Just In
Don't Miss
- News
ಥಣಿಸಂದ್ರದ ಅಪಾರ್ಟ್ಮೆಂಟ್ಗೆ ನೀಡಿದ್ದ ಭೂಸ್ವಾಧೀನಾನುಭವ ಪತ್ರ ಬಿಬಿಎಂಪಿ ಹಿಂಪಡೆದಿದೆ
- Movies
ಅಕ್ಷತಾ ದೇಶಪಾಂಡೆ: ಅಬ್ಬಬ್ಬಾ.. ಮದುವೆಗೆ ರೆಡಿಯಾಗೋದು ಇಷ್ಟೋಂದು ಕಷ್ಟವೆ?
- Sports
U-19 Women's World Cup 2023: ಸೂಪರ್ ಸಿಕ್ಸ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ
- Finance
2 ಕೋಟಿಗೂ ಕಡಿಮೆ FD ಹಣಕ್ಕೆ ಹೆಚ್ಚು ಬಡ್ಡಿ ನೀಡುವ 5 ಬ್ಯಾಂಕ್ ಯಾವವು, ಅವುಗಳ ಬಡ್ಡಿ ದರ ಬಗ್ಗೆ ತಿಳಿಯಿರಿ
- Automobiles
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ಟಾಟಾ ಬಿಡುಗಡೆಗೊಳಿಸಿದ ನೆಕ್ಸಾನ್ ಇವಿ ವಿಶೇಷತೆಗಳು
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಫೋನ್ ಫೋಟೊಗ್ರಫಿ ಸ್ಪರ್ಧೆ!..ಭಾರತಕ್ಕೆ ಒಲಿದ ಫಸ್ಟ್ ಪ್ರೈಜ್!
ಆಪಲ್ ಸಂಸ್ಥೆಯ 'ಐಫೋನ್ ಫೋಟೊಗ್ರಫಿ ಅವಾರ್ಡ್-2019' ಸ್ಪರ್ಧೆಯಲ್ಲಿ ಎರಡು ವಿಭಾಗಗಳಲ್ಲಿ ಭಾರತಕ್ಕೆ ಪ್ರಶಸ್ತಿ ಒಲಿದಿದೆ. 'ಸನ್‌ಸೆಟ್' ಫೋಟೊ ವಿಭಾಗದಲ್ಲಿ ಬೆಂಗಳೂರಿನ ಶ್ರೀಕುಮಾರ ಕೃಷ್ಣಾ ಅವರು ಐಫೋನ್ 6S ಮೂಲಕ ಸೆರೆಹಿಡಿದ ಫೋಟೊ ಮೊದಲ ಸ್ಥಾನ ಪಡೆದಿದ್ದು, ಹಾಗೆಯೇ ಮಹಾರಾಷ್ಟ್ರದ ಡಿಂಪಿ ಭಲೋಟಿಯಾ ಅವರು 'ಸರಣಿ' ವಿಭಾಗದ ಫೋಟೊಗ್ರಫಿಯಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.

ಐಫೋನ್ ಫೋಟೋಗ್ರಫಿ ಅವಾರ್ಡ್ ಸ್ಪರ್ಧೆಯಲ್ಲಿ ಒಟ್ಟು 140 ರಾಷ್ಟ್ರಗಳು ಭಾಗವಹಿಸಿದ್ದು, ಅದರಲ್ಲಿ 18 ದೇಶಗಳ ಸ್ಪರ್ಧಿಗಳು ವಿಜೇತರಾಗಿದ್ದು, ಅವರಲ್ಲಿ ಇಟಲಿಯ 'ಗೇಬ್ರಿಯೆಲಾ ಸಿಗ್ಲಿಯಾನೊ' ಅವರು 'ಐಫೋನ್ ಎಕ್ಸ್'ನಲ್ಲಿ ಸೆರೆಹಿಡಿದ ಫೋಟೊ 'ಗ್ರ್ಯಾಂಡ್ ಪ್ರೈಜ್' ಅವಾರ್ಡ್ ಧಕ್ಕಿಸಿಕೊಂಡಿದೆ. ಹಾಗಾದರೇ ಐಫೋನ್ ಫೋಟೊಗ್ರಾಫಿ ಅವಾರ್ಡ್-2019 ಕುರಿತಂತೆ ಇನ್ನುಳಿದ ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.

