ChatGPT ಸಂಸ್ಥೆಯಿಂದ ಮತ್ತೆ ಹೊಸ ಟೂಲ್‌; ಇದು ಟೆಕ್‌ ಲೋಕದ ಅಚ್ಚರಿ!

|

ಸದ್ಯ ಟೆಕ್‌ ವಲಯದಲ್ಲಿ ChatGPT ಟೂಲ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ChatGPT ಟೂಲ್‌ AI ಆಧಾರಿತವಾಗಿದ್ದು, ಇದು ಬಹುತೇಕ ಮನುಷ್ಯರಂತೆ ಸಂವಹನ ನಡೆಸುವ ಚಾಟ್‌ಬಾಟ್‌ ಆಗಿದೆ. ಬಳಕೆದಾರರು ChatGPT ಮೂಲಕ ಯಾವುದೇ ಪ್ರಶ್ನೆಗೆ ಸುಲಭವಾಗಿ ಪಠ್ಯ ರೂಪದಲ್ಲಿ ಉತ್ತರ ಪಡೆಯಬಹುದಾಗಿದೆ. ಹೀಗಾಗಿ ಪರಿಚಿತವಾದ ಒಂದೇ ತಿಂಗಳಿನಲ್ಲಿ ಮಿನಿಯನ್‌ಗೂ ಅಧಿಕ ಬಳಕೆದಾರರನ್ನು ಒಳಗೊಂಡಿದೆ.

ChatGPT ಸಂಸ್ಥೆಯಿಂದ ಮತ್ತೆ ಹೊಸ ಟೂಲ್‌; ಇದು ಟೆಕ್‌ ಲೋಕದ ಅಚ್ಚರಿ!

ಹೌದು, OpenAI ಸಂಸ್ಥೆಯು ಅಭಿವೃದ್ಧಿಪಡಿಸಿರುವ ChatGPT ಟೂಲ್ ಅತ್ಯುತ್ತಮ AI ಚಾಟ್‌ಬಾಟ್‌ ಆಗಿದ್ದು, ವಿದ್ಯಾರ್ಥಿಗಳು ಸೇರಿದಂತೆ ಹಲವು ವಲಯದ ಬಳಕೆದಾರರು ಇದರ ಕಾರ್ಯವೈಖರಿಗೆ ಅಚ್ಚರಿಪಟ್ಟಿದ್ದಾರೆ. ಆದರೆ ಸಂಸ್ಥೆಯ ಮತ್ತೊಂದು ಟೂಲ್‌ ಪರಿಚಯಿಸಿದ್ದು, ಇದು ಬಳಕೆದಾರರಿಗೆ ದೊಡ್ಡ ಅಚ್ಚರಿ ನೀಡಿದೆ. ಏಕೆಂದರೆ ಈ ನೂತನ ಟೂಲ್ AI ಮೂಲಕ ಪಡೆದ ಪಠ್ಯವನ್ನು (AI-generated content) ಪತ್ತೆ ಮಾಡುತ್ತದೆ.

ಸಂಸ್ಥೆಯು ಇದೀಗ AI ಆಧರಿತ ಕಂಟೆಂಟ್‌/ ಪಠ್ಯವನ್ನು ಪತ್ತೆ ಮಾಡುವ ಹೊಸ ಟೂಲ್‌ ಅನ್ನು ಶುರು ಮಾಡಿದೆ. ಉದಾಹರಣೆಗೆ, ChatGPT ಮೂಲಕ ಪಡೆದ ಕಂಟೆಮಟ್‌ ಅನ್ನು, ನೂತನ ಟೂಲ್‌ ಬಳಸಿಕೊಂಡು ಅದನ್ನು ಕಂಡುಹಿಡಿಯಬಹುದು.

ChatGPT ಸಂಸ್ಥೆಯಿಂದ ಮತ್ತೆ ಹೊಸ ಟೂಲ್‌; ಇದು ಟೆಕ್‌ ಲೋಕದ ಅಚ್ಚರಿ!

