Home
ಸುದ್ದಿಜಾಲ

Chat GPT :ಆಂಡ್ರಾಯ್ಡ್‌ಗಾಗಿ ಚಾಟ್‌ಜಿಪಿಟಿ ಆಪ್‌ ಶೀಘ್ರದಲ್ಲೇ ಲಭ್ಯ: ಚಿಂತೆಗೀಡಾದ ಬಾರ್ಡ್‌!?

ಇಂದಿನ ದಿನಗಳಲ್ಲಿ ಎಐ ಬಳಕೆ ವ್ಯಾಪಕವಾಗುತ್ತಿದ್ದು, ಪ್ರಮುಖ ಕಂಪೆನಿಗಳು ಸಹ ಸುಧಾರಿತ ಸೌಲಭ್ಯದೊಂದಿಗೆ ಹೊಸ ಹೊಸ ಟೂಲ್ಸ್‌ ಪರಿಚಿಸಲು ಮುಂದಾಗಿವೆ. ಅದರಲ್ಲೂ ಹೆಚ್ಚು ಬಳಕೆಯಲ್ಲಿರುವ ಓಪನ್‌ಎಐ ನ ಚಾಟ್‌ಜಿಪಿಟಿ ಯನ್ನು ಇನ್ಮುಂದೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲೂ ಆಪ್‌ ಮೂಲಕ ಬಳಕೆ ಮಾಡಿಕೊಳ್ಳಬಹುದಾಗಿದೆ.

ಹೌದು, ಓಪನ್‌ ಎಐ ಇದೀಗ ಚಾಟ್‌ಜಿಪಿಟಿ ಅಪ್ಲಿಕೇಶನ್‌ನ ಆಂಡ್ರಾಯ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಹಿಂದೆ ಚಾಟ್‌ಜಿಪಿಟಿಯ ನಕಲಿ ಆಪ್‌ಗಳು ಭಾರೀ ಸದ್ದು ಮಾಡಿದ್ದವು. ಈ ಮೂಲಕ ಹಲವಾರು ಜನರು ಮೋಸ ಸಹ ಹೋಗಿದ್ದಾರೆ. ಆದರೆ, ಕೊನೆಗೂ ಓಪನ್‌ ಎಐ ಈಗ ಆಂಡ್ರಾಯ್ಡ್‌ ಬಳಕೆದಾರರಿಗೆ ಗುಡ್ ನ್ಯೂಸ್‌ ನೀಡಿದೆ. ಹಾಗಿದ್ರೆ, ಇದು ಎಂದಿನಿಂದ ಮೊಬೈಲ್‌ ಆಪ್‌ ಲಭ್ಯ?, ಇದು ಗೂಗಲ್‌ ಬಾರ್ಡ್‌ಗೆ ಹೇಗೆ ಪೈಪೋಟಿ? ಎಂಬಿತ್ಯಾದಿ ಇಲ್ಲಿದೆ ನೋಡಿ.

ಆಂಡ್ರಾಯ್ಡ್‌ಗಾಗಿ ಚಾಟ್‌ಜಿಪಿಟಿ ಆಪ್‌ ಶೀಘ್ರದಲ್ಲೇ ಲಭ್ಯ: ಚಿಂತೆಗೀಡಾದ ಬಾರ್ಡ್‌!?

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಚಾಟ್‌ ಜಿಪಿಟಿ: ಐಓಎಸ್‌ ಗಾಗಿ ಚಾಟ್‌ಜಿಪಿಟಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ ನಂತರ, ಓಪನ್‌ ಎಐ ಈಗ ಆಂಡ್ರಾಯ್ಡ್‌ ಆವೃತ್ತಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಅಪ್ಲಿಕೇಶನ್ ಅನ್ನು ಈಗಾಗಲೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಪಟ್ಟಿ ಮಾಡಲಾಗಿದ್ದು, ಈ ಆಪ್‌ ಮುಂದಿನ ವಾರದಿಂದಲೇ ಲಭ್ಯವಿರುತ್ತದೆ ಮತ್ತು ಬಳಕೆದಾರರು ಇಂದಿನಿಂದ ಪ್ಲೇ ಸ್ಟೋರ್‌ ಮೂಲಕ ಪ್ರೀ ಆರ್ಡರ್‌ ಮಾಡಬಹುದು ಎಂದು ಕಂಪೆನಿಯು ಅಧಿಕೃತವಾಗಿ ಟ್ವಿಟ್ಟರ್‌ ಮೂಲಕ ಮಾಹಿತಿ ನೀಡಿದೆ.

ಮುಂದಿನ ವಾರ ಎಂದಷ್ಟೇ ತಿಳಿಸಿದಲಾಗಿದ್ದು, ನಿಖರವಾಗಿ ಯಾವ ದಿನಾಂಕದಂದು ಈ ಆಪ್‌ ಬಳಕೆಗೆ ಲಭ್ಯ ಇರುತ್ತದೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಅದರಂತೆ ನೀವೇನಾದರೂ ಈ ಆಪ್‌ ಅನ್ನು ಬಳಕೆ ಮಾಡಬೇಕು ಎಂದರೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಮೂಲಕ ಚಾಟ್‌ಜಿಪಿಟಿ ಆಪ್‌ ಯಾವಾಗ ಬರಲಿದೆ ಎಂಬ ಪ್ರಶ್ನೆಗೆ ಈಗ ತೆರೆ ಎಳೆಯಲಾಗಿದೆ.

ಮೊಬೈಲ್‌ನಲ್ಲಿ ಇದು ಹೇಗೆ ಸಹಾಯಕ?: ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಲು ಇಂಟರ್‌ನೆಟ್‌ನಲ್ಲಿ ಜಾಲಾಡುವುದು ಸಾಮಾನ್ಯ. ಆದರೆ ಚಾಟ್‌ಜಿಪಿಟಿ ಒಂದು ಸಹಾಯಕವಾದ ಚಾಟ್‌ಬಾಟ್ ಆಗಿದ್ದು, ಅದು ನಿಮ್ಮ ಯಾವುದೇ ಪ್ರಶ್ನೆಗಳಿಗೆ ಮಾಹಿತಿ ನೀಡುತ್ತದೆ. ಅಷ್ಟು ಮಾತ್ರವಲ್ಲದೆ ಓರ್ವ ಸ್ನೇಹಿತನಂತೆ ನಿಮ್ಮೊಂದಿಗೆ ಸಂಭಾಷಣೆ ನಡೆಸುತ್ತೆ. ಅದರಂತೆ ಮೇ ತಿಂಗಳಲ್ಲಿ ಐಒಎಸ್‌ಗಾಗಿ ಪ್ರಾರಂಭವಾದಾಗಿನಿಂದ ಅನೇಕ ಜನರು ಆಂಡ್ರಾಯ್ಡ್ ಬಿಡುಗಡೆಗಾಗಿ ಕಾಯುತ್ತಿದ್ದರು.

ಚಾಟ್‌ಬಾಟ್ ಸ್ಪರ್ಧೆ: ಈ ವಿಭಾಗದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಚಾಟ್‌ಬಾಟ್ ಜಗತ್ತಿನಲ್ಲಿ ಸ್ಪರ್ಧೆಯು ಹೆಚ್ಚಾಗುತ್ತಿದೆ. ಯಾಕೆಂದರೆ ಗೂಗಲ್‌ ನ ಬಾರ್ಡ್ ಚಾಟ್‌ಬಾಟ್‌ಗೆ ಈಗ ಕೊಂಚ ಹಿನ್ನೆಡೆಯಾಗಿದೆ ಎಂದೂ ಸಹ ಹೇಳಬಹುದು. ಚಾಟ್‌ಜಿಪಿಟಿ ಗಿಂತ ಭಿನ್ನವಾಗಿ ಬಾರ್ಡ್ ಮೀಸಲಾದ ಮೊಬೈಲ್ ಆಪ್‌ ಅನ್ನು ಹೊಂದಿಲ್ಲ. ಬದಲಾಗಿ ಇದು ವೆಬ್ ಆಧಾರಿತ ಇಂಟರ್ಫೇಸ್ ಅನ್ನು ಅವಲಂಬಿಸಿದೆ. ಈ ಕಾರಣಕ್ಕೆ ಈಗ ಚಾಟ್‌ಜಿಪಿಟಿ ಹಾಗೂ ಬಾರ್ಡ್‌ ನಡುವೆ ಸ್ಪರ್ಧೆ ಉಂಟಾಗಲಿದೆ.

