ಯಶಸ್ವಿಯಾಗಿದ್ದು, ಈಗಾಗಲೇ ರೋವರ್‌ (Rover) ತನ್ನ ಕೆಲಸವನ್ನು ಪ್ರಾರಂಭ ಮಾಡಿದೆ. ಈ ನಡುವೆ ಚಂದ್ರನ ಅಂಗಳದಲ್ಲಿ ಲಭ್ಯ ಇರುವ ಶಕ್ತಿಯ ಮೂಲಗಳ ಅನ್ವೇಷಣೆಗಳನ್ನು ಮಾಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ವಿಕ್ರಮ್‌ ಲ್ಯಾಂಡರ್‌ಗೆ (Vikram Lander) ಸಂಬಂಧಿಸಿದಂತೆ ಸ್ವಾರಸ್ಯಕರ ಪೋಸ್ಟ್‌ವೊಂದು ಈಗ ಭಾರೀ ಸದ್ದು ಮಾಡುತ್ತಿದೆ.

ಹೌದು, ಫೋಟೋಗೆ ಫೋಸ್‌ ಕೊಡೋದು ಎಂದರೆ ಹಲವರಿಗೆ ಇಷ್ಟ, ಇನ್ನೂ ಕೆಲವರಿಗೆ ಕಷ್ಟ. ಆದರೆ ನಮ್ಮ ಭಾರತದ ಹೆಮ್ಮೆಯ ಚಂದ್ರಯಾನ 3 ರ ಲ್ಯಾಂಡರ್‌ ಮಾತ್ರ ಐ ಆಮ್‌ ರೆಡಿ ಅಂತಾ ಫೋಟೋಗೆ ಪೋಸ್ ನೀಡಿದೆ. ಈ ಫೋಟೋವನ್ನು ಇದೀಗ ಇಸ್ರೋ ಶೇರ್‌ ಮಾಡಿಕೊಂಡಿದ್ದು, ಸಾಮಾಜಿಕ ವಲಯದಲ್ಲಿ ನೆಟ್ಟಿಗರು ಇದನ್ನು ಇಷ್ಟಪಡುತ್ತಿದ್ದಾರೆ. ಹಾಗಿದ್ರೆ, ಏನಿದು ಫೋಟೋ?, ಈ ಫೋಟೋ ಕ್ಲಿಕ್ಕಿಸಿದವರು ಯಾರು? ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ.

ವಿಕ್ರಮ್‌ ಲ್ಯಾಂಡರ್‌ನ ಈ ಸುಂದರ ಚಿತ್ರವನ್ನು ಸೆರೆಹಿಡಿದೋರು ಯಾರು ಗೊತ್ತಾ!?

ಸ್ಮೈಲ್ ಪ್ಲೀಸ್‌... : ಚಂದ್ರಯಾನ ಯಶಸ್ವಿಯಾಗಿ ಲಾಂಚ್‌ ಆದ ನಂತರ ವಿಕ್ರಮ್ ಲ್ಯಾಂಡರ್‌ ಆಗಸ್ಟ್ 23 ರಂದು ಪ್ರಗ್ಯಾನ್ ರೋವರ್‌ನೊಂದಿಗೆ ಚಂದ್ರನ ಮೇಲೆ ಇಳಿದಿದೆ. ಈಗಾಗಲೇ ರೋವರ್‌ ತನ್ನ ಕೆಲಸ ಆರಂಭಿಸಿದ್ದು, ಚಂದ್ರನ ಮೇಲೆಲ್ಲಾ ಸುತ್ತಾಡುತ್ತಿದೆ. ಈ ನಡುವೆ ಚಂದ್ರಯಾನಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ತಿಳಿದುಬಂದಿದ್ದು, ರೋವರ್ (NavCam) ನಲ್ಲಿರುವ ನ್ಯಾವಿಗೇಷನ್ ಕ್ಯಾಮೆರಾವನ್ನು ಬಳಕೆ ಮಾಡಿಕೊಂಡು ವಿಕ್ರಮ್‌ನ ಚಿತ್ರವನ್ನು ಸೆರೆಹಿಡಿದಿದೆ.

ಚಂದ್ರಯಾನ-3 ಮಿಷನ್‌ನ ಭಾಗವಾಗಿರುವ ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಭದ್ರವಾಗಿ ಸಾಧಿಸಿದೆ ಎಂಬ ಹೆಮ್ಮೆಯಲ್ಲಿ ನಿಂತಿರುವ ಚಿತ್ರವನ್ನು ಸೆರೆಹಿಡಿದಿದೆ. ಇನ್ನು ಮಿಷನ್‌ನ ಯಶಸ್ಸಿಗೆ ನಿರ್ಣಾಯಕವಾದ ನವ್‌ಕ್ಯಾಮ್‌ಗಳನ್ನು ಬೆಂಗಳೂರಿನಲ್ಲಿರುವ ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಅಭಿವೃದ್ಧಿಪಡಿಸಿದೆ.

