Subscribe to Gizbot

ಬಿಸಿ ನೀರಿನಿಂದ ಮೊಬೈಲ್‌ ಚಾರ್ಜ್ ಮಾಡಿ!

Written By:

ಗಿಜ್ಬಾಟ್‌ ಇತ್ತೀಚಿಗಷ್ಟೇ ಮೊಬೈಲ್‌ ಬ್ಯಾಟರಿ ಉಳಿತಾಯಕ್ಕೆ ಸಂಬಂಧಿಸಿದಂತೆ 9 ಟಿಪ್ಸ್‌ ತಂದಿತ್ತು. ಆದ್ರೆ ಈಗ ಇನ್ನೊಂದು ಹೊಸ ಸುದ್ದಿ ಬಂದಿದೆ. ಇನ್ನು ಮುಂದೆ ನೀವು ಪವರ್‌ ಹೊದ್ರೆ ಮೊಬೈಲ್‌ ಚಾರ್ಜಿಂಗ್‌ ಚಿಂತೆ ಮಾಡಬೇಕಾಗಿಲ್ಲ. ಬಿಸಿಯಾದ ಕಾಫಿ ಮತ್ತು ತಣ್ಣನೆಯ ಬೀರ್‌ನಿಂದ ಮೊಬೈಲ್‌ನ್ನು ಚಾರ್ಜ್ ಮಾಡಬಹುದು.!

ವಾಷಿಂಗ್‌ಟನ್‌ ಎಪ್ಪಿಹನಿ ಲ್ಯಾಬ್‌ನವರು ಸ್ಟಿರ್ಲಿಂಗ್‌ ಇಂಜಿನ್‌ ಆಧಾರಿತ ಈ ಚಾರ್ಜರ್ ತಯಾರಿಸಿದ್ದು ಪ್ರಾಯೋಗಿಕ ಪರೀಕ್ಷೆಯಲ್ಲಿ ಈ ಚಾರ್ಜರ್‌ ಯಶಸ್ವಿಯಾಗಿದೆ.

ಬಿಸಿ ನೀರಿನಿಂದ ಮೊಬೈಲ್‌ ಚಾರ್ಜ್ ಮಾಡಿ!

ಈ ಸಾಧನದಲ್ಲಿ ಎರಡು ಭಾಗವಿದ್ದು ನೀಲಿ ಬಣ್ಣದ ಭಾಗದಲ್ಲಿ ತಂಪು ಪಾನೀಯವನ್ನಿಟ್ಟರೆ, ಕೆಂಪು ಬಣ್ಣದ ಭಾಗದಲ್ಲಿ ಬಿಸಿಯಾದ ಪಾನೀಯವನ್ನು ಇಟ್ಟು ಮೊಬೈಲ್‌ ಚಾರ್ಜ್‌ ಮಾಡಬಹುದು.
ಈಗಾಗ್ಲೇ ಇದರಲ್ಲಿ ಐಫೋನ್‌,ಆಂಡ್ರಾಯ್ಡ್‌,ಐ ಪಾಡ್‌ ಮತ್ತು ಯುಎಸ್‌ಬಿ ಆಧಾರಿತ ಯಾವುದೇ ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದು ಈ ಸಾಧನವನ್ನು ತಯಾರಿಸಿದ ಎಪ್ಪಿಹನಿ ಲ್ಯಾಬ್‌ ಹೇಳಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot