ChatGPT ಪ್ರತಿ ಚಾಟ್‌ಗೆ ಅರ್ಧ ಲೀಟರ್ ನೀರು ಕುಡಿಯುತ್ತೆ! ಶಾಕ್ ಆಗ್ಬೇಡಿ, ಸ್ವಲ್ಪ ಇಲ್ಲಿ ನೋಡಿ!
ಎಐ ಟೂಲ್ಸ್‌ಗಳ (AI Tools) ಬಳಕೆ ಇತ್ತೀಚಿನ ದಿನಗಳಲ್ಲಿ ಅಗಾಧವಾಗಿ ಬಳಕೆ ಆಗುತ್ತಿದೆ. ಪ್ರಮುಖ ಕಂಪೆನಿಗಳು ಜನರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವ ಬದಲು ಎಐ ಆಧಾರಿತ ಟೂಲ್ಸ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಎಐ ತಾನೇ ಎಷ್ಟು ಕೆಲಸ ಮಾಡುತ್ತೆ ಹೇಳಿ. ಇದಕ್ಕೂ ಸಹ ಸುಸ್ತಾಗುತ್ತದಲ್ಲವೇ. ಈ ಕಾರಣಕ್ಕೆ ಪ್ರತಿ ಚಾಟ್‌ಗೆ ಅರ್ಧ ಲೀಟರ್ ನೀರು ಕುಡಿಯುತ್ತದೆ.
ಹೌದು, ಮೇಲೆ ಉಲ್ಲೇಖಿಸಿದ್ದನ್ನು ಓದಿ ನೀವು ಖಂಡಿತಾ ಗೊಂದಲಕ್ಕೆ ಒಳಗಾಗಿರಬಹುದು, ಆದರೆ ಇದು ನಿಜ. ಪ್ರಮುಖವಾಗಿ ಬಳಕೆ ಮಾಡಲಾಗುವ ಚಾಟ್‌ಜಿಪಿಟಿ(ChatGPT) ಪ್ರತಿ ಚಾಟ್‌ಗೆ ಅರ್ಧ ಲೀಟರ್ ನೀರು ಕುಡಿಯುತ್ತದೆ. ಅರೇ ಇದೇನಿದು ಚಾಟ್‌ಜಿಪಿಟಿ ಹೇಗೆ ನೀರು ಕುಡಿಯುತ್ತದೆ?, ಇದೇನು ಹೊಸ ರೀತಿಯ ವಿಷಯ ಎಂದು ಅಂದುಕೊಳ್ಳಬೇಡಿ. ಇದು ಅಧ್ಯಯನದಿಂದ ತಿಳಿದು ಬಂದ ಮಾಹಿತಿಯಾಗಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಚಾಟ್‌ಜಿಪಿಟಿ ಹೇಗೆ ನೀರನ್ನು ಕುಡಿಯುತ್ತದೆ ಎಂಬುದನ್ನು ನೋಡೋಣ.

ಭಾರೀ ನೀರು ಕುಡಿಯುವ ಚಾಟ್‌ಜಿಪಿಟಿ: ಸಾಮಾನ್ಯವಾಗಿ ಪರೀಕ್ಷೆಯಲ್ಲಿ ನಾವು ಪ್ರಶ್ನೆಗಳಿಗೆ ಉತ್ತರಿಸುವಾಗ ಭಯ, ಆತಂಕದಿಂದಾಗಿ ಹೆಚ್ಚು ಹೆಚ್ಚು ನೀರನ್ನು ಕುಡಿಯುತ್ತೇವೆ. ಅದೇ ಕೆಲವನ್ನು ಈ ಚಾಟ್‌ಜಿಪಿಟಿ ಮಾಡುತ್ತದೆ. ಆದರೆ ಇದಕ್ಕೆ ಭಯ ಇಲ್ಲ ಬಿಡಿ. ವಿಷಯ ಏನೆಂದರೆ ವಾಟ್‌ಜಿಪಿಟಿಯ ಮೆದುಳನ್ನು ಯಾವಾಗಲೂ ತಂಪಾಗಿರಿಸಬೇಕಿದೆ. ಇದಕ್ಕೆ ನೀರಿನ ಅಗತ್ಯವಿದೆ. ಮೆದುಳು ಅಂದರೆ ಅದರ ಡೇಟಾ ಸೆಂಟರ್.
ಚಾಟ್‌ಜಿಪಿಟಿಯ ಅತಿಯಾದ ಬಳಕೆಯಿಂದಾಗಿ ಡೇಟಾ ಕೇಂದ್ರಗಳಲ್ಲಿನ (Data center) ದೊಡ್ಡ ಸರ್ವರ್‌ಗಳು ಅಗತ್ಯಕ್ಕಿಂತ ಹೆಚ್ಚು ಬಿಸಿಯಾಗುತ್ತವಂತೆ. ಈ ನಡುವೆ ಚಾಲನೆಯಲ್ಲಿರುವ ಟೂಲ್ಸ್‌ಗಳನ್ನು ತಂಪಾಗಿರಿಸಲು ನೀರನ್ನು ಬಳಕೆ ಮಾಡಲಾಗುತ್ತಿದೆ. ನೀರನ್ನು ಕುಡಿಯೋದು ಕೇವಲ ಚಾಟ್‌ಜಿಪಿಟಿ ಮಾತ್ರವಲ್ಲ. ಬದಲಾಗಿ ಗೂಗಲ್‌ನ ಬಾರ್ಡ್ ಮತ್ತು ಇತರ ಎಐ ಉಪಕರಣಗಳು ಸಹ ಸಾಕಷ್ಟು ನೀರನ್ನು ಬಳಕೆ ಮಾಡಿಕೊಳ್ಳುತ್ತವೆ ಎಂದು ತಿಳಿದುಬಂದಿದೆ.
ಕೊಲೊರಾಡೋ ರಿವರ್‌ಸೈಡ್ ವಿಶ್ವವಿದ್ಯಾಲಯ ಮತ್ತು ಟೆಕ್ಸಾಸ್ ಆರ್ಲಿಂಗ್‌ಟನ್ ವಿಶ್ವವಿದ್ಯಾಲಯದ 'ಮೇಕಿಂಗ್ ಎಐ ಲೆಸ್ ಥರ್ಟಿ ಥರ್ಟಿ: ಅನ್‌ಕವರ್ ಅಂಡ್ ಅಡ್ರೆಸ್ಸಿಂಗ್ ದಿ ಸೀಕ್ರೆಟ್ ವಾಟರ್ ಫುಟ್‌ಪ್ರಿಂಟ್ ಆಫ್ ಎಐ ಮಾಡೆಲ್ಸ್' ಎಂಬ ಸಂಶೋಧನಾ ಪ್ರಬಂಧವು ನಿಮ್ಮಲ್ಲಿ ಈವರೆಗೂ ಮೂಡಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ. ಈ ಅಧ್ಯಯನದಿಂದಲೇ ತಿಳಿದುಬಂದ ಮಾಹಿತಿಯೇ ಎಐ ಚಾಟ್‌ಬಾಟ್‌ಗಳು ಸಾಕಷ್ಟು ನೀರು ಕುಡಿಯುತ್ತವೆ ಎಂದು.
ಸಾಮಾನ್ಯವಾಗಿ ಎಐ ಸರ್ವರ್(AI server) 10-27 ° C ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಈ ನಡುವೆ ಯಂತ್ರಗಳಿಂದ ಹೊರಬರುವ ಶಕ್ತಿಯಿಂದಾಗಿ ತಾಪಮಾನ (Temperature) ಹೆಚ್ಚಾಗುತ್ತದಂತೆ. ಈ ತಾಪಮಾನದವನ್ನು ಕಂಟ್ರೋಲ್ ಮಾಡುವ ಉದ್ದೇಶದಿಂದ ಸರ್ವರ್ ಫಾರ್ಮ್‌ಗಳು ದೊಡ್ಡ ಕೂಲಿಂಗ್ ಟವರ್‌ಗಳನ್ನು(Cooling tower) ಬಳಕೆ ಮಾಡಿಕೊಳ್ಳುತ್ತವೆ. ಈ ಕೂಲಿಂಗ್ ಟವರ್‌ಗಳಿಗೆ ತಂಪಾಗಿಸಲು ನೀರಿನ ಅಗತ್ಯವಿದೆ.
7 ಲಕ್ಷ ಲೀಟರ್ ನೀರು ಬಳಸಲಾಗಿದೆ: ಇನ್ನು ಮೈಕ್ರೋಸಾಫ್ಟ್‌ನ ಯುಎಸ್ ಡೇಟಾ ಸೆಂಟರ್‌ನಲ್ಲಿ ಜಿಪಿಟಿ-3 ತರಬೇತಿಗೆ 700,000 ಲೀಟರ್ ನೀರು ಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಸಾಮಾನ್ಯವಾಗಿ 370 BMW ಕಾರುಗಳು ಮತ್ತು 320 ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿ ಮಾಡುವಾಗ ಈ ಮಟ್ಟದ ನೀರನ್ನು ಬಳಕೆ ಮಾಡಲಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿ. ಅದರಂತೆಯೇ ನಿಮ್ಮ ಸಂಭಾಷಣೆಯಲ್ಲಿ 20-50 ಪ್ರಶ್ನೆಗಳಿಗೆ ಉತ್ತರಿಸಲು ಅರ್ಧ ಲೀಟರ್ ನೀರು ಬಳಕೆ ಮಾಡುತ್ತದೆ.

ಬಾರ್ಡ್ಸ್ ಕೂಡ ನೀರು ಕುಡಿಯುತ್ತೆ: ಮೊದಲೇ ತಿಳಿಸಿದಂತೆ ಚಾಟ್‌ಜಿಪಿಟಿ ಹೊರತುಪಡಿಸಿ ಇತರೆ ಎಐ ಟೂಲ್ಸ್‌ಗಳು ಸಹ ಸಾಕಷ್ಟು ನೀರನ್ನು ಬಳಕೆ ಮಾಡುತ್ತಿವೆ ಎಂದು ಕಂಡುಕೊಳ್ಳಲಾಗಿದೆ. ಅದರಲ್ಲೂ ಬಾರ್ಡ್ಸ್ ಸಹ ಸಾಕಷ್ಟು ನೀರನ್ನು ಬಳಕೆ ಮಾಡಿಕೊಳ್ಳುತ್ತಿದೆ. ಇದರ ಹೊರತಾಗಿ 2022ರಲ್ಲಿ ಗೂಗಲ್‌ನ ಜಾಗತಿಕ ಡೇಟಾ ಕೇಂದ್ರಗಳು 15 ಬಿಲಿಯನ್ ಗ್ಯಾಲನ್‌ಗಳಷ್ಟು ನೀರನ್ನು ಬಳಕೆ ಮಾಡಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.


Click it and Unblock the Notifications