ಈ ಕ್ಯಾಮೆರಾಗಳು ರೋವರ್‌ನ ಕಣ್ಣುಗಳಂತೆ ಕೆಲಸ ಮಾಡುತ್ತವೆ. ಇವು ಸವಾಲಿನ ಚಂದ್ರನ ಭೂಪ್ರದೇಶವನ್ನು ಹಾದುಹೋಗುವಂತೆ ರೋವರ್‌ಗೆ ಮಾರ್ಗದರ್ಶನ ನೀಡುತ್ತದೆ. ಚಂದ್ರನ ಮೇಲೆ ರೋವರ್‌ನ ಸುರಕ್ಷಿತ ಸಂಚರಣೆಯನ್ನು ಖಾತ್ರಿಪಡಿಸುವ ಮಾರ್ಗ ಮತ್ತು ಅಡಚಣೆ ತಪ್ಪಿಸುವಲ್ಲಿ ಈ ಕ್ಯಾಮೆರಾ ಪ್ರಮುಖ ಪಾತ್ರ ವಹಿಸುತ್ತದೆ.

ಪ್ರಗ್ಯಾನ್ ರೋವರ್‌ನಿಂದ ಸೆರೆಹಿಡಿಯಲಾದ ವಿಕ್ರಮ್ ಲ್ಯಾಂಡರ್‌ನ ಚಿತ್ರವು ಕಾರ್ಯಾಚರಣೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಇದು ರೋವರ್ ಮತ್ತು ಲ್ಯಾಂಡರ್ ನಡುವಿನ ಯಶಸ್ವಿ ಸಹಯೋಗವನ್ನು ಪ್ರದರ್ಶಿಸಿಸಲಿದೆ. ಇದರೊಂದಿಗೆ ಚಂದ್ರನ ಮೇಲಿನ ಚಿತ್ರಗಳು ಮತ್ತು ಡೇಟಾವನ್ನು ಈ ಮೂಲಕ ತಿಳಿದುಕೊಳ್ಳಲಾಗುತ್ತಿದ್ದು, ಈ ಮೂಲಕ ಚಂದಮಾಮನ ಬಗ್ಗೆ ಇನ್ನಷ್ಟು ಆಸಕ್ತಿಕರ ಮಾಹಿತಿ ಹೊರಬೀಳಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಲಾಂಚ್‌ ಮಾಡಿದ ಚಂದ್ರಯಾನ-3 ಮಿಷನ್ ಆಗಸ್ಟ್ 23, 2023 ರಂದು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ನಂತರ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಾ ಬರುತ್ತಿದೆ. ಅದರಲ್ಲಿ ಭಾರತವನ್ನು ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ನಾಲ್ಕನೇ ದೇಶ ಎಂದು ಗುರುತಿಸುವಂತೆ ಮಾಡಲಾಗಿದೆ.

ಅದರಂತೆ ಈಗ ಪ್ರಗ್ಯಾನ್ ರೋವರ್ ಮತ್ತು ವಿಕ್ರಮ್ ಲ್ಯಾಂಡರ್ ಮೌಲ್ಯಯುತ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸಲು ಒಟ್ಟಿಗೆ ಕೆಲಸ ಮಾಡುತ್ತಿವೆ. ರೋವರ್ ಎರಡು ಪೇಲೋಡ್‌ಗಳನ್ನು ಹೊಂದಿದ್ದು, ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (APXS) ಮತ್ತು ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS), ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪ ಮತ್ತು ಖನಿಜ ಸಂಯೋಜನೆಯನ್ನು ವಿಶ್ಲೇಷಿಸಲು ವಿನ್ಯಾಸಗೊಳಿಸಲಾಗಿದೆ.

ಈ ನಡುವೆ ಚಂದ್ರನ ಮೇಲೆ ಸಲ್ಫರ್, ಆಮ್ಲಜನಕ ಪತ್ತೆಯಾಗಿದೆ. ಭಾರತದ ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ಅದ್ಭುತ ಸಂಶೋಧನೆಗಳನ್ನು ಮಾಡುತ್ತಿದ್ದು, ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದ ಬಳಿಯ ಹಲವಾರು ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತಿದೆ. ಈ ಮೂಳಕ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಲ್ಫರ್ , ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಇದೆ ಎಂದು ದೃಢಪಟ್ಟಿದೆ.

ವಿಕ್ರಮ್‌ ಲ್ಯಾಂಡರ್‌ನ ಈ ಸುಂದರ ಚಿತ್ರವನ್ನು ಸೆರೆಹಿಡಿದೋರು ಯಾರು ಗೊತ್ತಾ!?

ರೋವರ್‌ನಲ್ಲಿರುವ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ (LIBS) ಟೂಲ್ಸ್‌ ಇದನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ವೈಜ್ಞಾನಿಕ ತಂತ್ರವು ವಸ್ತುಗಳ ಸಂಯೋಜನೆಯನ್ನು ಇಂಟೆನ್ಸ್ ಲೇಸರ್ ಪಲ್ಸಸ್‌ಗೆ ಒಳಪಡಿಸಿ ನಂತರ ಸ್ಥಳೀಯ ಪ್ಲಾಸ್ಮಾವನ್ನು ಉತ್ಪಾದಿಸುವ ಮೂಲಕ ವಿಶ್ಲೇಷಿಸುತ್ತದೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Best Mobiles in India

English summary
Chandrayaan 3: The Vikram Lander photo was captured by Pragyan Rover and this photo is getting a lot of appreciation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+