ಅದಾಗ್ಯೂ ಚಾಟ್‌ಜಿಪಿಟಿ ಮೊಬೈಲ್‌ ಆಪ್‌ ಬರುವವರೆಗೂ ಕಾಯಲು ಸಾಧ್ಯವಿಲ್ಲ ಎಂದಾದರೆ ನೀವು ಮೈಕ್ರೋಸಾಫ್ಟ್‌ ನ ಬಿಂಗ್‌ ಆಪ್‌ ಬಳಕೆ ಮಾಡಬಹುದು. ಬಿಂಗ್‌ ತನ್ನ ಪ್ರಮೀತಿಯಸ್ ಮಾಡೆಲ್ ಮತ್ತು ಜಿಪಿಟಿ-4 ಅನ್ನು ಬಳಸಿಕೊಂಡು ಫೆಬ್ರವರಿಯಿಂದ ಆಂಡ್ರಾಯ್ಡ್‌ ಮತ್ತು ಐಓಎಸ್‌ ಎರಡರಲ್ಲೂ ಸೇವೆ ನೀಡುತ್ತಿದೆ. ಆದ್ದರಿಂದ ನೀವು ಚಾಟ್‌ಬಾಟ್‌ಗಾಗಿ ಹುಡುಕುತ್ತಿದ್ದರೆ ಬಿಂಗ್ ನಿಮಗೆ ತಾತ್ಕಾಲಿಕ ಪರಿಹಾರವಾಗಿದೆ.

ಆಂಡ್ರಾಯ್ಡ್‌ಗಾಗಿ ಚಾಟ್‌ಜಿಪಿಟಿ ಆಪ್‌ ಶೀಘ್ರದಲ್ಲೇ ಲಭ್ಯ: ಚಿಂತೆಗೀಡಾದ ಬಾರ್ಡ್‌!?

ಚಾಟ್‌ಜಿಪಿಟಿ ಎಂದರೆ ಚಾಟ್ ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್‌ಫಾರ್ಮರ್ ಎಂದರ್ಥ. ಇದನ್ನು ಓಪನ್‌ ಎಐ ನವೆಂಬರ್ 30, 2022 ರಂದು ಆರಂಭಿಸಿದ್ದು, ಬಳಕೆದಾರರು ಬಯಸಿದಂತೆ ಯಾವುದೇ ಸಂಭಾಷಣೆಯನ್ನು ಸಂಸ್ಕರಿಸಲು ಮತ್ತು ನಿರ್ದೇಶಿಸಲು ಇದು ಕೆಲಸ ಮಾಡುತ್ತದೆ. ಸಂವಾದದ ಪ್ರತಿ ಹಂತದಲ್ಲೂ ಒಂದು ಸಂದರ್ಭವಾಗಿ ಅನುಕ್ರಮ ಪ್ರಾಂಪ್ಟ್‌ಗಳು ಮತ್ತು ಪ್ರತ್ಯುತ್ತರಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಈ ನಡುವೆ ಅದೆಷ್ಟೋ ಜನರು ಈ ಚಾಟ್‌ಜಿಪಿಟಿ ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ, ದೇಹದ ಅಂದ ಹೆಚ್ಚಿಗೆ ಮಾಡಿಕೊಂಡಿದ್ದಾರೆ, ದೇಹದ ತೂಕ ಇಳಿಸಿಕೊಡಿದ್ದಾರೆ, ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ, ಇದರೊಂದಿಗೆ ಹಲವಾರು ಉದ್ಯೋಗಿಗಳಿಗೂ ಸಹ ತೊಂದರೆ ಉಂಟು ಮಾಡಿದೆ. ಈ ಮೂಲಕ ಇದು ಅನುಕೂಲವೂ ಹೌದು ಹಾಗೂ ಅನಾನುಕೂಲವೂ ಹೌದು.

Best Mobiles in India

English summary
OpenAI is now ready to release the Android version of the ChatGPT app. Anyone who wants to install chatgpt app has to register.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+