ನೂತನ AI ಪತ್ತೆ ಮಾಡುವ ಟೂಲ್‌ ಅನ್ನು The AI Text Classifier ಎಂಬ ಹೆಸರಿನಿಂದ ಕರೆಯಲಾಗಿದೆ. ಇದು ChatGPT ಟೂಲ್‌ನಂತಹ ಇತರೆ ಯಾವುದೇ AI ಆಧಾರಿತ ಟೂಲ್ ನಿಂದ ಪಠ್ಯವನ್ನು ರಚಿಸಲಾಗಿದೆಯೇ ಎಂದು ಮುನ್ಸೂಚಿಸುವ GPT ಮಾದರಿಯಾಗಿದೆ. ಈ Classifier ಟೂಲ್ AI ಸಾಕ್ಷರತೆಯ ಕುರಿತು ಚರ್ಚೆಗಳನ್ನು ಹುಟ್ಟುಹಾಕುವ ಡಿವೈಸ್‌ ಆಗಿ ಲಭ್ಯವಿದೆ.

The AI Text Classifier ಟೂಲ್‌

ಆದಾಗ್ಯೂ, The AI Text Classifier ಟೂಲ್‌ ಬಳಸಿಕೊಂಡು AI ಆಧರಿತ ಕಂಟೆಂಟ್‌ ಅನ್ನು ಪತ್ತೆ ಮಾಡಬೇಕಿದ್ದರೆ, ಡೈಲಾಗ್‌ ಬಾಕ್ಸ್‌ನಲ್ಲಿ ಕಂಟೆಂಟ್‌ನ ಸುಮಾರು 250 ಪದಗಳನ್ನು ಹಾಕಿ ಪರಿಶೀಲಿಸಬೇಕಿದೆ. ನೂತನ ಟೂಲ್‌ನಲ್ಲಿ ಕಂಟೆಂಟ್‌ ಮೂಲ ಪತ್ತೆ ಮಾಡಲು, ಕನಿಷ್ಠ 250 ಪದಗಳ ಇರಬೇಕು. ಇಲ್ಲವೇ ಅದಕ್ಕಿಂತಲೂ ಅಧಿಕ ಪದಗಳಿರಬಹುದು ಎಂದು OpenAI ಹೇಳಿದೆ.

ಅಂದಗಹಾಗೆ AI ಆಧರಿತ ಕಂಟೆಂಟ್‌/ ಪಠ್ಯವನ್ನು ಎಡಿಟ್ ಮಾಡಬಹುದಾಗಿದ್ದು, ಒಂದು ವೇಳೆ ಎಡಿಟ್‌ ಮಾಡಿ ಕಂಟೆಂಟ್‌ ಪರಿಶೀಲಿಸಿದರೆ ಅದು ತಪ್ಪಾದ ಲೇಬಲ್ ಮಾಡಬಹುದು ಎನ್ನಲಾಗಿದೆ. ಹಾಗೆಯೇ ಮಕ್ಕಳು ಬರೆದ ಪಠ್ಯ ಮತ್ತು ಇಂಗ್ಲಿಷ್ ಭಾಷೆಯಲ್ಲಿಲ್ಲದ ಪಠ್ಯದ ಮೇಲೆ ತಪ್ಪಾಗಿ ಲೇಬಲ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ, The AI Text Classifier ಟೂಲ್‌ ಪ್ರಾಥಮಿಕವಾಗಿ ವಯಸ್ಕರು ಬರೆದ ಇಂಗ್ಲಿಷ್‌ ಕಂಟೆಂಟ್‌ ಮೇಲೆ ತರಬೇತಿ ಹೊಂದಿದೆ.

ChatGPT ಸಂಸ್ಥೆಯಿಂದ ಮತ್ತೆ ಹೊಸ ಟೂಲ್‌; ಇದು ಟೆಕ್‌ ಲೋಕದ ಅಚ್ಚರಿ!

