Home
ಸುದ್ದಿಜಾಲ

ವಾರ್ಷಿಕ ಪ್ರೀಪೇಯ್ಡ್‌ ರೀಚಾರ್ಜ್ ಮಾಡಿಸುವ ಮೊದಲು ಈ ಪ್ಲ್ಯಾನ್‌ ಗಮನಿಸಿ!

ಜಿಯೋ, ವೊಡಾಫೋನ್ (ವಿ ಟೆಲಿಕಾಂ) ಮತ್ತು ಏರ್‌ಟೆಲ್‌ ಟೆಲಿಕಾಂಗಳು ಚಂದಾದಾರರನ್ನು ಸೆಳೆಯಲು ಹಲವು ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಅವುಗಳಲ್ಲಿ ಕೆಲವು ಅಲ್ಪಾವಧಿಯ ವ್ಯಾಲಿಡಿಟಿ ಹೊಂದಿದ್ದರೇ, ಮತ್ತೆ ಕೆಲವು ದೀರ್ಘಾವಧಿಯ ವ್ಯಾಲಿಡಿಟಿಯ ಪ್ರಯೋಜನ ಪಡೆದಿವೆ. ಇದರೊಂದಿಗೆ ಡೇಟಾ, ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಸಹ ಪಡೆದಿವೆ. ಆದರೆ ವಾರ್ಷಿಕ ಅವಧಿಯ ಪ್ರೀಪೇಯ್ಡ್‌ ಯೋಜನೆಗಳು ಹೆಚ್ಚು ಆಕರ್ಷಕ ಎನಿಸಿವೆ.

ಏರ್‌ಟೆಲ್‌

ಹೌದು, ಜಿಯೋ, ವೊಡಾಫೋನ್ (ವಿ ಟೆಲಿಕಾಂ) ಮತ್ತು ಏರ್‌ಟೆಲ್‌ ಟೆಲಿಕಾಂಗಳು ವಾರ್ಷಕ ಅವಧಿಯ ಕೆಲವು ಪ್ರೀಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಹೊಂದಿವೆ. ಆ ಪೈಕಿ ಕೆಲವು ಅಧಿಕ ಡೇಟಾ ಪ್ರಯೋಜನ ಪಡೆದಿದ್ದರೇ, ಇನ್ನು ಕೆಲವು ನಿಗದತ ಡೇಟಾ ಹೊಂದಿವೆ. ಹಾಗೆಯೇ ಎಸ್‌ಎಮ್‌ಎಸ್‌, ವಾಯಿಸ್‌ ಕರೆ ಸೇರಿದಂತೆ ಕೆಲವು ಯೋಜನೆಗಳು ಹೆಚ್ಚುವರಿ ಪ್ರಯೋಜನಗಳನ್ನು ಒಳಗೊಂಡಿವೆ. ಹಾಗಾದರೇ ಜಿಯೋ, ವಿ ಟೆಲಿಕಾಂ ಹಾಗೂ ಏರ್‌ಟೆಲ್‌ ಟೆಲಿಕಾಂಗಳ ವಾರ್ಷಿಕ ಪ್ರೀಪೇಯ್ಡ್‌ ಯೋಜನೆಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಜಿಯೋ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು:

ಜಿಯೋ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು:

ರಿಲಯನ್ಸ್ ಜಿಯೋ ಹಲವು ಪ್ರಿಪೇಯ್ಡ್ ಪ್ಯಾಕ್‌ಗಳ ಆಯ್ಕೆ ಹೊಂದಿದೆ. ಅವುಗಳು ಕ್ರಮವಾಗಿ 2599ರೂ, 2399ರೂ ಮತ್ತು 2121ರೂ. ಪ್ರೈಸ್‌ ಅನ್ನು ಹೊಂದಿವೆ. 2599ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಒಳಗೊಂಡಿದೆ. ಜೊತೆಗೆ ಹಾಟ್‌ಸ್ಟಾರ್‌ ಆಪ್‌ ಪ್ರಯೋಜನ ಇದೆ. ಅದೇ ರೀತಿ 2399ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಸೌಲಭ್ಯ ಪಡೆದಿದೆ. ಇನ್ನು 2121ರೂ. ಪ್ಲ್ಯಾನ್ ಪ್ರತಿದಿನ 1.5GB ಡೇಟಾ ಹೊಂದಿದ್ದು, 336 ದಿನಗಳ ವ್ಯಾಲಿಡಿಟಿ ಪಡೆದಿದೆ.

