ಪಬ್‌ಜಿ ಗೇಮ್‌ನಲ್ಲಿ ಈ ತಪ್ಪು ಮಾಡಿದರೇ 10ವರ್ಷ ನಿ‍ಷೇಧ!

|

ವಿಶ್ವದ ಅತ್ಯಂತ ಜನಪ್ರಿಯ ವಿಡಿಯೋ ಗೇಮ್‌ ಎಂದರೇ ಅದು 'ಪಬ್‌ಜಿ' ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಸದ್ಯ ಯುವ ಸಮೂಹವು ಈ ಗೇಮ್‌ನ ಕ್ರೇಜ್‌ಗೆ ಒಳಗಾಗಿದ್ದು, ಯಾವಾಗಲೂ ಪಬ್‌ಜಿ ಹ್ಯಾಂಗೋವರ್‌ನಲ್ಲಿಯೇ ಇರುತ್ತಾರೆ. ಪಬ್‌ಜಿ ಗೇಮ್‌ಗೆ ಅತೀಯಾಗಿ ಅಡಿಕ್ಟ್ ಆದವರೇ ನಿಮಗೊಂದು ಶಾಕಿಂಗ್ ಸುದ್ದಿ ಬಂದಿದೆ. ನೀವೆನಾದರೂ ಈ ತಪ್ಪು ಮಾಡಿದರೇ ನಿಮಗೆ ಪಬ್‌ಜಿ ಆಡುಲು ಅನುಮತಿಯೇ ಇರಲ್ಲ.

ಪಬ್‌ಜಿ ಗೇಮ್

ಹೌದು, ಪಬ್‌ಜಿ ಗೇಮ್ ಸಂಸ್ಥೆಯು ತನ್ನ ಗೇಮಿಂಗ್ ಮಾನದಂಡಗಳನ್ನು ಉಲ್ಲಂಘನೆ ಮಾಡುವ ಆಟಗಾರರಿಗೆ 10 ವರ್ಷ ಪಬ್‌ಜಿಯಿಂದ ನಿ‍ಷೇಧ ಹೇರುವ ಕಠಿಣ ನಿರ್ಧಾರ ಕೈಗೊಂಡಿದೆ. ಪಬ್‌ಜಿ ಗೇಮ್ ಈಗಾಗಲೇ ಸಿಕ್ಕಾಪಟ್ಟೆ ಜನಪ್ರಿಯತೆಗಳಿಸಿದ್ದು, ಪಬ್‌ಜಿ ಡೆವಲಪರ್‌ ರೂಲ್ಸ್‌ ಬ್ರೇಕ್‌ ಮಾಡಿ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳ ಅಥವಾ ಇತರೆ ಭಿನ್ನ ಮಾರ್ಗದ ಮೂಲಕ ಗೇಮ್‌ ಆಡುವ ಆಟಗಾರರು ನಿಷೇಧದ ಬಿಸಿ ತಟ್ಟಲಿದೆ.

ಆಟಗಾರರ ವಿರುದ್ಧ

ಪಬ್‌ಜಿ ಗೇಮ್‌ ಸಂಸ್ಥೆಯು ಥರ್ಡ ಪಾರ್ಟಿಗಳ ಮೂಲಕ ತನ್ನ ನಿಯಮಗಳನ್ನು ಉಲ್ಲಂಘಿಸುವ ಆಟಗಾರರ ವಿರುದ್ಧ ಸಂಪೂರ್ಣ ಕಠಿಣ ನಿಲುವು ತಾಳಿದೆ. ಹೀಗಾಗಿ ಸಂಸ್ಥೆಯ ನಿಯಮಾವಳಿಗಳಿಗೆ ಮೋಸ ಮಾಡುವ ಆಟಗಾರರಿಗೆ 10 ವರ್ಷ ಆಟದಿಂದ ದೂರವಿಡುವ ಕ್ರಮಕ್ಕೆ ಮುಂದಾಗಿದೆ. ಅಂತಹ ಆಟಗಾರರ ಗೇಮ್‌ ಐಡಿಗಳನ್ನು ಕಂಪನಿಯು ಪ್ರಕಟಿಸುವುದಾಗಿಯೂ ತಿಳಿಸಿದೆ.

ಆಟಗಾರನಿಗೂ ನ್ಯಾಯಯುತ

ಪಬ್‌ಜಿ ಗೇಮ್‌ ಅನ್ನು ಆಡುವ ಪ್ರತಿಯೊಬ್ಬ ಆಟಗಾರನಿಗೂ ನ್ಯಾಯಯುತ ಮತ್ತು ಆನಂದದಾಯಕವಾದ ಗೇಮಿಂಗ್ ವಾತಾವರಣದ ಅನುಕೂಲ ಒದಗಿಸುವುದು ಕಂಪನಿಯ ಉದ್ದೇಶವಾಗಿದೆ. ಅದಕ್ಕಾಗಿ ಅನ್ಯಾಯದ ಮಾರ್ಗದಲ್ಲಿ ಗೇಮ್‌ ಮಾಡುವುದನ್ನು ತಡೆಯಲು ಪಬ್‌ಜಿ ಸಂಸ್ಥೆಯು ಈ ನಿರ್ಧಾರಕ್ಕೆ ಮುಂದಾಗಿದೆ. ಹೀಗಾಗಿ ಇನ್ನು ಮುಂದೆ ಅಂತಹ ವಂಚನೆಗಳು ಕಂಡು ಬಂದರೇ ಅಂತಹ ಆಟಗಾರರ ಐಡಿಗಳನ್ನು ಬಹಿರಂಗಪಡಿಸಲಿದೆ.

ಪ್ಲೇಯರ್ ಖಾತೆಗಳು

ಪಬ್‌ಜಿ ಸಂಸ್ಥೆಯು ಕಳೆದ ವರ್ಷ ಡಿಸೆಂಬರ್‌ನಲ್ಲಿ, ಸುಮಾರು 30,000 ಕ್ಕೂ ಅಧಿಕ PUBG ಪ್ಲೇಯರ್ ಖಾತೆಗಳು ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದಕ್ಕಾಗಿ ಆ ಖಾತೆಗಳು ನಿಷೇಧಕ್ಕೆ ಒಳಗಾಗಿದ್ದವು.

Best Mobiles in India

English summary
We take this issue very seriously; as such, each account in violation has received a 10-year ban. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X