ಏನಿದು ChatGPT? ಹೇಗೆ ಕೆಲಸ ಮಾಡುತ್ತೆ?
ChatGPT ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧನಾ ಸಂಸ್ಥೆ OpenAI ಅಭಿವೃದ್ಧಿಪಡಿಸಿದ AI ಬೆಂಬಲಿತ ಚಾಟ್‌ಬಾಟ್ ಆಗಿದೆ. ಈ ಚಾಟ್‌ಬಾಟ್ ಬಳಕೆದಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ/ ಉತ್ತರಗಳನ್ನು ರಚಿಸಲು ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂದು ಕರೆಯಲ್ಪಡುವ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ.

ChatGPT AI ಇಂಟರ್ನೆಟ್ ಟೆಕ್ಸ್ಟ್‌ ಡೇಟಾಸೆಟ್‌ನಲ್ಲಿ ತರಬೇತಿ ಪಡೆದಿದ್ದು, ಮನುಷ್ಯರ ತರಹ ಉತ್ತರಗಳನ್ನು ರಚಿಸಲು ಸಾಧ್ಯವಾಗುತ್ತದೆ. ಭಾಷಾ ಅನುವಾದ, ಟೆಕ್ಸ್ಟ್‌ ವಿವರಣೆಗಳಿಗಾಗಿ ವಿವಿಧ ನೈಸರ್ಗಿಕ ಭಾಷಾ ಸಂಸ್ಕರಣಾ ಕಾರ್ಯಗಳಿಗೆ ChatGPT ಅನ್ನು ಬಳಸಬಹುದು. ಇದರೊಂದಿಗೆ ಪ್ರಶ್ನೆಗೆ ಉತ್ತರಿಸುವುದನ್ನು ಈ ಚಾಟ್‌ಬಾಟ್‌ ಮಾಡುತ್ತದೆ.

ChatGPT ಬಳಕೆ ಮಾಡಲು ಈ ಕ್ರಮ ಅನುಸರಿಸಿ:
* ಅಧಿಕೃತ chat.openai.com ವೆಬ್‌ಸೈಟ್‌ಗೆ ತೆರೆಯಿರಿ
* ಬಳಿಕ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್‌ ನಂಬರ್‌ ಅನ್ನು ಬಳಸಿ ಲಾಗಿನ್ ಮಾಡಿ. ಇಲ್ಲವೇ ಸೈನ್ ಅಪ್ ಮಾಡಿರಿ.
* ತದ ನಂತರ ಬಳಕೆದಾರರು ತಮ್ಮ ವಾಟ್ಸಾಪ್‌ ನಂಬರ್‌ ಅನ್ನು ಸಹ ಬಳಸಬಹುದು.
* ಸೈನ್ ಅಪ್ ಮಾಡಿದ ನಂತರ ಮುಖ್ಯ ವಿಂಡೋ ತೆರೆಯುತ್ತದೆ.
* ಬಳಿಕ info about ChatGPT ನಡಿ, ಸರ್ಚ್ ಬಾರ್ ಅನ್ನು ಕಾಣುವಿರಿ.
* ಸರ್ಚ್ ಬಾರ್ ನಲ್ಲಿ ಪ್ರಶ್ನೆಯನ್ನು ಬರೆಯಿರಿ ಮತ್ತು ನಮೂದಿಸಿ.
* ಆ ಬಳಿಕ ಚಾಟ್‌ಬಾಟ್‌ AI ಕೆಲವು ಸೆಕೆಂಡುಗಳಲ್ಲಿ, ಕೇಳಲಾದ ಪ್ರಶ್ನೆಗೆ ಸಂಬಂಧಿಸಿದ ಪ್ರಾಂಪ್ಟ್ ಅನ್ನು ನೀಡುತ್ತದೆ.

Best Mobiles in India

Read more about:
English summary
ChatGPT creator OpenAI launches new tool. This new tool will easily detect AI-powered content. This is really a new surprise in the tech world. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X