ಏರ್‌ಟೆಲ್ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು:

ಏರ್‌ಟೆಲ್ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು:

ಏರ್‌ಟೆಲ್‌ ಟೆಲಿಕಾಂನಲ್ಲಿ 2,498ರೂ. 2698ರೂ ಮತ್ತು 1,498ರೂ. ಯೋಜನೆಗಳು ದೀರ್ಘಾವಧಿಯ ಪ್ಲ್ಯಾನ್‌ಗಳಲ್ಲಿ ಹೆಚ್ಚು ಗಮನ ಸೆಳೆದಿವೆ. ಏರ್‌ಟೆಲ್ 2,498ರೂ. ಯೋಜನೆಯು 365 ದಿನಗಳ ಮಾನ್ಯತೆ ಹೊಂದಿದ್ದು, 2GB ದೈನಂದಿನ ಡೇಟಾವನ್ನು ಪಡೆದಿದೆ. ಹಾಗೆಯೇ 1,498ರೂ.ಗಳ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಒಟ್ಟು 24GB ಡೇಟಾವನ್ನು ಹೊಂದಿದೆ. ಈ ಎರಡೂ ಯೋಜನೆಗಳು ಅನಿಯಮಿತ ವಾಯಿಸ್ ಕರೆ ಮತ್ತು 100 ಎಸ್‌ಎಂಎಸ್ / ದಿನ ಲಾಭದೊಂದಿಗೆ ಬರುತ್ತವೆ. ಇನ್ನು 2698ರೂ. ಯೋಜನೆಯು ಸಹ 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಪ್ರತಿದಿನ 2GB ಡೇಟಾ ಪ್ರಯೋಜನ ಜೊತೆಗೆ ಡಿಸ್ನಿ ಹಾಟ್‌ಸ್ಟಾರ್‌ ಆಪ್‌ ಸೇವೆ ಲಭ್ಯ.

ವಿ ಟೆಲಿಕಾಂ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು:

ವಿ ಟೆಲಿಕಾಂ ವಾರ್ಷಿಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು:

ವಿ ಟೆಲಿಕಾಂ ಮೂರು ಪ್ರಿಪೇಯ್ಡ್ ಆಕರ್ಷಕ ದೀರ್ಘಾವಧಿಯ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಅವುಗಳ ಕ್ರಮವಾಗಿ 2,595ರೂ. 2399ರೂ ಮತ್ತು 1499ರೂ. ಆಗಿದೆ. ಅವುಗಳಲ್ಲಿ 2,595ರೂ.ಯೋಜನೆಯು 1.5GB ದೈನಂದಿನ ಡೇಟಾದ ಜೊತೆ 365 ದಿನಗಳ ಮಾನ್ಯತೆ ಪಡೆದಿದೆ ಜೊತೆಗೆ ಹಾಟ್‌ಸ್ಟಾರ್‌ ಆಪ್ ಸೇವೆ ಲಭ್ಯ. ಹಾಗೆಯೇ 2,399ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದ್ದು, ಪ್ರತಿದಿನ 1.5GB ಡೇಟಾವನ್ನು ಸೌಲಭ್ಯ ನೀಡುತ್ತದೆ ಇದರೊಂದಿಗೆ ಜೀ5 ಆಪ್‌ ಆಕ್ಸಸ್ ಸಿಗಲಿದೆ. ಇನ್ನು ಈ ಎರಡೂ ಯೋಜನೆಗಳು ‘ವೀಕೆಂಡ್ ಡಾಟಾ ರೋಲ್‌ಓವರ್' ಪ್ರಯೋಜನ ಒಳಗೊಂಡಿದೆ. 1499ರೂ. ಯೋಜನೆಯು 365 ದಿನಗಳ ವ್ಯಾಲಿಡಿಟಿ ಪಡೆದಿದ್ದು, ಈ ಅವಧಿಯಲ್ಲಿ ಒಟ್ಟು 24GB ಡೇಟಾ ಪಡೆದಿದೆ.

Best Mobiles in India

English summary
Jio, Vi And Airtel Annual Prepaid Plans: offers, valaidity data and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+