Home
ಸುದ್ದಿಜಾಲ

ಚಾಟ್‌ GPT ಉತ್ತರಾಧಿಕಾರಿ GPT-4 ಲಾಂಚ್‌; ಇದರ ಸಾಮರ್ಥ್ಯ ಅಷ್ಟಿಷ್ಟಲ್ಲ!

ಇತ್ತೀಚೆಗೆ ಚಾಟ್‌ ಜಿಪಿಟಿ (Chat GPT) ಟೆಕ್‌ ವಲಯದಲ್ಲಿ ಬಾರೀ ಸದ್ದು ಮಾಡುತ್ತಿವೆ. ಇದನ್ನೇ ಅನುಸರಿಸಿಕೊಂಡು ಇನ್ನಿತರೆ ಕಂಪೆನಿಗಳು ಸಹ ಎಐ ಆಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಮುಂದಾಗುತ್ತಿವೆ. ಈ ಎಲ್ಲಾ ಬೆಳವಣಿಗೆ ನಡುವೆ ಚಾಟ್GPT ಉತ್ತರಾಧಿಕಾರಿಯಾಗಿ ಮತ್ತೊಂದು GPT-4 ಅನ್ನು ಪರಿಚಯಿಸಲಾಗಿದೆ.

ಹೌದು, ಓಪನ್‌ಎಐನ ಚಾಟ್‌ GPT ಉತ್ತರಾಧಿಕಾರಿಯಾಗಿ GPT-4 ಅನ್ನು ಪರಿಚಯಿಸಲಾಗಿದ್ದು, ಇದು ಹಲವಾರು ಪ್ರಮುಖ ಪರೀಕ್ಷೆಗಳನ್ನು ಎದುರಿಸಿದೆ. ಅದರಂತೆ ಹಳೆಯ ಆವೃತ್ತಿಗಿಂತ ಅತ್ಯಂತ ವಿಶಿಷ್ಟವಾದ ಸೇವೆಯನ್ನು ಈ ಮೂಲಕ ಪಡೆಯಬಹುದು ಎಂದು ತಿಳಿದು ಬಂದಿದೆ. ಹಾಗಿದ್ರೆ, ಈ ಹೊಸ ಚಾಟ್‌ GPT-4 ನಿಂದ ಏನೆಲ್ಲಾ ಉಪಯೋಗ, ಇದನ್ನು ಹೇಗೆ ಬಳಕೆ ಮಾಡಬಹುದು ಎಂಬುದನ್ನು ಗಮನಿಸೋಣ.

ಚಾಟ್‌ GPT ಉತ್ತರಾಧಿಕಾರಿ GPT-4 ಲಾಂಚ್‌; ಇದರ ಸಾಮರ್ಥ್ಯ ಅಷ್ಟಿಷ್ಟಲ್ಲ!

ಸುಮಾರು ಆರು ತಿಂಗಳ ಹಿಂದೆ ಚಾಟ್‌ GPT ಯನ್ನು ಟೆಕ್‌ ವಲಯಕ್ಕೆ ಪರಿಚಯಿಸಲಾಗಿತ್ತಾದರೂ ಎಷ್ಟು ಸಾಧ್ಯವೋ ಅಷ್ಟು ಬೇಗ ಇದರ ಮಹತ್ವ ಎಲ್ಲಾ ಕಡೆ ಹರಡಿತು. ಇದನ್ನು ಬಳಕೆ ಮಾಡಿಕೊಂಡು ಕೋಡ್ ಬರೆಯುವುದು, ಕವನ ರಚಿಸುವುದು, ಕಷ್ಟವಾದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದನ್ನು ಮಾಡಲಾಯಿತು. ನಿರೀಕ್ಷೆಗೂ ಮೀರಿದ ಸೌಲಭ್ಯ ಇದರಿಂದ ಲಭ್ಯವಾಗುತ್ತಿದೆಯಾದರೂ ಇದನ್ನೂ ಮೀರಿಸಿದ GPT-4 ಅನ್ನು ಈಗ ಪರಿಚಯಿಸಲಾಗಿದೆ.

ಈ ಹೊಸ GPT-4 ಅನ್ನು ಹಿಂದಿನ ಆವೃತ್ತಿಗೆ ಹೋಲಿಕೆ ಮಾಡಿದರೆ ಇದು ದೊಡ್ಡ ಮತ್ತು ಹೆಚ್ಚು ಸಂಕೀರ್ಣವಾದ ಪ್ರಶ್ನೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಓಪನ್‌ಎಐ ಸ್ಪಷ್ಟಪಡಿಸಿದೆ. ಅದರಲ್ಲೂ ಇದು ಚಾಟ್‌ಬಾಟ್‌ಗೆ ಚಿತ್ರಗಳನ್ನು ಇನ್‌ಪುಟ್‌ಗಳಾಗಿ ಸ್ವೀಕರಿಸಲು ಮತ್ತು ಅದಕ್ಕೆ ಅನುಗುಣವಾಗಿ ಔಟ್‌ಪುಟ್ ಅನ್ನು ನೀಡಲು ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ.

ಚಾಟ್‌ GPT ಉತ್ತರಾಧಿಕಾರಿ GPT-4 ಲಾಂಚ್‌; ಇದರ ಸಾಮರ್ಥ್ಯ ಅಷ್ಟಿಷ್ಟಲ್ಲ!

