Subscribe to Gizbot

ಬಿಸಿನೀರಿನಿಂದ ಮೊಬೈಲ್‌ ಚಾರ್ಜ್

Posted By:

ಗಿಜ್ಬಾಟ್‌ಈ ಹಿಂದೆ ಬಿಸಿನೀರಿನಿಂದ ಮೊಬೈಲ್‌ ಚಾರ್ಜ್‌ ಮಾಡುವ ಸುದ್ದಿಯನ್ನು ತಂದಿತ್ತು. ಈಗ ಕೀನ್ಯಾದ ಸಾಹಸಿಯೊಬ್ಬ ಮತ್ತೊಂದು ಬಿಸಿನೀರಿನಿಂದ ಮೊಬೈಲ್‌ ಚಾರ್ಜ್‌ ಮಾಡುವ ಸಾಧನವನ್ನು ಕಂಡುಹುಡುಕಿದ್ದಾನೆ.ನೈರೋಬಿಯ ರಿಯಾನ್‌ ಜಾನ್‌ಸ್ಟಾನ್‌ ಯಾರ ಸಹಾಯವಿಲ್ಲದೇ ಮೊಬೈಲ್‌ ಚಾರ್ಜ್ ಮಾಡುವ ಸಾಧನವನ್ನು ಆವಿಷ್ಕಾರ ಮಾಡುವ ಮೂಲಕ ವಿಜ್ಞಾನಿಗಳು ಹುಬ್ಬೇರುವಂತೆ ಮಾಡಿದ್ದಾನೆ.

ಹೇಗೆ ಚಾರ್ಜ್ ಮಾಡುತ್ತದೆ ?
ಹೇಗೆ ಗಾಳಿ ಟರ್ಬೈನ್‌ ಕೆಲಸ ಮಾಡುತ್ತದೋ ಅದೇ ರೀತಿಯ ತಂತ್ರ ಇದರಲ್ಲಿ ಅಳವಡಿಸಿದ್ದು ,ಗಾಳಿಯ ಬದಲು ಬಿಸಿ ನೀರನ್ನು ಬಳಸಲಾಗಿದೆ. ನೀರಿನ ಬಾಟಲಿಯ ಹೊರಗಡೆ ಈ ಟರ್ಬೈನ್‌ ಇರಿಸಲಾಗಿದ್ದು ಒಳಗಿನ ಬಿಸಿನೀರಿನಿಂದ ಒತ್ತಡದಿಂದ ಈ ಟರ್ಬೈನ್‌ ಚಲಿಸುವಂತೆ ಮಾಡಿ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತದೆ.

ಬಿಸಿನೀರಿನಿಂದ ಮೊಬೈಲ್‌ ಚಾರ್ಜ್

ಈ ಬಾಟಲ್‌ ಚಾರ್ಜರ್‌ 20 ಲೀಟರ್‌ನ ಜಾರ್‌ ಜೊತೆಗೆ ವಿದ್ಯುತ್‌ ಉತ್ಪಾದನೆಗೆ ಬಿಯುಸಿಟಿ(Backbeard Unidirectional Constant Turbine) ಟರ್ಬೈನ್ ಬಳಸಲಾಗಿದೆ.ಅಲ್ಲದೇ ಸಾಧಾರಣ ನೀರನ್ನು ಬಳಸಿಯೂ ಚಾರ್ಜ್‌ ಮಾಡಬಹುದಾಗಿದೆ.

ರಿಯಾನ್‌ ಜಾನ್‌ಸ್ಟಾನ್‌ ಕಂಡು ಹುಡುಕಿದ ಯೋಜನೆ ಆರಂಭಿಕ ಹಂತದಲ್ಲಿದ್ದು ಇವ ಸಾಧನೆ ಪ್ರೋತ್ಸಾಹ ನೀಡಲು ಇನ್‌ಡಿಗೋಗೊ ಸಂಸ್ಥೆ ಮುಂದೆ ಬಂದಿದೆ. ನೀವು  ಧನಸಾಹಯ ನೀಡುವ ಮೂಲಕ  ಇವನ ಸಾಧನೆಗೆ ಪ್ರೋತ್ಸಾಹಿಸಬಹುದಾಗಿದೆ.
ಈ ಬಾಟಲ್‌ ಚಾರ್ಜರ್‌ನ ಸಂಪೂರ್ಣ ವೀಡಿಯೋ ಮತ್ತು ಧನಸಹಾಯ ನೀಡಲು ಇಲ್ಲಿ ಭೇಟಿ ನೀಡಿ Indiegogo

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot