Home
ಸುದ್ದಿಜಾಲ

ChatGPT ಸ್ಥಗಿತ!..ಬಳಕೆದಾರರಿಗೆ ಲಾಗಿನ್‌ ಮಾಡಲು ಸಾಧ್ಯವಾಗುತ್ತಿಲ್ಲ!

ಟೆಕ್‌ ವಲಯದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಚಾಟ್‌ಜಿಪಿಟಿ (ChatGPT) ಕೆಲಸ ನಿರ್ವಹಿಸುತ್ತಿಲ್ಲ, ಡೌನ್‌ ಆಗಿದೆ ಎಂದು ವರದಿಯಾಗಿದೆ. ಪ್ರಪಂಚದಾದ್ಯಂತ ಚಾಟ್‌GPT ಬಳಕೆದಾರರು ಓಪನ್‌AI ಸಮಸ್ಯೆಗಳ ಬಗ್ಗೆ ದೂರು ನೀಡುತ್ತಾರೆ. ಚಾಟ್‌GPT AI ಆಧಾರಿತ ಚಾಟ್‌ಬಾಟ್ ಟೂಲ್‌ ಆಗಿದ್ದು, ಏನೇ ಕೇಳಿದರು, ಮಾಹಿತಿ ನೀಡಬಲ್ಲದು.

ಹೌದು, ಆನ್‌ಲೈನ್ ಸೇವೆಯ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ಡೌನ್‌ಡೆಕ್ಟರ್ ಸೈಟ್‌ನಲ್ಲಿ ಸ್ಪೈಕ್ ಅನ್ನು ತೋರಿಸುತ್ತಿದೆ. ಇಲ್ಲಿ ಸುಮಾರು 1,200 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆಯನ್ನು ವರದಿ ಮಾಡಿದ್ದಾರೆ. ಹಾಗೆಯೇ ಟ್ವಿಟರ್‌ನಲ್ಲಿ ಬಳಕೆದಾರರು ಚಾಟ್‌ಜಿಪಿಟಿ ಚಾಟ್‌ಬಾಟ್ ಸ್ಥಗಿತದ ಬಗ್ಗೆ ಸಮಸ್ಯೆ ಹೊರಹಾಕಿದ್ದಾರೆ.

ChatGPT ಸ್ಥಗಿತ!..ಬಳಕೆದಾರರಿಗೆ ಲಾಗಿನ್‌ ಮಾಡಲು ಸಾಧ್ಯವಾಗುತ್ತಿಲ್ಲ!

ಚಾಟ್‌ಜಿಪಿಟಿ ಚಾಟ್‌ಬಾಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಎಂದು ಸಮಸ್ಯೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಚಾಟ್‌ಜಿಪಿಟಿ ಡೌನ್‌ ಆಗಿರುವ ಕುರಿತಾಗಿ ಮಿಮ್ಸ್‌ ಹಾಗೂ ಟ್ರೋಲ್‌ ಸಹ ಮಾಡುತ್ತಿದ್ದಾರೆ. ಅಂದಹಾಗೆ ಓಪನ್‌AI ಇತ್ತೀಚಿಗೆ ಚಾಟ್‌ಜಿಪಿಟಿ 4 ಅನ್ನು ಪರಿಚಯಿಸಿದೆ.

ChatGPT ಸ್ಥಗಿತ!..ಬಳಕೆದಾರರಿಗೆ ಲಾಗಿನ್‌ ಮಾಡಲು ಸಾಧ್ಯವಾಗುತ್ತಿಲ್ಲ!

ಪ್ರಕಾರ, Chat.openAI.com 24 ನಿಮಿಷಗಳ ಪ್ರಮುಖ ನಿಲುಗಡೆಯನ್ನು ತೋರಿಸುತ್ತಿದೆ. ಇದು 'ಪ್ರಮುಖ ಸ್ಥಗಿತ' ವಿಭಾಗದಲ್ಲಿದೆ ಎಂದು ಚಾರ್ಟ್ ತೋರಿಸುತ್ತದೆ. ಚಾಟ್‌ಜಿಪಿಟಿ ಪ್ಲಸ್ GPT-4 ದೊಡ್ಡ ಭಾಷಾ ಮಾದರಿಯನ್ನು ಬಳಸುತ್ತದೆ. ಆದರೆ ಚಾಟ್‌ಜಿಪಿಟಿಯ ಪ್ರಮಾಣಿತ, ಉಚಿತ ಆವೃತ್ತಿಯು ಜಿಪಿಟಿ-3.5 ಆವೃತ್ತಿಯೊಂದಿಗೆ ಲಭ್ಯವಿದೆ.

ಓಪೆನ್‌ಎಐ ನ ಕಾರ್ಯಾಚರಣಾ ಸ್ಥಿತಿ ಪುಟದ ಪ್ರಕಾರ, Chat.openAI.com 24 ನಿಮಿಷಗಳ ಪ್ರಮುಖ ನಿಲುಗಡೆಯನ್ನು ತೋರಿಸುತ್ತಿದೆ. ಇದು 'ಪ್ರಮುಖ ಸ್ಥಗಿತ' ವಿಭಾಗದಲ್ಲಿದೆ ಎಂದು ಚಾರ್ಟ್ ತೋರಿಸುತ್ತದೆ.