ಈ ಚಾಟ್‌GPT-4 ನ ಸಾಮರ್ಥ್ಯವನ್ನೇನು ತಿಳಿದುಕೊಂಡಿರಿ. ಹಾಗಿದ್ರೆ, ಇದಕ್ಕೆ ನೀವು ಯಾವ ರೀತಿ ಬಳಕೆ ಮಾಡಬಹುದು ಎಂಬುದನ್ನು ಇಲ್ಲಿ ಗಮನಿಸಿ. ಹಿಂದಿನ ಚಾಟ್‌ GPT AI ಚಾಟ್‌ಬಾಟ್‌ನಂತೆಯೇ ಈ ಚಾಟ್‌ GPT-4 ಗೆ ಎಂಟ್ರಿಯಾಗಬಹುದಾಗಿದ್ದು, ಇದನ್ನು ಬಳಕೆ ಮಾಡಬೇಕು ಎಂದರೆ ನೀವು ಚಾಟ್‌ GPT ಪ್ಲಸ್ ಸದಸ್ಯರಾಗಿರಬೇಕಾಗಿದೆ. ಯಾಕೆಂದರೆ ಈ ಹಿಂದೆ ಲಾಂಚ್‌ ಮಾಡಲಾದ ಚಾಟ್‌ GPT ಯಶಸ್ವಿಯಾದ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ.

ಇದಕ್ಕಾಗಿ ನೀವು ನಿಮ್ಮ ಸ್ಮಾರ್ಟ್‌ ಡಿವೈಸ್‌ನಲ್ಲಿ ಓಪನ್‌ ಎಐ ಖಾತೆಗೆ ಲಾಗ್ ಇನ್ ಮಾಡಿ. ಆ ಬಳಿಕ ಚಾಟ್‌ GPT ತೆರೆಯಿರಿ. ಅದರಲ್ಲಿ ನೀವು ಚಾಟ್‌ GPT ಪ್ಲಸ್‌ಗೆ ಅಪ್‌ಗ್ರೇಡ್ ಮಾಡಲು ಎಡಭಾಗದ ಮೆನುವಿನಲ್ಲಿ 'ಅಪ್‌ಗ್ರೇಡ್ ಟು ಪ್ಲಸ್' ಎಂಬ ಆಯ್ಕೆ ಕಾಣುತ್ತದೆ. ಅದನ್ನು ಕ್ಲಿಕ್‌ ಮಾಡಿದರೆ ಸಾಕು ನೀವು ಹೊಸ ಆವೃತ್ತಿಯ ಚಾಟ್‌ಜಿಪಿಟಿ ಬಳಕೆ ಮಾಡಲು ಸಜ್ಜಾಗಬಹುದು. ಇದರಿಂದ ನೀವು ಈ ಉತ್ತಮವಾದ ಅನುಭವವನ್ನು ಪಡೆದುಕೊಳ್ಳಬಹುದು.

ಈ ಚಾಟ್‌ GPT-4 ನ ಓಪನ್ ಎಐ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ನಾವು GPT-4 ಅನ್ನು ರಚಿಸಿದ್ದೇವೆ, ಆಳವಾದ ಕಲಿಕೆಯನ್ನು ಹೆಚ್ಚಿಸುವಲ್ಲಿ ಓಪನ್‌ಎಐ ನ ಪ್ರಯತ್ನದಲ್ಲಿ ಇದು ಇತ್ತೀಚಿನ ಮೈಲಿಗಲ್ಲಾಗಿದೆ. GPT-4 ಒಂದು ದೊಡ್ಡ ಮಲ್ಟಿಮೋಡಲ್ ಆಗಿದ್ದು, ಚಿತ್ರ ಮತ್ತು ಪಠ್ಯ ಇನ್‌ಪುಟ್‌ಗಳನ್ನು ಸ್ವೀಕರಿಸುವುದು, ಪಠ್ಯ ಔಟ್‌ಪುಟ್‌ಗಳನ್ನು ನೀಡುವ ಕೆಲಸ ಸಹ ಮಾಡುತ್ತದೆ ಎಂದು ಉಲ್ಲೇಖಿಸಲಾಗಿದೆ.

ಚಾಟ್‌ GPT ಉತ್ತರಾಧಿಕಾರಿ GPT-4 ಲಾಂಚ್‌; ಇದರ ಸಾಮರ್ಥ್ಯ ಅಷ್ಟಿಷ್ಟಲ್ಲ!

ಹಾಗೆಯೇ ಚಾಟ್‌ GPT-4 ಉತ್ತೀರ್ಣ ಮಾಡಿದ ಪರೀಕ್ಷೆಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದ್ದು, ಉತ್ತಮ ಅಂಕ ಗಳಿಸಿಕೊಂಡಿದೆ. ಇದರಲ್ಲಿ LSAT ಅನ್ನು 88 ಶೇಕಡಾವಾರು ಮತ್ತು SAT ಗಣಿತವನ್ನು 89 ಶೇಕಡಾವಾರುವಿನೊಂದಿಗೆ ಉತ್ತೀರ್ಣಗೊಂಡಿದೆ. ಹಾಗೆಯೇ GRE ಕ್ವಾಂಟಿಟೇಟಿವ್ ಪರೀಕ್ಷೆಯಲ್ಲಿ 80 ಶೇಕಡಾವಾರು ಮತ್ತು GRE ಮೌಖಿಕ ಮತ್ತು ಬರವಣಿಗೆ ಪರೀಕ್ಷೆಗಳಲ್ಲಿ ಕ್ರಮವಾಗಿ 99 ಶೇಕಡಾವಾರು ಮತ್ತು 54 ಶೇಕಡಾವಾರುವಿನೊಂದಿಗೆ ಉತ್ತೀರ್ಣಗೊಂಡಿದೆ.

Best Mobiles in India

English summary
GPT-4 was introduced as the successor of Chat GPT, which has undergone several major tests.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+