Home
ಸುದ್ದಿಜಾಲ

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಇಲ್ಲಿವೆ ಬೆಸ್ಟ್‌ ಫೋನ್‌ಗಳು!

ಸ್ಮಾರ್ಟ್‌ಫೋನ್‌ಗಳು ಇಂದು ಅಗ್ಗದ ದರದಿಂದ ದುಬಾರಿ ಬೆಲೆಯಲ್ಲೂ ಲಭ್ಯ. ಆದರೆ, ಕಾಸಿಗೆ ತಕ್ಕ ಕಜ್ಜಾಯದಂತೆ ಇವು ಇರಲಿದ್ದು, ನೀವು ಹೆಚ್ಚಿನ ಬೆಲೆ ನೀಡಿದರೆ ಉತ್ತಮ ಕಾರ್ಯಕ್ಷಮತೆ ಇರುವ ಫೋನ್‌ಗಳು ಲಭ್ಯವಾಗುತ್ತದೆ. ಅದಾಗ್ಯೂ ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನೂ ಸಹ ಖರೀದಿ ಮಾಡಬಹುದು. ಈ ಫೋನ್‌ಗಳನ್ನು ಇತ್ತೀಚೆಗೆ ಲಾಂಚ್‌ ಮಾಡಲಾಗಿದೆ.

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ವಿವಿಧ ರೀತಿಯ ಆಯ್ಕೆ ಇದ್ದು, ಅದರಲ್ಲಿ ಪೊಕೊ, ಮೊಟೊ, ರಿಯಲ್‌ಮಿ, ನೋಕಿಯಾ ಸೇರಿದಂತೆ ವಿವಿಧ ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಬ್ರ್ಯಾಂಡ್‌ನ ಫೋನ್‌ಗಳು ಕಡಿಮೆ ಬೆಲೆಗೂ ಲಭ್ಯ ಇವೆ. ಕಡಿಮೆ ಬೆಲೆಯಲ್ಲಿ ಲಭ್ಯ ಇವೆ ಎಂದಾದ ಮಾತ್ರಕ್ಕೆ ಅವು ಉತ್ತಮವಾಗಿಲ್ಲ ಎನ್ನುವಂತಿಲ್ಲ. ಯಾಕೆಂದರೆ ಈ ಫೋನ್‌ಗಳು ಅತ್ಯುತ್ತಮ ಬ್ಯಾಟರಿ ಸಾಮರ್ಥ್ಯ, ಪ್ರೊಸೆಸರ್‌ ಹಾಗೂ ಕ್ಯಾಮೆರಾ ಆಯ್ಕೆ ಹೊಂದಿವೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಆ ಪೋನ್‌ಗಳ ವಿವರ ತಿಳಿದುಕೊಳ್ಳೋಣ.

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಇಲ್ಲಿವೆ ಬೆಸ್ಟ್‌ ಫೋನ್‌ಗಳು!

ರಿಯಲ್‌ಮಿ C30: ರಿಯಲ್‌ಮಿಯ ಈ ಸ್ಮಾರ್ಟ್‌ಫೋನ್‌ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ನಿರ್ಮಾಣ ಆಗಿದೆ. ಇದು 6.5ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, 60Hz ರಿಫ್ರೆಶ್ ರೇಟ್‌ ಪಡೆದಿದೆ. ಹಾಗೆಯೇ ಯುನಿಸೊಕ್ T606 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸುವ ಈ ಫೋನ್ 2GBRAM ಸ್ಟೋರೇಜ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನುಳಿದಂತೆ 13MP ಪ್ರಾಥಮಿಕ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ಆಯ್ಕೆ ಹೊಂದಿದೆ ಹಾಗೂ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇದರ ಬೆಲೆ 6,999ರೂ.ಗಳು.

ಶಿಯೋಮಿ ರೆಡ್ಮಿ A1 : ಈ ಸ್ಮಾರ್ಟ್‌ಫೋನ್ 6.52 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್‌ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 2 GB RAM ವೇರಿಯಂಟ್‌ನಲ್ಲಿ ಕಂಡುಬಂದಿದ್ದು, 8 MP ಪ್ರಾಥಮಿಕ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿಯಿಂದ ಈ ಫೋನ್ ಪ್ಯಾಕ್‌ ಆಗಿದೆ. ಇದರ ಬೆಲೆ 6,229 ರೂ. ಗಳು.

ನೋಕಿಯಾ C12: ಈ ಸ್ಮಾರ್ಟ್‌ಫೋನ್ 6.3 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಯುನಿಸೋಕ್ SC9863A1 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 2GBRAM ಸ್ಟೋರೇಜ್‌ ನಲ್ಲಿ ಕಾಣಿಸಿಕೊಂಡಿದ್ದು, 8MP ಪ್ರಾಥಮಿಕ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಜೊತೆಗೆ ಎಲ್ಇಡಿ ಫ್ಲ್ಯಾಶ್ ಲೈಟ್‌ ಆಯ್ಕೆ ಸಹ ಇದೆ. ಇನ್ನು ಈ ಫೋನ್ 3000 mAh ಸಾಮರ್ಥ್ಯದ ಬ್ಯಾಟರಿಯಿಂದ ಇದು ಪ್ಯಾಕ್‌ ಆಗಿದೆ. ಇದರ ಬೆಲೆ 5,999ರೂ. ಗಳು.

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಇಲ್ಲಿವೆ ಬೆಸ್ಟ್‌ ಫೋನ್‌ಗಳು!

ಟೆಕ್ನೋ ಪಾಪ್ 7 ಪ್ರೋ: ಈ ಫೋನ್ 6.56 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು,ಇದು 60Hz ರಿಫ್ರೆಶ್ ರೇಟ್‌ ನೀಡಲಿದೆ. ಜೊತೆಗೆ ಮೀಡಿಯಾ ಟೆಕ್ ಹಿಲಿಯೋ A22 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 2GBRAM ನಲ್ಲಿ ಕಾಣಿಸಿಕೊಂಡಿದೆ. ಇದರೊಂದಿಗೆ ಈ ಫೋನ್ 12MP ಪ್ರಾಥಮಿಕ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಇವು ಡ್ಯುಯಲ್ ಎಲ್ಇಡಿ ಫ್ಲ್ಯಾಶ್ ಆಯ್ಕೆ ಪಡೆದುಕೊಂಡಿವೆ. ಇನ್ನುಳಿದಂತೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ.

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಬೇಕೆ? ಇಲ್ಲಿವೆ ಬೆಸ್ಟ್‌ ಫೋನ್‌ಗಳು!

ಪೊಕೊ C50: ಪೊಕೊದ ಈ ಫೋನ್‌ 6.52 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ 2 GBRAM ಆಯ್ಕೆ ನೀಡಲಾಗಿದ್ದು, ಎಲ್ಇಡಿ ಫ್ಲ್ಯಾಶ್ ನೊಂದಿಗೆ 8 MP ಪ್ರಾಥಮಿಕ ಕ್ಯಾಮೆರಾ ಹಾಗೂ 5 MP ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ ಇವೆಲ್ಲವನ್ನೂ ಒಳಗೊಂಡಂತೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, ಇದನ್ನು ನೀವು 6,200ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

Best Mobiles in India

English summary
If you want to buy a smartphone at a low price, here is a list of the best smartphones. These phones have got better battery capacity and camera features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+