Home
ಸುದ್ದಿಜಾಲ

ಪ್ರಸ್ತುತ ಈ ಮೊಬೈಲ್‌ಗಳೇ ಟ್ರೆಂಡಿಂಗ್‌ನಲ್ಲಿ ಇರೋದು!..ನೀವು ಖರೀದಿಸುತ್ತಿರಾ?

ಮಾರುಕಟ್ಟೆಗೆ ನೂತನ ಫೋನ್‌ಗಳು ಎಂಟ್ರಿ ಕೊಡುತ್ತಲೇ ಇದ್ದು, ಅವುಗಳಲ್ಲಿ ಕೆಲವು ಬಹುಬೇಗನೆ ಗ್ರಾಹಕರ ಗಮನ ಸೆಳೆಯುತ್ತವೆ. ಕೆಲವು ಫೋನ್‌ಗಳು ಬೆಲೆಯಿಂದ ಆಕರ್ಷಿಸಿದರೆ, ಮತ್ತೆ ಕೆಲವು ಫೋನ್‌ಗಳು ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆಯುತ್ತವೆ.

ಹೌದು, ಮಾರುಕಟ್ಟೆಗೆ ಪ್ರವೇಶಿಸುವ ಎಲ್ಲ ಫೋನ್‌ಗಳು ಗ್ರಾಹಕರಿಗೆ ಇಷ್ಟವಾಗುವುದಿಲ್ಲ. ಅವುಗಳಲ್ಲಿ ಕೆಲವೇ ಕೆಲವು ಫೋನ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಇನ್ನುಳಿದ ಕೆಲವು ಫೋನ್‌ಗಳು ಮಾರುಕಟ್ಟೆಯಿಂದ ನಿರ್ಗಮಿಸುತ್ತವೆ. ಹೀಗೆ ಪ್ರಸ್ತುತ ಮೊಬೈಲ್‌ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಕೆಲವು ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಪ್ರಸ್ತುತ ಈ ಮೊಬೈಲ್‌ಗಳೇ ಟ್ರೆಂಡಿಂಗ್‌ನಲ್ಲಿ ಇರೋದು!..ನೀವು ಖರೀದಿಸುತ್ತಿರಾ?

ಐಫೋನ್‌ 15 ಪ್ರೊ ಮ್ಯಾಕ್ಸ್‌ ಮೊಬೈಲ್‌

ಆಪಲ್‌ ಐಫೋನ್‌ 15 ಪ್ರೊ ಮ್ಯಾಕ್ಸ್‌ ಮೊಬೈಲ್‌ 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಈ ಮೊಬೈಲ್‌ A17 ಪ್ರೊ ಬಯೋನಿಕ್ ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, ಇದರ ಪ್ರಮುಖ ಕ್ಯಾಮೆರಾವು 48 ಮೆಗಾಪಿಕ್ಸೆಲ್ ಸೆನ್ಸರ್‌ ಆಯ್ಕೆ ಅನ್ನು ಪಡೆದುಕೊಂಡಿದೆ. ಮುಖ್ಯವಾಗಿ ಇದು ಆಕ್ಷನ್‌ ಬಟನ್‌ ಆಯ್ಕೆ ಕೂಡಾ ಹೊಸದಾಗಿ ಹೊಂದಿದೆ.

ರೆಡ್ಮಿ ನೋಟ್‌ 13 ಮೊಬೈಲ್‌

ರೆಡ್ಮಿ ನೋಟ್‌ 13 ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080SoC ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದೆ. ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಮುಖ್ಯ ಕ್ಯಾಮೆರಾ 100 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಪಡೆದುಕೊಂಡಿದ್ದು, 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಅಲ್ಲದೇ ಇದಕ್ಕೆ ಪೂರಕವಾಗಿ 33W ಫಾಸ್ಟ್‌ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಐಫೋನ್‌ 15 ಮೊಬೈಲ್‌

ಆಪಲ್‌ ಐಫೋನ್‌ 15 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಸೌಲಭ್ಯವನ್ನು ಒಳಗೊಂಡಿದ್ದು, 1600 nits ಬ್ರೈಟ್ನಸ್‌ ಸಪೋರ್ಟ್‌ ಸಹ ಪಡೆದುಕೊಂಡಿದೆ. ಈ ಮೊಬೈಲ್‌ A16 ಬಯೋನಿಕ್ ಚಿಪ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಅಲ್ಲದೇ ಇದರ ಮೊದಲ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಇದರ ಜೊತೆಗೆ ಇದು ಡೈನಾಮಿಕ್ ಐಲ್ಯಾಂಡ್‌ ಆಯ್ಕೆ ಸಹ ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ A34 5G ಮೊಬೈಲ್‌

ಈ ಮೊಬೈಲ್‌ 6.6 ಇಂಚಿನ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೊಲೆಡ್‌ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 1080 6nm ಪ್ರೊಸೆಸರ್ ನಲ್ಲಿ ಕಾರ್ಯ ಮಾಡಲಿದೆ. ಅಲ್ಲದೇ 8GB + 128GB ಮತ್ತು 8GB + 256GB ಸ್ಟೋರೇಜ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಮೊಬೈಲ್‌

ಸ್ಯಾಮ್‌ಸಂಗ್‌ನ ಈ ಫೋನ್‌ QHD+ ಡೈಮಂಡ್‌ ಅಮೋಲೆಡ್‌ ಜೊತೆಗೆ 6.8 ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿದ್ದು, ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 2 ಪ್ರೊಸೆಸರ್‌ ಅನ್ನು ಕೂಡಾ ಒಳಗೊಂಡಿದೆ. ಈ ಮೊಬೈಲ್‌ ಕ್ವಾಡ್‌ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 200 ಮೆಗಾ ಪಿಕ್ಸಲ್‌ ಸೆನ್ಸಾರ್‌ ಪಡೆದಿದೆ. ಹಾಗೆಯೇ ಈ ಮೊಬೈಲ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಕೂಡಾ ಪಡೆದಿದೆ.

Best Mobiles in India

English summary
Check this top trending smartphone list october 2023. all mobile specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+