ಐಫೋನ್ ಫೋಟೋಗ್ರಫಿ ಅವಾರ್ಡ್
ಐಫೋನ್ ಫೋಟೋಗ್ರಾಫಿ ಅವರ್ಡ್ ಸ್ಪರ್ಧೆಯನ್ನು ಆಪಲ್ ಪ್ರತಿವರ್ಷ ಆಯೋಜಿಸುತ್ತಾ ಬಂದಿದ್ದು, ಅದರಂತೆಯೇ 12ನೇ ವರ್ಷದ ಅವಾರ್ಡ್ ಸ್ಫರ್ಧೆ ಇತ್ತೀಚಿಗೆ ಮುಗಿದಿದೆ. ಈ ಸ್ಪರ್ಧೆಯಲ್ಲಿ ಹಲವಾರು ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು ಮತ್ತು ಸ್ಪರ್ಧೆಯಲ್ಲಿ ವಿವಿಧ ಫೋಟೋ ವಿಭಾಗಗಳನ್ನು ನೀಡಲಾಗಿತ್ತು. ಸ್ಪರ್ಧಿಗಳು ಐಫೋನ್ ಮೂಲಕ ಫೋಟೊಗಳನ್ನು ಸೆರೆಹಿಡಿದಿದ್ದಾರೆ.

ಭಾರತಕ್ಕೆ ಡಬಲ್ ಪ್ರೈಸ್
ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿದ್ದವು ಅವುಗಳಲ್ಲಿ 'ಸನ್‌ಸೆಟ್' ಫೋಟೊ ವಿಭಾಗದಲ್ಲಿ ಬೆಂಗಳೂರಿನ ಶ್ರೀಕುಮಾರ ಕೃಷ್ಣಾ ಅವರು ಮೊದಲ ಸ್ಥಾನ ಪಡೆದಿದ್ದು, ಅವರು ಐಫೋನ್ 6S ಮೂಲಕ ಸೆರೆಹಿಡಿದಿದ್ದರು. ಹಾಗೆಯೇ ಮಹಾರಾಷ್ಟ್ರದ 'ಡಿಂಪಿ ಭಲೋಟಿಯಾ' ಅವರು 'ಸೀರಿಸ್' ಫೋಟೋ ಕ್ಯಾಟಗೇರಿ ವಿಭಾಗದ ಫೋಟೊಗ್ರಫಿಯಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದ್ದಾರೆ.

ಗ್ರ್ಯಾಂಡ್ ಪ್ರೈಜ್
ಇಟಲಿಯ 'ಗೇಬ್ರಿಯೆಲಾ ಸಿಗ್ಲಿಯಾನೊ' ಅವರು 'ಐಫೋನ್ ಎಕ್ಸ್'ನಲ್ಲಿ ಸೆರೆಹಿಡಿದ 'ಬಿಗ್ ಸಿಸ್ಟರ್' ಟೈಟಲ್ ನೀಡಿದ್ದ ಫೋಟೊ 'ಗ್ರ್ಯಾಂಡ್ ಪ್ರೈಜ್' ಅವಾರ್ಡ್ ಪಡೆದುಕೊಂಡಿದೆ. ಹಾಗೆಯೇ ರಷ್ಯಾದಿಂದ ಯುಲಿಯಾ ಇಬ್ರೇವಾ ಅವರು ಐಫೋನ್ 7 ಪ್ಲಸ್‌ನಲ್ಲಿ ಸೆರೆಹಿಡಿದ ಮಳೆಯ ಛಾಯಾಚಿತ್ರವು ಎರಡನೇ ಸ್ಥಾನ ಪಡೆದಿದ್ದು, ಕಮ್ ಅಕ್ರಾಸ್‌ನಲ್ಲಿ ಚೀನಾದ ಪೆಂಗ್ ಹಾವೊಗೆ ಅವರಿಗೆ ಮೂರನೇ ಸ್ಥಾನ ಲಭ್ಯವಾಗಿದೆ.

ಇತರೆ ವಿಜೇತ ರಾಷ್ಟ್ರಗಳು
ಐಫೋನ್ ಫೋಟೋಗ್ರಾಫಿ ಅವರ್ಡ್ ಸ್ಪರ್ಧೆಯಲ್ಲಿ ಒಟ್ಟು 140 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಅವರಲ್ಲಿ ಆಸ್ಟ್ರೇಲಿಯಾ, ಬಹ್ರೇನ್, ಬೆಲಾರಸ್, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಪೆರು, ಪೋರ್ಚುಗಲ್, ರಷ್ಯಾ, ದಕ್ಷಿಣ ಆಫ್ರಿಕಾ, ತೈವಾನ್, ಯುನೈಟೆಡ್ ಕಿಂಗ್‌ಡಮ್, ಮತ್ತು ಯುನೈಟೆಡ್ ಸ್ಟೇಟ್ಸ್ ರಾಷ್ಟ್ರಗಳ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470