ಬಳಕೆದಾರರೊಬ್ಬರು ChatGPT ಡೌನ್ ಆಗಿದೆ ಮತ್ತು ಅದು ಇಲ್ಲದೆ ಜನರು ತಮ್ಮ ಸ್ವಂತ ಹೆಸರನ್ನು ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಎಂದು ಟ್ವಿಟ್ ಮಾಡಿದ್ದಾರೆ.

ಏನಿದು ChatGPT? : ChatGPT ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸಂಶೋಧನಾ ಸಂಸ್ಥೆ OpenAI ಅಭಿವೃದ್ಧಿಪಡಿಸಿದ AI ಬೆಂಬಲಿತ ಚಾಟ್‌ಬಾಟ್ ಆಗಿದೆ. ಈ ಚಾಟ್‌ಬಾಟ್ ಬಳಕೆದಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ/ ಉತ್ತರಗಳನ್ನು ರಚಿಸಲು ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂದು ಕರೆಯಲ್ಪಡುವ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ.

ChatGPT AI ಇಂಟರ್ನೆಟ್ ಟೆಕ್ಸ್ಟ್‌ ಡೇಟಾಸೆಟ್‌ನಲ್ಲಿ ತರಬೇತಿ ಪಡೆದಿದ್ದು, ಮನುಷ್ಯರ ತರಹ ಉತ್ತರಗಳನ್ನು ರಚಿಸಲು ಸಾಧ್ಯವಾಗುತ್ತದೆ. ಭಾಷಾ ಅನುವಾದ, ಟೆಕ್ಸ್ಟ್‌ ವಿವರಣೆಗಳಿಗಾಗಿ ವಿವಿಧ ನೈಸರ್ಗಿಕ ಭಾಷಾ ಸಂಸ್ಕರಣಾ ಕಾರ್ಯಗಳಿಗೆ ChatGPT ಅನ್ನು ಬಳಸಬಹುದು. ಇದರೊಂದಿಗೆ ಪ್ರಶ್ನೆಗೆ ಉತ್ತರಿಸುವುದನ್ನು ಈ ಚಾಟ್‌ಬಾಟ್‌ ಮಾಡುತ್ತದೆ.

ಚಾಟ್‌ GPT-4 : ಹಳೆಯ ಆವೃತ್ತಿಗೂ ಚಾಟ್‌ GPT-4 ಗೂ ಇರುವ ವ್ಯತ್ಯಾದವಾದರೂ ಏನು ಎಂದು ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಅದರಂತೆ ಚಾಟ್‌ GPT-4 ಗೂ GPT-3.5 ಗೂ ಹೋಲಿಕೆ ಮಾಡಿದರೆ GPT-3.5 ಟೆಕ್ಸ್ಟ್‌ ಪ್ರಾಂಪ್ಟ್‌ಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಹಾಗೆಯೇ ಸುಮಾರು 3,000 ಪದಗಳ ಪ್ರತಿಕ್ರಿಯೆಗಳಿಗೆ ಮಾತ್ರ ಇದು ಸೀಮಿತವಾಗಿದೆ. ಆದರೆ, GPT-4 ಬರೋಬ್ಬರಿ 25,000 ಪದಗಳಿಗಿಂತ ಹೆಚ್ಚಿನ ಪ್ರತಿಕ್ರಿಯೆಗಳನ್ನು ನೀಡಲಿದೆ.

ಹೊಸದಾಗಿ ಪರಿಚಯಿಸಲಾದ GPT-4 ನ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ ಇದು ಯುಎಸ್‌ ಬಾರ್ ಪರೀಕ್ಷೆ ಮತ್ತು ಗ್ರಾಜುಯೇಟ್ ರೆಕಾರ್ಡ್ ಪರೀಕ್ಷೆಯಲ್ಲಿ (GRE) ಪಾಸ್ ಮಾಡಿದೆ. ಅದರಲ್ಲೂ ಈ ಹಿಂದಿನ ಚಾಟ್‌ GPT ಗಿಂತಲೂ ಅತ್ಯುತ್ತಮವಾದ ಉತ್ತರಗಳನ್ನು ನೀಡಿದೆಯಂತೆ. ಜೊತೆಗೆ ಜನರು ತಮ್ಮ ತೆರಿಗೆಗಳನ್ನು ಲೆಕ್ಕಹಾಕಲು ಸಹಾಯ ಮಾಡಲಿದ್ದು, ಬಹುಪಾಲು ನಿಖರವಾದ ಉತ್ತರವನ್ನು ನೀಡಲಿದೆ ಎಂದು ಓಪನ್‌ಎಐನ ಅಧ್ಯಕ್ಷ ಗ್ರೆಗ್ ಬ್ರಾಕ್‌ಮನ್ ರಿಂದ ತಿಳಿದುಬಂದಿದೆ.

Best Mobiles in India

English summary
ChatGPT has stopped working, with users around the world complaining about issues with OpenAI. more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+